ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Maggi Divorce Case: ಗಂಡ-ಹೆಂಡತಿ ಸಂಬಂಧದಲ್ಲಿ ಹುಳಿ ಹಿಂಡಿದ 'ಮ್ಯಾಗಿ'

|
Google Oneindia Kannada News

ಬಳ್ಳಾರಿ ಮೇ 31: ಮ್ಯಾಗಿ ಅಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಮಕ್ಕಳಿಂದ ಹಿರಿಯರವರೆಗೆ ಎಲ್ಲರಿಗೂ ಮ್ಯಾಗಿ ಅಂದರೆ ಹೆಚ್ಚು ಪ್ರೀತಿ. ಆದರೆ ಮ್ಯಾಗಿಯಿಂದಾಗಿ ಯಾರಾದರೂ ವಿಚ್ಛೇದನ ಪಡೆದಿರುವುದನ್ನು ನೀವು ಕೇಳಿದ್ದೀರಾ? ಇಂತಹದೊಂದು ವಿಚಿತ್ರ ಪ್ರಕರಣವೊಂದು ಕರ್ನಾಟಕದ ಬಳ್ಳಾರಿಯಲ್ಲಿ ಬೆಳಕಿಗೆ ಬಂದಿದೆ. ಇಲ್ಲಿ ಗಂಡ ಹೆಂಡತಿಯ ವಿಚ್ಛೇದನಕ್ಕೆ ಮ್ಯಾಗಿಯೇ ಕಾರಣವಾಗಿದೆ. ಗಂಡ ಹೆಂಡತಿ ಮೇಲೆ ಮಾಡಿದ ಆರೋಪ ಕೇಳಿ ನ್ಯಾಯಧೀಶರೇ ಹುಬ್ಬೇರಿಸಿದ್ದಾರೆ.

ಅಸಲಿಗೆ ಗಂಡ ಹೆಂಡತಿ ಮೇಲೆ ಮಾಡಿದ ಆರೋಪ ಏನೆಂದರೆ ಹೆಂಡತಿ ಪ್ರತಿದಿನ ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಮ್ಯಾಗಿಯನ್ನೇ ತಯಾರಿಸುತ್ತಾಳಂತೆ. ಇದರಿಂದ ಬೇಸತ್ತ ಗಂಡ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಗಂಡ ಮನೆ ತೊರೆದು ಪ್ರತ್ಯೇಕವಾಸವಿದ್ದರೂ ಪತ್ನಿ ಜೀವನಾಂಶಕ್ಕೆ ಅರ್ಹಗಂಡ ಮನೆ ತೊರೆದು ಪ್ರತ್ಯೇಕವಾಸವಿದ್ದರೂ ಪತ್ನಿ ಜೀವನಾಂಶಕ್ಕೆ ಅರ್ಹ

ಪತಿ-ಪತ್ನಿ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ

ಪತಿ-ಪತ್ನಿ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ

ಮೂರು ಬಾರಿ ಮ್ಯಾಗಿ ತಿಂದು ಬೇಸರಗೊಂಡ ಗಂಡ ಸೆಷನ್ಸ್ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಹೆಂಡತಿಗೆ ಅಡುಗೆ ಮಾಡುವುದು ಗೊತ್ತಿಲ್ಲ. ಕಲಿಯುವ ಆಸೆಯೂ ಇಲ್ಲ ಎಂದು ಪತಿಯೂ ವಿಚ್ಛೇದನೆಯ ಅರ್ಜಿಯಲ್ಲಿ ಹೇಳಿದ್ದಾರೆ. ಆಕೆಗೆ ಮ್ಯಾಗಿ ಮಾಡುವುದು ಮಾತ್ರ ಗೊತ್ತು. ಪತಿಯ ನೋವನ್ನು ಆಲಿಸಿದ ಕೋರ್ಟ್ ಕೂಡ ಪತಿ-ಪತ್ನಿ ಇಬ್ಬರ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನದ ಅರ್ಜಿಯನ್ನು ಸ್ವೀಕರಿಸಿದೆ. ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಎಂ.ಎಲ್.ರಘುನಾಥ್ ಅವರು ಲೋಕ ಅದಾಲತ್‌ನಲ್ಲಿ ಪೂರ್ವಭಾವಿ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ್ದಾರೆ. ಶುಕ್ರವಾರ ವೈವಾಹಿಕ ಪ್ರಕರಣಗಳ ಕುರಿತು ಸುದ್ದಿಗೋಷ್ಠಿಯಲ್ಲಿ ಈ ವಿಚಾರವನ್ನು ತಿಳಿಸಿದ್ದಾರೆ.

ಮ್ಯಾಗಿಯನ್ನು ಮಾತ್ರ ಖರೀದಿಸುವ ಹೆಂಡತಿ

ಮ್ಯಾಗಿಯನ್ನು ಮಾತ್ರ ಖರೀದಿಸುವ ಹೆಂಡತಿ

ಮಾಧ್ಯಮ ವರದಿಗಳ ಪ್ರಕಾರ, ನ್ಯಾಯಾಧೀಶ ಎಂ.ಎಲ್.ರಘುನಾಥ್, 'ಪತಿಯೊಬ್ಬ ತನ್ನ ಹೆಂಡತಿಗೆ ಮ್ಯಾಗಿ ಮಾಡಲು ಮಾತ್ರ ತಿಳಿದಿದೆ ಎಂಬ ಕಾರಣಕ್ಕಾಗಿ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾನೆ. ಅವಳು ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ನೂಡಲ್ಸ್ ತಯಾರಿಸುತ್ತಾಳೆ. ಅವಳು ಪ್ರಾವಿಷನ್ ಸ್ಟೋರ್‌ನಿಂದ ಕೇವಲ ನೂಡಲ್ಸ್ ಅನ್ನು ಮಾತ್ರ ಖರೀದಿಸುತ್ತಾಳೆ. ಈ ಪ್ರಕರಣಕ್ಕೆ ಮ್ಯಾಗಿ ಕೇಸ್ ಎಂದು ಹೆಸರಿಡಲಾಗಿದೆ ಎಂದು ನ್ಯಾಯಾಧೀಶ ರಘುನಾಥ್ ತಿಳಿಸಿದರು. ಅಂತಿಮವಾಗಿ ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆದರು ಎಂದು ಅವರು ಹೇಳಿದ್ದಾರೆ.

ಸಣ್ಣಪುಟ್ಟ ಕಾರಣಗಳಿಗೆ ವಿಚ್ಚೇದ

ಸಣ್ಣಪುಟ್ಟ ಕಾರಣಗಳಿಗೆ ವಿಚ್ಚೇದ

ಪತ್ರಿಕಾಗೋಷ್ಠಿಯಲ್ಲಿ ನ್ಯಾಯಮೂರ್ತಿ ಎಂ.ಎಲ್.ರಘುನಾಥ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಣ್ಣಪುಟ್ಟ ವಿಷಯಗಳಿಗೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲಾಗುತ್ತಿದೆ. ಮದುವೆಯಾದ ಕೆಲ ದಿನಗಳ ನಂತರ ಪರಸ್ಪರ ಹೊಂದಾಣಿಕೆ ಇಲ್ಲದ ಕಾರಣ ವಿಚ್ಛೇದನಕ್ಕೆ ಅರ್ಜಿ ಹಾಕುತ್ತಿದ್ದಾರೆ. ತಟ್ಟೆಯಲ್ಲಿ ಉಪ್ಪನ್ನು ತಪ್ಪಾದ ಜಾಗದಲ್ಲಿ ಹಾಕಿದ್ದಾರೆ ಅಥವಾ ಮದುವೆಯ ಸೂಟ್‌ನ ಬಣ್ಣ ಇಷ್ಟವಾಗುವುದಿಲ್ಲ ಎಂಬ ಕಾರಣಕ್ಕಾಗಿ ಜನರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ಅವರು ಹೇಳಿದರು. ವಿಚ್ಛೇದನ ಪ್ರಕರಣಗಳಲ್ಲಿ ನೀಡುತ್ತಿರುವ ಅರ್ಜಿಯಲ್ಲಿ ಇದೇ ರೀತಿ ಅರೇಂಜ್ಡ್ ಮತ್ತು ಲವ್ ಮ್ಯಾರೇಜ್ ಪ್ರಕರಣಗಳಿವೆ ಎಂದು ನ್ಯಾಯಮೂರ್ತಿ ರಘುನಾಥ್ ಹೇಳಿದರು.

800 ವೈವಾಹಿಕ ಪ್ರಕರಣಗಳಲ್ಲಿ 20-30 ಯಶಸ್ವಿ

800 ವೈವಾಹಿಕ ಪ್ರಕರಣಗಳಲ್ಲಿ 20-30 ಯಶಸ್ವಿ

ಜೂನ್ 25ರಂದು ಮೈಸೂರು ಜಿಲ್ಲೆಯಲ್ಲಿ ರಾಷ್ಟ್ರೀಯ ಲೋಕ ಅದಾಲತ್‌ಗೆ ಪೂರ್ವಭಾವಿಯಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಡಾ.ಎಂ.ಎಲ್.ರಘುನಾಥ್ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ವೈವಾಹಿಕ ವಿವಾದಗಳು ಹೆಚ್ಚುತ್ತಿದ್ದು, ಸುಮಾರು 800 ಪ್ರಕರಣಗಳು ಅದಾಲತ್‌ಗೆ ಬಂದಿವೆ, ಆದರೆ 32 ಪ್ರಕರಣಗಳಲ್ಲಿ ದಂಪತಿಗಳು ಮತ್ತೆ ಒಂದಾಗಿದ್ದಾರೆ ಅಂತ ಮಾಹಿತಿ ನೀಡಿದ್ರು. 800-900 ವೈವಾಹಿಕ ಪ್ರಕರಣಗಳಲ್ಲಿ ನಾವು ಸುಮಾರು 20-30 ಪ್ರಕರಣಗಳಲ್ಲಿ ಯಶಸ್ವಿಯಾಗುತ್ತೇವೆ. ಹಿಂದಿನ ಲೋಕ ಅದಾಲತ್‌ನಲ್ಲಿ ಸುಮಾರು 110 ವಿಚ್ಛೇದನ ಪ್ರಕರಣಗಳಲ್ಲಿ ಕೇವಲ 32 ಪ್ರಕರಣಗಳಲ್ಲಿ ಪುನರ್ಮಿಲನ ನಡೆದಿದೆ ಎಂದು ಮಾಹಿತಿ ನೀಡಿದ್ದಾರೆ.

English summary
A man has divorced his wife alleging that she makes Maggie all three times a day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X