ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಮೇಶ್ವರ್‌ ಉಪಮುಖ್ಯಮಂತ್ರಿ ಆಗಬೇಕೆಂದು ಒತ್ತಾಯಿಸಿದ್ದೇ ನಾನು: ಸಿದ್ದರಾಮಯ್ಯ

|
Google Oneindia Kannada News

ಹುಬ್ಬಳ್ಳಿ, ಡಿಸೆಂಬರ್ 28: ಪರಮೇಶ್ವರ್ ಅವರು ಉಪಮುಖ್ಯಮಂತ್ರಿ ಆಗಬೇಕೆಂದು ಒತ್ತಾಯ ಮಾಡಿದ್ದೇ ನಾನು ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಇಂದು ಹೇಳಿದ್ದಾರೆ.

ಪರಮೇಶ್ವರ್ ಅವರ ಗೃಹಖಾತೆ ಕೈತಪ್ಪಲು ಸಿದ್ದರಾಮಯ್ಯ ಕಾರಣ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, 'ಗೃಹಖಾತೆ ಸ್ಥಾನದಿಂದ ಪರಮೇಶ್ವರ್ ಅವರನ್ನು ತೆಗೆದಿದ್ದು ಹೈಕಮಾಂಡ್' ಎಂದು ಹೇಳಿದರು.

ಹೈಕಮಾಂಡ್ ತೆಗೆದುಕೊಂಡ ನಿರ್ಣಯಕ್ಕೆ ನಾವು ಬದ್ಧವಾಗಿರಬೇಕು, ಪರಮೇಶ್ವರ್ ಅವರಿಗೆ ಗೃಹ ಖಾತೆ ಕೈತಪ್ಪಲು ನಾನು ಕಾರಣವಲ್ಲ ಎಂದು ಅವರು ಹೇಳಿದರು.

ಕೈ ಗ್ಯಾಂಗಿಗೆ ಸಿದ್ದುವೇ ಚಕ್ರವರ್ತಿ, ಮಿಡ್ಲ್ ಮನ್ನುಗಳಿಗೆ ಫುಲ್ಲು ನಿಶ್ಯಕ್ತಿ! ಕೈ ಗ್ಯಾಂಗಿಗೆ ಸಿದ್ದುವೇ ಚಕ್ರವರ್ತಿ, ಮಿಡ್ಲ್ ಮನ್ನುಗಳಿಗೆ ಫುಲ್ಲು ನಿಶ್ಯಕ್ತಿ!

ನಾನು ಕಾಂಗ್ರೆಸ್‌ಗೆ ಸೇರಿದಾಗಿನಿಂದಲೂ ನನಗೆ, ಪರಮೇಶ್ವರ್‌ ಮಧ್ಯೆ ಕಂದಕ ನಿರ್ಮಾಣ ಯತ್ನವನ್ನು ಮಾಡುತ್ತಲೇ ಬಂದಿದ್ದಾರೆ ಎಂದ ಅವರು, ಅವರನ್ನೇ ಉಪಮುಖ್ಯಮಂತ್ರಿ ಮಾಡಬೇಕೆಂದು ಒತ್ತಾಯ ಮಾಡಿದ್ದೇ ನಾನು ಎಂದರು.

'ಓಹ್ ರೇವಣ್ಣ ಹಂಗದ್ನ'

'ಓಹ್ ರೇವಣ್ಣ ಹಂಗದ್ನ'

'ದಲಿತ ಎಂಬ ಕಾರಣಕ್ಕೆ ಪರಮೇಶ್ವರ್‌ ಅನ್ನು ಕಾಂಗ್ರೆಸ್ ತುಳಿಯುತ್ತಿದೆ' ಎಂದು ಎಚ್‌ಡಿ.ರೇವಣ್ಣ ಹೇಳಿದ್ದಾರಲ್ಲ, ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, 'ಓಹ್ ರೇವಣ್ಣ, ಹಾಗಂದ್ನಾ' ಎಂದ ಸಿದ್ದರಾಮಯ್ಯ, 'ರೇವಣ್ಣ ನನ್ನ ಬಗ್ಗೆ ಹೇಳಿದ್ದರೆ ಪ್ರತಿಕ್ರಿಯೆ ನೀಡುತ್ತೇನೆ ಅಷ್ಟೆ' ಎಂದರು.

ರಾಹುಲ್ ಕರ್ನಾಟಕದಿಂದ ಸ್ಪರ್ಧೆ ಮಾಡುವುದಿಲ್ಲ : ಸಿದ್ದರಾಮಯ್ಯ ರಾಹುಲ್ ಕರ್ನಾಟಕದಿಂದ ಸ್ಪರ್ಧೆ ಮಾಡುವುದಿಲ್ಲ : ಸಿದ್ದರಾಮಯ್ಯ

'ಹೊರಟ್ಟಿ, ಕುಮಾರಸ್ವಾಮಿಯನ್ನೇ ಕೇಳಲಿ'

'ಹೊರಟ್ಟಿ, ಕುಮಾರಸ್ವಾಮಿಯನ್ನೇ ಕೇಳಲಿ'

ಬಸವರಾಜ ಹೊರಟ್ಟಿ ಅವರ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಹೊರಟ್ಟಿ ಅವರು ನನ್ನ ಬಗ್ಗೆ ಟೀಕೆ ಮಾಡುವ ಬದಲು, ಕುಮಾರಸ್ವಾಮಿ ಅವರನ್ನೇ ಹೋಗಿ ಕೇಳಿದರೆ ಅವರೇ ಉತ್ತರಿಸುತ್ತಾರೆ. ಸಮನ್ವಯ ಸಮಿತಿಯಲ್ಲಿ ತೆಗೆದುಕೊಳ್ಳುವ ನಿರ್ಣಯದಂತೆ ನಾನು ನಡೆದುಕೊಂಡಿದ್ದೇನೆ ಅಷ್ಟೆ ಎಂದರು.

ರಮೇಶ್‌ ಒಬ್ಬ ಹಠವಾದಿ: ಸತೀಶ್ ಜಾರಕಿಹೊಳಿ ಹೇಳಿಕೆರಮೇಶ್‌ ಒಬ್ಬ ಹಠವಾದಿ: ಸತೀಶ್ ಜಾರಕಿಹೊಳಿ ಹೇಳಿಕೆ

'ಜಾರಕಿಹೊಳಿ ಅಸಮಾಧಾನಗೊಂಡಿದ್ದಾರೆ'

'ಜಾರಕಿಹೊಳಿ ಅಸಮಾಧಾನಗೊಂಡಿದ್ದಾರೆ'

ರಮೇಶ್ ಜಾರಕಿಹೊಳಿ ಅವರ ಬಗ್ಗೆ ಪ್ರತಿಕ್ರಿಯಿಸಿ, ರಮೇಶ್ ಜಾರಕಿಹೊಳಿ ಅಸಮಾಧಾನಗೊಂಡಿದ್ದಾರೆ, ಅವರು ನನ್ನ ಸಂಪರ್ಕಕ್ಕೆ ಸಿಕ್ಕಿಲ್ಲ, ಆದರೆ ಅವರು ಪಕ್ಷ ಬಿಟ್ಟು ಹೋಗುತ್ತಾರೆ ಎಂಬುದು ಸುಳ್ಳು ಎಂದು ಹೇಳಿದರು.

ಗೃಹ ಖಾತೆ ಕೈತಪ್ಪಲು ಸಿದ್ದರಾಮಯ್ಯ ಕಾರಣ?

ಗೃಹ ಖಾತೆ ಕೈತಪ್ಪಲು ಸಿದ್ದರಾಮಯ್ಯ ಕಾರಣ?

ಸಂಪುಟ ವಿಸ್ತರಣೆ ಸಮಯ ಪರಮೇಶ್ವರ್‌ ಅವರ ಬಳಿ ಇದ್ದ ಗೃಹಖಾತೆಯನ್ನು ಕಿತ್ತು, ಎಂ.ಬಿ.ಪಾಟೀಲ್ ಅವರಿಗೆ ನೀಡಲಾಗಿದೆ. ಈ ಬದಲಾವಣೆ ಹಿಂದೆ ಸಿದ್ದರಾಮಯ್ಯ ಅವರ ಕೈವಾಡ ಇದೆ ಎನ್ನಲಾಗಿದೆ. ಆದರೆ ಇದನ್ನು ಸಿದ್ದರಾಮಯ್ಯ ಅಲ್ಲಗಳೆದಿದ್ದಾರೆ. ಪರಮೇಶ್ವರ್ ಅವರು ಈ ವರೆಗೂ ಈ ಬಗ್ಗೆ ಪ್ರತಿಕ್ರಿಯಿಸಿಲ್ಲ.

English summary
Former CM Siddaramaiah said, I only supported G Parameshwar for deputy CM post. He also said giving away the home minister post to MB Patil from Parameshwar is high command decision.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X