ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಿಸರ ಸ್ನೇಹಿ ಅರಿಶಿಣ ಗಣಪತಿ ಮೂರ್ತಿ ಮಾಡುವುದು ಹೇಗೆ?

|
Google Oneindia Kannada News

ಬೆಂಗಳೂರು, ಆಗಸ್ಟ್ 12 : ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿಯಾಗಿ ಆಚರಿಸಬೇಕೆಂದು ಕರೆ ನೀಡಿದೆ. ಅರಿಶಿಣದಿಂದ ಗಣೇಶ ಮೂರ್ತಿ ಮಾಡುವ ಕುರಿತು ಮಂಡಳಿ ಜಾಗೃತಿ ಮೂಡಿಸುತ್ತಿದೆ.

ಗಣೇಶ ಚತುರ್ಥಿಯನ್ನು ಪ್ರತಿವರ್ಷ ಸಂಭ್ರಮದಿಂದ ಆಚರಿಸಲಾಗುತ್ತಿತ್ತು. ಈ ಬಾರಿ ಕೊರೊನಾ ವೈರಸ್ ಸೋಂಕಿನ ಭೀತಿ ಹಿನ್ನಲೆಯಲ್ಲಿ ಸರಳವಾಗಿ ಹಬ್ಬವನ್ನು ಆಚರಣೆ ಮಾಡುವಂತೆ ಮನವಿ ಮಾಡಲಾಗಿದೆ. ಅರಿಶಿನದಿಂದ ಗಣೇಶನ ಮೂರ್ತಿಯನ್ನು ಮನೆಯಲ್ಲೇ ಮಾಡಲು ಸಲಹೆ ನೀಡಲಾಗಿದೆ.

ಗಣೇಶ ಉತ್ಸವಕ್ಕೆ ಕಟ್ಟುನಿಟ್ಟಿನ ನಿಯಮಗಳನ್ನು ಪ್ರಕಟಿಸಿದ ಮಹಾರಾಷ್ಟ್ರಗಣೇಶ ಉತ್ಸವಕ್ಕೆ ಕಟ್ಟುನಿಟ್ಟಿನ ನಿಯಮಗಳನ್ನು ಪ್ರಕಟಿಸಿದ ಮಹಾರಾಷ್ಟ್ರ

ಈ ಬಾರಿ ಪರಿಸರ ಸ್ನೇಹಿಯಾಗಿ ಹಬ್ಬ ಆಚರಣೆ ಮಾಡುವ ಜೊತೆಗೆ ಆರೋಗ್ಯ ಸ್ನೇಹಿ ಗಣೇಶೋತ್ಸವ ಮಾಡಬೇಕು ಎಂದು ಕರೆ ನೀಡಲಾಗಿದೆ. ಹಬ್ಬದ ದಿನ ಜನ ದಟ್ಟಣೆ ಉಂಟಾಗಬಾರರು ಹಾಗೂ ಸಾಮಾಜಿಕ ಅಂತರ ಕಾಪಾಡಬೇಕು ಎಂದು ಕರೆ ಕೊಡಲಾಗಿದೆ.

ಶಿವಮೊಗ್ಗ; ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ ರದ್ದು ಶಿವಮೊಗ್ಗ; ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ ರದ್ದು

How To Prepare Turmeric Ganesha Idols

ಕೊರೊನಾ ವೈರಸ್ ಸೋಂಕಿನ ಪ್ರಕರಣ ಹೆಚ್ಚುತ್ತಿರುವುದರಿಂದ ವೈರಾಣು ನಿರೋಧಕ ಶಕ್ತಿ ಹೊಂದಿರುವ ಅರಿಶಿಣ ಗಣೇಶ ಮೂರ್ತಿಯನ್ನು ಮನೆಯಲ್ಲೇ ತಯಾರಿಸಿ ಪೂಜಿಸಿ,ವಿಸರ್ಜಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಯು ಕರೆ ನೀಡಿದೆ.

ಗಣೇಶ ಚತುರ್ಥಿ ಸನ್ನಿಹಿತ: ಮೂರ್ತಿಗಳನ್ನು ಕೊಳ್ಳುವವರೇ ಇಲ್ಲ ಗಣೇಶ ಚತುರ್ಥಿ ಸನ್ನಿಹಿತ: ಮೂರ್ತಿಗಳನ್ನು ಕೊಳ್ಳುವವರೇ ಇಲ್ಲ

ಅರಿಶಿಣ ಗಣಪತಿ ಮಾಡುವ ವಿಧಾನ : ಮೊದಲು ಅರಿಶಿಣ ಹಾಗೂ ಮೈದಾಹಿಟ್ಟಿಗೆ ನೀರು ಮಿಶ್ರಣ ಮಾಡಿ ಹದವಾಗಿ ಮಾಡಿಕೊಂಡು ಗಣೇಶನ ಆಕಾರ ನೀಡಬೇಕು. ಸೊಂಡಿಲನ್ನು ಮಾಡಿದ ಬಳಿಕ ಮೆಣಸಿನ ಕಾಳನ್ನು ಬಳಸಿ ಮೂರ್ತಿಗೆ ಕಣ್ಣು ಮಾಡಬಹುದು.

ಬಳಿಕ ಹೂವಿನ ಅಲಂಕಾರ ಮಾಡಿ ಮೂರ್ತಿ ಪ್ರತಿಷ್ಟಾಪಿಸಬೇಕು. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಫೇಸ್ ಬುಕ್ ಪೇಜ್‌ನಲ್ಲಿ ಗಣೇಶ ಮೂರ್ತಿ ಮಾಡುವ ವಿಧಾನದ ವಿವರಣೆ ನೀಡಲಾಗಿದೆ.

ಇಂತಹ ಪುಟ್ಟ ಪ್ರತಿಮೆಗಳನ್ನು ತಯಾರಿಸಿ ಮನೆಯ ಆವರಣದಲ್ಲಿ ವಿಸರ್ಜನೆ ಮಾಡುವುದರಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳಬಹುದು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.

English summary
Karnataka state pollution control board has appealed the people to celebrate Ganesha Chaturthi with homemade idols of turmeric. How to prepare turmeric ganesha idols.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X