ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಮಾಜಿಕ ಜಾಲತಾಣಕ್ಕೆ ಚುನಾವಣಾ ನೀತಿ ಸಂಹಿತೆ ನಿಯಮಗಳು ಏನು?

|
Google Oneindia Kannada News

ಬೆಂಗಳೂರು, ಮಾರ್ಚ್‌ 16: ಚುನಾವಣೆ ನೀತಿ ಸಂಹಿತೆ ದೇಶದಾದ್ಯಂತ ಜಾರಿಯಾಗಿದೆ. ಸಾಮಾಜಿಕ ಜಾಲತಾಣಗಳಿಗೂ ಸಂಹಿತೆ ಅನ್ವಯವಾಗುತ್ತದೆ. ಆದರೆ ಸಾಮಾಜಿಕ ಜಾಲತಾಣ ಬಳಕೆದಾರರ ಯಾವ ಕ್ರಿಯೆಗಳು ನೀತಿ ಸಂಹಿತೆ ವ್ಯಾಪ್ತಿಗೆ ಬರುತ್ತವೆ ಮತ್ತು ಯಾವುದು ಬರುವುದಿಲ್ಲ ಎಂಬುದು ಬಹುತೇಕರಿಗೆ ಅರಿವಿಲ್ಲ.

ಚುನಾವಣಾ ಆಯೋಗವು ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ವಹಿಸಲು ಈ ಬಾರಿ ವಿಶೇಷ ತಂಡವನ್ನು ರಚಿಸಿದೆ, ಮತ್ತು ಸಾಮಾಜಿಕ ಜಾಲತಾಣ ಬಳಕೆದಾರರಿಗೆ ಹಲವು ನಿಯಮಗಳನ್ನು ವಿಧಿಸಿದೆ.

ಮದುವೆ, ಹುಟ್ಟುಹಬ್ಬ ಆಯೋಜಿಸಲು ಆಯೋಗದ ಅನುಮತಿ ಬೇಕಿಲ್ಲ ಮದುವೆ, ಹುಟ್ಟುಹಬ್ಬ ಆಯೋಜಿಸಲು ಆಯೋಗದ ಅನುಮತಿ ಬೇಕಿಲ್ಲ

ಸಾಮಾಜಿಕ ಜಾಲತಾಣದಲ್ಲಿ ರಾಜಕೀಯ ಅಭಿಪ್ರಾಯಗಳು ವ್ಯಕ್ತಪಡಿಸುವಿಕೆ, ಪ್ರಚಾರ ಮಾಡುವುದು ಇನ್ನಿತರೆ ವಿಚಾರಗಳಿಗೆ ಸಂಬಂಧಪಟ್ಟಂತೆ ಹಲವು ಸುಳ್ಳು ಸುದ್ದಿಗಳು, ಅತಿರಂಜಿತ ಸುದ್ದಿಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಅವೆಲ್ಲವನ್ನೂ ದೂರ ಮಾಡಿ ಸ್ಪಷ್ಟ ಮಾಹಿತಿ ನೀಡುತ್ತದೆ ಈ ಲೇಖನ.

ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಲು ಅಡ್ಡಿಯಿಲ್ಲ

ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಲು ಅಡ್ಡಿಯಿಲ್ಲ

ವಾಟ್ಸ್‌ಆಪ್, ಫೇಸ್‌ಬುಕ್, ಟ್ವಿಟ್ಟರ್‌ಗಳಲ್ಲಿ ಯಾವುದೇ ವ್ಯಕ್ತಿ, ಕಾರ್ಯಕರ್ತ ತನ್ನ ಮೆಚ್ಚಿನ ಅಭ್ಯರ್ಥಿಯ ಪರ ಪ್ರಚಾರ ಮಾಡಲು ಯಾವುದೇ ಅಭ್ಯಂತರವಿಲ್ಲ. ಅಷ್ಟೆ ಅಲ್ಲ ಎದುರಾಳಿಯನ್ನು ಟೀಕಿಸುವುದಕ್ಕೂ ಆತ ಸರ್ವ ಸ್ವತಂತ್ರ ಆದರೆ ಟೀಕೆ ಸತ್ಯದ ನೆಲಗಟ್ಟಿನಲ್ಲಿಯೇ ಇರಬೇಕೆ ವಿನಃ, ಆ ವ್ಯಕ್ತಿಯ ವೈಯಕ್ತಿಕ ಮಟ್ಟದ್ದಾಗಲಿ, ಮೂದಲಿಕೆ ಆಗಲಿ ಆಗಿರಕೂಡದು ಎಂದು ಚುನಾವಣಾ ಆಯೋಗ ಹೇಳುತ್ತದೆ. ಸುಳ್ಳು ಪೋಸ್ಟ್‌ಗಳನ್ನು ಹಾಕಿ ಪ್ರಚಾರ ಮಾಡುವುದಾಗಲಿ ಅಥವಾ ಎದುರಾಳಿ ಅಭ್ಯರ್ಥಿಯನ್ನು ನಿಂದಿಸುವುದಾಗಲಿ ಮಾಡಿದರೆ ಅದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆಗುತ್ತದೆ.

ಚುನಾವಣಾ ನೀತಿ ಸಂಹಿತೆ:ಚೆಕ್ ಪೋಸ್ಟ್ ಗಳಲ್ಲಿ ಜರ್ಮನ್ ಮಾದರಿಯ ಟೆಂಟ್ ಅಳವಡಿಕೆಚುನಾವಣಾ ನೀತಿ ಸಂಹಿತೆ:ಚೆಕ್ ಪೋಸ್ಟ್ ಗಳಲ್ಲಿ ಜರ್ಮನ್ ಮಾದರಿಯ ಟೆಂಟ್ ಅಳವಡಿಕೆ

ವಾಟ್ಸ್‌ಆಪ್‌ ಗ್ರೂಪ್ಗಳ ಕತೆ ಏನು?

ವಾಟ್ಸ್‌ಆಪ್‌ ಗ್ರೂಪ್ಗಳ ಕತೆ ಏನು?

ವಾಟ್ಸ್‌ಆಫ್ ಗ್ರೂಪ್‌ಗಳಲ್ಲಿ ಸಹ ಪ್ರಚಾರ ಮಾಡಬಹುದು ಆದರೆ ಯಾವುದೇ ಸುಳ್ಳು ಸುದ್ದಿ ಅಥವಾ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುವ ಸುದ್ದಿಯೊಂದು ಬಳಕೆದಾರನಿಗೆ ಬಂದು ಅದನ್ನು ಆತ ಮತ್ತೆ ಕೆಲವರಿಗೆ ಹಂಚಿದರೆ ಅದು ಸಂಹಿತೆ ಉಲ್ಲಂಘನೆ ಆಗುತ್ತದೆ. ಸದಸ್ಯರು ಗ್ರಪ್‌ಗಳಿಗೆ ಕಳುಹಿಸುವ ಸಂದೇಶಗಳಿಗೆ ಅಡ್ಮಿನ್‌ಗಳು ನೇರ ಜವಾಬ್ದಾರರಾಗಿರುವುದಿಲ್ಲ, ಆದರೆ ಅಡ್ಮಿನ್‌ಗಳು ಸುಳ್ಳು ಸುದ್ದಿ ಮತ್ತು ಚುನಾವಣಾ ನೀತಿ ಸಂಹಿತೆ ಬಗ್ಗೆ ಸದಸ್ಯರಿಗೆ ಎಚ್ಚರಿಕೆ ನೀಡಿದರೆ ಉತ್ತಮವೆಂದು ಚುನಾವಣಾ ಆಯೋಗ ಹೇಳಿದೆ.

ಬಿಜೆಪಿ ಬಾವುಟ ತೆಗೆಯಲು ವಿರೋಧ: ಮೈಸೂರಿನಲ್ಲಿ ಚುನಾವಣಾಧಿಕಾರಿ ಜೊತೆ ವಾಕ್ಸಮರ ಬಿಜೆಪಿ ಬಾವುಟ ತೆಗೆಯಲು ವಿರೋಧ: ಮೈಸೂರಿನಲ್ಲಿ ಚುನಾವಣಾಧಿಕಾರಿ ಜೊತೆ ವಾಕ್ಸಮರ

ಅಭಿಮಾನಿ, ಬೆಂಬಲಿಗ ಪೇಜ್‌ಗಳಿಗೆ ಯಾವ ನಿಯಮ?

ಅಭಿಮಾನಿ, ಬೆಂಬಲಿಗ ಪೇಜ್‌ಗಳಿಗೆ ಯಾವ ನಿಯಮ?

ಫೇಸ್‌ಬುಕ್‌ಗಳಲ್ಲಿ ಯಾವುದೇ ರಾಜಕೀಯ ನಾಯಕರ ಅಭಿಮಾನಿಗಳ ಪೇಜ್‌ಗಳು, ಪಕ್ಷದ ಅಭಿಮಾನಿಗಳ, ಕಾರ್ಯಕರ್ತರ ಪೇಜ್‌ಗಳು ಸಹ ವೈಯಕ್ತಿಕ ಖಾತೆಗಳಂತೆಯೇ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಹಾಗಾಗಿ ಅಲ್ಲಿಯೂ ಸಹ ವೈಯಕ್ತಿಕ ಖಾತೆಗಳಿಗೆ ಅನ್ವಯವಾಗುವ ನಿಯಮಗಳೇ ಗಣನೆಗೆ ಬರುತ್ತದೆ. ಅಭ್ಯರ್ಥಿಯೇ ಪ್ರಚಾರಕ್ಕೆ ನೇಮಿಸಿದ ಸಾಮಾಜಿಕ ಜಾಲತಾಣದ ಪೇಜ್‌ಗಳಾದರೆ ಅವುಗಳ ಬಗ್ಗೆ ಅಭ್ಯರ್ಥಿ ಆಯೋಗಕ್ಕೆ ಮಾಹಿತಿ ನೀಡಬೇಕಾಗುತ್ತದೆ ಮತ್ತು ಅದರ ಖರ್ಚು ವೆಚ್ಚದ ಲೆಕ್ಕ ನೀಡಬೇಕಾಗುತ್ತದೆ.

ಜಾತಿ-ಧರ್ಮ ಆಧಾರದಲ್ಲಿ ಪ್ರಚಾರವಿಲ್ಲ

ಜಾತಿ-ಧರ್ಮ ಆಧಾರದಲ್ಲಿ ಪ್ರಚಾರವಿಲ್ಲ

ಜಾತಿ-ಧರ್ಮದ ಆಧಾರದಲ್ಲಿ ಮತ ಕೇಳುವುದು ಸಾಮಾಜಿಕ ಜಾಲತಾಣದಲ್ಲಿ ಮಾತ್ರವಲ್ಲ ಎಲ್ಲ ವಿಧದಲ್ಲೂ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ ಆಗಲಿದೆ. ಅಭ್ಯರ್ಥಿಗಳ ತಿರುಚಿದ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವುದು ಸಹ ಅಪರಾಧವೇ.

ಫೇಸ್‌ಬುಕ್ ಪೋಲ್‌ಗಳನ್ನು ಹಾಕಬಹುದೇ?

ಫೇಸ್‌ಬುಕ್ ಪೋಲ್‌ಗಳನ್ನು ಹಾಕಬಹುದೇ?

ಫೇಸ್‌ಬುಕ್ ಪೋಲ್‌ಗಳನ್ನು ಬಳಕೆದಾರರು ಹಾಕಬಹುದು ಆದರೆ ಮತದಾನಕ್ಕೆ 48 ಗಂಟೆ ಇದ್ದಾಗ ಆ ನಿಲ್ಲಿಸಿಬಿಡುವುದು ಉತ್ತಮ. ಟಿವಿ, ಪತ್ರಿಕೆಗಳು ಸಹ ಮತದಾನದ 48 ಹಿಂದೆಯೇ ಸಮೀಕ್ಷೆಗಳನ್ನು ಹಾಕುವುದನ್ನು ನಿಲ್ಲಿಸಬೇಕಾಗುತ್ತದೆ.

ಅಭ್ಯರ್ಥಿಯ ಚಿತ್ರಗಳನ್ನು ಪ್ರಕಟಿಸಬಹುದೇ?

ಅಭ್ಯರ್ಥಿಯ ಚಿತ್ರಗಳನ್ನು ಪ್ರಕಟಿಸಬಹುದೇ?

ಅಭ್ಯರ್ಥಿಗಳ ಚಿತ್ರಗಳನ್ನು ಪ್ರಕಟಿಸಬಹುದು, ಅವರ ಪರವಾಗಿ ಫೇಸ್‌ಬುಕ್ ಗೋಡೆಗಳಲ್ಲಿ ಬರಹಗಳನ್ನು ಬರೆಯಬಹುದು ಆದರೆ, ವಿನ್ಯಾಸಭರಿತ ಜಾಹೀರಾತು ಮಾದರಿಯ ಚಿತ್ರಗಳನ್ನು ಪ್ರಕಟಿಸುವುದು ಬೇಡ. ಇದರ ಮೇಲೆ ಚುನಾವಣಾ ಆಯೋಗದ ಕಣ್ಣು ಬೀಳಬಹುದು.

ಪ್ರಜಾತಂತ್ರ, ಮತದಾನದ ವಿರುದ್ಧ ಪೋಸ್ಟ್‌ಗಳು ಬೇಡ

ಪ್ರಜಾತಂತ್ರ, ಮತದಾನದ ವಿರುದ್ಧ ಪೋಸ್ಟ್‌ಗಳು ಬೇಡ

ಪ್ರಜಾತಂತ್ರ ವ್ಯವಸ್ಥೆಯ ವಿರುದ್ಧದ ಪೋಸ್ಟ್‌ಗಳು, ಮತದಾನದ ವಿರುದ್ಧ ಪೋಸ್ಟ್‌ಗಳು, ಮತದಾನ ಮಾಡದಂತೆ ಬೆದರಿಕೆ, ಮತದಾರರಿಗೆ ತಪ್ಪು ಸಂದೇಶ ತಲುಪಿಸುವಂತಹಾ ಪೋಸ್ಟ್‌ಗಳು, ಮತದಾನದ ಬಗ್ಗೆ ಸುಳ್ಳು ಮಾಹಿತಿಗಳು ಯಾವದೇ ಕಾರಣಕ್ಕೂ ಬೇಡ. ನೀತಿ ಸಂಹಿತೆ ಉಲ್ಲಂಘನೆ ಮಾತ್ರವಲ್ಲ, ದಂಡ ಸಂಹಿತೆ ಪ್ರಕಾರ ಕೂಡ ಅಪರಾಧಗಳೇ.

ದೂರು ನೀಡುವುದು ಹೇಗೆ?

ದೂರು ನೀಡುವುದು ಹೇಗೆ?

ಸಾಮಾಜಿಕ ಜಾಲತಾಣ ಅತಿದೊಡ್ಡ ವೇದಿಕೆ ಅಥವಾ ಮಾಧ್ಯಮ ಇದರ ಮೇಲೆ ಸಾವಿರಲೆಕ್ಕದಲ್ಲಿರುವ ಚುನಾವಣಾಧಿಕಾರಿಗಳು ಕಣ್ಣಿಡುವುದು ಆಗದ ಕೆಲಸ ಆದರೆ ಬಳಕೆದಾರರು ಸಾಮಾಜಿಕ ಜಾಲತಾಣದಲ್ಲಿ ಅಥವಾ ತಮ್ಮ ಸುತ್ತ-ಮುತ್ತ ಈ ರೀತಿಯ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಘಟನೆಗಳು ಕಂಡು ಬಂದರೆ ತಾನೇ ಆನ್‌ಲೈನ್ ಮೂಲಕ ದೂರು ದಾಖಲಿಸಬಹುದು. ಅದಕ್ಕಾಗಿ ಸಿ-ವಿಜಿಲ್ ಎಂಬ ಉಚಿತ ಅಪ್ಲಿಕೇಶನ್ ಹೊರತರಲಾಗಿದ್ದು ಅದರ ಮೂಲಕ ದೂರು ದಾಖಲಿಸಬಹುದು. ಹೊರತುಪಡಿಸಿ ಜಿಲ್ಲಾ ಚುನಾವಣಾಧಿಕಾರಿ, ತಾಲ್ಲೂಕು ಚುನಾವಣಾಧಿಕಾರಿ (ತಹಶೀಲ್ದಾರ್‌), ಚುನಾವಣಾ ಕಚೇರಿಗೂ ದೂರು ನೀಡಬಹುದು.

English summary
Model code of conduct is implement in all over the nation. Election commission keeping an eye on social media also. here is the information about what is code of conduct violation in social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X