ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಸಭೆ ಚುನಾವಣೆ ಕುರಿತು ಮೌನ ಮುರಿದ ದೇವೇಗೌಡ

|
Google Oneindia Kannada News

ಬೆಂಗಳೂರು, ಜನವರಿ 12 : ರಾಜ್ಯಸಭೆ ಚುನಾವಣೆ ಕುರಿತು ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ಮೌನ ಮುರಿದಿದ್ದಾರೆ. ಜೂನ್‌ನಲ್ಲಿ ಕರ್ನಾಟಕದಿಂದ ನಾಲ್ವರು ಸದಸ್ಯರನ್ನು ರಾಜ್ಯಸಭೆಗೆ ಆಯ್ಕೆ ಮಾಡಲು ಚುನಾವಣೆ ನಡೆಯಲಿದೆ.

"ಯಾವುದೇ ಕಾರಣಕ್ಕೂ ನಾನು ರಾಜ್ಯಸಭೆ ಸದಸ್ಯನಾಗುವುದಿಲ್ಲ. ರಾಜ್ಯಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ" ಎಂದು ಎಚ್. ಡಿ. ದೇವೇಗೌಡರು ಹೇಳಿದರು. ಈ ಮೂಲಕ ಹಲವು ದಿನದಿಂದ ಹರಿದಾಡುತ್ತಿದ್ದ ಸುದ್ದಿಗಳಿಗೆ ಸ್ಪಷ್ಟನೆ ನೀಡಿದರು.

ರಾಜ್ಯಸಭಾ ಉಪ ಚುನಾವಣೆ; ಮಲ್ಲಿಕಾರ್ಜುನ ಖರ್ಗೆ ಅಭ್ಯರ್ಥಿ? ರಾಜ್ಯಸಭಾ ಉಪ ಚುನಾವಣೆ; ಮಲ್ಲಿಕಾರ್ಜುನ ಖರ್ಗೆ ಅಭ್ಯರ್ಥಿ?

I Will Not Enter Rajya Sabha Says Deve Gowda

"ರಾಜ್ಯಸಭೆ ಸದಸ್ಯರಾಗುವ ಬಗ್ಗೆ ಸುದ್ದಿಗಳು ಹಬ್ಬುತ್ತಿವೆ. ಅದರ ಮೇಲೆ ಮಾಧ್ಯಮಗಳು ವಿಶ್ಲೇಷಣೆ ಮಾಡುತ್ತಿವೆ. ದೇವೇಗೌಡರಿಗೆ ಅಧಿಕಾರ ದಾಹ ಇನ್ನೂ ಹೋಗಿಲ್ಲ ಎನ್ನುತ್ತಾರೆ. ಜೀವನದಲ್ಲಿ ನಾನೆಂದೂ ಅಧಿಕಾರಕ್ಕೆ ಅಂಟಿಕೊಂಡು ಕೂತವನಲ್ಲ" ಎಂದು ದೇವೇಗೌಡರು ಹೇಳಿದರು.

ರಾಜ್ಯಸಭೆ ಉಪ ಚುನಾವಣೆ; ಬಿಜೆಪಿ ಅಭ್ಯರ್ಥಿ ಅವಿರೋಧ ಆಯ್ಕೆರಾಜ್ಯಸಭೆ ಉಪ ಚುನಾವಣೆ; ಬಿಜೆಪಿ ಅಭ್ಯರ್ಥಿ ಅವಿರೋಧ ಆಯ್ಕೆ

"ಯಾವ ಕಾರಣಕ್ಕೂ ರಾಜ್ಯಸಭೆಗೆ ಪ್ರವೇಶ ಮಾಡಲ್ಲ. ನಾನು ಬಡವರ ಪರ ಹೋರಾಡಲು ರಾಜ್ಯಸಭೆ ಸದಸ್ಯನಾಗಬೇಕಿಲ್ಲ. ಎಲ್ಲಿದ್ದರೂ ರೈತ ಪರ ಹೋರಾಟ ಮಾಡುತ್ತೇನೆ. ನನಗೆ ಅಧಿಕಾರ ದಾಹ ಇಲ್ಲ" ಎಂದು ದೇವೇಗೌಡರು ತಿಳಿಸಿದರು.

ರಾಜ್ಯಸಭೆಗೆ ಖರ್ಗೆ ಪ್ರವೇಶ; ಹೈಕಮಾಂಡ್‌ ಅಂತಿಮ ತೀರ್ಮಾನ ರಾಜ್ಯಸಭೆಗೆ ಖರ್ಗೆ ಪ್ರವೇಶ; ಹೈಕಮಾಂಡ್‌ ಅಂತಿಮ ತೀರ್ಮಾನ

ಕಾಂಗ್ರೆಸ್‌ನಿಂದ ಮಲ್ಲಿಕಾರ್ಜುನ ಖರ್ಗೆ ಮತ್ತು ಜೆಡಿಎಸ್‌ನಿಂದ ಎಚ್. ಡಿ. ದೇವೇಗೌಡ ರಾಜ್ಯಸಭೆ ಚುನಾವಣೆಗೆ ಸ್ಫರ್ಧೆ ಮಾಡುತ್ತಾರೆ ಎಂಬ ಸುದ್ದಿಗಳು ಹಬ್ಬಿದ್ದವು. ಇಬ್ಬರು ಸಹ 2019ರ ಲೋಕಸಭೆ ಚುನಾವಣೆಯಲ್ಲಿ ಸೋತಿದ್ದಾರೆ.

English summary
Former prime minister and JD(S) supreme H.D.Deve Gowda clarified that he will not contest for rajya sabha polls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X