ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದರಾಮಯ್ಯ ಕುರ್ಚಿಗೆ ಬಲ ತುಂಬಿದ ವೀಕೆಂಡ್ ಸೀಟು

|
Google Oneindia Kannada News

ಬೆಂಗಳೂರು, ಜೂನ್ 26: ಕಾಂಗ್ರೆಸ್ ನಲ್ಲೇ ಸಿದ್ದರಾಮಯ್ಯ ಅದೃಷ್ಟವಂತ ಮುಖ್ಯಮಂತ್ರಿ, ಸಿದ್ದರಾಮಯ್ಯ ಅವರು ಕಣ್ಣೀರು ಹಾಕಿದ್ದು ಎರಡೇ ಬಾರಿ, ಈ ರಾಜ್ಯಕ್ಕೆ ಮುಖ್ಯಮಂತ್ರಿ ಆಗಬೇಕು ಅಂದುಕೊಂಡದ್ದು ಯಾವಾಗ ಮತ್ತು ಏಕೆ?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸಿದ್ದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ನೋಡಿದಿರಾ? ಮಾಧ್ಯಮವನ್ನು, ಅದರಲ್ಲೂ ತುಂಬ ಯಶಸ್ವಿಯಾದ ಕಾರ್ಯಕ್ರಮವನ್ನು ಜನರ ಜತೆಗೊಂದು ಸಂಪರ್ಕಕ್ಕೆ, ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವುದಕ್ಕೆ ಹೇಗೆ ಬಳಸಿಕೊಳ್ಳಬಹುದು ಎಂಬುದಕ್ಕೆ ಅತ್ಯುತ್ತಮ ನಿದರ್ಶನವಾಯಿತು.

ರಾಜ್ಯದಲ್ಲಿ ಅವಧಿ ಪೂರ್ವ ಚುನಾವಣೆ ಇಲ್ಲ: ಸಿದ್ದರಾಮಯ್ಯ ಸ್ಪಷ್ಟನೆರಾಜ್ಯದಲ್ಲಿ ಅವಧಿ ಪೂರ್ವ ಚುನಾವಣೆ ಇಲ್ಲ: ಸಿದ್ದರಾಮಯ್ಯ ಸ್ಪಷ್ಟನೆ

ಸಿದ್ದರಾಮಯ್ಯ ಅವರು ಕೂಡ ತಮ್ಮ ಮಗನನ್ನು ರಾಜಕಾರಣಕ್ಕೆ ಕರೆತರುತ್ತಿದ್ದಾರೆ ಎಂಬುದು ಇತ್ತೀಚಿನ ತೀರಾ ಮುಖ್ಯ ಆರೋಪವಾಗಿತ್ತು. ಅದಕ್ಕೆ ಉತ್ತರ ನೀಡಲು ಈ ವೇದಿಕೆಯನ್ನು ಚೆನ್ನಾಗಿ ಬಳಸಿಕೊಂಡ ಮುಖ್ಯಮಂತ್ರಿಗಳು, ತಮ್ಮ ಹಿರಿಯ ಮಗನ ಅಕಾಲಿಕ ಸಾವು ಹಾಗೂ ಕಿರಿಯ ಮಗನಿಗೆ ತಾವು ನೀಡಿದ ಸಲಹೆ, ತಾಯಿಯ ಮಾತಿನಂತೆ ಯತೀಂದ್ರ ಇತ್ತೀಚೆಗೆ ರಾಜಕೀಯಕ್ಕೆ ಪ್ರವೇಶಿಸಿದ್ದನ್ನು ಹೇಳಿಕೊಂಡರು.

ಕರ್ನಾಟಕದಲ್ಲಿ ಅವಧಿಗೆ ಮುನ್ನ ಎಲೆಕ್ಷನ್ ಗೆ ಈ 5 ಕಾರಣ ಸಾಲದೆ?ಕರ್ನಾಟಕದಲ್ಲಿ ಅವಧಿಗೆ ಮುನ್ನ ಎಲೆಕ್ಷನ್ ಗೆ ಈ 5 ಕಾರಣ ಸಾಲದೆ?

ಮಾರ್ಮಿಕ ಅನಿಸಿದ ಮಾತು ಸಚಿವ ಡಿಕೆ ಶಿವಕುಮಾರ್ ಅವರದು. ಈ ನಾಲ್ಕು ವರ್ಷಗಳಲ್ಲಿ ಕಾಂಗ್ರೆಸ್ ನಲ್ಲಿ ಭಿನ್ನಮತ ಕಾಣಿಸಿಕೊಂಡಿಲ್ಲ. ಈ ವಿಚಾರದಲ್ಲಿ ಸಿದ್ದರಾಮಯ್ಯ ಅವರು ತುಂಬ ಅದೃಷ್ಟವಂತ ಮುಖ್ಯಮಂತ್ರಿ ಎಂದರು. ಈ ಮಾತಿಗೆ ಸಿದ್ದರಾಮಯ್ಯ ಅವರು ಕೂಡ ಅನುಮೋದನೆ ನೀಡಿದರು.

ಸಂಪುಟ ಸಹೋದ್ಯೋಗಿಗಳ ಹೊಗಳಿಕೆ

ಸಂಪುಟ ಸಹೋದ್ಯೋಗಿಗಳ ಹೊಗಳಿಕೆ

ಇನ್ನು ಸಂಪುಟ ಸಹೋದ್ಯೋಗಿಗಳಾದ ಜಾರ್ಜ್, ಮಹದೇವಪ್ಪ, ದೇಶಪಾಂಡೆ ಅಂಥವರು ಸಿದ್ದರಾಮಯ್ಯ ಅವರನ್ನು ಹಾಡಿ ಹೊಗಳಿದ್ದು ಈ ಕಾರ್ಯಕ್ರಮಕ್ಕೆ ಮತ್ತೇನೋ ಉದ್ದೇಶವಿದೆಯಾ ಎಂಬ ಅನುಮಾನ ಅಂತೂ ಮೂಡಿಸುತ್ತಿತ್ತು. ಅದರಲ್ಲೂ ಸಿದ್ದರಾಮಯ್ಯ ಎಲ್ಲರ ಮಾತನ್ನು ಕೇಳುತ್ತಾರೆ. ನಿರ್ಧಾರದ ವಿಚಾರಕ್ಕೆ ಬಂದಾಗ ತಮ್ಮ ವಿವೇಚನೆ ಬಳಸುತ್ತಾರೆ ಎಂಬುದಂತೂ ಇತ್ತೀಚಿನ ಕಾಂಗ್ರೆಸ್ ನಲ್ಲಿನ ಬೆಳವಣಿಗೆಗೆ ಉತ್ತರ ನೀಡಿದಂತಿತ್ತು.

ಸರಕಾರದ ಯೋಜನೆ

ಸರಕಾರದ ಯೋಜನೆ

ಅದರಲ್ಲೂ ಅನ್ನ ಭಾಗ್ಯ ಯೋಜನೆ ಇಷ್ಟು ಕೋಟಿ ಮಂದಿಗೆ ತಲುಪುತ್ತಿದೆ, ಅದರಲ್ಲಿ ಎಲ್ಲ ಜಾತಿಯವರೂ ಇದ್ದಾರೆ. ಇನ್ನು ಕೆ ಎಂಎಫ್ ನಲ್ಲಿದ್ದ ಪ್ರೇಮನಾಥ್ ಅವರ ಕ್ಷೀರಭಾಗ್ಯ ಯೋಜನೆಯ ವಿವರಣೆ ಮತ್ತಿತರ ಸಂದರ್ಭಗಳು ಬಂದಾಗ ಕಾಂಗ್ರೆಸ್ ಸರಕಾರದ ಸಾಧನೆ ಬಗ್ಗೆ ಚೆನ್ನಾಗಿ ಬಿಂಬಿಸಿಕೊಳ್ಳಲಾಯಿತು.

ವರ್ಚಸ್ಸು ಹೆಚ್ಚಿಸಿಕೊಳ್ಳಲು ವೇದಿಕೆ

ವರ್ಚಸ್ಸು ಹೆಚ್ಚಿಸಿಕೊಳ್ಳಲು ವೇದಿಕೆ

ಸಿದ್ದರಾಮಯ್ಯ ಅವರ ಅನಾರೋಗ್ಯ ಸಮಸ್ಯೆ ನಿದ್ದೆಗೆ ಕಾರಣ ಎಂಬುದನ್ನು ಜನರಿಗೆ ತಲುಪಿಸಬೇಕಾದ ಜರೂರತ್ತು ಪಕ್ಷಕ್ಕೆ ಇತ್ತು. ಅದನ್ನು ಜನರ ಮುಂದಿಡಲು ವೀಕೆಂಡ್ ವಿತ್ ರಮೇಶ್ ಅಂಥ ವೇದಿಕೆ ಚೆನ್ನಾಗಿ ಬಳಸಲಾಯಿತು. ಇಡೀ ಕಾರ್ಯಕ್ರಮವನ್ನು ಸಿದ್ದರಾಮಯ್ಯ ಅವರ ವರ್ಚಸ್ಸು ಹೆಚ್ಚಿಸಿಕೊಳ್ಳಲು, ಜನರಿಗೆ ಇದ್ದ ಪ್ರಶ್ನೆಗಳನ್ನು ಒಂದೊಂದಾಗಿ ಉತ್ತರಿಸಲು ಒಳ್ಳೆ ವೇದಿಕೆಯಾಯಿತು.

ನಾನು ನೂರರಷ್ಟು ಪ್ರಾಮಾಣಿಕ ಅಂತ ಹೇಳಲ್ಲ

ನಾನು ನೂರರಷ್ಟು ಪ್ರಾಮಾಣಿಕ ಅಂತ ಹೇಳಲ್ಲ

ನಾನು ನೂರರಷ್ಟು ಪ್ರಾಮಾಣಿಕ ಅಂತ ಹೇಳಲ್ಲ. ಈ ವ್ಯವಸ್ಥೆಯಲ್ಲಿ ಹಾಗಿರುವುದಕ್ಕೆ ಸಾಧ್ಯವೂ ಇಲ್ಲ. ಆದರೆ ತುಂಬ ಪ್ರಾಮಾಣಿಕವಾಗಿ ಇರುವುದಕ್ಕೆ ಪ್ರಯತ್ನ ಪಟ್ಟಿದ್ದೀನಿ ಎಂದು ಕಾರ್ಯಕ್ರಮದ ಕೊನೆಗೆ ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಮ್ಮ ನೇರವಂತಿಕೆಗೆ ಮೆಚ್ಚುಗೆ ಗಳಿಸಿದರು.

ಕಾರಿನ ಮೇಲೆ ಕಾಗೆ ಕೂತ ಪ್ರಕರಣ

ಕಾರಿನ ಮೇಲೆ ಕಾಗೆ ಕೂತ ಪ್ರಕರಣ

ಇನ್ನು ಸಿಎಂ ಕಾರಿನ ಮೇಲೆ ಕಾಗೆ ಕೂತಿದ್ದ ವಿಚಾರ ಪ್ರಸ್ತಾಪಿಸಿದಾಗಲೂ, ಆ ಕಾಗೆಗೆ ಪಾಪ ಕಣ್ಣು ಕಾಣುತ್ತಿರಲಿಲ್ಲವಂತೆ. ಅಲ್ಲಿ ಕೂತಿತ್ತು. ಆದರೆ ಆ ಕಾರಣಕ್ಕೆ ನನ್ನ ಮುಖ್ಯಮಂತ್ರಿ ಸ್ಥಾನ ಹೋಗಿಬಿಡುತ್ತೆ ಅಂದರು. ಅಂಥ ವಿಚಾರದ ಬಗ್ಗೆ ಗಂಟೆಗಟ್ಟಲೆ ಮಾಧ್ಯಮಗಳಲ್ಲಿ ಚರ್ಚೆ ಮಾಡಿದ್ದರಲ್ಲಾ, ಇಂಥ ಮೂಢನಂಬಿಕೆಗಳು ಹೋಗಬೇಕು ಎಂದರು.

ಹನ್ನೊಂದು ಸಲ ಚಾಮರಾಜನಗರಕ್ಕೆ

ಹನ್ನೊಂದು ಸಲ ಚಾಮರಾಜನಗರಕ್ಕೆ

ಚಾಮರಾಜನಗರಕ್ಕೆ ಅಧಿಕಾರದಲ್ಲಿರುವ ಮುಖ್ಯಮಂತ್ರಿ ಹೋದರೆ ಅಧಿಕಾರ ಕಳೆದುಕೊಳ್ತಾರೆ ಅನ್ನೋ ಮಾತಿತ್ತು. ಮುಖ್ಯಮಂತ್ರಿ ಆದ ಮೇಲೆ ಹನ್ನೊಂದು ಸಲ ಹೋಗಿಬಂದಿದ್ದೀನಿ. ನಾನೇನು ಅಧಿಕಾರ ಕಳೆದುಕೊಂಡನಾ? ಬಸವಣ್ಣನವರು ಸತ್ಯವೇ ಸ್ವರ್ಗ, ಮಿತ್ಯವೇ ನರಕ ಎಂದಿದ್ದಾರೆ. ನನಗೆ ಪುನರ್ಜನ್ಮ ಹಾಗೂ ಸ್ವರ್ಗ-ನರಕಗಳಲ್ಲಿ ನಂಬಿಕೆ ಇಲ್ಲ ಎಂದರು.

ನಿದ್ದೆ ಸಮಸ್ಯೆ ಬಗ್ಗೆ ವೈದ್ಯರೇ ನೀಡಿದ ಮಾಹಿತಿ

ನಿದ್ದೆ ಸಮಸ್ಯೆ ಬಗ್ಗೆ ವೈದ್ಯರೇ ನೀಡಿದ ಮಾಹಿತಿ

ಸಿದ್ದರಾಮಯ್ಯ ಅವರು ವೇದಿಕೆಗಳ ಮೇಲೆ ನಿದ್ದೆ ಮಾಡುತ್ತಿದ್ದ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗುತ್ತಿತ್ತು. ಅದಕ್ಕೆ ವೈದ್ಯರೇ ಬಂದು ವಿವರಣೆ ಸಹಿತ ಮಾಹಿತಿ ನೀಡಿದರು. ಆ ಸಮಸ್ಯೆಗೆ ಏನು ಕಾರಣ, ಆ ನಂತರ ನೀಡಿದ ಚಿಕಿತ್ಸೆ ಮತ್ತಿತರ ಡೀಟೇಲ್ಸ್ ನೀಡಿದರು.

ಅವರಂತೆ ನಾನೂ ಸಿಎಂ ಆಗಬೇಕು

ಅವರಂತೆ ನಾನೂ ಸಿಎಂ ಆಗಬೇಕು

ರಾಮಕೃಷ್ಣ ಹೆಗಡೆ, ಎಸ್ ಆರ್ ಬೊಮ್ಮಾಯಿ, ದೇವೇಗೌಡ, ಜೆಎಚ್ ಪಟೇಲರು ನನಗಿಂತ ವಯಸ್ಸಿನಲ್ಲಿ ದೊಡ್ಡವರು. ಅವರ ಜತೆಯೆಲ್ಲ ನಾನು ಓಡಾಡಿಕೊಂಡಿದ್ದೆ. ಅವರೆಲ್ಲ ಮುಖ್ಯಮಂತ್ರಿ ಆದ ಮೇಲೆ ನಾನೂ ಒಮ್ಮೆ ಸಿಎಂ ಆಗಬೇಕು ಅಂತ 1996ರಲ್ಲಿ ತೀರ್ಮಾನ ಮಾಡಿದೆ ಎಂದರು ಸಿದ್ದರಾಮಯ್ಯ.

ವಿಧಾನಸಭಾ ಚುನಾವಣೆ ಮತ್ತು ಮಾಜಿ ಸಿಎಂಗಳ ಮಕ್ಕಳುವಿಧಾನಸಭಾ ಚುನಾವಣೆ ಮತ್ತು ಮಾಜಿ ಸಿಎಂಗಳ ಮಕ್ಕಳು

ಜನರಿಗೆ ನಾವು ಸ್ಪರ್ಧಿಸಬೇಕು ಅನ್ನಿಸಬೇಕು

ಜನರಿಗೆ ನಾವು ಸ್ಪರ್ಧಿಸಬೇಕು ಅನ್ನಿಸಬೇಕು

ನಾವಾಗಿ ಚುನಾವಣೆಗೆ ಸ್ಪರ್ಧಿಸಬೇಕು ಅಂದುಕೊಳ್ಳೋದು ಅಲ್ಲ. ಜನರಿಗೆ ನಾವು ಸ್ಪರ್ಧಿಸಬೇಕು ಅನ್ನಿಸಬೇಕು. ಆಗಷ್ಟೇ ರಾಜಕಾರಣದಲ್ಲಿ ಯಶಸ್ಸು ಕಾಣುವುದಕ್ಕೆ ಸಾಧ್ಯ. ನನ್ನ ಮಗನಿಗೆ ಇದೇ ಮಾತನ್ನು ಹೇಳಿದ್ದೀನಿ ಎಂದು ಸಿದ್ದು ಹೇಳಿದರು.

ಈವರೆಗೆ ಎರಡು ಸಲ ಮಾತ್ರ ಕಣ್ಣೀರು

ಈವರೆಗೆ ಎರಡು ಸಲ ಮಾತ್ರ ಕಣ್ಣೀರು

ಈವರೆಗೆ ಎರಡು ಸಲ ಮಾತ್ರ ಕಣ್ಣೀರು ಹಾಕಿದ್ದೇನೆ. ಒಂದು ಸಲ ನನ್ನ ತಾಯಿ ತೀರಿಕೊಂಡಾಗ. ಇನ್ನೊಮ್ಮೆ ನನ್ನ ಮಗ ರಾಕೇಶ ಸತ್ತಾಗ. ಅವನಿಗಿನ್ನೂ ಚಿಕ್ಕ ವಯಸ್ಸು. ಚಿಕ್ಕವಯಸ್ಸಿನ ಹೆಂಡತಿ-ಮಕ್ಕಳಿದ್ದಾರೆ. ಅವನ ಆರೋಗ್ಯ ಸರಿ ಇರಲಿಲ್ಲ. ಆದರೂ ಬೆಲ್ಜಿಯಂಗೆ ಹೋದ. ಅವನು ಬದುಕಿದ್ದಿದ್ದರೆ ಈ ಸಲ ವಿಧಾನಸಭಾ ಚುನಾವಣೆಯಲ್ಲಿ ನಿಲ್ಲಿಸುತ್ತಿದ್ದೆ ಎಂದು ಭಾವುಕರಾದರು ಸಿದ್ದರಾಮಯ್ಯ.

ದೇವೇಗೌಡ, ರೇವಣ್ಣ ಅಚ್ಚುಮೆಚ್ಚು

ದೇವೇಗೌಡ, ರೇವಣ್ಣ ಅಚ್ಚುಮೆಚ್ಚು

ಪ್ರತಿಪಕ್ಷದಲ್ಲಿ ಸಿದ್ದರಾಮಯ್ಯ ಅವರ ನೆಚ್ಚಿನ ರಾಜಕಾರಣಿ ಯಾರು ಎಂಬ ಪ್ರಶ್ನೆಗೆ ಕ್ಷಣ ಕಾಲ ಯೋಚಿಸುವಂತೆ ಕಂಡು ಬಂದ ಸಿದ್ದರಾಮಯ್ಯ ಅವರು ದೇವೇಗೌಡರ ಹೆಸರು ಹೇಳಿದರು. ದೇವೇಗೌಡರಿಗೆ ಯಾವುದೇ ಅಭ್ಯಾಸಗಳಿಲ್ಲ. ದಿನದ ಇಪ್ಪತ್ನಾಲ್ಕು ಗಂಟೆಯೂ ರಾಜಕಾರಣ ಮಾಡ್ತಾರೆ, ಯೋಚಿಸ್ತಾರೆ. ಅವರ ರೀತಿಯೇ ಎಚ್ ಡಿ ರೇವಣ್ಣ ಒಳ್ಳೆ ನಾಯಕ ಎಂದು ಹೊಗಳಿದರು.

ಯಡಿಯೂರಪ್ಪನವರು ಸಾಧಕರ ಸೀಟಿನಲ್ಲಿ ಕೂರಬೇಕಿತ್ತು

ಯಡಿಯೂರಪ್ಪನವರು ಸಾಧಕರ ಸೀಟಿನಲ್ಲಿ ಕೂರಬೇಕಿತ್ತು

ಜೆಡಿಎಸ್ ನಿಂದ ದೇವೇಗೌಡರು, ಕಾಂಗ್ರೆಸ್ ನಿಂದ ಸಿದ್ದರಾಮಯ್ಯ ಅವರಿಗೆ ಅವಕಾಶ ಸಿಕ್ಕಿರುವಾಗ ಬಿಜೆಪಿಯಿಂದ ಯಡಿಯೂರಪ್ಪನವರಿಗೆ ಅವಕಾಶ ಸಿಗಬೇಕಿತ್ತು ಎಂಬ ಬಗ್ಗೆ ಕೂಡ ಹೊಸ ಚರ್ಚೆ ಹುಟ್ಟಿಕೊಂಡಿದೆ. ಆ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಮಾತನಾಡುವಂತಾಗಿದೆ.

English summary
Karnataka CM Siddaramaiah participated in Zee TV Kannada program weekend with Ramesh recently. Here is the details how this program used to image build up of Siddaramaiah?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X