ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಬ್ಬಳ್ಳಿ-ವಿಜಯವಾಡ ಎಕ್ಸ್‌ಪ್ರೆಸ್ ರೈಲು ನಿತ್ಯ ಸಂಚಾರ

By Kiran B Hegde
|
Google Oneindia Kannada News

ಕೊಪ್ಪಳ, ಜ. 20: ಜಿಲ್ಲೆ ಮಾರ್ಗವಾಗಿ ವಾರಕ್ಕೆ ಮೂರು ದಿನ ಓಡುತ್ತಿದ್ದ ಹುಬ್ಬಳ್ಳಿ-ವಿಜಯವಾಡ ಎಕ್ಸ್‌ಪ್ರೆಸ್ ರೈಲು ಜ. 26ರಿಂದ ನಿತ್ಯ ಸಂಚರಿಸಲಿದೆ ಎಂದು ಸಂಸದ ಸಂಗಣ್ಣ ಕರಡಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಕುರಿತು ಕಳೆದ ಬಜೆಟ್‌ನಲ್ಲಿಯೇ ಘೋಷಿಸಲಾಗಿತ್ತು. ಭರವಸೆ ಈಡೇರಿಸಿರುವ ಕೇಂದ್ರ ಸರ್ಕಾರ ನಿತ್ಯ ಸಂಚರಿಸುವ ರೈಲಿನ ಬದಲಾದ ವೇಳಾಪಟ್ಟಿಯನ್ನು ಪ್ರಕಟಿಸಿದೆ. [6 ಗಂಟೆಯಲ್ಲಿ ನವದೆಹಲಿಯಿಂದ ಚೆನ್ನೈಗೆ]

ವಿಜಯವಾಡದಿಂದ ರಾತ್ರಿ 7.45ಕ್ಕೆ ಹೊರಡುವ ರೈಲು (ಸಂ. 17225) ಬೆಳಗ್ಗೆ 5.40ಕ್ಕೆ ಗುಂತಕಲ್, 6.53ಕ್ಕೆ ಬಳ್ಳಾರಿ, 7.30ಕ್ಕೆ ತೋರಣಗಲ್, 8.15ಕ್ಕೆ ಹೊಸಪೇಟೆ, 8.35ಕ್ಕೆ ಮುನಿರಾಬಾದ್, 8.55ಕ್ಕೆ ಕೊಪ್ಪಳ, 10.08ಕ್ಕೆ ಗದಗ, 10.25ಕ್ಕೆ ಅಣ್ಣಿಗೇರಿ ಮೂಲಕ ಬೆಳಗ್ಗೆ 11.20ಕ್ಕೆ ಹುಬ್ಬಳ್ಳಿಯನ್ನು ತಲುಪಲಿದೆ. [ಮೆಟ್ರೋ ಮತ್ತಷ್ಟು ನಿಧಾನ]

rail

ನಿತ್ಯ ಮಧ್ಯಾಹ್ನ 1.30 ಕ್ಕೆ ಹುಬ್ಬಳ್ಳಿಯಿಂದ ಹೊರಡುವ ರೈಲು (ಸಂ. 17226) ಮಧ್ಯಾಹ್ನ 2 ಗಂಟೆಗೆ ಅಣ್ಣಿಗೇರಿ, 2.25 ಕ್ಕೆ ಗದಗ, 3.30ಕ್ಕೆ ಕೊಪ್ಪಳ, 3.53 ಕ್ಕೆ ಮುನಿರಾಬಾದ್, 4.05 ಕ್ಕೆ ಹೊಸಪೇಟೆ, 4.45 ಕ್ಕೆ ತೋರಟಗಲ್, 5.25 ಕ್ಕೆ ಬಳ್ಳಾರಿ, 6.35 ಕ್ಕೆ ಗುಂತಕಲ್ ಮಾರ್ಗದಲ್ಲಿ ಮುಂದುವರಿಯಲಿದೆ. ಮರುದಿನ ಬೆಳಗ್ಗೆ 5.15 ಕ್ಕೆ ವಿಜಯವಾಡ ತಲುಪಲಿದೆ. [ಕಾಲು ಕಳೆದುಕೊಂಡರೂ ಆ್ಯಂಬುಲೆನ್ಸ್‌ಗೆ ಕರೆ ಮಾಡಿದ]

ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ಸಂಸದ ಸಂಗಣ್ಣ ಕರಡಿ ತಿಳಿಸಿದ್ದಾರೆ. ರೈಲ್ವೆ ಇಲಾಖೆಯ ಸಹಕಾರಕ್ಕಾಗಿ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ ಎಂದು ಸಂಸದರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ. [ಆಸ್ಟ್ರೇಲಿಯನ್ನರ ಒಗ್ಗಟ್ಟಿಗೆ ರೈಲು ವಾಲಿತು?]

English summary
Member of Parliament Sanganna Karadi has told in a press note that Hubballi-Vijayawada express train will run everyday from 26th January. Department has published the revised train timing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X