ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಸಾಲೆ ದೋಸೆ ತಿನ್ನಲು ಹೋಗಿ ಸಿಕ್ಕಿ ಬಿದ್ದಿದ್ದ ಡಾ. ರೇವಂತ್!

|
Google Oneindia Kannada News

ಬೆಂಗಳೂರು, ಫೆಬ್ರವರಿ 25 : ಕಡೂರಿನ ದಂತವೈದ್ಯ ಡಾ. ರೇವಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿಯನ್ನು ಕೊಂದಿದ್ದ ಅವರು ಪೊಲೀಸರು ವಿಚಾರಣೆಗೆ ಬರುವಂತೆ ನೋಟಿಸ್ ನೀಡುತ್ತಿದ್ದಂತೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡರು.

ಡಾ. ರೇವಂತ್ ಮತ್ತು ಹರ್ಷಿತಾ ಆತ್ಮಹತ್ಯೆ, ಕವಿತಾ ಕೊಲೆ ಪ್ರಕರಣದ ಹಲವಾರು ವಿಚಾರಗಳು ಈಗ ಬಹಿರಂಗವಾಗುತ್ತಿದೆ. ಫೆಬ್ರವರಿ 17ರಂದು ಪತ್ನಿ ಕವಿತಾಳನ್ನು ಡಾ. ರೇವಂತ್ ಇಂಜೆಕ್ಷನ್ ಕೊಟ್ಟು ಪ್ರಜ್ಞೆ ತಪ್ಪಿಸಿ, ಬಳಿಕ ಕತ್ತು ಕೊಯ್ದು ಹತ್ಯೆ ಮಾಡಿದ್ದರು.

ಒಂದು ಕೊಲೆ, ಎರಡು ಆತ್ಮಹತ್ಯೆ; ಡಾಕ್ಟರ್ ಜೀವನದ ದುರಂತ ಕಥೆ!ಒಂದು ಕೊಲೆ, ಎರಡು ಆತ್ಮಹತ್ಯೆ; ಡಾಕ್ಟರ್ ಜೀವನದ ದುರಂತ ಕಥೆ!

ಈ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಡಾ. ರೇವಂತ್ ಹರ್ಷಿತಾಗೆ ಕಳಿಸಿದ್ದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ. ಕಡೂರಿನಿಂದ ಬೆಂಗಳೂರಿನಲ್ಲಿದ್ದ ಹರ್ಷಿತಾ ಮನೆಗೆ ಆಭರಣ ಕೋರಿಯರ್ ಮಾಡಲಾಗಿತ್ತು.

ಹರ್ಷಿತಾ ಆತ್ಮಹತ್ಯೆ ಪ್ರಕರಣಕ್ಕೆ ಸ್ಫೋಟಕ ತಿರುವುಹರ್ಷಿತಾ ಆತ್ಮಹತ್ಯೆ ಪ್ರಕರಣಕ್ಕೆ ಸ್ಫೋಟಕ ತಿರುವು

ಹರ್ಷಿತಾ ಮತ್ತು ಡಾ. ರೇವಂತ್ ನಡುವೆ ಅಕ್ರಮ ಸಂಬಂಧವಿತ್ತು. ಫೆಬ್ರವರಿ 22ರಂದು ನೇಣು ಬಿಗಿದುಕೊಂಡು ಹರ್ಷಿತಾ ಆತ್ಮಹತ್ಯೆ ಮಾಡಿಕೊಂಡಿದ್ದರು. ಪತ್ನಿಯನ್ನು ಹತ್ಯೆ ಮಾಡಿದ್ದ ಡಾ. ರೇವಂತ್ ಸಿಕ್ಕಿ ಬಿದ್ದಿದ್ದು ಹೇಗೆ? ಎಂಬುದೇ ಒಂದು ರೋಚಕ ಕಥೆ.

ಪತ್ನಿ ಕೊಂದು ಆಭರಣ ಕೋರಿಯರ್ ಮಾಡಿದ್ದ ಡಾ. ರೇವಂತ್!ಪತ್ನಿ ಕೊಂದು ಆಭರಣ ಕೋರಿಯರ್ ಮಾಡಿದ್ದ ಡಾ. ರೇವಂತ್!

ಫೆಬ್ರವರಿ 17ರಂದು ನಡೆದಿದ್ದೇನು?

ಫೆಬ್ರವರಿ 17ರಂದು ನಡೆದಿದ್ದೇನು?

ಹರ್ಷಿತಾ ಮತ್ತು ಡಾ. ರೇವಂತ್ ನಡುವೆ ಅಕ್ರಮ ಸಂಬಂಧವಿತ್ತು. ಈ ಕುರಿತು ರೇವಂತ್ ಜೊತೆ ಪತ್ನಿ ಕವಿತಾ ಜಗಳವಾಡಿದ್ದರು. ಮೊದಲೇ ರೂಪಿಸಿದ ಸಂಚಿನಂತೆ ರೇವಂತ್ ಫೆಬ್ರವರಿ 17ರಂದು ಮಧ್ಯಾಹ್ನ 3.22ಕ್ಕೆ ಮನೆಗೆ ಬಂದಿದ್ದರು. ಕವಿತಾಗೆ ಇಂಜೆಕ್ಷನ್ ಕೊಟ್ಟು ಪ್ರಜ್ಞೆ ತಪ್ಪಿಸಿ, ಬಳಿಕ ಕಾರು ಶೆಡ್‌ಗೆ ಎಳೆದುಕೊಂಡು ಹೋಗಿ ಕತ್ತು ಕೊಯ್ದು ಹತ್ಯೆ ಮಾಡಿದ್ದರು.

ಮನೆಗೆ ಬಂದ ಮಗ

ಮನೆಗೆ ಬಂದ ಮಗ

ಡಾ. ರೇವಂತ್ ಮತ್ತು ಕವಿತಾ ದಂಪತಿಯ 5 ವರ್ಷದ ಮಗ 4.15ಕ್ಕೆ ಶಾಲೆಯಿಂದ ಮನೆಗೆ ಬಂದಿದ್ದ. ತಕ್ಷಣ ಮಗನನ್ನು ಕರೆದುಕೊಂಡು, ಮನೆಯಲ್ಲಿದ್ದ ಕೆಲವು ಆಭರಣ ತೆಗದುಕೊಂಡು ಡಾ. ರೇವಂತ್ ಮನೆಯಿಂದ ಹೊರ ಹೋಗಿದ್ದರು. ಮಗನಿಗೆ ಹೋಟೆಲ್‌ನಲ್ಲಿ ಮಸಾಲೆ ದೋಸೆ ಕೊಡಿಸಿದ್ದರು. ಬಳಿಕ ಪೊಲೀಸರಿಗೆ ಕರೆ ಮಾಡಿ ಪತ್ನಿಯನ್ನು ಯಾರೋ ಕೊಲೆ ಮಾಡಿ, ಆಭರಣ ದೋಚಿದ್ದಾರೆ ಎಂದು ಮಾಹಿತಿ ನೀಡಿದ್ದರು.

ಮಗ ನೀಡಿದ ಮಾಹಿತಿ

ಮಗ ನೀಡಿದ ಮಾಹಿತಿ

ಕವಿತಾ ಕೊಲೆ ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ಕವಿತಾ, ಡಾ. ರೇವಂತ್ ಪುತ್ರನನ್ನು ವಿಚಾರಣೆ ನಡೆಸಿದ್ದರು. ಆಗ ಆತ ಫೆಬ್ರವರಿ 17ರಂದು 4.15ಕ್ಕೆ ನಾನು ಮನೆಗೆ ಬಂದಾಗ ಅಮ್ಮ ಇರಲಿಲ್ಲ. ಅಪ್ಪ ಮಸಾಲೆ ದೋಸೆ ತಿನ್ನಲು ನನ್ನನ್ನು ಮಾತ್ರ ಕರೆದುಕೊಂಡು ಹೋಗಿದ್ದರು ಎಂಬ ಮಾಹಿತಿ ನೀಡಿದ್ದ. ಆಗ ಪೊಲೀಸರಿಗೆ ರೇವಂತ್ ಮೇಲೆ ಅನುಮಾನ ಹೆಚ್ಚಾಯಿತು. ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದರು.

ಕೋರಿಯರ್ ಮಾಡಿದ್ದ ಆಭರಣ

ಕೋರಿಯರ್ ಮಾಡಿದ್ದ ಆಭರಣ

ಫೆಬ್ರವರಿ 17ರಂದು ಜ್ಯುವೆಲ್ಲರಿ ಶಾಪ್‌ನಿಂದ ಮನೆಗೆ ಬಂದಿದ್ದ ರೇವಂತ್ ಪತ್ನಿಯನ್ನು ಕೊಲೆ ಮಾಡಿದ ಬಳಿಕ ಮನೆಯಲ್ಲಿದ್ದ ಕೆಲವು ಆರಭರಣ ತೆಗೆದುಕೊಂಡು ಹೋಗಿದ್ದ. ಅದನ್ನು ಕಡೂರಿನಿಂದ ಬೆಂಗಳೂರಿನಲ್ಲಿದ್ದ ಹರ್ಷಿತಾಗೆ ಕೋರಿಯರ್ ಮಾಡಿದ್ದ. ಮಂಗಳವಾರ ಆಭರಣಗಳನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ಪ್ರಕರಣದ ಪ್ರಸ್ತುತ ಅಂಶಗಳು

ಪ್ರಕರಣದ ಪ್ರಸ್ತುತ ಅಂಶಗಳು

ಡಾ. ರೇವಂತ್ ಪತ್ನಿ ಕವಿತಾಳನ್ನು ಹತ್ಯೆ ಮಾಡಿದ್ದಾರೆ. ಪೊಲೀಸರು ನೋಟಿಸ್ ನೀಡಿದಾಗ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಅವರು ಮಾಡಿಕೊಂಡಿದ್ದಾರೆ. ಡಾ. ರೇವಂತ್ ಸಾವಿನ ಸುದ್ದಿ ಕೇಳಿದ ಹರ್ಷಿತಾ ಶನಿವಾರ ರಾಜರಾಜೇಶ್ವರಿ ನಗರದ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಂದೆ-ತಾಯಿಯನ್ನು ಕಳೆದುಕೊಂಡು 5 ವರ್ಷದ ಮಗು ಅನಾಥವಾಗಿದೆ.

English summary
How police suspect that Kadur based dentist Dr.Revanth killed his wife Kavitha. Tragic end for dentist Dr.Revanth case after he committed suicide.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X