ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರ ಆದಾಯ ದ್ವಿಗುಣ ಹೇಗೆ ? : ಕೃಷಿ ಸಚಿವರ 10 ಸೂತ್ರಗಳು

By Mahesh
|
Google Oneindia Kannada News

ದೇಶದ ಜಿಡಿಪಿಗೆ ಕೃಷಿ ಕೊಡುಗೆ ಕೇವಲ ಶೇ 14ರಷ್ಟು ಮಾತ್ರವೇ ಇದೆ, ಇದು ನಾವು ಕೃಷಿಯನ್ನು ಮೂಲೆಗುಂಪು ಮಾಡುತ್ತಿರುವುದನ್ನು ತೋರಿಸುತ್ತದೆ ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ಬೇಸರ ವ್ಯಕ್ತಪಡಿಸಿದರು.

ನಬಾರ್ಡ್, ಕರ್ನಾಟಕ ಸರಕಾರ ಹಾಗೂ ಕೇಂದ್ರ ಸರಕಾರದ ಸಹಯೋಗದಲ್ಲಿ ಇಂದು ಬೆಂಗಳೂರಿನ ನಬಾರ್ಡ್ ಕೇಂದ್ರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ 'ರೈತರ ಆದಾಯ ದ್ವಿಗುಣ ಮಾಡುವುದು ಹೇಗೆ?' ಎಂಬ ಒಂದು ದಿನದ ದಕ್ಷಿಣ ರಾಜ್ಯಗಳ ಪ್ರಾದೇಶಿಕ ಕಾರ್ಯಗಾರವನ್ನು ಉದ್ಘಾಟಿಸಿ ಸಚಿವರು ಮಾತನಾಡಿದರು.

ಈ ಕಾರ್ಯಗಾರದ ಉದ್ದೇಶವನ್ನು ಮತ್ತಷ್ಟು ಬಲಿಷ್ಠ ಪಡಿಸಲು ಸಚಿವರು ತಮ್ಮದೇ ಆದ 10 ಸೂತ್ರಗಳನ್ನು ಸಭೆಯಲ್ಲಿ ಮಂಡಿಸಿದರು. ಅವುಗಳ ಬಗ್ಗೆ ಸಹ ಗಮನ ಹರಿಸಿದಲ್ಲಿ ರೈತರ ಆದಾಯ ದ್ವಿಗುಣಗೊಳಿಸುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರಗಳನ್ನು ಕಂಡುಕೊಳ್ಳಬಹುದು ಎಂದು ಹೇಳಿದರು.
• ಉತ್ಪಾದನೆಯಲ್ಲಿ ಹೆಚ್ಚಳ : ಕೃಷಿಯಲ್ಲಿ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಉತ್ಪಾದನೆಯಲ್ಲಿ ಹೆಚ್ಚಳ ಮಾಡಿದಲ್ಲಿ ಆದಾಯದಲ್ಲಿ ಬೆಳವಣಿಗೆಯನ್ನು ಕಾಣಬಹುದು.

• ಬೆಳೆಗೆ ತಕ್ಕ ಬೆಲೆ : ಬೆಳೆದ ಬೆಳೆಗೆ ತಕ್ಕ ಬೆಲೆ ಸಿಗುವಂತೆ ಮಾಡಲು ಬೇಕಾದ ಅಂಶಗಳ ಬಗ್ಗೆ ಗಮನ ಹರಿಸಬೇಕು.

•ಭೂಮಿ ಇಬ್ಭಾಗ ತಡೆಯಬೇಕು : ತಾತನ ತಲೆಮಾರಿನಲ್ಲಿ ಇದ್ದ 10 ಎಕರೆ ಭೂಮಿ ಮೊಮ್ಮಕ್ಕಳ ಕಾಲಕ್ಕೆ ಹಂಚಿಕೆಯಾಗುತ್ತಾ ಬಂದು, ಕೊನೆಗೆ ತಲಾ ಒಂದು ಎಕರೆ ಭೂಮಿಯಲ್ಲಿ ಸಾಗುವಳಿ ಮಾಡುವುದರಿಂದ ಲಾಭ ಪಡೆಯುವುದು ಅಸಾಧ್ಯ. ಉಳಿದ ಸಲಹೆಗಳನ್ನು ಮುಂದೆ ಓದಿ...

ನೀರು ಮತ್ತು ನೀರಿನ ಬಳಕೆ

ನೀರು ಮತ್ತು ನೀರಿನ ಬಳಕೆ

ಇರುವ ನೀರನ್ನು ಹೇಗೆ ಸದ್ಭಳಕೆ ಮಾಡಿಕೊಳ್ಳಬೇಕು ಮತ್ತು ಅದರಿಂದ ಹೆಚ್ಚಿನ ಭೂಮಿಯನ್ನು ಹೇಗೆ ನೀರಾವರಿ ಮಾಡಬಹುದು ಎನ್ನುವುದರ ಬಗ್ಗೆ ಚರ್ಚೆ ನಡೆಯಬೇಕು.

ಆರ್ಥಿಕತೆ ಪ್ರಗತಿ ಹೇಗೆ?

ಆರ್ಥಿಕತೆ ಪ್ರಗತಿ ಹೇಗೆ?

ರೈತರ ಬದುಕಿನಲ್ಲಿ ಸಾಲ ಎನ್ನುವುದು ಬಹುಮುಖ್ಯ ಪಾತ್ರ ವಹಿಸುತ್ತದೆ. ಅದಕ್ಕಾಗಿ, ಸಾಲ ನೀಡುವ ಮತ್ತು ಪಡೆಯುವ ಕಾರಣಗಳ ಬಗ್ಗೆ ಹಾಗೂ ಅದರ ಬಳಕೆಯ ಬಗ್ಗೆ ಸಾಲ ನೀಡುವ ಸಂಸ್ಥೆಗಳು ನಿಗಾ ವಹಿಸಬೇಕು.

ಕೃಷಿ ಬಂಡವಾಳ ತಗ್ಗಿಸುವುದು

ಕೃಷಿ ಬಂಡವಾಳ ತಗ್ಗಿಸುವುದು

ಕೃಷಿ ಬಂಡವಾಳವನ್ನು ತಗ್ಗಿಸುವ ಕ್ರಮಗಳ ಬಗ್ಗೆ ಯೋಚಿಸಬೇಕು, ಮಷಿನರಿಗಳಿಂದ ಶೇಕಡ 40ರಷ್ಟು ಬಂಡವಾಳ ಉಳಿಸಬಹುದು ಎನ್ನುವುದಾದರೆ ಉಳಿದ ವಿಭಾಗಗಳ ಬಗ್ಗೆ ಚಿಂತನೆ ನಡೆಸಬೇಕು.

ಮಳೆಯಾಧರಿತ ಕೃಷಿ

ಮಳೆಯಾಧರಿತ ಕೃಷಿ

ಕೃಷಿಯೆಂದರೆ ಕೇವಲ ನೀರಾವರಿ ಅಲ್ಲ, ನಮ್ಮ ದೇಶದಲ್ಲಿ ಅರ್ಧಕ್ಕಿಂತ ಹೆಚ್ಚು ಭೂಮಿ ಇನ್ನೂ ಮಳೆ ಆಧಾರಿತ ಆಗಿರುವುದರಿಂದ ಮಳೆ ಆಧರಿಸಿ ಬೆಳೆಯುವ ಬೇಸಾಯದಲ್ಲಿನ ಬದಲಾವಣೆಗಳ ಬಗ್ಗೆ ಸಂಶೋಧನೆಗಳು ನಡೆಯಲಿ.

ಉತ್ತಮ ಮಾರುಕಟ್ಟೆ ವ್ಯವಸ್ಥೆ

ಉತ್ತಮ ಮಾರುಕಟ್ಟೆ ವ್ಯವಸ್ಥೆ

ಈಗಾಗಲೇ ಕರ್ನಾಟಕದಲ್ಲಿ ಕೃಷಿ ಇಲಾಖೆ ಪರಿಚಯಿಸಿರುವ ಆನ್‍ಲೈನ್ ಮಾರುಕಟ್ಟೆ ಉತ್ತಮವಾಗಿದ್ದು, ಮುಂದಿನ ದಿನಗಳಲ್ಲಿ ಚಿಕ್ಕ ಮಾರಾಟಗಾರರಿಗೆ ಅನುಕೂಲವಾಗುವಂತೆ ರೀಟೈಲ್ ಮಾರುಕಟ್ಟೆ, ಶೇಖರಣಾ ಉಗ್ರಾಣ ಮತ್ತು ಚಿಕ್ಕ ರೈತರನ್ನು ಬೆಸೆಯುವ ಕಾರ್ಯಗಳಾಗಬೇಕು.

ಉಪ ಕಸುಬು

ಉಪ ಕಸುಬು

ಪ್ರತಿಯೊಬ್ಬ ರೈತ, ತನ್ನ ಕೃಷಿ ಜೊತೆಗೆ ಕೃಷಿ ಆಧಾರಿತ ಉಪ ಕಸುಬುಗಳು, ಜಾನುವಾರು ಸಾಕಣೆ ಸೇರಿದಂತೆ ಇತರೆ ಆದಾಯ ಮೂಲಗಳನ್ನು ಬೆಳೆಸಿಕೊಳ್ಳಬೇಕು ಎಂದು ಸಚಿವರು ತಮ್ಮ ಹತ್ತು ಸಲಹೆಗಳನ್ನು ನೀಡಿದರು

English summary
Minister Krishna Byre Gowda shares 10 suggestions to how to double the income of Farmers of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X