• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿಜೆಪಿ ಸೇರುವುದಾಗಿ ಘೋಷಿಸಿದ ಜೆಡಿಎಸ್ ಶಾಸಕ!

|
Google Oneindia Kannada News

ಬೀದರ್, ಫೆಬ್ರವರಿ 26 : ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್‌ ಪಕ್ಷಕ್ಕೆ ಮತ್ತೊಂದು ಹಿನ್ನಡೆ ಉಂಟಾಗಿದೆ. 'ಜೆಡಿಎಸ್ ತೊರೆಯುವುದಾಗಿ' ಬಸವಕಲ್ಯಾಣ ಶಾಸಕ ಮಲ್ಲಿಕಾರ್ಜುನ ಖೂಬಾ ಘೋಷಿಸಿದ್ದಾರೆ.

ಬೀದರ್‌ನಲ್ಲಿ ಸೋಮವಾರ ಮಾತನಾಡಿದ ಶಾಸಕ ಮಲ್ಲಿಕಾರ್ಜುನ ಸಿದ್ರಾಮಪ್ಪ ಖೂಬಾ ಅವರು, 'ಬಿಜೆಪಿ ಸೇರಲು ಹಿಂದೆಯೇ ಆಹ್ವಾನ ಬಂದಿತ್ತು. ಬೀದರ್ ಅಭಿವೃದ್ಧಿಯ ದೃಷ್ಟಿಯಿಂದಾಗಿ ಪಕ್ಷ ಸೇರಲಿದ್ದೇನೆ' ಎಂದರು.

ಜೆಡಿಎಸ್ ತೊರೆಯಲು ಮುಂದಾದ ಮಲ್ಲಿಕಾರ್ಜುನ ಖೂಬಾಜೆಡಿಎಸ್ ತೊರೆಯಲು ಮುಂದಾದ ಮಲ್ಲಿಕಾರ್ಜುನ ಖೂಬಾ

'ಜೆಡಿಎಸ್ ಪಕ್ಷದಿಂದ ಸ್ಪರ್ಧಿಸುವುದಿಲ್ಲ ಎಂದು ಪಕ್ಷದ ವರಿಷ್ಠರಿಗೆ ಹಿಂದೆಯೇ ತಿಳಿಸಿದ್ದೆ. ಆದ್ದರಿಂದ, ಮೊದಲೇ ಪಟ್ಟಿಯಲ್ಲಿ ನನ್ನ ಹೆಸರನ್ನು ಸೇರಿಸಿಲ್ಲ' ಎಂದು ಖೂಬಾ ಸ್ಪಷ್ಟಪಡಿಸಿದರು.

'ಬಿಜೆಪಿ ಸೇರಲು ಹಿಂದೆಯೇ ಆಹ್ವಾನ ಬಂದಿತ್ತು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಹೋಳಿ ಬಳಿಕ ಬಿಜೆಪಿ ಸೇರಲಿದ್ದೇನೆ' ಎಂದು ಮಲ್ಲಿಕಾರ್ಜುನ ಖೂಬಾ ಹೇಳಿದರು.

2013ರ ಚುನಾವಣೆ : ಬೀದರ್‌ನಲ್ಲಿ ಸೋತವರು, ಗೆದ್ದವರು2013ರ ಚುನಾವಣೆ : ಬೀದರ್‌ನಲ್ಲಿ ಸೋತವರು, ಗೆದ್ದವರು

'ಬೆಂಬಲಿಗರು ಮತ್ತು ಕಾರ್ಯಕರ್ತರ ಜೊತೆ ಈ ಕುರಿತು ಚರ್ಚೆ ನಡೆಸಿದ್ದೇನೆ. ಅವರು ಬಿಜೆಪಿ ಸೇರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಮಾರ್ಚ್ ತಿಂಗಳಿನಲ್ಲಿ ಪಕ್ಷಕ್ಕೆ ಸೇರಲಿದ್ದೇನೆ' ಎಂದು ಮಲ್ಲಿಕಾರ್ಜುನ ಖೂಬಾ ತಿಳಿಸಿದರು.

ಕ್ಷೇತ್ರ ಪರಿಚಯ : ಬಹು ಭಾಷೆ, ಸಂಸ್ಕೃತಿಗಳ ಕ್ಷೇತ್ರ ಔರಾದ್ಕ್ಷೇತ್ರ ಪರಿಚಯ : ಬಹು ಭಾಷೆ, ಸಂಸ್ಕೃತಿಗಳ ಕ್ಷೇತ್ರ ಔರಾದ್

2013ರ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖೂಬಾ ಅವರು 37,494 ಮತಗಳನ್ನು ಪಡೆದು ಜಯಗಳಿಸಿದ್ದರು. ಕಾಂಗ್ರೆಸ್‌ನ ಬಿ.ನಾರಾಯಣ ರಾವ್ 21,601 ಮತ, ಬಿಜೆಪಿಯ ಸಂಜಯ್ ಡಿ.ಪಟವಾರಿ ಅವರು 17,431 ಮತ ಪಡೆದಿದ್ದರು.

English summary
Another set back for JD (S) in the time of Karnataka assembly elections 2018. Basavakalyan MLA Mallikarjuna Kuba said that, he will join BJP soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X