ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

11 ದಿನಗಳ ಬೆಳಗಾವಿ ಅಧಿವೇಶನಕ್ಕೆ ಖರ್ಚಾದ ಹಣವೆಷ್ಟು?

|
Google Oneindia Kannada News

ಬೆಳಗಾವಿ, ಡಿಸೆಂಬರ್ 21: ಬೆಳಗಾವಿ ಅಧಿವೇಶನ ಇಂದಿಗೆ ಮುಕ್ತಾಯವಾಗಿದೆ, ಇಂದು ಮತ್ತು ನಿನ್ನೆ ಯಾವುದೇ ಉಪಯುಕ್ತ ಚರ್ಚೆಯೇ ಇಲ್ಲದೆ ಅಂತ್ಯಗೊಂಡಿದೆ. ಎರಡು ದಿನದ ಅಧಿವೇಶನ ಯಾವುದೇ ಪ್ರತಿಫಲ ಇಲ್ಲದೆ ಅಂತ್ಯವಾಗಿದೆ.

ಅಧಿವೇಶನ ನಡೆಯುವುದು ಸಾರ್ವಜನಿಕರ ಹಣದಲ್ಲಿ, ಅದು ಹತ್ತು ದಿನದ ಅಧಿವೇಶನ ನಡೆಯಲು ಕೋಟ್ಯಂತರ ಹಣ ಖರ್ಚಾಗುತ್ತದೆ. ಅಂದರೆ ಕೋಟ್ಯಂತರ ರೂಪಾಯಿ ಸಾರ್ವಜನಿಕರ ಹಣ ಖರ್ಚು ಮಾಡಿ ಅಧಿವೇಶನ ನಡೆಸಲಾಗುತ್ತದೆ.

ರೈತ ಮಹಿಳೆ ಬಗ್ಗೆ ಹೇಳಿಕೆ: ಸದನದಲ್ಲಿ ಕುಮಾರಸ್ವಾಮಿ ಸ್ಪಷ್ಟೀಕರಣರೈತ ಮಹಿಳೆ ಬಗ್ಗೆ ಹೇಳಿಕೆ: ಸದನದಲ್ಲಿ ಕುಮಾರಸ್ವಾಮಿ ಸ್ಪಷ್ಟೀಕರಣ

ಆದರೆ ಅನವಶ್ಯಕ ಗಲಾಟೆ, ಸದನದೊಳಗೆ ರಾಜಕೀಯ ಮಾಡಿ ಉಪಯುಕ್ತ ಚರ್ಚೆಗಳು ಮಾಡದೇ ಹೋದಾಗ ಅಲ್ಲಿ ವ್ಯಯವಾಗುವುದು ಸಾರ್ವಜನಿಕ ಹಣವೇ. ಒಂದು ದಿನ ಅಧಿವೇಶನ ನಡೆಸಲು ಬರೋಬ್ಬರಿ 2 ಕೋಟಿ ರೂಪಾಯಿ ಸರ್ಕಾರ ಖರ್ಚು ಮಾಡುತ್ತದೆ.

ಅಧಿವೇಶನಕ್ಕೆ ಒಂದು ದಿನಕ್ಕೆ 2 ಕೋಟಿ ಬೇಕು

ಅಧಿವೇಶನಕ್ಕೆ ಒಂದು ದಿನಕ್ಕೆ 2 ಕೋಟಿ ಬೇಕು

ಒಂದು ದಿನಕ್ಕೆ 2 ಕೋಟಿ ಅಂದರೆ ಈ ಬಾರಿ ಬೆಳಗಾವಿ ಅಧಿವೇಶನ 11 ದಿನ ನಡೆಯಿತು. ಅಲ್ಲಿಗೆ ಬರೋಬ್ಬರಿ 22 ಕೋಟಿ ರೂಪಾಯಿ ಸಾರ್ವಜನಿಕ ಹಣವನ್ನು ಸರ್ಕಾರ ವೆಚ್ಚ ಮಾಡುತ್ತದೆ. ಶಾಸಕರು, ಅಧಿಕಾರಿಗಳು, ಸಿಬ್ಬಂದಿಗಳ ದಿನಭತ್ಯೆ , ಪ್ರವಾಸ ಭತ್ಯೆಗಳು ಪ್ರತ್ಯೇಕ, ಇವಕ್ಕೆ ಪ್ರತಿದಿನ ಕನಿಷ್ಟ 10 ಲಕ್ಷ ಖರ್ಚಾಗುತ್ತದೆ.

ವಿಧಾನಪರಿಷತ್‌ ಉಪಸಭಾಪತಿಯಾಗಿ ಜೆಡಿಎಸ್‌ನ ಧರ್ಮೇಗೌಡ ಆಯ್ಕೆ ಖಚಿತ ವಿಧಾನಪರಿಷತ್‌ ಉಪಸಭಾಪತಿಯಾಗಿ ಜೆಡಿಎಸ್‌ನ ಧರ್ಮೇಗೌಡ ಆಯ್ಕೆ ಖಚಿತ

ಆಹಾರ, ನಿರ್ವಹಣೆ, ವಾಹನಗಳ ಖರ್ಚು ಪ್ರತ್ಯೇಕ

ಆಹಾರ, ನಿರ್ವಹಣೆ, ವಾಹನಗಳ ಖರ್ಚು ಪ್ರತ್ಯೇಕ

ಇವುಗಳ ಜೊತೆಗೆ ಇನ್ನೂ ಇತರೆ ಖರ್ಚುಗಳು, ಆಹಾರ, ನಿರ್ವಹಣೆ, ವಾಹನಗಳ ನಿರ್ವಹಣೆ ಇನ್ನಿತರ ಖರ್ಚುಗಳು ಇರುತ್ತವೆ. ಕಳೆದ ವರ್ಷ ಬೆಳಗಾವಿ ಅಧಿವೇಶನ ನಡೆಸಲು ಬರೋಬ್ಬರಿ 28 ಕೋಟಿ ರೂಪಾಯಿ ಖರ್ಚಾಗಿತ್ತು.

ಬೆಳಗಾವಿ : ಚರ್ಚೆ ನಡೆಯದೇ ಕೊನೆ ದಿನದ ಅಧಿವೇಶನ ಅಂತ್ಯ ಬೆಳಗಾವಿ : ಚರ್ಚೆ ನಡೆಯದೇ ಕೊನೆ ದಿನದ ಅಧಿವೇಶನ ಅಂತ್ಯ

'ಸದನ ಸರಿಯಾಗಿ ನಡೆಸುವುದು ಎಲ್ಲ ಪಕ್ಷಗಳ ಜವಾಬ್ದಾರಿ'

'ಸದನ ಸರಿಯಾಗಿ ನಡೆಸುವುದು ಎಲ್ಲ ಪಕ್ಷಗಳ ಜವಾಬ್ದಾರಿ'

ಇಷ್ಟೋಂದು ಹಣ ಖರ್ಚು ಮಾಡುವಾಗ ಜನರಿಗೆ ಉಪಯುಕ್ತವಾಗುವ ಚರ್ಚೆ ನಡೆಸಬೇಕಾದುದು ಆಡಳಿತ ಹಾಗೂ ವಿರೋಧ ಪಕ್ಷಗಳೆರಡರ ಜವಾಬ್ದಾರಿ ಆಗುತ್ತದೆ. ಆದರೆ ಈ ಬಾರಿ ಅಧಿವೇಶನದಲ್ಲಿ ಈ ರೀತಿಯ ಜವಾಬ್ದಾರಿ ಎರಡೂ ಪಕ್ಷಗಳಿಂದ ಕಂಡು ಬಂದಿದ್ದು ವಿರಳ.

ಡಿಸೆಂಬರ್ 10 ರಂದು ಅಧಿವೇಶನ ಆರಂಭವಾಯಿತು

ಡಿಸೆಂಬರ್ 10 ರಂದು ಅಧಿವೇಶನ ಆರಂಭವಾಯಿತು

ಡಿಸೆಂಬರ್ 10 ರಂದು ಬೆಳಗಾವಿ ಅಧಿವೇಶನ ಆರಂಭವಾಯಿತು. ಮೊದಲ ದಿನ ಅಗಲಿದ ನಾಯಕರಿಗೆ ಗೌರವ ಸೂಚಿಸಿ ಸದನ ಮುಂದೂಡಲಾಯಿತು. ಅಧಿವೇಶನದ ಮಧ್ಯದಲ್ಲಿ ಶನಿವಾರ ಮತ್ತು ಭಾನುವಾರ ರಜಾದಿನಗಳಿದ್ದವು, ಕೆಲವೆಡೆ ಕೆಲವು ಉಪಯುಕ್ತ ಚರ್ಚೆಗಳೂ ನಡೆದವು ಆದರೆ ಕೊನೆಯ ಎರಡು ದಿನವಂತೂ ಬರೀ ಗದ್ದಲದಲ್ಲಿಯೇ ಕಾಲಹರಣವಾಯಿತು.

English summary
Karnataka government spent 2 crore per day for Belgaum session. MLAs, officers, employees wages were seprate. This time session happen for 11 days and aproximatley more than 26 crore spent to run the session.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X