ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಧಾನ ಪರಿಷತ್ ಚುನಾವಣೆ; ಮತದಾನ ಮಾಡುವುದು ಹೇಗೆ?

|
Google Oneindia Kannada News

ಬೆಂಗಳೂರು, ಅಕ್ಟೋಬರ್ 26: ವಿಧಾನ ಪರಿಷತ್‌ಗೆ ನಾಲ್ವರು ಸದಸ್ಯರನ್ನು ಆಯ್ಕೆ ಮಾಡಲು ಅಕ್ಟೋಬರ್ 28ರಂದು ಮತದಾನ ನಡೆಯಲಿದೆ. ಪ್ರಾಶಸ್ತ್ಯದ ಮತಗಳ ಆಧಾರದ ಮೇಲೆ ಗೆದ್ದ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ. ನವೆಂಬರ್ 2ರಂದು ಫಲಿತಾಂಶ ಪ್ರಕಟವಾಗಲಿದೆ.

ವಿಧಾನ ಪರಿಷತ್‌ ಚುನಾವಣೆಯಲ್ಲಿ ಮತಯಂತ್ರಗಳನ್ನು ಬಳಕೆ ಮಾಡುವುದಿಲ್ಲ. ಪ್ರಾಶಸ್ತ್ಯದ ಮತಗಳ ಆಧಾರದ ಮೇಲೆ ಗೆದ್ದ ಅಭ್ಯರ್ಥಿಯನ್ನು ಘೋಷಣೆ ಮಾಡುವುದರಿಂದ ಸರಿಯಾಗಿ ಮತದಾನ ಮಾಡಬೇಕು. ಇಲ್ಲವಾದಲ್ಲಿ ಮತ ಅಸಿಂಧುವಾಗುತ್ತದೆ.

ವಿಧಾನ ಪರಿಷತ್ ಚುನಾವಣೆ; ನೋಟಾ ಆಯ್ಕೆ ಲಭ್ಯವಿಲ್ಲ ವಿಧಾನ ಪರಿಷತ್ ಚುನಾವಣೆ; ನೋಟಾ ಆಯ್ಕೆ ಲಭ್ಯವಿಲ್ಲ

ಆಗ್ನೇಯ ಪದವೀಧರ ಕ್ಷೇತ್ರ, ಪಶ್ಚಿಮ ಪದವೀಧರ ಕ್ಷೇತ್ರ, ಈಶಾನ್ಯ ಶಿಕ್ಷಕರ ಕ್ಷೇತ್ರ ಮತ್ತು ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಪದವೀಧರರು, ಶಿಕ್ಷಕರು ಈ ಚುನಾವಣೆಯಲ್ಲಿ ಮತದಾನ ಮಾಡಲಿದ್ದಾರೆ.

ಪರಿಷತ್ ಚುನಾವಣೆ; 30 ಅಭ್ಯರ್ಥಿಗಳು ಕಣದಲ್ಲಿ, ಬಿಜೆಪಿಗೆ ಬಂಡಾಯದ ಬಿಸಿ ಪರಿಷತ್ ಚುನಾವಣೆ; 30 ಅಭ್ಯರ್ಥಿಗಳು ಕಣದಲ್ಲಿ, ಬಿಜೆಪಿಗೆ ಬಂಡಾಯದ ಬಿಸಿ

How To Vote For Legislative Council Election

ಮತದಾನದ ವಿಧಾನ: ಮತಗಟ್ಟೆ ಅಧಿಕಾರಿ ನೀಡುವ ಪೆನ್ ಬಳಸಿ, ಮತಪತ್ರದಲ್ಲಿನ ಆಯ್ಕೆಯ ಅಭ್ಯರ್ಥಿಯ ಹೆಸರಿನ ಮುಂದೆ '1' ಎಂದು ಗುರುತಿಸಬೇಕು. ಪಟ್ಟಿಯಲ್ಲಿನ ಉಳಿದ ಅಭ್ಯರ್ಥಿಗಳ ಹೆಸರಿನ ಮುಂದೆಯೂ ಸಹ 2, 3, 4 ಎಂದು ಅಂತರರಾಷ್ಟ್ರೀಯ ಅಥವಾ ರೋಮನ್ ಅಥವಾ ಕನ್ನಡ ಅಂಕಿಗಳನ್ನು ಬಳಸಿ ಪ್ರಾಶಸ್ತ್ಯವನ್ನು ತೋರಿಸಬಹುದು. ಅಕ್ಷರಗಳನ್ನು ಬಳಸುವಂತಿಲ್ಲ. ಮತಪತ್ರದಲ್ಲಿ ಹೆಸರು, ಸಹಿ ಅಥವಾ ಹೆಬ್ಬೆರಳ ಗುರುತು ಹಾಕಿದರೆ ಮತಪತ್ರ ಅಸಿಂಧುವಾಗುತ್ತದೆ.

ಕರ್ನಾಟಕ; ವಿಧಾನ ಪರಿಷತ್ 4 ಕ್ಷೇತ್ರಗಳಿಗೆ ಚುನಾವಣೆ ಘೋಷಣೆ ಕರ್ನಾಟಕ; ವಿಧಾನ ಪರಿಷತ್ 4 ಕ್ಷೇತ್ರಗಳಿಗೆ ಚುನಾವಣೆ ಘೋಷಣೆ

ಮತದಾನದ ಗೌಪ್ಯತೆಯನ್ನು ಕಾಪಾಡುವುದು ಸಹ ಮುಖ್ಯವಾಗುತ್ತದೆ. ನೀಡಲಾದ ಮತಪತ್ರವನ್ನು ತಪ್ಪದೇ ಮತಪೆಟ್ಟಿಗೆಯಲ್ಲಿ ಹಾಕಬೇಕು. ಮತಪತ್ರವನ್ನು ಕೇಂದ್ರದಿಂದ ಹೊರಗೆ ತೆಗೆದುಕೊಂಡು ಹೋಗುವುದು ಅಪರಾಧವಾಗಿದೆ.

ಮತದಾನಕ್ಕೆ ಬರುವಾಗ ಉರಿಯುವ ವಸ್ತುಗಳು, ಬೆಂಕಿ ಪೊಟ್ಟಣ/ ಲೈಟರ್, ಯಾವುದೇ ದ್ರವ ಪದಾರ್ಥ, ಯಾವುದೇ ಆಯುಧ ಅಥವಾ ಬೆಂಕಿ ಸಾಧನಗಳು, ಮೊಬೈಲ್, ಕ್ಯಾಮರಾ, ಪೆನ್ನು ತರುವಂತಿಲ್ಲ.

Recommended Video

Surya Kumar Yadav ರನ್ನು Australia ತಂಡಕ್ಕೆ ಈಗಲೂ ಆಯ್ಕೆ ಮಾಡಿಲ್ಲ | Oneindia Kannada

ಗುರುತಿನ ಚೀಟಿಗಳು : ಚುನಾವಾಣಾ ಆಯೋಗದ ಗುರುತಿನ ಚೀಟಿ, ಆಧಾರ ಕಾರ್ಡ್, ಚಾಲನಾ ಪರವಾನಿಗೆ ಪತ್ರ, ಪ್ಯಾನ್ ಕಾರ್ಡ್, ಪಾಸ್ ಪೋರ್ಟ್‌, ಸೇವಾ ಗುರುತಿನ ಚೀಟಿ, ಮೂಲ ಪದವಿ/ ಡಿಪ್ಲೋಮಾ ಪ್ರಮಾಣ ಪತ್ರ, ಮೂಲ ಅಂಗವಿಕಲ ಪ್ರಮಾಣ ಪತ್ರಗಳನ್ನು ತರಬಹುದಾಗಿದೆ.

English summary
Four legislative council seat election scheduled for October 28. How to vote in the election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X