• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾನು ಜನರ ಇಚ್ಚೆಗೆ ಮುಜುಗರ ಮಾಡಲ್ಲ: ಶ್ರೀರಾಮುಲು

|

ಬೆಂಗಳೂರು, ಡಿಸೆಂಬರ್ 16: ನಾನು ಡಿಸಿಎಂ ಆಗಬೇಕೆನ್ನುವುದು ಜನರ ಇಚ್ಚೆ, ಅವರಿಗೆ ನಾನು ಮುಜುಗರ ಮಾಡಲು ಹೋಗುವುದಿಲ್ಲ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.

ಜನರ ಒತ್ತಾಯ ಇರುವಾಗ ನಾನು ಅದನ್ನು ಬೇಡ ಎನ್ನಲು ಹೋಗುವುದಿಲ್ಲ.ಎಲ್ಲಾ ದೇವರ ಇಚ್ಚೆ,ಪಕ್ಷದ ತೀರ್ಮಾನದಂತೆ ನಾವೆಲ್ಲರೂ ಕೆಲಸ ಮಾಡಬೇಕಾಗುತ್ತದೆ‌ ಎಂದರು.

ಸಂತೋಷ್ ಅವರನ್ನು ಭೇಟಿ ಮಾಡುವ ಸಲುವಾಗಿ ಬಿಜೆಪಿ ಕಚೇರಿಗೆ ಬಂದಿದ್ದೆ.ಪಕ್ಷದ ಸಲುವಾಗಿ ರಾಜ್ಯದ ಜನರಿಗೆ ಒಳ್ಳೆಯ ಕೆಲಸ ಮಾಡುತ್ತೇವೆ.

ಬಿಜೆಪಿಯಲ್ಲಿ ಸ್ಥಾನಮಾನಕ್ಕಾಗಿ ಹೋರಾಟ ಮಾಡಿದ ಜನ ನಾವಲ್ಲ.ನಮ್ಮ ಇಲಾಖೆಯಲ್ಲಿ ನಾವು ಸಕ್ರಿಯವಾಗಿದ್ದೇವೆ. ಯಾವುದೇ ಖಾತೆಯಲ್ಲಿ ಅಪೇಕ್ಷೆ ಪಟ್ಟವನು ನಾನಲ್ಲ.

ಸರ್ಕಾರ ಬರಬೇಕು ಅಂತಾ ಜನರ ಇಚ್ಚೆ ಇತ್ತು,ರಾಮುಲುಗೆ ಡಿಸಿಎಂ ಕೊಡಬೇಕು ಅಂತಾ ಜನರ ಒತ್ತಾಯ ಇದೆ ಜನರ ಒತ್ತಾಯ ಇರುವಾಗ ನಾನು ಅದನ್ನು ಬೇಡ ಎನ್ನುವುದಿಲ್ಲ ಎಂದರು.

English summary
People want me to be DCM, I'm not going to embarrass them Says minister B Sriramulu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X