ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಿ ಬಸ್‌ಗಳ ಪಾಸುಗಳನ್ನು ಪಡೆಯುವುದು ಹೇಗೆ?

|
Google Oneindia Kannada News

ಬೆಂಗಳೂರು, ಅಕ್ಟೋಬರ್ 14 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಈಗ ಸೇವಾಸಿಂಧು ಪೋರ್ಟಲ್‍ನಲ್ಲಿ ಆನ್‍ಲೈನ್ ವ್ಯವಸ್ಥೆಯಡಿ ನಿರ್ವಹಿಸುತ್ತಿದೆ. ಬಸ್‌ ಪಾಸುಗಳನ್ನು ಪಡೆಯಲು ಪ್ರಯಾಣಿಕರು ಪೋರ್ಟಲ್‌ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಬೇಕಿದೆ.

ನಾಲ್ಕು ರಾಜ್ಯ ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪಾಸುಗಳನ್ನು ಪಡೆಯಲು ನೋಂದಣಿ ಮಾಡಿಸಬೇಕು.

ಮಂಗಳೂರು-ಮುಂಬೈ ಕೆಎಸ್ಆರ್‌ಟಿಸಿ ಬಸ್ ಸಂಚಾರ ಆರಂಭ ಮಂಗಳೂರು-ಮುಂಬೈ ಕೆಎಸ್ಆರ್‌ಟಿಸಿ ಬಸ್ ಸಂಚಾರ ಆರಂಭ

ಸಾರಿಗೆ ನಿಗಮಗಳು ವಿವಿಧ ಮಾದರಿಯ ಬಸ್‍ ಪಾಸುಗಳನ್ನು ನೀಡುತ್ತವೆ. ಸೇವಾಸಿಂಧು ಪೋರ್ಟಲ್ ಮೂಲಕ ಆನ್‍ಲೈನ್‍ನಲ್ಲಿ ಅರ್ಜಿಗಳನ್ನು ಸಲ್ಲಿಸಿ ಪಾಸುಗಳನ್ನು ಪಡೆಯುವಂತೆ ಸೂಚನೆಯನ್ನು ನೀಡಲಾಗಿದೆ.

ಪ್ರಶಾಂತ್ ಆಚಾರ್ ಬಳಿ 10 ಬಸ್‌ಗೆ ಬೇಡಿಕೆ ಇಟ್ಟ ಕೆಎಸ್ಆರ್‌ಟಿಸಿ! ಪ್ರಶಾಂತ್ ಆಚಾರ್ ಬಳಿ 10 ಬಸ್‌ಗೆ ಬೇಡಿಕೆ ಇಟ್ಟ ಕೆಎಸ್ಆರ್‌ಟಿಸಿ!

How To Get KSRTC Bus Pass Online

ವಿದ್ಯಾರ್ಥಿ ಉಚಿತ ಅಥವಾ ರಿಯಾಯಿತಿ ಪಾಸು, ವಿಕಲಚೇತನರ ರಿಯಾಯಿತಿ ಪಾಸು, ಅಂಧರ ಉಚಿತ ಪಾಸು, ಸ್ವಾತಂತ್ಯ್ರ ಹೋರಾಟಗಾರರ ಪಾಸು, ಸ್ವಾತಂತ್ರ್ಯ ಹೋರಾಟಗಾರರ ಪತಿ/ ಪತ್ನಿಯರ ಉಚಿತ ಕೂಪನ್ಸ್ ಮತ್ತು ಅಪಘಾತ ಪರಿಹಾರ ನಿಧಿ ಈ ಸೇವೆಗಳನ್ನು ಪಡೆಯಲು ನೋಂದಣಿ ಕಡ್ಡಾಯ.

ಕೆಎಸ್ಆರ್‌ಟಿಸಿ ಬಸ್‌ಗಳಲ್ಲಿ ಇನ್ನು ಎಲ್ಲಾ ಸೀಟು ಭರ್ತಿ ಕೆಎಸ್ಆರ್‌ಟಿಸಿ ಬಸ್‌ಗಳಲ್ಲಿ ಇನ್ನು ಎಲ್ಲಾ ಸೀಟು ಭರ್ತಿ

ಈಗಾಗಲೇ ಬಸ್ ಪಾಸುಗಳನ್ನು ಪಡೆದಿರುವವರು ನವೀಕರಿಸಿಕೊಳ್ಳಲು ಮತ್ತು ಹೊಸ ಪಾಸು ಪಡೆದುಕೊಳ್ಳಲು ಸೇವಾಸಿಂಧು ಪೋರ್ಟಲ್‍ನಲ್ಲಿ ಕಡ್ಡಾಯವಾಗಿ ಅರ್ಜಿ ಸಲ್ಲಿಸಬೇಕು. ಅರ್ಜಿಗಳನ್ನು ಸಲ್ಲಿಸುವಾಗ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ಹಾಗೂ ಅರ್ಜಿಗೆ ಸಂಬಂಧಪಟ್ಟ ದಾಖಲೆಗಳನ್ನು ಅಪ್‍ಲೋಡ್ ಮಾಡಬೇಕು.

Recommended Video

ಆನೆಯ ಮೇಲೆ ಯೋಗಾಸನ ಮಾಡುವಾಗ ಉರುಳಿಬಿದ್ದ ರಾಮದೇವ್‌ ಬಾಬಾ! Oneindia kannada

ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಿದ ಬಳಿಕ ಮೌಖಿಕವಾಗಿ ಪಾಸು ಪಡೆಯಲು ಬಂದಾಗ ಅಗತ್ಯ ದಾಖಲಾತಿ ಹಾಗೂ ಅದರ ಜೆರಾಕ್ಸ್ ಪ್ರತಿಯನ್ನು ಕಚೇರಿಗೆ ಸಲ್ಲಿಸಬೇಕು ಎಂದು ಸೂಚನೆ ನೀಡಲಾಗಿದೆ.

English summary
Registration in Seva Sindhu portal mandatory to get government bus pass in Karnataka. How to get bus pass, here are the details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X