ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು ಮಾರಾಟಕ್ಕಿಲ್ಲ ಎಂದು ಘೋಷಿಸಿದ ಜೆಡಿಎಸ್ ಶಾಸಕ

|
Google Oneindia Kannada News

ಮಂಡ್ಯ, ಡಿಸೆಂಬರ್ 19 : "ನಾನು ಜೆಡಿಎಸ್ ಶಿಸ್ತಿನ ಸಿಪಾಯಿ. ಪಕ್ಷ ತೊರೆಯುವ ಪ್ರಶ್ನೆಯೇ ಇಲ್ಲ. ನಾನು ಮಾರಾಟಕ್ಕಿಲ್ಲ. ಯಾವ ಪಕ್ಷಕ್ಕೂ ಹೋಗುವುದಿಲ್ಲ" ಎಂದು ನಾಗಮಂಗಲ ಕ್ಷೇತ್ರದ ಜೆಡಿಎಸ್ ಶಾಸಕ ಸುರೇಶ್ ಗೌಡ ಸ್ಪಷ್ಟಪಡಿಸಿದರು.

ಜೆಡಿಎಸ್‌ನ ಇಬ್ಬರು ಶಾಸಕರು ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಕಳೆದ ಎರಡು ದಿನದಿಂದ ಹರಿದಾಡುತ್ತಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ, ನಾಗಮಂಗಲದ ಸುರೇಶ್ ಗೌಡ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.

ಕುಮಾರಸ್ವಾಮಿಗೆ ಮೋಸ ಮಾಡಲ್ಲ : ರವೀಂದ್ರ ಶ್ರೀಕಂಠಯ್ಯಕುಮಾರಸ್ವಾಮಿಗೆ ಮೋಸ ಮಾಡಲ್ಲ : ರವೀಂದ್ರ ಶ್ರೀಕಂಠಯ್ಯ

15 ಕ್ಷೇತ್ರಗಳ ಉಪ ಚುನಾವಣೆ ಬಳಿಕ ಕರ್ನಾಟಕದ ಬಿಜೆಪಿ ಸರ್ಕಾರ ಭದ್ರವಾಗಿದೆ. ಆದರೆ, ಆಪರೇಷನ್ ಕಮಲ ಇನ್ನೂ ನಿಂತಿಲ್ಲ ಎಂಬ ಚರ್ಚೆಗಳು ಆರಂಭವಾಗಿದ್ದವು. ಜೆಡಿಎಸ್ ವರಿಷ್ಠರ ನಡೆಯಿಂದ ಬೇಸತ್ತ ಶಾಸಕರು ಬಿಜೆಪಿಯತ್ತ ಮುಖ ಮಾಡಿದ್ದಾರೆ ಎಂಬ ವಾದಗಳು ಕೇಳಿ ಬರುತ್ತಿದ್ದವು.

ಮತ್ತೆ ಆಪರೇಷನ್ ಕಮಲ; ಇಬ್ಬರು ಜೆಡಿಎಸ್ ಶಾಸಕರು ಬಿಜೆಪಿಗೆ?ಮತ್ತೆ ಆಪರೇಷನ್ ಕಮಲ; ಇಬ್ಬರು ಜೆಡಿಎಸ್ ಶಾಸಕರು ಬಿಜೆಪಿಗೆ?

ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸಹ, "ಯಾವ ಶಾಸಕರು ಪಕ್ಷವನ್ನು ಬಿಡುವುದಿಲ್ಲ. ಉಪ ಚುನಾವಣೆಯಲ್ಲಿ ಆಡಳಿತ ಪಕ್ಷ ಗೆಲುವು ಸಾಧಿಸುವುದು ಸತ್ಯ" ಎಂದು ಈಗಾಗಲೇ ಹೇಳಿದ್ದಾರೆ.

ಇನ್ನೂ ನಿಂತಿಲ್ಲ ಆಪರೇಷನ್ ಕಮಲ; ಈ ಸಾರಿ ಯಾರಿಗೆ ಗಾಳ?ಇನ್ನೂ ನಿಂತಿಲ್ಲ ಆಪರೇಷನ್ ಕಮಲ; ಈ ಸಾರಿ ಯಾರಿಗೆ ಗಾಳ?

ನಾನು ಮಾರಾಟಕ್ಕಿಲ್ಲ

ನಾನು ಮಾರಾಟಕ್ಕಿಲ್ಲ

ಮಂಡ್ಯ ಜಿಲ್ಲೆಯ ನಾಗಮಂಗಲ ಶಾಸಕ ಸುರೇಶ್ ಗೌಡ, "ನಾನು ಬಿಜೆಪಿ ಸೇರಲಿದ್ದೇನೆ ಎಂಬ ಸುಳ್ಳು ಸುದ್ದಿ ಮೂರು ದಿನಗಳಿಂದ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ನಾನು ಮಾರಾಟಕ್ಕಿಲ್ಲ. ಯಾವ ಪಕ್ಷಕ್ಕೂ ಹೋಗುವುದಿಲ್ಲ" ಎಂದು ಸ್ಪಷ್ಟಪಡಿಸಿದರು.

ನಾನೇನು ಎದೆ ಬಗೆದುಕೊಂಡು ತೋರಿಸಬೇಕಾ?

ನಾನೇನು ಎದೆ ಬಗೆದುಕೊಂಡು ತೋರಿಸಬೇಕಾ?

ಸುರೇಶ್ ಗೌಡ ಅವರು, "ನಾನು ಜೆಡಿಎಸ್ ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷ ತೊರೆಯುವ ಪ್ರಶ್ನೆಯೇ ಇಲ್ಲ ಎಂದು ಹಲವು ಬಾರಿ ಸ್ಪಷ್ಟಪಡಿಸಿದ್ದೇನೆ. ಆದರೆ, ಮಾಧ್ಯಮಗಳು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಕ್ಷೇತ್ರ, ಕಾರ್ಯಕರತರನ್ನು ಬಿಟ್ಟು ಎಲ್ಲೂ ಹೋಗುವುದಿಲ್ಲ. ನಾನೇನು ಎದೆ ಬಗೆದುಕೊಂಡು ತೋರಿಸಬೇಕಾ?" ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿಗೆ ಮೋಸ ಮಾಡಲ್ಲ

ಕುಮಾರಸ್ವಾಮಿಗೆ ಮೋಸ ಮಾಡಲ್ಲ

ಶ್ರೀರಂಗಪಟ್ಟಣ ಕ್ಷೇತ್ರದ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಸಹ ಪಕ್ಷ ಬಿಡುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. "ಮಂಡ್ಯ ಜನರು ವಿಶ್ವಾಸದಿಂದ ಅಧಿಕಾರ ಕೊಟ್ಟಿದ್ದಾರೆ. ಜೆಡಿಎಸ್ ಪಕ್ಷವನ್ನು ಬಿಟ್ಟು ಎಚ್. ಡಿ. ಕುಮಾರಸ್ವಾಮಿ ಅವರಿಗೆ ಮೋಸ ಮಾಡುವುದಿಲ್ಲ" ಎಂದು ಹೇಳಿದ್ದರು.

ಯಾರೂ ಪಕ್ಷ ತೊರೆಯುವುದಿಲ್ಲ

ಯಾರೂ ಪಕ್ಷ ತೊರೆಯುವುದಿಲ್ಲ

ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, "ಯಾವ ಶಾಸಕರು ಪಕ್ಷ ತೊರೆಯುವುದಿಲ್ಲ. ನನ್ನ ಷಷ್ಠ್ಯಬ್ದಪೂರ್ತಿ ಸಮಾರಂಭಕ್ಕೆ ಜಿ. ಟಿ. ದೇವೇಗೌಡರನ್ನು ಬಿಟ್ಟು ಎಲ್ಲರೂ ಬಂದು ಊಟ ಮಾಡಿ ಹೋಗಿದ್ದಾರೆ" ಎಂದರು.

English summary
Nagamangala JD(S) MLA Suresh Gowda said that he is not for sale and he will not join BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X