ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿವ ಸ್ಥಾನಕ್ಕೆ ಲಾಭಿ ಮಾಡಲ್ಲ, ವರಿಷ್ಠರೇ ನೀಡಲಿ: ಬಸವರಾಜ ಹೊರಟ್ಟಿ

|
Google Oneindia Kannada News

ಶಿರಸಿ, ನವೆಂಬರ್ 21: ನನಗೆ ಸಚಿವ ಸ್ಥಾನ ನಿಭಾಯಿಸುವ ಸಾಮರ್ಥ್ಯ ಇದೆ ಹಾಗಿದ್ದ ಮೇಲೆ ನಾನೇಕೆ ಸಚಿವ ಸ್ಥಾನಕ್ಕೆ ಲಾಭಿ ಮಾಡಬೇಕು ಎಂದು ವಿಧಾನಪರಿಷತ್‌ ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಚಿವ ಸ್ಥಾನದ ಬಗ್ಗೆ ಆಶಾವಾದಿಯೂ ಅಲ್ಲ, ನಿರಾಶಾವಾಧಿಯೂ ಅಲ್ಲ ಎಂದಿದ್ದಾರೆ.

ಹೊರಟ್ಟಿ ನೀಡಿರುವ ಈ ಎಲ್ಲಾ ನಿಯಮಗಳನ್ನು ಅಧಿವೇಶನದಲ್ಲಿ ಪಾಲಿಸಲೇಬೇಕು ಹೊರಟ್ಟಿ ನೀಡಿರುವ ಈ ಎಲ್ಲಾ ನಿಯಮಗಳನ್ನು ಅಧಿವೇಶನದಲ್ಲಿ ಪಾಲಿಸಲೇಬೇಕು

ನನ್ನ ಸಾಮರ್ಥ್ಯವನ್ನು ಗುರುತಿಸಿ ಪಕ್ಷದ ವರಿಷ್ಠರು ಸಚಿವ ಸ್ಥಾನ ಕೊಡುವುದಿದ್ದರೆ ಕೊಡಲಿ ವಿನಃ ನಾನು ಯಾವುದೇ ಕಾರಣಕ್ಕೂ ಸಚಿವ ಸ್ಥಾನಕ್ಕಾಗಿ ಲಾಭಿ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Basavaraj Horatti

ಉತ್ತರ ಕರ್ನಾಟಕದಿಂದ 96 ಶಾಸಕರು ಆಯ್ಕೆ ಆಗಿದ್ದಾರೆ. ಸಂಖ್ಯೆಯನ್ನು ಗಮನಿಸಿ ಸಚಿವ ಸ್ಥಾನ ನೀಡುವಾಗಿ ಉತ್ತರ ಕರ್ನಾಟಕವನ್ನು ಮೊದಲ ಆದ್ಯತೆಯಾಗಿ ಪರಿಗಣಿಸಬೇಕು ಎಂದು ಅವರು ಸಲಹೆ ನೀಡಿದರು.

ಬಸವರಾಜ ಹೊರಟ್ಟಿಗೆ ಶಿಕ್ಷಣ ಸಚಿವ ಸ್ಥಾನ? ಜೆಡಿಎಸ್ ಲೆಕ್ಕಾಚಾರ ಏನು?ಬಸವರಾಜ ಹೊರಟ್ಟಿಗೆ ಶಿಕ್ಷಣ ಸಚಿವ ಸ್ಥಾನ? ಜೆಡಿಎಸ್ ಲೆಕ್ಕಾಚಾರ ಏನು?

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದೆ. ಸರ್ಕಾರಕ್ಕೆ ಅದರದ್ದೇ ಆದ ಸಮಸ್ಯೆಗಳಿವೆ, ಸಮ್ಮಿಶ್ರ ಸರ್ಕಾರದಲ್ಲಿ ಆಕಾಂಕ್ಷಿಗಳ ಪಟ್ಟಿ ಯಾವಾಗಲೂ ಉದ್ದವೇ ಇರುತ್ತದೆ. ಇಂತಹಾ ಸಮಯದಲ್ಲಿ ಲಾಭಿಗಳನ್ನು ಮಾಡುವುದರಿಂದ ಪ್ರಯೋಜನವಿಲ್ಲ ಎಂದು ಅವರು ಹೇಳಿದರು.

ಅಧಿಕಾರ ಅತೃಪ್ತಿ ಹೊರಹಾಕಿದ ಹಂಗಾಮಿ ಸಭಾಪತಿ ಹೊರಟ್ಟಿಅಧಿಕಾರ ಅತೃಪ್ತಿ ಹೊರಹಾಕಿದ ಹಂಗಾಮಿ ಸಭಾಪತಿ ಹೊರಟ್ಟಿ

ಶಿಕ್ಷಣ ಸಚಿವ ಮಹೇಶ್ ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನವನ್ನು ಬಸವರಾಜ ಹೊರಟ್ಟಿ ಅವರಿಗೆ ನೀಡಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.

English summary
I have ability to manage minister post but i would not ask for minister post says JDS leader Basavaraj Horatti. He said party leaders will give me opportunity i no need to ask them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X