ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜೀನಾಮೆಗೆ ಸಿದ್ಧ: ಎಚ್ಡಿಕೆ ಶಾಕಿಂಗ್ ಹೇಳಿಕೆಗೆ ಕಾರಣವೇನು?

|
Google Oneindia Kannada News

Recommended Video

ರಾಜೀನಾಮೆಗೆ ಸಿದ್ಧ: ಎಚ್ಡಿಕೆ ಶಾಕಿಂಗ್ ಹೇಳಿಕೆಗೆ ಕಾರಣವೇನು? | Oneindia Kannada

ಬೆಂಗಳೂರು, ಜನವರಿ 28: "ಕಾಂಗ್ರೆಸ್ ಶಾಸಕರು ಮೈತ್ರಿ ಧರ್ಮದ ಸೀಮೆಯನ್ನು ಮೀರುತ್ತಿದ್ದಾರೆ. ಇದು ಹೀಗೆಯೇ ಮುಂದುವರಿದರೆ ನಾನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯಲು ಸಿದ್ಧ" ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ ಪುಟ್ಟರಂಗ ಶೆಟ್ಟಿ, 'ಕನಕ ಸಮುದಾಯ ಭವನ'ದ ಉದ್ಘಾಟನೆಯ ಸಮಯದಲ್ಲಿ ಮಾತನಾಡುತ್ತಾ, 'ಸಿದ್ದರಾಮಯ್ಯ ಅವರೇ ಮತ್ತೆ ಮುಖ್ಯಮಂತ್ರಿಯಾಗಬೇಕು ಎಂಬುದು ನನ್ನಾಸೆ' ಎಂದಿದ್ದರು.

 ಅತೃಪ್ತ ಶಾಸಕರ ಮೇಲೆ ನಿಗಾ ಇಡಲು ಕುಮಾರಸ್ವಾಮಿ ಮಾಸ್ಟರ್ ಪ್ಲಾನ್ ಅತೃಪ್ತ ಶಾಸಕರ ಮೇಲೆ ನಿಗಾ ಇಡಲು ಕುಮಾರಸ್ವಾಮಿ ಮಾಸ್ಟರ್ ಪ್ಲಾನ್

ಅವರ ಈ ಹೇಳಿಕೆಗೆ ಕೆಂಡಾಮಂಡಲವಾಗಿರುವ ಎಚ್ ಡಿ ಕುಮಾರಸ್ವಾಮಿ, ಕಾಂಗ್ರೆಸ್ ನಾಯಕರು, ಅವರ ಪಕ್ಷದ ಶಾಸಕರು ಅಸಂಬದ್ಧ ಹೇಳಿಕೆಗಳನ್ನು ನೀಡುವುದನ್ನು ನಿಯಂತ್ರಿಸದೆ ಇದ್ದರೆ, ನಾನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯಲು ಸಿದ್ಧ ಎಂದರು.

ರಾಜೀನಾಮೆಗೂ ಸಿದ್ಧ!

ರಾಜೀನಾಮೆಗೂ ಸಿದ್ಧ!

"ಕಾಂಗ್ರೆಸ್ ಶಾಸಕರು ಹೇಳುತ್ತಾರೆ ಸಿದ್ದರಾಮಯ್ಯ ಅವರೇ ತಮ್ಮ ನಾಯಕ ಎಂದು. ಇದನ್ನು ಕಾಂಗ್ರೆಸ್ ನಾಯಕರು ಗಂಭೀರವಾಗಿ ಪರಿಗಣಿಸಬೇಕು. ಇಂಥ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಲು ನಾನು ಸೂಕ್ತ ವ್ಯಕ್ತಿಯಲ್ಲ. ಕಾಂಗ್ರೆಸ್ ನಾಯಕರೇ ಉತ್ತರಿಸಬೇಕು. ಅವರು ಇಂಥ ಹೇಳಿಕೆ ನೀಡುತ್ತಲೇ ಇರುವುದಾದರೆ ನಾನು ರಾಜೀನಾಮೆಗೆ ಸಿದ್ಧ. ಅವರು ಸೀಮೆ ದಾಟುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಶಾಸಕರನ್ನು ನಿಯಂತ್ರಣದಲ್ಲಿಡಬೇಕು" - ಎಚ್ ಡಿ ಕುಮಾರಸ್ವಾಮಿ

ಆಡಳಿತ ನನ್ನ ಕೈಯಲಿಲ್ಲ, ಕಾಂಗ್ರೆಸ್‌ ಕೈಯಲ್ಲಿದೆ: ಕುಮಾರಸ್ವಾಮಿ ಅಸಮಾಧಾನಆಡಳಿತ ನನ್ನ ಕೈಯಲಿಲ್ಲ, ಕಾಂಗ್ರೆಸ್‌ ಕೈಯಲ್ಲಿದೆ: ಕುಮಾರಸ್ವಾಮಿ ಅಸಮಾಧಾನ

ಡಿಸಿಎಂ ಪರಂ ಏನಂತಾರೆ?

ಡಿಸಿಎಂ ಪರಂ ಏನಂತಾರೆ?

ಈ ಬೆಳವಣಿಗೆಯ ನಂತರ ಪ್ರತಿಕ್ರಿಯೆ ನೀಡಿದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, "ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ಅವರನ್ನು ನಾಯಕ ಎಂದು ಕರೆಯುತ್ತಾರೆ. ಅವರು ನಿಜವಾಗಿಯೂ ಅತ್ಯುತ್ತಮ ಮುಖ್ಯಮಂತ್ರಿಯಾಗಿದ್ದರು ಎಂಬುದರಲ್ಲಿ ಎರಡು ಮಾತಿಲ್ಲ. ಅವರು ನಮ್ಮ ಶಾಸಕಾಂಗ ಪಕ್ಷದ ನಾಯಕರು. ಶಾಸಕರಿಗೆ ಅವರೇ ಮುಖ್ಯಮಂತ್ರಿ. ಅವರು ಅವರ ಅಭಿಪ್ರಾಯ ಹೇಳಿದ್ದಾರೆ. ಅದರಲ್ಲಿ ತಪ್ಪೇನು? ನಾವೆಲ್ಲರೂ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರೊಂದಿಗೂ ಚೆನ್ನಾಗಿಯೇ ಇದ್ದೇವೆ." ಎಂದರು.

ಮೈತ್ರಿ ಮಧ್ಯೆ ಮತ್ತೆ ಮುನಿಸು ತಂದ ವರ್ಗಾವಣೆ: ಸಿಎಂ ವಿರುದ್ಧ ಪಾಟೀಲ್ ಗರಂಮೈತ್ರಿ ಮಧ್ಯೆ ಮತ್ತೆ ಮುನಿಸು ತಂದ ವರ್ಗಾವಣೆ: ಸಿಎಂ ವಿರುದ್ಧ ಪಾಟೀಲ್ ಗರಂ

ಸಿ ಪುಟ್ಟರಂಗ ಶೆಟ್ಟಿ ಹೇಳಿದ್ದೇನು?

ಸಿ ಪುಟ್ಟರಂಗ ಶೆಟ್ಟಿ ಹೇಳಿದ್ದೇನು?

ಚಾಮರಾಜನಗರ ಕಾಂಗ್ರೆಸ್ ಶಾಸಕ ಸಿ ಪುಟ್ಟರಂಗಶೆಟ್ಟಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ, 'ನನಗೆ ಯಾವತ್ತಿಗೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ. ನಾನು ಅವರ ಋಣದಲ್ಲಿದ್ದೇನೆ. ಅವರಿಂದಲೇ ನಾನು ಮೂರು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದೇನೆ. ಅವರು ಮತ್ತೆ ಮುಖ್ಯಮಂತ್ರಿಯಾಗಬೇಕು ಎಂಬುದು ನನ್ನಾಸೆ' ಎಂಬ ಹೇಳಿಕೆ ನೀಡಿದ್ದರು.

 ಅತೃಪ್ತ ಶಾಸಕರ ಮೇಲೆ ನಿಗಾ ಇಡಲು ಕುಮಾರಸ್ವಾಮಿ ಮಾಸ್ಟರ್ ಪ್ಲಾನ್ ಅತೃಪ್ತ ಶಾಸಕರ ಮೇಲೆ ನಿಗಾ ಇಡಲು ಕುಮಾರಸ್ವಾಮಿ ಮಾಸ್ಟರ್ ಪ್ಲಾನ್

ಎಂಟಿಬಿ ನಾಗರಾಜು ಹೇಳಿದ್ದೂ ಅದನ್ನೇ!

ಎಂಟಿಬಿ ನಾಗರಾಜು ಹೇಳಿದ್ದೂ ಅದನ್ನೇ!

ವಸತಿ ಸಚಿವ ಎಂಟಿಬಿ ನಾಗರಾಜು ಅವರು ಸಹ 'ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಬೇಕಿತ್ತು. ನಾನು ಮುಂದೆಂದೂ ಚುನಾವಣೆಗೆ ಸ್ಪರ್ಧಿಸಬಾರದು ಎಂದು ನಿರ್ಧರಿಸಿದ್ದೇನೆ. ನನಗೆ ಮಂತ್ರಿಯಾಗಬೇಕು ಎಂಬ ಕನಸಿತ್ತು. ಅದನ್ನು ಸಿದ್ದರಾಮಯ್ಯ ಅವರೇ ನನಸು ಮಾಡಿದ್ದಾರೆ' ಎಂದಿದ್ದರು.

ಸಿದ್ದರಾಮಯ್ಯ ನಮ್ಮ ಮುಖಂಡ ಎಂದಿದ್ದ ಸೋಮಶೇಖರ್

ಸಿದ್ದರಾಮಯ್ಯ ನಮ್ಮ ಮುಖಂಡ ಎಂದಿದ್ದ ಸೋಮಶೇಖರ್

ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಟಿ ಸೋಮಶೇಖರ್ ಅವರು ಸಹ, 'ಸಿದ್ದರಾಮಯ್ಯ ಅವರು ಮಾತ್ರವೇ ಎಮದಿಗೂ ನಮ್ಮ ನಾಯಕರು. ಬೆಂಗಳೂರಿನ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಅಪಾರ. ಈಗಿನ ಮೈತ್ರಿ ಸರ್ಕಾರ ಏಳು ತಿಂಗಳು ಪೂರೈಸಿದರೂ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಅವರು ಸೋಲಲು ಕೆಲವರ ಪಿತೂರಿಯೇ ಕಾರಣ' ಎಂದು ಅವರು ದೂರಿದ್ದರು.

ಕರ್ನಾಟಕದ ರಾಜಕೀಯ ಪರಿಸ್ಥಿತಿ ಏನಾಗಲಿದೆ? ಏನು ಹೇಳುತ್ತದೆ ಜ್ಯೋತಿಷ್ಯ? ಕರ್ನಾಟಕದ ರಾಜಕೀಯ ಪರಿಸ್ಥಿತಿ ಏನಾಗಲಿದೆ? ಏನು ಹೇಳುತ್ತದೆ ಜ್ಯೋತಿಷ್ಯ?

English summary
Karnataka CM when asked 'Congress MLAs say Siddaramaiah is their leader': Congress leaders have to watch all that issues, I'm not the concerned person for it. If they want to continue with it,I'm ready to step down. They're crossing line...Congress leaders must control their MLAs
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X