ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂತ್ರಿ ಸ್ಥಾನಕ್ಕೆ ಅಜಯ್ ಸಿಂಗ್ ಪಟ್ಟು, ಬಂಡಾಯದ ಮುನ್ಸೂಚನೆ

|
Google Oneindia Kannada News

Recommended Video

ಕಾಂಗ್ರೆಸ್ ಗೆ ಶಾಕ್ ಬಿಜೆಪಿ ಸೇರಲು ಮುಂದಾದ ಮಾಜಿ ಮುಖ್ಯಮಂತ್ರಿ ಮಗ..! | Oneindia kannada

ಬೆಂಗಳೂರು, ಮೇ 28: ನನಗೆ ಜಾತಿಯ ಬಲವಿಲ್ಲ, ಆದರೆ ಅರ್ಹತೆ ಇದೆ ಹಾಗಾಗಿ ನನ್ನನ್ನು ಮಂತ್ರಿಯನ್ನಾಗಿ ಮಾಡಿ ಎಂದು ಕಾಂಗ್ರೆಸ್ ಶಾಸಕ ಅಜಯ್ ಸಿಂಗ್ ಕಾಂಗ್ರೆಸ್ ಮುಖಂಡರಲ್ಲಿ ಬೇಡಿಕೆ ಇಟ್ಟಿದ್ದಾರೆ.

ಮಾಜಿ ಸಿಎಂ ಧರಂಸಿಂಗ್ ಮಗ ಅಜಯ್ ಸಿಂಗ್ ಅವರು ಎರಡು ಬಾರಿ ಕಾಂಗ್ರೆಸ್‌ನಿಂದ ಶಾಸಕರಾಗಿ ಆರಿಸಿಬಂದಿದ್ದಾರೆ. ಹಾಗಾಗಿ ಮಂತ್ರಿ ಸ್ಥಾನಕ್ಕಾಗಿ ಅವರು ಬಿಗಿ ಪಟ್ಟು ಹಿಡಿದಿದ್ದಾರೆ.

ಸಿಎಂ ಕುಮಾರಸ್ವಾಮಿ- ಡಿಸಿಎಂ ಪರಮೇಶ್ವರ್ ಗುಪ್ತ ಮಾತುಕತೆಸಿಎಂ ಕುಮಾರಸ್ವಾಮಿ- ಡಿಸಿಎಂ ಪರಮೇಶ್ವರ್ ಗುಪ್ತ ಮಾತುಕತೆ

ಬ್ಲಾಕ್ ಮೇಲ್ ತಂತ್ರ ಅನುಸರಿಸುವವರಿಗೆ ಮಂತ್ರಿ ಸ್ಥಾನ ಕೊಡಲಾಗುತ್ತಿದೆ, ಪಕ್ಷ ತ್ಯಜಿಸುವ ಬೆದರಿಕೆ ಒಡ್ಡುವರರಿಗೆ ಅವಕಾಶ ಕೊಡಲಾಗುತ್ತಿದೆ, ನಾನು ಪಕ್ಷಕ್ಕೆ ನಿಷ್ಠವಾಗಿ ಇದ್ದೇನೆ, ನಿಷ್ಠಾವಂತರಿಗೆ ಅಧಿಕಾರ ನೀಡಿ ಎಂದು ಕಾಂಗ್ರೆಸ್ ನಾಯಕರನ್ನು ಮಾಧ್ಯಮಗಳ ಮೂಲಕ ಅಜಯ್ ಸಿಂಗ್ ಅವರು ಕೇಳಿಕೊಂಡರು.

ಬಿಜೆಪಿಯಿಂದ ಆಫರ್ ಬಂದಿತ್ತು: ಅಜಯ್‌ ಸಿಂಗ್

ಬಿಜೆಪಿಯಿಂದ ಆಫರ್ ಬಂದಿತ್ತು: ಅಜಯ್‌ ಸಿಂಗ್

ನನಗೂ ಬಿಜೆಪಿಯಿಂದ ಆಫರ್ ಬಂದಿತ್ತು, ಪಕ್ಷಕ್ಕೆ ಬಂದರೆ ಮಂತ್ರಿ ಮಾಡುತ್ತೇವೆ ಎಂದು ಕರೆದಿದ್ದರು, ಆದರೆ ಪಕ್ಷ ಬಿಟ್ಟು ನಾನು ಹೋಗಲಿಲ್ಲ, ನಾನು ಪಕ್ಷಕ್ಕೆ ನಿಷ್ಟನಾಗಿದ್ದೇನೆ ಎಂದು ಅಜಯ್ ಸಿಂಗ್ ಅವರು ಹೇಳಿದರು.

ಖರ್ಗೆ ಮಗನಿಗೆ ಮಂತ್ರಿ ಸ್ಥಾನ, ನನಗೇಕಿಲ್ಲ: ಅಜಯ್‌ ಸಿಂಗ್‌

ಖರ್ಗೆ ಮಗನಿಗೆ ಮಂತ್ರಿ ಸ್ಥಾನ, ನನಗೇಕಿಲ್ಲ: ಅಜಯ್‌ ಸಿಂಗ್‌

ನಮ್ಮ ತಂದೆ ಧರಂಸಿಂಗ್ ಅವರು ಕಾಂಗ್ರೆಸ್ ಪಕ್ಷಕ್ಕಾಗಿ 50 ವರ್ಷ ದುಡಿದರು, ಅವರು ಮಲ್ಲಿಕಾರ್ಜುನ ಖರ್ಗೆ ಅವರ ಜೊತೆಗಾರರು, ಮಲ್ಲಿಕಾರ್ಜುನ ಖರ್ಗೆ ಅವರ ಮಗನಿಗೆ ಸಚಿವ ಸ್ಥಾನ ನೀಡಲಾಗಿದೆ ಆದರೆ ನನಗೆ ನೀಡದೇ ಇರುವುದಕ್ಕೆ ಕಾರಣವೇನು ಎಂದು ಅವರು ಪ್ರಶ್ನೆ ಮಾಡಿದರು.

ಮೈತ್ರಿ ಸರ್ಕಾರದ ಸಂಪುಟ ಸೇರುವ ಸಂಭಾವ್ಯ ಶಾಸಕರ ಪಟ್ಟಿ ಮೈತ್ರಿ ಸರ್ಕಾರದ ಸಂಪುಟ ಸೇರುವ ಸಂಭಾವ್ಯ ಶಾಸಕರ ಪಟ್ಟಿ

ನನಗೆ ಜಾತಿ ಬಲ ಇಲ್ಲ, ಅರ್ಹತೆ ಇದೆ: ಅಜಯ್‌ ಸಿಂಗ್‌

ನನಗೆ ಜಾತಿ ಬಲ ಇಲ್ಲ, ಅರ್ಹತೆ ಇದೆ: ಅಜಯ್‌ ಸಿಂಗ್‌

ನನಗೆ ಸಚಿವ ಸ್ಥಾನ ನೀಡೆಂದು ಕೇಳಲು ನನಗೆ ಜಾತಿ ಬಲವಿಲ್ಲ, ನನ್ನದು ಕಡಿಮೆ ಸಂಖ್ಯೆಯ ಜನರರಿರುವ ಜಾತಿ, ಆದರೆ ನನಗೆ ಅರ್ಹತೆ ಇದೆ. ಈ ಬಾರಿ ಸಚಿವ ಸ್ಥಾನ ಸಿಗದಿದ್ದಲ್ಲಿ ಮುಂದೆ ಏನು ಮಾಡಬೇಕು ಎಂಬುದನ್ನು ತೀರ್ಮಾನ ಮಾಡುತ್ತೇನೆ ಎಂದು ಬಂಡಾಯದ ಸೂಚನೆಯನ್ನು ಅಜಯ್ ಸಿಂಗ್ ನೀಡಿದರು.

ಜೇವರ್ಗಿ ಕ್ಷೇತ್ರದ ಶಾಸಕ ಅಜಯ್‌ ಸಿಂಗ್‌

ಜೇವರ್ಗಿ ಕ್ಷೇತ್ರದ ಶಾಸಕ ಅಜಯ್‌ ಸಿಂಗ್‌

ಅವರು ತಮಗೆ ಸಚಿವ ಸ್ಥಾನದ ಬೇಡಿಕೆಯನ್ನು ಇಡಲು ಬೆಂಗಳೂರಿಗೆ ಬಂದಿದ್ದರು. ಅಜಯ್ ಸಿಂಗ್ ಅವರು ಮಾಜಿ ಸಿಎಂ ಧರಂ ಸಿಂಗ್ ಅವರ ಮಗನಾಗಿದ್ದು, ಜೇವರ್ಗಿ ಕ್ಷೇತ್ರದಿಂದ ಎರಡು ಬಾರಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ರಜಪೂತ ಸಮುದಾಯದವರಾದ ಅಜಯ್ ಸಿಂಗ್ ಅವರಿಗೆ ಜೇವರ್ಗಿಯಲ್ಲಿ ಅವರ ಜಾತಿಯ ಅತ್ಯಂತ ಕಡಿಮೆ ಸಂಖ್ಯೆ ಜನ ಇದ್ದಾರೆ.

ಸಂಪುಟ ವಿಸ್ತರಣೆಯೋ, ಪುನಾರಚನೆಯೋ: ಸ್ಪಷ್ಟನೆ ಕೊಟ್ಟ ಸಿದ್ದರಾಮಯ್ಯಸಂಪುಟ ವಿಸ್ತರಣೆಯೋ, ಪುನಾರಚನೆಯೋ: ಸ್ಪಷ್ಟನೆ ಕೊಟ್ಟ ಸಿದ್ದರಾಮಯ್ಯ

English summary
Jevargi congress MLA Ajay Singh said I may not have caste support but i am eligible to make me a minister. He visited Bengaluru to meet party elders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X