ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಕೀಯ ಸೇರುವ ಗಾಳಿಸುದ್ದಿ ಅಲ್ಲಗಳೆದ ಶ್ರೀನಾಥ್

By Prasad
|
Google Oneindia Kannada News

ಬೆಂಗಳೂರು, ಫೆ. 4 : ಭಾರತದ ಮಾಜಿ ಕ್ರಿಕೆಟ್ ಆಟಗಾರ, ವೇಗದ ಬೌಲರ್ ಜಾವಗಲ್ ಶ್ರೀನಾಥ್ ಅವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂದು ದೃಢಪಡಿಸಿದ್ದು, ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರ ವಿರುದ್ಧ ಕಣಕ್ಕಿಳಿಯಲಿದ್ದಾರೆ ಎಂಬ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಶ್ರೀನಾಥ್ ಅವರು ಬಿಜೆಪಿ ಪಕ್ಷವನ್ನು ಸೇರಲಿದ್ದಾರೆ, ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಗಾಳಿಸುದ್ದಿ ಹಬ್ಬಿತ್ತು. ಒಂದು ಮಾಧ್ಯಮ ವರದಿ, ಶ್ರೀನಾಥ್ ಅವರು ಹಾಸನದ ಹಾಲಿ ಸಂಸದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ವಿರುದ್ಧ ಸ್ಪರ್ಧಿಸಲಿದ್ದಾರೆ ಎಂದು ಹೇಳಿತ್ತು.

ಮಂಗಳವಾರ ಒನ್ಇಂಡಿಯಾ ಜೊತೆ ಮಾತನಾಡುತ್ತಿದ್ದ 'ಮೈಸೂರು ಎಕ್ಸ್ ಪ್ರೆಸ್' ಎಂದೇ ಖ್ಯಾತರಾಗಿದ್ದ ಜಾವಗಲ್ ಶ್ರೀನಾಥ್ ಅವರು ಗಾಳಿಸುದ್ದಿಯನ್ನು ಗಾಳಿಗೆ ತೂರಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿರಲಿ, ರಾಜಕೀಯವನ್ನೂ ಪ್ರವೇಶಿಸುವುದಿಲ್ಲ ಎಂದು ಖಚಿತವಾಗಿ ಹೇಳಿ ಇನ್ ಸ್ವಿಂಗರ್ ಎಸೆದಿದ್ದಾರೆ.

I am not joining politics, confirms Javagal Srinath

"ರಾಜಕೀಯವನ್ನು ಸೇರುವ ಯಾವುದೇ ಇಚ್ಛೆ ನನಗೆ ಇಲ್ಲ. ಯಾವುದೇ ಪಕ್ಷವನ್ನು ಸೇರುವ ಅಥವಾ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನೂ ನಾನು ವ್ಯಕ್ತಪಡಿಸಿಲ್ಲ. ಇಂಥ ಸಲ್ಲದ ಸುದ್ದಿಗಳಿಗೆ ಕಿವಿಗೊಡಬೇಡಿ" ಎಂದು ಅವರು ನುಡಿದಿದ್ದಾರೆ.

44 ವರ್ಷದ ಜಾವಗಲ್ ಶ್ರೀನಾಥ್ ಅವರು, ಭಾರತ ತಂಡದಲ್ಲಿ ಜೊತೆಯಾಗಿ ಆಡಿದ್ದ ಮತ್ತೊಬ್ಬ ಕ್ರಿಕೆಟ್ ಪಟು ಅನಿಲ್ ಕುಂಬ್ಳೆ (ಮಾಜಿ ಕೆಎಸ್‌ಸಿಎ ಅಧ್ಯಕ್ಷ) ಜೊತೆಗೂಡಿ 2010ರಲ್ಲಿ ಕೆಎಸ್‌ಸಿಎ ಚುನಾವಣೆಯಲ್ಲಿ ಸ್ಪರ್ಧಿಸಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು. ಹಲವಾರು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದ ಅವರು ನಂತರ ಅಲ್ಲಿನ ವ್ಯವಸ್ಥೆಯನ್ನು ಧಿಕ್ಕರಿಸಿ ರಾಜೀನಾಮೆ ನೀಡಿದ್ದರು.

ಮೂರು ವರ್ಷಗಳು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ನಲ್ಲಿ ಸೇವೆ ಸಲ್ಲಿಸಿದ್ದ ಅವರು, ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಶ್ರೀನಾಥ್ ಅವರು ಪ್ರಸ್ತುತ ಐಸಿಸಿ ರೆಫ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ 67 ಪಂದ್ಯಗಳಲ್ಲಿ 236 ಮತ್ತು ಏಕದಿನ ಪಂದ್ಯಗಳಲ್ಲಿ 229 ಪಂದ್ಯಗಳಲ್ಲಿ 315 ವಿಕೆಟ್ ಕಿತ್ತಿದ್ದಾರೆ. ಇನ್ನೊಬ್ಬ ಕ್ರಿಕೆಟ್ ಆಟಗಾರ, ಮಾಜಿ ನಾಯಕ ಸೌರವ್ ಗಂಗೂಲಿ ಕೂಡ ರಾಜಕೀಯ ಸೇರುವುದಿಲ್ಲ ಎಂದು ಪ್ರಕಟಿಸಿದ್ದಾರೆ.

ಭಾರತದ ಪರ ಆಡಿರುವ ಮಾಜಿ ನಾಯಕ ಮೊಹಮ್ಮದ್ ಅಜರುದ್ದಿನ್, ನವಜ್ಯೋತ್ ಸಿಂಗ್ ಸಿಧು, 1987ರ ವಿಶ್ವಕಪ್ ಗೆದ್ದ ತಂಡದಲ್ಲಿದ್ದ ಕೀರ್ತಿ ಆಜಾದ್, ಕರ್ನಾಟಕದ ವೇಗದ ಬೌಲರ್ ದೊಡ್ಡ ಗಣೇಶ್ (ಜೆಡಿಎಸ್), ಚೇತನ್ ಚೌಹಾಣ್, ರಾಜಕೀಯದ ಗಾಳಿ, ನೀರು ಕುಡಿಯುತ್ತಿದ್ದಾರೆ.

English summary
Exclusive : Former India paceman Javagal Srinath today confirmed that he is not entering politics, putting rest to all the speculations surrounding him. In the recent past, there were rumours of Srinath entering the political arena and contesting the forthcoming Lok Sabha polls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X