• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರೈತರ ಪ್ರತಿಭಟನೆ: ಕೇಂದ್ರದ ವಿರುದ್ದ ಸಿಡಿದೆದ್ದ ದೊರೆಸ್ವಾಮಿಯವರಿಗೆ ಓದುಗರೊಬ್ಬರ ಖಡಕ್ ರಿಪ್ಲೈ

|

ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಬಲ ತುಂಬಲು ಈ ವಯಸ್ಸಿನಲ್ಲೂ ನೂರಾರು ಜನರನ್ನು ಕರೆದುಕೊಂಡು ಹೋಗಲು ಸಿದ್ದ ಎಂದಿದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿಯವರಿಗೆ ಓದುಗರೊಬ್ಬರು ಕೊಟ್ಟ ರಿಪ್ಲೈ ಹೀಗಿದೆ:

   ರೈತರ ಪ್ರತಿಭಟನಾ ಸ್ಥಳದಲ್ಲಿ ಬ್ಯಾರಿಕೇಡ್, ಸಿಮೆಂಟ್ ಗೋಡೆ ನಿರ್ಮಾಣ! ಪ್ರಿಯಾಂಕಾ ಗಾಂಧಿ ಆಕ್ರೋಶ | Oneindia Kannada

   ಈ ಮೇಲಿನ ಫೇಸ್ ಬುಕ್ ಪೋಸ್ಟಿಗೆ ರಾಘವೇಂದ್ರ ಭಟ್ ಎನ್ನುವ ಓದುಗರು ಕೊಟ್ಟ ರಿಪ್ಲೈ ಹೀಗಿದೆ, 'ದೊರೆಸ್ವಾಮಿಯವರೇ, ಧಾರಾಳವಾಗಿ ಹೋಗಿ ದೆಹಲಿಗೆ. ಆದರೆ ನಿಮ್ಮ ಬೇಡಿಕೆ ಏನು ?

   ಹರಿಯಾಣ ಮತ್ತು ಪಂಜಾಬ್ ರೈತರಿಗೆ MSP (ಕನಿಷ್ಠ ಬೆಂಬಲ ಬೆಲೆ) ಕೊಡಿಸುವುದಾ ? ಕೇವಲ 23 ಬೆಳೆಗಳು MSP ಅಂಡರ್ ಬರುತ್ತವೆ'.

   ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ವಾಗ್ದಾಳಿಗೆ ಕಾಂಗ್ರೆಸ್ ಬೇಸ್ತು!

   'ಅದಕ್ಕೆ ಕಾನೂನಿನ ಭದ್ರತೆ ಒದಗಿಸಿದರೆ ಸರಕಾರವನ್ನು ಬಿಟ್ಟು ಯಾರೂ ಖರೀದಿಸುವುದು ಕಷ್ಟ.ಯಾಕೆಂದರೆ ಅದಕ್ಕಿಂತ ಕಡಿಮೆಗೆ ಅದಕ್ಕಿಂತ ಉತ್ತಮ ಕ್ವಾಲಿಟಿ ಇಂಪೋರ್ಟ್ ಮಾಡಿಕೊಳ್ಳಬಹುದು. ಹಾಗಿರುವಾಗ ಬುಗುಟು ಹಿಡಿದ ಅಕ್ಕಿ ಯಾರಿಗೆ ಬೇಕು?'

   'ಅದು ಸರಕಾರೀ ಗೋದಾಮುಗಳಲ್ಲಿ ಕೊಳೆಯುತ್ತದೆ ಮತ್ತು ಬಡವರಿಗೆ ರೇಷನ್ ರೂಪದಲ್ಲಿ ಹಂಚಬಹುದು. ಅದನ್ನೂ ಕೆಲವರು ದನಕ್ಕೆ ಹಾಕಿದರೆ ಅತಿಶಯೋಕ್ತಿ ಇಲ್ಲ. ಅದೇ 50 ಸಾವಿರ ಕೋಟಿಯನ್ನು ಬೇರೆ ರೂಪದಲ್ಲಿ ಉಪಯೋಗಿಸಿಕೊಳ್ಳಬಹುದು ಅಲ್ಲವೇ?'

   ದೆಹಲಿಯಲ್ಲಿ ದಿಕ್ಕು ತಪ್ಪುತ್ತಿದೆಯೇ ರೈತರ ಪ್ರತಿಭಟನೆ: ಏನಿದು ಕೇಜ್ರಿವಾಲ್ ಕೈವಾಡದ ಶಂಕೆ?

   ಬೆಳೆಯಲ್ಲಿ ಬದಲಾವಣೆ ಮಾಡಿ ಲಾಭಗಳಿಸಬಹುದು

   ಬೆಳೆಯಲ್ಲಿ ಬದಲಾವಣೆ ಮಾಡಿ ಲಾಭಗಳಿಸಬಹುದು

   'ಬೆಳೆಯಲ್ಲಿ ಬದಲಾವಣೆ ಮಾಡಿ ಲಾಭಗಳಿಸಬಹುದು. ಅಥವಾ ಮಿಶ್ರಬೆಳೆ ಬೆಳೆದು ಮಾರ್ಕೆಟ್ ನಲ್ಲಿ ಸಪ್ಲೈ ಕಡಿಮೆ ಆಗುವಹಾಗೆ ಮಾಡಿ MSP ಗಿಂತ ಜಾಸ್ತಿ ಮಾರ್ಕೆಟ್ ರೇಟ್ ಬರುವ ಹಾಗೆ ಮಾಡಬಹುದು. ಅಥವಾ ಸರಕಾರದಮುಂದೆ ಕೃಷಿ ಆಧುನೀಕರಣದ ಬಗ್ಗೆ ಮತ್ತು ಕೋಲ್ಡ್ ಸ್ಟೋರೇಜ್ ಬಗ್ಗೆ ಮಾತನಾಡಬಹುದು. ಹೀಗೆ ಹಲವಾರು ಪರಿಹಾರಗಳಿವೆ.

   ಸುಪ್ರೀಂಕೋರ್ಟ್ ಸ್ಟಾಟ್ಯೂಸ್ಕೋ ಮಂಟೈನ್ ಮಾಡಲು ಆರ್ಡರ್ ಕೊಡುತ್ತದೆ

   ಸುಪ್ರೀಂಕೋರ್ಟ್ ಸ್ಟಾಟ್ಯೂಸ್ಕೋ ಮಂಟೈನ್ ಮಾಡಲು ಆರ್ಡರ್ ಕೊಡುತ್ತದೆ

   'ಕಾನೂನನ್ನು ಬಂದ್ ಮಾಡಿಸಿದರೆ MSP ಗ್ಯಾರಂಟಿ ಕೊಡುತ್ತಾರೆ ಎಂದು ನನಗೇನೂ ಅನ್ನಿಸುವುದಿಲ್ಲ. ಸುಪ್ರೀಂಕೋರ್ಟ್ ಸ್ಟಾಟ್ಯೂಸ್ಕೋ ಮಂಟೈನ್ ಮಾಡಲು ಆರ್ಡರ್ ಕೊಡುತ್ತದೆ. ಆದುದರಿಂದ ಎಲ್ಲವೂ ಮೊದಲಿರುವ ಹಾಗೆ ಇರುತ್ತದೆ. ಒಂದುವೇಳೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸೋತು ಕಾಂಗ್ರೆಸ್ ಬಂದರೆ ,ಕಾಂಗ್ರೆಸ್ ಮಾಡುವ ಅಷ್ಟೂ ಬದಲಾವಣೆಯನ್ನೂ ಬಿಜೆಪಿ ಖಂಡಿಸುತ್ತದೆ'.

   ದೇಶವನ್ನು ಭಿಕಾರಿಗಳನ್ನಾಗಿ ಮಾಡುವ ಆಲೋಚನೆ ಇದ್ದರೆ ಧಾರಾಳವಾಗಿ ದೆಹಲಿಗೆ ಹೋಗಿ

   ದೇಶವನ್ನು ಭಿಕಾರಿಗಳನ್ನಾಗಿ ಮಾಡುವ ಆಲೋಚನೆ ಇದ್ದರೆ ಧಾರಾಳವಾಗಿ ದೆಹಲಿಗೆ ಹೋಗಿ

   'ಮತ್ತೆ ಆಂದೋಲನ ಶುರುವಾಗುತ್ತದೆ. ನಮ್ಮ ನಮ್ಮಲ್ಲೇ ಹೊಡೆದುಕೊಂಡು ದೇಶ ಹಳ್ಳ ಹಿಡಿಯುತ್ತದೆ. ನಂತರ ನಾವು ಸೂಲಿಬೆಲೆಯನ್ನು ಟ್ರೋಲ್ ಮಾಡಿಕೊಂಡು ಬಾಂಗ್ಲಾದೇಶಕ್ಕೆ ಕೆಲಸಕ್ಕೆ ಗುಳೆ ಹೋಗಬೇಕಾಗುತ್ತದೆ. ತಾವು ಸೂಲಿಬೆಲಿಯನ್ನು ಟ್ರೋಲ್ ಮಾಡುವುದಕ್ಕೆ ಇಡೀ ದೇಶವನ್ನು ಭಿಕಾರಿಗಳನ್ನಾಗಿ ಮಾಡುವ ಆಲೋಚನೆ ಇದ್ದರೆ ಧಾರಾಳವಾಗಿ ದೆಹಲಿಗೆ ಹೋಗಿ'.

   ರಾಘವೇಂದ್ರ ಭಟ್ ಎನ್ನುವವರು ಬರೆದ ಪೋಸ್ಟ್

   ರಾಘವೇಂದ್ರ ಭಟ್ ಎನ್ನುವವರು ಬರೆದ ಪೋಸ್ಟ್

   'ಕಾನೂನು ಹಿಂದೆ ತೆಗೆದುಕೊಳ್ಳದೆ, ಹತ್ತು ಹಲವಾರು ಬೆನಿಫಿಟ್ ತೆಗೆದುಕೊಳ್ಳುದಕ್ಕೆ ಯಾರೂ ತಯಾರಿಲ್ಲ. ನೀವು ನೆಮ್ಮದಿಯಿಂದ ಇರುವುದುಬಿಟ್ಟು ಮಾಧ್ಯಮದ ಮುಂದೆ ಬಂದು ಹೇಳಿಕೆ ಕೊಡುತ್ತೀರಿ. ಅಲ್ಲಿ ರೈತರು ನಿಮ್ಮ ಮಾತು ನಂಬಿ ಉಪವಾಸ ಬಿದ್ದಿದ್ದಾರೆ. ನಿಮಗೆ ನಾಚಿಕೆ ಆಗುವುದಿಲ್ಲವಾ?' - ಇದು ರಾಘವೇಂದ್ರ ಭಟ್ ಎನ್ನುವವರು ಬರೆದ ಪೋಸ್ಟ್.

   English summary
   H S Doreswamy Statement On Union Government Over Farmers Protest: Reply From Our Reader,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X