ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುರೇಶಾ ನನ್ನ ತಮ್ಮನಲ್ಲ, ನನ್ನ ಮಗ: ಡಿ.ಕೆ.ಶಿವಕುಮಾರ್ ಕಣ್ಣಂಚಲಿ ನೀರು..

|
Google Oneindia Kannada News

Recommended Video

D K Suresh is Not My Brother, D K Shivakumar Said | Oneindia Kannada

'ನಾ ಬೆಂಕಿಯಂತೆ, ನೀ ಗಾಳಿಯಂತೆ, ಈ ಜೋಡಿ ಮುಂದೆ ವೈರಿ ಉಳಿಯುವನೇ' ಗೊತ್ತಿಲ್ಲಾ.. ಆದರೆ, ಡಿಕೆ ಬ್ರದರ್ಸ್ ಒಡನಾಟ ನೋಡಿದರೆ, ಹಳೆಯ ರಾಜ್ ಸಿನಿಮಾದ (ಶಂಕರ್ ಗುರು) ಹಾಡು ನೆನಪಿಗೆ ಬರುತ್ತದೆ.

ರಾಜ್ಯ ರಾಜಕಾರಣದ ವಿಚಾರಕ್ಕೆ ಬರುವುದಾದರೆ, ಡಿಕೆಶಿ ಮತ್ತು ಡಿಕೆಸು ರೀತಿಯಲ್ಲೇ, ಎಚ್ಡಿಕೆ, ಎಚ್ಡಿರೇ ಕೂಡಾ ಸಕ್ರಿಯವಾಗಿದ್ದಾರೆ. ಸಹೋದರನ ಏಳಿಗೆಗೆ, ಆರೋಗ್ಯಕ್ಕೆ ರೇವಣ್ಣ ಕೂಡಾ ಹಲವು ಬಾರಿ ನಿಂಬೆಹಣ್ಣಿನ ಆಸರೆ ಪಡೆದವರು.

ಬ್ರದರ್ ಡಿಕೆ: ಸಂಕಷ್ಟದಲ್ಲಿದ್ದಾಗ ಇಂತಹ ಒಬ್ಬ ಸಹೋದರ ಇದ್ದರೆ ಸಾಕು!ಬ್ರದರ್ ಡಿಕೆ: ಸಂಕಷ್ಟದಲ್ಲಿದ್ದಾಗ ಇಂತಹ ಒಬ್ಬ ಸಹೋದರ ಇದ್ದರೆ ಸಾಕು!

ಡಿ.ಕೆ.ಶಿವಕುಮಾರ್ ಇಡಿ ಬಲೆಗೆ ಬಿದ್ದ ನಂತರ, ಕೋರ್ಟ್, ಕಚೇರಿ, ಮನೆ, ವ್ಯವಹಾರ, ಹೀಗೆ.. ಬೆನ್ನಿಗೆ ಬೆನ್ನಾಗಿ ನಿಂತಿದ್ದು ಅವರ ಸಹೋದರ ಡಿ.ಕೆ.ಸುರೇಶ್. ಡಿಕೆಶಿ ಜೈಲಿನಲ್ಲಿದ್ದ ಸುಮಾರು ಐವತ್ತು ದಿನದಲ್ಲಿ, ಸುರೇಶ್, ಮನೆಗೆ ಬಂದು ಹೋಗಿದ್ದು, ಒಂದೋ ಎರಡು ಸಲ..

ಸರ್ಕಾರ ಕೆಡವುದರಲ್ಲಿ ಯಾರು ನಿಸ್ಸೀಮರು: ಸಿದ್ದರಾಮಯ್ಯನವರೋ, ಕುಮಾರಸ್ವಾಮಿಯೋ?ಸರ್ಕಾರ ಕೆಡವುದರಲ್ಲಿ ಯಾರು ನಿಸ್ಸೀಮರು: ಸಿದ್ದರಾಮಯ್ಯನವರೋ, ಕುಮಾರಸ್ವಾಮಿಯೋ?

ಸದ್ಯ, ಟೆಂಪಲ್ ರೌಂಡ್ ನಲ್ಲಿರುವ ಡಿಕೆಶಿ, ಮಾಧ್ಯಮವರ 'ಸಹೋದರರ ನಡುವಿನ ಬಾಂಡಿಂಗ್' ಬಗ್ಗೆ ಕೇಳಿದ ಪ್ರಶ್ನೆಗೆ, ಹಾಗೇ ಭಾವೋದ್ವೇಗಕ್ಕೆ ಒಳಗಾದರು. ಜೊತೆಗೆ, ಬಿಜೆಪಿಯವರ ಬಗ್ಗೆ, ಯಡಿಯೂರಪ್ಪನವರ ಬಗ್ಗೆಯೂ ಪ್ರೀತಿಯ ಮಾತನ್ನಾಡಿದ್ದಾರೆ...

ಮೊದಲು ಸಂತೋಷ ಪಡುವವನು ನಾನು, ಬಿಎಸ್ವೈ

ಮೊದಲು ಸಂತೋಷ ಪಡುವವನು ನಾನು, ಬಿಎಸ್ವೈ

"ಡಿ.ಕೆ.ಶಿವಕುಮಾರ್ ಅವರು ಹಗರಣದಿಂದ ಮುಕ್ತರಾಗಿ ಹೊರಬಂದರೆ, ಮೊದಲು ಸಂತೋಷ ಪಡುವವನು ನಾನು" ಎನ್ನುವ ಹೇಳಿಕೆಯನ್ನು ಯಡಿಯೂರಪ್ಪ ನೀಡಿದ್ದರು ಎಂದು ಮಾಧ್ಯಮವರು ಡಿಕೆಶಿಯನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಡಿಕೆಶಿ, "ಎಲ್ಲವನ್ನೂ ಬಲ್ಲೆ. ನಾನು ಹೆಚ್ಚು ಮಾತನಾಡಿದರೆ, ಅವರ ಕುರ್ಚಿಗೆ ತೊಂದರೆ ಬರಬಹುದು" ಎನ್ನುವ ಹೇಳಿಕೆಯನ್ನು ನೀಡಿದರು.

ಬಿಎಸ್ವೈ ನನಗೆ ಫೋನ್ ಮಾಡಿ ಮಾತನಾಡಿದ್ದಾರಾ ಎನ್ನುವ ಪ್ರಶ್ನೆಗೆ ಈಗ ಉತ್ತರಿಸಲಾರೆ

ಬಿಎಸ್ವೈ ನನಗೆ ಫೋನ್ ಮಾಡಿ ಮಾತನಾಡಿದ್ದಾರಾ ಎನ್ನುವ ಪ್ರಶ್ನೆಗೆ ಈಗ ಉತ್ತರಿಸಲಾರೆ

"ಜೈಲಿನಿಂದ ಹೊರಬಂದ ಮೇಲೆ, ಬಿಎಸ್ವೈ ನನಗೆ ಫೋನ್ ಮಾಡಿ ಮಾತನಾಡಿದ್ದಾರಾ ಎನ್ನುವ ಪ್ರಶ್ನೆಗೆ ಈಗ ಉತ್ತರಿಸಲಾರೆ" ಎಂದು ಹೇಳಿದ ಡಿಕೆಶಿ, "ಬಿಜೆಪಿಯ ನನ್ನ ಸ್ನೇಹಿತರು ನನ್ನನ್ನು ಸಂಪರ್ಕಿಸಿರುವುದಂತೂ ಹೌದು. ಅವರೆಲ್ಲಾ ಯಾರ್ಯ್, ಅವರ ಹೆಸರನ್ನು ಈಗ ಹೇಳಲಾರೆ" ಎಂದು ಹೇಳಿದ್ದಾರೆ.

ಅವನು ಸೇರಿ, ನನಗೆ ಮೂರು ಜನ ಮಕ್ಕಳು

ಅವನು ಸೇರಿ, ನನಗೆ ಮೂರು ಜನ ಮಕ್ಕಳು" ಎಂದು ಡಿಕೆಶಿ ಹೇಳಿದಾಗ, ಕಣ್ಣಂಚಿನಲ್ಲಿ ನೀರು

"ನೀವು ಜೈಲಿನಲ್ಲಿ ಇದ್ದಾಗ ಡಿ.ಕೆ.ಸುರೇಶ್ ಪಡುತ್ತಿದ್ದ ಪರಿಶ್ರಮ ಅಷ್ಟಿಷ್ಟಲ್ಲ" ಎನ್ನುವ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, "ನಾನು ಯಾವತ್ತೂ ಅವನನ್ನು ನನ್ನ ಸಹೋದರನನ್ನಾಗಿ ನೋಡಲಿಲ್ಲ. ನನಗೆ ಇಬ್ಬರು ಮಕ್ಕಳು, ಅವನನ್ನು ನನ್ನ ಮಗನಾಗಿ ನೋಡುತ್ತಿದ್ದೇನೆ. ಅವನು ಸೇರಿ, ನನಗೆ ಮೂರು ಜನ ಮಕ್ಕಳು" ಎಂದು ಡಿಕೆಶಿ ಹೇಳಿದಾಗ, ಅವರ ಕಣ್ಣಂಚಿನಲ್ಲಿ ನೀರಿತ್ತು.

ಎಂಟಿಬಿ ನಾಗರಾಜ್ ದೊಡ್ಡವರು

ಎಂಟಿಬಿ ನಾಗರಾಜ್ ದೊಡ್ಡವರು

"ಈ ಹಿಂದೆ ನನ್ನ-ನಿಮ್ಮ ಭೇಟಿ ಚುನಾವಣೆ ರಂಗದಲ್ಲಿ ಎಂದು ಡಿಕೆಶಿ ಹೇಳಿದ್ದರು. ಜೈಲಿನಿಂದ ಜಾಮೀನಿನ ಮೇಲೆ ಹೊರ ಬಂದಿರುವ ಅವರನ್ನು ಹೊಸಕೋಟೆ ಉಪ ಚುನಾವಣೆ ಅಖಾಡಕ್ಕೆ ಸ್ವಾಗತಿಸುತ್ತೇನೆ" ಎಂದು ಎಂಟಿಬಿ ನಾಗರಾಜ್ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಕೆ, "ಅವರು ದೊಡ್ಡವರು, ಎಲ್ಲದಕ್ಕೂ ಕಾಲ ಉತ್ತರ ಕೊಡುತ್ತದೆ" ಎಂದು ಹೇಳಿದ್ದಾರೆ.

ಯಡಿಯೂರಪ್ಪನವರು ನಮ್ಮ ಮನೆಗೆ ಬಂದಿದ್ದರು

ಯಡಿಯೂರಪ್ಪನವರು ನಮ್ಮ ಮನೆಗೆ ಬಂದಿದ್ದರು

"ಯಡಿಯೂರಪ್ಪನವರು ನಮ್ಮ ಮನೆಗೆ ಬಂದಿದ್ದರು. ಎಷ್ಟೋ ಸಾವಿರ ಕೋಟಿಯ ಕಾಮಗಾರಿಗೆ ಅನುಮೋದನೆ ಕೊಟ್ಟೆ ಎನ್ನುವುದು ನನಗೆ ಗೊತ್ತಿದೆ. ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಅವರು ಹೇಳಿದ್ದರು. ಕನಕಪುರ ನನ್ನ ರಾಜಕೀಯ ಕರ್ಮಭೂಮಿ. ಇಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ನನ್ನ ಕನಸಿನ ಯೋಜನೆ. ನನ್ನ ಪ್ರಾಣ ಹೋದರೂ ಇದನ್ನು ಬೇರೆ ಊರಿಗೆ ಶಿಫ್ಟ್ ಆಗುವುದಕ್ಕೆ ಬಿಡುವುದಿಲ್ಲ" ಎಂದು, ಮುಖ್ಯಮಂತ್ರಿಗಳಿಗೆ, ಡಿಕೆಶಿ ಚಾಲೆಂಜ್ ಮಾಡಿದ್ದರು.

English summary
I Never Treated DK Suresh As My Brother, He Is Like My son: DK Shivakumar
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X