ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೋಂದಣಿ ಸಂಖ್ಯೆ ಇದ್ರೆ ಸಾಕು, ಒಂದೆ ಕ್ಲಿಕ್‌ನಲ್ಲಿ ಎಲ್ಲ ಮಾಹಿತಿ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್. 16: ಸಾಲ ಮಾಡಿ ಹೊಸ ವಾಹನ ಖರೀದಿಸಿದರೆ ಮುಂದೆ ಬ್ಯಾಂಕ್ ಬಡ್ಡಿ ಕಟ್ಟುವುದರಲ್ಲೇ ಅರ್ಧ ಆಯುಷ್ಯ ಕಳೆದುಹೋಗುತ್ತದೆ ಎಂಬ ಆತಂಕ ಎಲ್ಲರಲ್ಲೂ ಇರುತ್ತದೆ. ಅದು ದ್ವಿಚಕ್ರ ವಾಹನ ಆಗಿರಬಹುದು, ಇಲ್ಲವೇ ನಾಲ್ಕು ಚಕ್ರದ ವಾಹನ ಇರಬಹುದು.

ಆದರೆ ಸೆಕೆಂಡ್ ಹ್ಯಾಂಡ್ ವಾಹನವ ಖರೀದಿ ಮಾಡಲು ಮನಸ್ಸು ಸುಲಭವಾಗಿ ಒಪ್ಪಿಕೊಳ್ಳಲ್ಲ. ಖರೀದಿಸುತ್ತಿರುವ ವಾಹನ ಯಾರ ಹೆಸರಲ್ಲಿದೆ, ಅವರು ಎಷ್ಟನೆಯ ಓನರ್, ಅದು ಯಾವ ಆರ್.ಟಿ.ಓ ದಲ್ಲಿ ನೋಂದಣಿ ಆಗಿದೆ, ಅದರ ದಿನಾಂಕ, ಎಂಜನ್ ನಂ., ಚಾಸಿ ನಂ, ವಾಹನದ ವ್ಯಾಲಿಡಿಟಿ, ಯಾವುದಾದರೂ ಹಣಕಾಸು ಸಂಸ್ಥೆಯ ಸಾಲ ಬಾಕಿ ಇದೆಯೇ... ಇಂಥ ನೂರಾರು ಪ್ರಶ್ನೆಗಳಿರುತ್ತವೆ. ಮಧ್ಯವರ್ತಿಗಳನ್ನು ನಂಬುವಂಥ ಸ್ಥಿತಿಯೂ ಈಗಿಲ್ಲ.[ಎಲ್ ಪಿಜಿ ಜೊತೆ ಆಧಾರ್ ನಂಬರ್ ಸೇರಿಸುವುದು ಹೇಗೆ?]

ಹೊಸ ವಾಹನ ಖರೀದಿ ಮಾಡಲು ಸಾಲ ಮಾಡಲು ಸಿದ್ಧರಿಲ್ಲ, ಹಳೇ ವಾಹನದ ದಾಖಲೆ ನಾವೇ ಪರಿಶೀಲಿಸಿದರೆ ಖರೀದಿ ಮಾಡಬಹುದು ಎಂಬ ಅಂತಿಮ ಹಂತಕ್ಕೆ ಮನಸ್ಸು ಬರುತ್ತದೆ. ಹಾಗಾದರೆ ಕುಳಿತಲ್ಲಿಯೇ ಈ ಎಲ್ಲ ದಾಖಲೆಗಳ ಪರಿಶೀಲನೆ ಸಾಧ್ಯವಿದೆಯೇ?

ಹೌದು ರಾಜ್ಯ ಸರ್ಕಾರ ಮತ್ತು ಆರ್ ಟಿಒ ಒಂದಾಗಿ ಇಂಥದ್ದೊಂದು ವಿನೂತನ ಆಯ್ಕೆಯನ್ನು ಸಾರಿಗೆ ಇಲಾಖೆ ವೆಬ್ ತಾಣದಲ್ಲಿ ಬಿಟ್ಟಿದೆ. ಅದರೆ ಬಳಕೆ ಹೇಗೆ ಎಂದು ನೋಡಿಕೊಂಡು ಬರೋಣ...

ವಾಹನದ ಮಾಹಿತಿ ತಿಳಿದುಕೊಳ್ಳುವುದು ಹೇಗೆ?

ವಾಹನದ ಎಲ್ಲ ಮಾಹಿತಿ ಇಲ್ಲಿ ಲಭ್ಯ

ವಾಹನದ ಎಲ್ಲ ಮಾಹಿತಿ ಇಲ್ಲಿ ಲಭ್ಯ

ಮೊದಲು http://rto.kar.nic.in/ ಅಂದರೆ ಆರ್ ಟಿಒದ ವೆಬ್ ತಾಣಕ್ಕೆ ಪ್ರವೇಶ ಪಡೆದುಕೊಳ್ಳಿ. ಆಗ ನಿಮ್ಮ ಎದುರಿಗೆ ನೂರಾರು ಆಯ್ಕೆಗಳು ತೆರೆದುಕೊಳ್ಳುತ್ತವೆ.

ವೆಹಿಕಲ್ ಸರ್ಚ್ ಆಯ್ಕೆ ಮಾಡಿ

ವೆಹಿಕಲ್ ಸರ್ಚ್ ಆಯ್ಕೆ ಮಾಡಿ

ಎಡಬದಿಗೆ ಕಾಣುವ ಆಯ್ಕೆಗಳಲ್ಲಿ ವೆಹಿಕಲ್ ಸರ್ಚ್ ಆಯ್ಕೆಯನ್ನು ಕ್ಲಿಕ್ ಮಾಡಿದಾಗ ಅದು ಮತ್ತೊಂದು ಪೇಜ್ ಗೆ ನಿಮ್ಮನ್ನು ಕರೆದುಕೊಂಡು ಹೋಗುತ್ತದೆ.

ಹುಡುಕುವುದು ಹೇಗೆ

ಹುಡುಕುವುದು ಹೇಗೆ

ವಾಹನದ ನೋಂದಣಿ ಸಂಖ್ಯೆ, ಚಾಸಿ ಸಂಖ್ಯೆ, ಎಂಜಿನ್ ನಂಬರ್ ಯಾವುದು ನಿಮ್ಮ ಬಳಿ ಇದ್ದರೂ ವಾಹನದ ಸಕಲ ಮಾಹಿತಿ ಲಭ್ಯವಾಗುತ್ತದೆ. ಮೂರರಲ್ಲಿ ಒಂದು ಆಯ್ಕೆ ಆಯ್ದುಕೊಂಡು ಮುಂದುವರಿಯಬೇಕಾಗುತ್ತದೆ.

ನೋಂದಣಿ ಸಂಖ್ಯೆ ಆಯ್ದುಕೊಂಡರೆ

ನೋಂದಣಿ ಸಂಖ್ಯೆ ಆಯ್ದುಕೊಂಡರೆ

ಉದಾಹರಣೆಗೆ ನಿಮಗೆ ಕೆಎ 01 ಎ 999 ನೋಂದಣಿ ಸಂಖ್ಯೆಯ ವಾಹನದ ಮಾಹಿತಿ ಬೇಕು ಎಂದಾದರೆ, ಮೊದಲು ಕಾಣುವ ಬಾಕ್ಸ್ ನಲ್ಲಿ ಕೆಎ 01ಎ ಮತ್ತು ಎರಡನೇ ಬಾಕ್ಸ್ ನಲ್ಲಿ 999ನ್ನು ದಾಖಲು ಮಾಡಬೇಕು.

ನಿರ್ದೇಶನ ಪಾಲಿಸಿ

ನಿರ್ದೇಶನ ಪಾಲಿಸಿ

ಆಲ್ ಲೈನ್ ತಾಣ ನಿಮಗೆ ಕೆಳಗೆ ಬಾಕ್ಸ್ ನಲ್ಲಿ ತೋರಿಸಿದ ಅಂಕಿಗಳನ್ನು ತುಂಬಲು ಹೇಳುತ್ತದೆ. ಅದರಂತೆ ವಾಹನದ ನೋಂದಣಿ ಸಂಖ್ಯೆ ಮತ್ತು ತಿಳಿಸಿದ ಕೋಡ್ ನ್ನು ದಾಖಲು ಮಾಡಿ ಸರ್ಚ್ ಬಟನ್ ಕ್ಲಿಕ್ ಮಾಡಬೇಕು. ಆಗ ಎಲ್ಲ ಮಾಹಿತಿ ಲಭ್ಯವಾಗುತ್ತದೆ.

English summary
The Karnataka Transport Department enables yet another feature to its citizens. You can now know the details of the registration or financier on a vehicle. Just visit the website at http://rto.kar.nic.in/ and click on Vehicle search and enter the vehicle number. You can see all the details of the vehicle as available in the Transport Database as on date. This facility is extremely useful for people who want to buy a second hand vehicle or want to know the details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X