ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್‌ ಸರ್ಕಾರದ 'ಗೃಹ ಲಕ್ಷ್ಮೀ' ಯೋಜನೆ ಅರ್ಜಿ ಬಿಡುಗಡೆ: ಭರ್ತಿ ಹೇಗೆ ತಿಳಿಯಿರಿ

|
Google Oneindia Kannada News

ಬೆಂಗಳೂರು, ಜೂನ್ 08: ಮಹಿಳೆಯರ ಭಾರೀ ನಿರೀಕ್ಷೆಯ ಮಾಸಿಕ 2000 ರೂಪಾಯಿ ನೀಡುವ 'ಗೃಹಲಕ್ಷ್ಮಿ' ಯೋಜನೆ ಜಾರಿ ಮಾಡಿರುವ ರಾಜ್ಯ ಸರ್ಕಾರ ಇ-ಅರ್ಜಿ ನಮೂನೆಯನ್ನು ಬಿಡುಗಡೆ ಮಾಡಿದೆ. ಈ ಅರ್ಜಿಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

ಅರ್ಜಿ ನೋಡಿದರೆ ಗೃಹಲಕ್ಷ್ಮಿ ಯೋಜನೆಯಡಿ ಮಾಸಿಕವಾಗಿ ಹಣ ಪಡೆಯುವವರು ಯಾರು, ಮನೆಯ ಅತ್ತೆಯೇ? ಸೊಸೆಯೇ ಎಂಬುದನ್ನು ಅವರಿಗೇ ಬಿಟ್ಟಂತೆ ಕಾಣಿಸುತ್ತದೆ. ಈ ಅರ್ಜಿ ಸಲ್ಲಿಕೆಗೆ ಜೂನ್ 15ರಿಂದ ಜುಲೈ 15ರವರೆಗೆ ಅವಕಾಶ ಇದೆ. ಸೇವಾಸಿಂಧು ಪೋರ್ಟ್‌ಲ್ ಮೂಲಕ ಅರ್ಜಿ ಸಲ್ಲಿಸಬಹುದು. ನಂತರ ಆಗಸ್ಟ್‌ 15ರಂದು ಯಜಮಾನಿಯ ಖಾತೆಗೆ ಮೊದಲ 2000ರೂ. ಜಮೆಯಾಗಲಿದೆ ಎಂದು ಸರ್ಕಾರ ಈ ಹಿಂದೆಯೇ ಹೇಳಿದೆ.

gruha lakshmi scheme application form

ವಿಶೇಷವೆಂದರೆ ಅರ್ಜಿ ನಮೂನೆಯಲ್ಲಿ ಕೇಳಲಾಗಿರುವ ಜಾತಿ ಕಾಲಂ ಹೆಚ್ಚು ಚರ್ಚೆಗೆ ಬರುತ್ತಿದೆ. ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಇತರೆ ಕಾಲಂಗಳನ್ನು ಕೊಡಲಾಗಿದೆ. ಗ್ಯಾರಂಟಿ ಯೋಜನೆಗಳು ಒಂದು ಜಾತಿ ಧರ್ಮಕ್ಕೆ ಸೀಮಿತವಲ್ಲ ಎನ್ನುವ ಕಾಂಗ್ರೆಸ್ ಇದೀಗ ಅರ್ಜಿಯಲ್ಲಿ ಜಾತಿ ಕಾಲಂ ನೀಡಿ ಭರ್ತಿಗೆ ಸೂಚಿಸಿದೆ.

ಅರ್ಜಿಯಲ್ಲಿ ಮೊದಲಿಗೆ ಮನೆಯ ಯಜಮಾನಿಯ ಹೆಸರು ಮತ್ತು ವಿಳಾಸ ಭರ್ತಿಗೆ ಕೇಳಲಾಗಿದೆ. ಅದರೊಂದಿಗೆ ಆಧಾರ್, ಚುನಾವಣಾ ಗುರುತಿನ ಚೀಟಿ, ಪಡಿತರ ಸಂಖ್ಯೆ ನಮೂದಿಸುವಂತೆ ಕೇಳಲಾಗಿದೆ. ಅಷ್ಟೇ ಅಲ್ಲದೇ ಉದ್ಯೋಗ, ಪತಿಯ ಹೆಸರು ನಮೂದಿಸಬೇಕು. ಅದರೊಂದಿಗೆ ಪತಿಯ ಆಧಾರ್ ಮತ್ತು ಚುನಾವಣಾ ಗುರುತಿನ ಸಂಖ್ಯೆ ನೀಡಬೇಕೆಂದು ತಿಳಿಸಲಾಗಿದೆ.

ಆಧಾರ್‌ನೊಂದಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್‌ ಅನ್ನು ನೀಡುವುದು ಕಡ್ಡಾಯ ಮಾಡಲಾಗಿದೆ. ಇತರೆ ಮೊಬೈಲ್ ನಂಬರ್ ಇದ್ದರೆ ಅದನ್ನು ನಮೂದಿಸಬೇಕು. ಜೊತೆಗೆ ಬ್ಯಾಂಕ್ ಖಾತೆ ಸಂಖ್ಯೆ ಜೊತೆಗೆ ಮನೆ ಯಜಮಾನಿಯ ಆಧಾರ್ ಕಾರ್ಡ್ ಪ್ರತಿ, ಚುನಾವಣೆ ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್ ಪ್ರತಿ, ಪತಿಯ ಆಧಾರ್ ಕಾರ್ಡ್ ಪ್ರತಿ ಮತ್ತು ಚುನಾವಣಾ ಗುರುತಿನ ಚೀಟಿ ನೀಡಬೇಕು ಎಂದು ಸರ್ಕಾರ ಅರ್ಜಿಯಲ್ಲಿ ಉಲ್ಲೇಖಿಸಿದೆ.

ಒಂದು ವೇಳೆ ಮನೆಯ ಯಜಮಾನಿ ನೀಡಿದ ಮಾಹಿತಿ, ದಾಖಲೆಗಳು ಸುಳ್ಳಾಗಿದ್ದರೇ ಅಂತವರಿಗೆ ಸರ್ಕಾರದಿಂದ ಹಣ ಜಮೆಯಾದರೆ ಮರು ಪಾವತಿಗೆ ಸಿದ್ಧಳೆಂದು ದೃಢೀಕರಣ ಸಹ ಮಾಡಿಕೊಳ್ಳಲು ಅರ್ಜಿಯಲ್ಲಿ ಸ್ವಯಂ ಘೋಷಣೆ ನಮೂದಿಸಲಾಗಿದೆ.

English summary
Gruha Lakshmi Scheme Form Released: How to apply to get 2000 Rs money through Gruha Lakshmi Scheme of Congress Govt, Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X