ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತರ ಜಿಲ್ಲೆ ಓಡಾಡೋಕೆ ಬೆರಳ ತುದಿಯಲ್ಲೇ ಪಾಸು ಪಡೆಯಿರಿ!

|
Google Oneindia Kannada News

ಬೆಂಗಳೂರು, ಮೇ 05 : ಕರ್ನಾಟಕ ಸರ್ಕಾರ ಲಾಡ್ ಡೌನ್ ನಿಯಮಗಳಲ್ಲಿ ಕೆಲವು ವಿನಾಯಿತಿಗಳನ್ನು ನೀಡಿದೆ. ಹಳದಿ, ಕೆಂಪು ಮತ್ತು ಹಸಿರು ವಲಯವನ್ನಾಗಿ ರಾಜ್ಯವನ್ನು ವಿಂಗಡನೆ ಮಾಡಲಾಗಿದೆ. ಹಸಿರು ವಲಯದಲ್ಲಿ ಬಸ್ ಸಂಚಾರ ಆರಂಭಗೊಂಡಿದೆ.

Recommended Video

ಇಷ್ಟು ದಿನ ಮನೆಯಲ್ಲಿ ಸುಮ್ಮನಿದ್ದವರೆಲ್ಲ ಈಗ ಕುಡಿದು ಬೀದಿಯಲ್ಲಿ ಕಿತ್ತಾಡುತ್ತಿದ್ದಾರೆ | oneindia Kannada

ವಿವಿಧ ನಗರದಲ್ಲಿ ಸಿಲುಕಿರುವ ಜನರು ಅಂತರ ಜಿಲ್ಲೆ ಪ್ರಯಾಣ ಮಾಡುವುದು ಹೇಗೆ? ಎಂಬ ಚಿಂತೆಯಲ್ಲಿದ್ದಾರೆ. ತುರ್ತು ಸಂದರ್ಭದಲ್ಲಿ ಅಂತರ ಜಿಲ್ಲೆಗೆ ತೆರಳಲು ಪೊಲೀಸ್ ಇಲಾಖೆ ಪಾಸುಗಳ ವ್ಯವಸ್ಥೆ ಮಾಡಿದೆ.

ಅಂತರ ಜಿಲ್ಲಾ ಸಂಚಾರಕ್ಕೆ ಪಾಸು ಪಡೆಯುವುದು ಹೇಗೆ?ಅಂತರ ಜಿಲ್ಲಾ ಸಂಚಾರಕ್ಕೆ ಪಾಸು ಪಡೆಯುವುದು ಹೇಗೆ?

ಪಾಸುಗಳು ಇಲ್ಲದೇ ಖಾಸಗಿ ವಾಹನಗಳನ್ನು ತೆಗೆದುಕೊಂಡು ರಸ್ತೆಗೆ ಇಳಿದರೆ ವಾಹನವನ್ನು ಪೊಲೀಸರು ವಶಕ್ಕೆ ಪಡೆಯಲಿದ್ದಾರೆ. ವಾಹನದಲ್ಲಿ ಇದ್ದವರನ್ನು ಕ್ವಾರಂಟೈನ್‌ಗೆ ಹಾಕುವ ಅವಕಾಶವೂ ಸಹ ಇದೆ. ಆದ್ದರಿಂದ, ಪಾಸು ಪಡೆದು ಪ್ರಯಾಣ ಮಾಡಿ.

ಲಾಕ್ ಡೌನ್ ವಿಸ್ತರಣೆ; ಭಾರತೀಯ ರೈಲ್ವೆಯ 5 ಘೋಷಣೆಗಳು ಲಾಕ್ ಡೌನ್ ವಿಸ್ತರಣೆ; ಭಾರತೀಯ ರೈಲ್ವೆಯ 5 ಘೋಷಣೆಗಳು

ಪೊಲೀಸರು ನೀಡಿರುವ ವೆಬ್ ಸೈಟ್‌ಗೆ ಭೇಟಿ ನೀಡಿ ಪಾಸುಗಳನ್ನು ಪಡೆಯಲು ಅರ್ಜಿ ಸಲ್ಲಿಸಬೇಕು. ಮೊಬೈಲ್ ಮೂಲಕವೂ ಪಾಸುಗಳನ್ನು ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಬೆರಳ ತುದಿಯಲ್ಲಿ ಪಾಸು ಪಡೆಯುವುದು ಹೇಗೆ? ಎಂಬ ಮಾಹಿತಿ ಇಲ್ಲಿದೆ ನೋಡಿ..

ಕೊರೊನಾ ಹೋರಾಟ: ಒನ್ಇಂಡಿಯಾ ಜೊತೆ ಡಿಸಿಎಂ ಡಾ. ಅಶ್ವಥ್ ಸಂದರ್ಶನ ಕೊರೊನಾ ಹೋರಾಟ: ಒನ್ಇಂಡಿಯಾ ಜೊತೆ ಡಿಸಿಎಂ ಡಾ. ಅಶ್ವಥ್ ಸಂದರ್ಶನ

ಪಾಸ್ ಪಡೆಯುವುದು ಹೇಗೆ

ಪಾಸ್ ಪಡೆಯುವುದು ಹೇಗೆ

ಅಂತರ ಜಿಲ್ಲೆ ಸಂಚಾರ ನಡೆಸುವವರು ಮೊದಲು kspclearpass.idp.mygate.com ವೆಬ್‌ ಸೈಟ್‌ಗೆ ಭೇಟಿ ಕೊಡಬೇಕು. ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿ ಲಾಗಿನ್ ಆಗಬೇಕು. ಆಗ ನಿಮ್ಮ ಮೊಬೈಲ್‌ಗೆ ಓಟಿಪಿ ಬರುತ್ತದೆ. ಅದನ್ನು ನಮೂದಿಸಿ ವೆಬ್ ಸೈಟ್ ಪ್ರವೇಶ ಮಾಡಬಹುದು.

ವಿವರಗಳನ್ನು ಭರ್ತಿ ಮಾಡಿ

ವಿವರಗಳನ್ನು ಭರ್ತಿ ಮಾಡಿ

ವೆಬ್ ಸೈಟ್ ಪ್ರವೇಶ ಮಾಡಿದ ಮೇಲೆ ಜನರು ತಮ್ಮ ಸರ್ಕಾರಿ ಗುರುತಿನ ಚೀಟಿಯಲ್ಲಿ ಇರುವಂತೆ ಹೆಸರು, ವಿವರ ನೋಂದಣಿ ಮಾಡಬೇಕು. ವಾಹನದ ನೋಂದಣಿ ಸಂಖ್ಯೆಯನ್ನು ಸಹ ನಮೂದಿಸಬೇಕು. ಸ್ವಂತ ವಾಹನಗಳ ಸಂಖ್ಯೆ ಮಾತ್ರ ಹಾಕಬೇಕು ಬಸ್, ರೈಲು ಮುಂತಾದವುಗಳ ಮೂಲಕ ಸಂಚಾರ ನಡೆಸಲು ಈ ಪಾಸು ಅನ್ವಯ ಆಗುವುದಿಲ್ಲ.

ಪಾಸ್ ಪೋನ್‌ನಲ್ಲಿಯೆ ಸಿಗುತ್ತದೆ

ಪಾಸ್ ಪೋನ್‌ನಲ್ಲಿಯೆ ಸಿಗುತ್ತದೆ

ನೀವು ಎಲ್ಲಾ ವಿವರಗಳನ್ನು ನಮೂದಿಸಿದ ಬಳಿಕ ನಿಮ್ಮ ಸಂಖ್ಯೆಗೆ ಪಾಸು ಬರುತ್ತದೆ. ಅದನ್ನು ಬಳಸಿಕೊಂಡು ಸಂಚಾರ ನಡೆಸಬಹುದಾಗಿದೆ. ಆದರೆ, ನೆನಪಿರಲಿ ಇದು ಒಂದು ದಿನದ, ಒಂದು ಕಡೆಯ ಹಾಗೂ ಒಂದು ಅವಧಿಯ ಪಾಸ್ ಮಾತ್ರ ಆಗಿರುತ್ತದೆ.

ಪಾಸು ದುರುಪಯೋಗ ಅಪರಾಧ

ಪಾಸು ದುರುಪಯೋಗ ಅಪರಾಧ

ಪೊಲೀಸ್ ಇಲಾಖೆ ನೀಡುತ್ತಿರುವ ಪಾಸು ಒಬ್ಬ ವ್ಯಕ್ತಿಗೆ ಮಾತ್ರ ಮಾನ್ಯವಾಗಿರುತ್ತದೆ. ಇದನ್ನು ದುರುಪಯೋಗ ಮಾಡುವವರ ವಿರುದ್ದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿ, ಶಿಕ್ಷಿಸಲು ಅವಕಾಶವಿದೆ.

English summary
Karnataka government relaxed in lock down rules. But people should get pass for the inter-district movement. Here are the information about to get pass through mobile.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X