ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆ ಚುನಾವಣೆ ಸೋಲಿಗೆ ಅರ್ಥ ಹುಡುಕಿಕೊಂಡ ದೇವೇಗೌಡರು

|
Google Oneindia Kannada News

ಬೆಂಗಳೂರು, ಜುಲೈ 04: ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನುಭವಿಸಿರುವ ಜೆಡಿಎಸ್ ವರಿಷ್ಠ ದೇವೇಗೌಡ ಅವರು, ತಮ್ಮ ಸೋಲಿಗೆ ಹೊಸ ಅರ್ಥವನ್ನು ಹುಡುಕಿಕೊಂಡಿದ್ದಾರೆ.

ಆಗುವುದೆಲ್ಲಾ ಒಳ್ಳೆಯದಕ್ಕೇ ಎಂಬ ಸೂತ್ರವನ್ನು ಅಳವಡಿಸಿಕೊಂಡಿರುವ ದೇವೇಗೌಡ ಅವರು, ನಾನು ಚುನಾವಣೆಯಲ್ಲಿ ಸೋತಿದ್ದು ಪಕ್ಷ ಸಂಘಟನೆ ಮಾಡೋಕೆ ಎಂದು ಹೇಳಿದ್ದಾರೆ.

ಇಂದು ಗುರುವಾರ ಜೆ.ಪಿ.ಭವನದಲ್ಲಿ ನಡೆದ ಸಮಾರಂಭದಲ್ಲಿ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇವೇಗೌಡ ಸೋತಿದ್ದೇ ಪಕ್ಷವನ್ನು ಸಂಘಟನೆ ಮಾಡುವುದಕ್ಕೆ, ಸೋಲಿನಿಂದ ನಾನು ಧೃತಿಗೆಟ್ಟಿಲ್ಲ ಎಂದರು.

ಜೆಡಿಎಸ್‌ಗೆ ಹೊಸ ಅಧ್ಯಕ್ಷರ ನೇಮಕ : ಪಣ ತೊಟ್ಟಂತೆ ಮಾಡಿದ ದೇವೇಗೌಡ! ಜೆಡಿಎಸ್‌ಗೆ ಹೊಸ ಅಧ್ಯಕ್ಷರ ನೇಮಕ : ಪಣ ತೊಟ್ಟಂತೆ ಮಾಡಿದ ದೇವೇಗೌಡ!

ದೇವೇಗೌಡ ಅವರು ಇನ್ನೊಂದು ಚುನಾವಣೆಗೆ ಆಸೆ ಪಡುತ್ತಿದ್ದಾರೆ ಎಂಬುದು ಸುಳ್ಳು ಮಾತು ಅದನ್ನೆಲ್ಲಾ ಬಿಟ್ಟುಬಿಡಿ, ಮೈತ್ರಿ ಸರ್ಕಾರಕ್ಕೆ ಧಕ್ಕೆ ಆಗದಂತೆ, ಅಪಾಯ ಬರದಂತೆ ಪಕ್ಷವನ್ನು ಸಂಘಟನೆ ಮಾಡುತ್ತೇನೆ ಎಂದು ದೇವೇಗೌಡರು ಕಾರ್ಯಕರ್ತರು, ಮುಖಂಡರಿಗೆ ಹೇಳಿದರು.

ಎಚ್‌.ವಿಶ್ವನಾಥ್‌ ಅವರಿಗೆ ಆಭಾರಿಯಾಗಿದ್ದೇನೆ: ದೇವೇಗೌಡ

ಎಚ್‌.ವಿಶ್ವನಾಥ್‌ ಅವರಿಗೆ ಆಭಾರಿಯಾಗಿದ್ದೇನೆ: ದೇವೇಗೌಡ

ಇಷ್ಟು ದಿನ ಪಕ್ಷದ ಅಧ್ಯಕ್ಷರಾಗಿದ್ದ ಎಚ್.ವಿಶ್ವನಾಥ್ ಅವರಿಗೆ ಆಭಾರಿಯಾಗಿದ್ದೇನೆ ಎಂದ ದೇವೇಗೌಡ, ಪಕ್ಷದ ಅಧ್ಯಕ್ಷರ ಆಯ್ಕೆ ಸವಾಲನ್ನು ಭೇದಿಸಿದ್ದೇನೆ, ನನ್ನ ಮಾತಿಗೆ ಒಪ್ಪಿ ಇಂದು ಅಧಿಕಾರ ಸ್ವೀಕರಿಸಿದ ಎಲ್ಲರಿಗೂ ಆಭಾರಿಯಾಗಿದ್ದೇನೆ ಎಂದು ದೇವೇಗೌಡ ಅವರು ಹೇಳಿದರು.

ವಿರೋಧದ ನಡುವೆಯೂ ಯುವ ಘಟಕ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಂಡ ನಿಖಿಲ್ ವಿರೋಧದ ನಡುವೆಯೂ ಯುವ ಘಟಕ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಂಡ ನಿಖಿಲ್

ಹಠ ಮಾಡಿ ನಿಖಿಲ್‌ರನ್ನು ಅಧ್ಯಕ್ಷರನ್ನಾಗಿಸಿದರು: ದೇವೇಗೌಡ

ಹಠ ಮಾಡಿ ನಿಖಿಲ್‌ರನ್ನು ಅಧ್ಯಕ್ಷರನ್ನಾಗಿಸಿದರು: ದೇವೇಗೌಡ

ಶರಣು ಗೌಡ ಕುಂದನೂರು ಹಠ ಮಾಡಿ ಜೆಡಿಎಸ್​ನ ಯುವ ಘಟಕದ ಅಧ್ಯಕ್ಷರನ್ನಾಗಿ ನಿಖಿಲ್ ಅವರನ್ನ ಆಯ್ಕೆ ಮಾಡಿಸಿದ್ರು. ನಿಖಿಲ್ ನಾಯಕತ್ವದಲ್ಲಿ ಸಾಮಾಜಿಕ ನ್ಯಾಯದ ಅಡಿಯಲ್ಲಿ ಘಟಕಗಳ ಪದಾಧಿಕಾರಿಗಳ ನೇಮಕ ಆಗಲಿ ಎಂದು ಸೂಚನೆ ನೀಡಿದರು.

ಪದಾಧಿಕಾರಿಗಳ ಆಯ್ಕೆ ಶೀಘ್ರ ಮುಗಿಸುತ್ತೇವೆ: ದೇವೇಗೌಡ

ಪದಾಧಿಕಾರಿಗಳ ಆಯ್ಕೆ ಶೀಘ್ರ ಮುಗಿಸುತ್ತೇವೆ: ದೇವೇಗೌಡ

ಪರಿಶಿಷ್ಟ, ಕಾರ್ಮಿಕ ಘಟಕದ ಅಧ್ಯಕ್ಷ ಸ್ಥಾನ ಶೀಘ್ರವೇ ನೇಮಕ‌ ಮಾಡುತ್ತೇವೆ. ಪದಾಧಿಕಾರಿಗಳ ಆಯ್ಕೆ ಶೀಘ್ರವೇ ಮುಗಿಸುತ್ತೇವೆ ಎಂದು ದೇವೇಗೌಡ ಅವರು ಭರವಸೆ ನೀಡಿದರು.

ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ದೇವೇಗೌಡ ಆಪ್ತ ಎಚ್‌.ಕೆ.ಕುಮಾರಸ್ವಾಮಿ ನೇಮಕ ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ದೇವೇಗೌಡ ಆಪ್ತ ಎಚ್‌.ಕೆ.ಕುಮಾರಸ್ವಾಮಿ ನೇಮಕ

ತುಮಕೂರಿನಲ್ಲಿ ಸೋತ ದೇವೇಗೌಡರು

ತುಮಕೂರಿನಲ್ಲಿ ಸೋತ ದೇವೇಗೌಡರು

ದೇವೇಗೌಡ ಅವರು ತುಮಕೂರು ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದರು, ಅವರು ಬಿಜೆಪಿಯ ಬಸವರಾಜು ಅವರ ವಿರುದ್ಧ 12 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲನುಭವಿಸಿದರು. ಹಾಲಿ ಸಂಸದ ಮುದ್ದಹನುಮೇಗೌಡ ಅವರ ಸ್ಥಾನವನ್ನು ದೇವೇಗೌಡ ಅವರಿಗೆ ನೀಡಲಾಗಿತ್ತು.

English summary
JDS national president Deve Gowda said 'me loosing in election is good, i loose the election so i can re build the JDS party from root level.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X