ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಸಿಇಟಿ ಹಾಲ್ ಟಿಕೆಟ್ ಡೌನ್ ಲೋಡ್ ಹೇಗೆ?

|
Google Oneindia Kannada News

ಬೆಂಗಳೂರು, ಜುಲೈ 19: ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕಾಗಿ ನಡೆಸಲಾಗುವ ಕಾಮನ್ ಎಂಟರೆನ್ಸ್ ಟೆಸ್ಟ್(ಸಿಇಟಿ) 2020 ದಿನಾಂಕ ನಿಗದಿಯಾಗಿದೆ. ಜುಲೈ 30 ಮತ್ತು ಜುಲೈ 31ಕ್ಕೆ ನಡೆಸಲು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿದ್ಧವಾಗಿದೆ. ಈ ನಡುವೆ ಕೆಇಎ ತನ್ನ ಅಧಿಕೃತ ವೆಬ್ ತಾಣದಲ್ಲಿ ಹಾಲ್ ಟಿಕೆಟ್/ ಅಡ್ಮಿಟ್ ಕಾರ್ಡ್ ಪ್ರಕಟಿಸಿದೆ.

Recommended Video

ಕೊರೊನ ವಿರುದ್ಧದ ಯುದ್ಧದಲ್ಲಿ ಗೆದ್ದ Sharath Bacche Gowda | Oneindia Kannada

ಕೊರೊನಾವೈರಸ್ ಸೋಂಕು ಹರಡದಂತೆ ವಿಧಿಸಲಾದ ಲಾಕ್ ಡೌನ್ ನಿಂದಾಗಿ ಸಿಇಟಿ ಮುಂದೂಡಲಾಗಿತ್ತು. ಜುಲೈ 30ರಂದು ನಿಗದಿಯಾಗಿರುವ ಪರೀಕ್ಷೆಗೆ ಸಕಲ ಸಿದ್ಧತೆಯಾಗಿದೆ, ರಾಜ್ಯದಲ್ಲಿ ಒಟ್ಟು 75 ಸ್ಥಳಗಳನ್ನು ಹೊಸ ಪರೀಕ್ಷಾ ಕೇಂದ್ರಗಳನ್ನಾಗಿ ಗುರುತಿಸಲಾಗಿದೆ. ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ ತಾಣದಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದು.

ಕರ್ನಾಟಕ ಸಿಇಟಿ 2020 ದಿನಾಂಕ, ವೇಳಾಪಟ್ಟಿ ಪ್ರಕಟಕರ್ನಾಟಕ ಸಿಇಟಿ 2020 ದಿನಾಂಕ, ವೇಳಾಪಟ್ಟಿ ಪ್ರಕಟ

ವಿದ್ಯಾರ್ಥಿಗಳು ತಾವು ಮೊದಲು ನಿಗದಿಪಡಿಸಿಕೊಂಡ ಪರೀಕ್ಷಾ ಕೇಂದ್ರವನ್ನು ಬದಲಾಯಿಸಿಕೊಳ್ಳಲು ಅವಕಾಶ ನೀಡಲಾಗಿತ್ತು. ಮೊದಲ ವರ್ಷ/ಸೆಮಿಸ್ಟರ್ ಇಂಜಿನಿಯರ್, ತಂತ್ರಜ್ಞಾನ, ಯೋಗ ಮತ್ತು ನ್ಯಾಚುರೋಪತಿ, ಕೃಷಿ ವಿಜ್ಞಾನ ಕೋರ್ಸ್, ಬಿ ಫಾರ್ಮಾ, ಫಾರ್ಮಾ ಡಿ ಕೋರ್ಸುಗಳ ಪ್ರವೇಶಕ್ಕಾಗಿ ಸಿಇಟಿ ನಡೆಸಲಾಗುತ್ತದೆ.

How to Download Karnataka CET 2020 Hall Ticket Admit Card

ಕರ್ನಾಟಕ ಸಿಇಟಿ 2020 ಹಾಲ್ ಟಿಕೆಟ್ ಡೌನ್ ಲೋಡ್ ಹೇಗೆ?

* ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ ತಾಣ(kea.kar.nic.in)ಕ್ಕೆ ಭೇಟಿ ಕೊಡಿ. ಅಥವಾ ನೇರ ಲಿಂಕ್
* UGCET 2020- ಹಾಲ್ ಟಿಕೆಟ್ ಡೌನ್ ಲೋಡ್ ಲಿಂಕ್ ಕ್ಲಿಕ್ ಮಾಡಿ
* ನಿಮ್ಮ ಅರ್ಜಿ ನಂಬರ್, ನಿಮ್ಮ ಹುಟ್ಟಿದ ದಿನಾಂಕ ನಮೂದಿಸಿ
* ನಿಮ್ಮ ಕೆಸಿಇಟಿ 2020 ಹಾಲ್ ಟಿಕೆಟ್ ಕಾಣಿಸುತ್ತದೆ.
* ಹಾಲ್ ಟಿಕೆಟ್ ಡೌನ್ ಲೋಡ್ ಮಾಡಿಕೊಂಡು, ಪ್ರಿಂಟ್ ಔಟ್ ತೆಗೆದುಕೊಳ್ಳಿ.
* ಕರ್ನಾಟಕ ಸಿಇಟಿ ಅಡ್ಮಿಟ್ ಕಾರ್ಡ್ ಪಡೆಯಲು ನೇರ ಲಿಂಕ್ ಇಲ್ಲಿದೆ

English summary
The Karnataka Examinations Authority on has released the admit card for Karnataka Common Entrance Test (KCET) 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X