ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಳೇ ವಾಹನ ಮಾರ್ತೀರಾ? ಈ ಅಂಶ ಗಮನದಲ್ಲಿರಲಿ

By Kiran B Hegde
|
Google Oneindia Kannada News

ಬೆಂಗಳೂರು, ಜ. 22: ಹಳೇ ವಾಹನ ಮಾರಿ ಹೊಸತು ಖರೀದಿಸಲು ಹೊರಟಿದ್ದೀರಾ? ಹಾಗಿದ್ದರೆ ಎಚ್ಚರ ವಹಿಸಿ. ದಾಖಲೆಪತ್ರಗಳನ್ನು ಸರಿಯಾಗಿ ನಿರ್ವಹಿಸದಿದ್ದರೆ ಮುಂದೊಂದು ದಿನ ನಿಮಗೇ ಸಮಸ್ಯೆ ಉಂಟಾಗಬಹುದು...

ಈ ಕುರಿತು ಬೆಂಗಳೂರು ಪೊಲೀಸರು ಈಗಾಗಲೇ ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣದಲ್ಲಿ ಜಾಗೃತಿ ಆರಂಭಿಸಿದೆ. ದಾಖಲಾತಿ ಕುರಿತು ವಹಿಸಬೇಕಾದ ಎಚ್ಚರಿಕೆಯನ್ನು ವಿವರವಾಗಿ ತಿಳಿಸಿದೆ. [ವೆಬ್ ಸೈಟ್ ನಿಂದಲೂ ವಾಟ್ಸಾಪ್ ಬಳಸಿ]

bike

ಹಳೇ ವಾಹನ ಮಾರಾಟ ಸಂದರ್ಭ ಈ ಅಂಶಗಳತ್ತ ಗಮನವಿಟ್ಟು ವ್ಯವಹರಿಸಿ...

  • ಭಾರತೀಯ ಮೋಟರ್ ವಾಹನ (ಐಎಂವಿ) ಕಾಯಿದೆ 50 ರ ಪ್ರಕಾರ ವಾಹನ ಮಾರಾಟ ಸಂದರ್ಭ ದಾಖಲೆಗಳನ್ನು ವರ್ಗಾಯಿಸುವ ವ್ಯಕ್ತಿಯು ಮಾಲೀಕತ್ವ ವರ್ಗಾಯಿಸುತ್ತಿರುವ ಕುರಿತು 14 ದಿನಗಳ ಒಳಗೆ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಓ) ಗೆ ತಿಳಿಸಬೇಕು. ಜೊತೆಗೆ ಮಾಲೀಕತ್ವ ಬದಲಾವಣೆಯಾದ 30 ದಿನಗಳ ಒಳಗೆ ಎಲ್ಲ ಅಗತ್ಯ ದಾಖಲೆಗಳನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಸಲ್ಲಿಸಬೇಕು. [ಮೊಬೈಲ್ ಒನ್ ಸೇವೆ ಪಡೆಯುವುದು ಹೇಗೆ]
  • ವಾಹನದ ಮಾಲೀಕತ್ವ ಬದಲಾಯಿಸುವ ಕುರಿತು ವರ್ಗಾಯಿಸುವವ ಹಾಗೂ ವರ್ಗಾಯಿತ ವ್ಯಕ್ತಿ ಇಬ್ಬರೂ ಪ್ರಕ್ರಿಯೆ ನಡೆಸುವ ಮೊದಲು ಅರ್ಜಿ ಸಲ್ಲಿಸಬೇಕು. ವರ್ಗಾವಣೆ ಮಾಡುವ ವ್ಯಕ್ತಿ ಫಾರ್ಮ್ 29 ತುಂಬಬೇಕು ಹಾಗೂ ವರ್ಗಾಯಿತ ವ್ಯಕ್ತಿಯು ಫಾರ್ಮ್ 30 ತುಂಬಬೇಕು.
  • ವಾಹನ ನೋಂದಣಿ ಸಂಖ್ಯೆಯು ವರ್ಗಾಯಿತ ವ್ಯಕ್ತಿಯ ಹೆಸರಿಗೆ ಬದಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ವರ್ಗಾವಣೆ ಮಾಡುವ ವ್ಯಕ್ತಿಯದ್ದೇ ಹೊಣೆಗಾರಿಕೆ.
  • ಬದಲಾದ ಹೆಸರು "B" ನೋಂದಣಿ ಪುಸ್ತಕದಲ್ಲಿ ದಾಖಲಾಗಿದೆ ಹಾಗೂ ಆಗಿರುವ ಬದಲಾವಣೆಯು ಆರ್‌ಸಿ ಬುಕ್‌ನಲ್ಲಿ ನಮೂದಿಸಲ್ಪಟ್ಟಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. "B" ನೋಂದಣಿ ಅಥವಾ ಆರ್‌ಸಿ ಪುಸ್ತಕದ ನಕಲು ಪ್ರತಿಯೊಂದನ್ನು ಇಟ್ಟುಕೊಳ್ಳಿ. [30 ಸೆಕೆಂಡ್ ನಲ್ಲಿ ತತ್ಕಾಲ್ ಬುಕ್ಕಿಂಗ್ ಹೇಗೆ]
  • ದಾಖಲೆಯಲ್ಲಿ ಮಾಲೀಕತ್ವ ಬದಲಾವಣೆ ಪ್ರಕ್ರಿಯೆಯು ಇನ್ನಿತರ ಯಾವುದೇ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದೆಯೇ ಎಂಬುದನ್ನು ಅಧಿಕಾರಿಯನ್ನು ಕೇಳಿ ಖಚಿತಪಡಿಸಿಕೊಳ್ಳಿ.
English summary
Sell your vehicle with proper documentation. Confirm with Regional Transport Officer about any traffic violation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X