ಜೆಡಿಎಸ್ ಎಷ್ಟು ಸೀಟು ಗೆಲ್ಲಲಿದೆ? ಸಿದ್ದರಾಮಯ್ಯ ನುಡಿದ ಭವಿಷ್ಯ

Posted By:
Subscribe to Oneindia Kannada
   ಮುಂಬರುವ ಚುನಾವಣೆಗೆ ಜೆಡಿಎಸ್ ಬಗ್ಗೆ ಭವಿಷ್ಯ ನುಡಿದ ಸಿದ್ದರಾಮಯ್ಯ | Oneindia Kannada

   ಜೆಡಿಎಸ್ ಅಧಿಕಾರಕ್ಕೆ ಬರುವುದಿಲ್ಲ ಎನ್ನುವುದು ಖುದ್ದು ಅಪ್ಪ,ಮಗ ಇಬ್ಬರಿಗೂ ಗೊತ್ತಿದೆ, ಆದರೂ ನಮ್ಮ ಪಕ್ಷವೇ ಅಧಿಕಾರಕ್ಕೆ ಬರುತ್ತೆ ಎಂದು ಸುಳ್ಳು ಹೇಳಿಕೊಂಡು ತಿರುಗಾಡಿಕೊಂಡಿದ್ದಾರೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ದೇವೇಗೌಡ್ರು ಮತ್ತು ಕುಮಾರಸ್ವಾಮಿಯವರನ್ನು ಅಣಕವಾಡಿದ್ದಾರೆ.

   'ಕುಮಾರಸ್ವಾಮಿ, ಯಡಿಯೂರಪ್ಪ ಇಬ್ಬರನ್ನೂ ಸೋಲಿಸುವ ತಾಕತ್ತು ನನಗಿದೆ'

   ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಿದ್ದರಾಮಯ್ಯ, ನನ್ನನ್ನು ಪಕ್ಷದಿಂದ ಡಿಸ್ಮಿಸ್ ಮಾಡಿದರು, ನಾನು ಆ ಪಕ್ಷದಲ್ಲಿದ್ದಾಗ 59ಸ್ಥಾನವನ್ನು ಗೆದ್ದಿದ್ದೆವು, ಈಗ ನೋಡಿ ಎಲ್ಲಿಗೆ ಬಂದು ನಿಂತಿದ್ದಾರೆಂದು ಸಿಎಂ, ಜೆಡಿಎಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

   ಸಿದ್ದುವನ್ನು ಸೋಲಿಸಲು ಜೆಡಿಎಸ್ ಬಳಿಯಿದೆ ರೇವಣಾಸ್ತ್ರ!

   ನಾವು ಅಧಿಕಾರದಲ್ಲಿದ್ದಾಗ ಏನು ಮಾಡಿದ್ದೇವೆ ಎನ್ನುವುದು ಮುಖ್ಯ, ಅಧಿಕಾರಕ್ಕೊಟ್ಟರೆ ಏನು ಮಾಡುತ್ತೇವೆ ಎನ್ನುವುದು ಆಮೇಲಿನ ಮಾತು. ಕುಮಾರಸ್ವಾಮಿಯವರೂ ಮುಖ್ಯಮಂತ್ರಿಯಾಗಿದ್ದವರು, ಯಡಿಯೂರಪ್ಪನೂ ಸಿಎಂ ಆಗಿದ್ದರು. ಅವರ ಅಧಿಕಾರದಲ್ಲಿದ್ದಾಗ ಉಪಯೋಗವಾಗುವ ಕೆಲಸವನ್ನು ರೈತರಿಗೆ ಏನು ಮಾಡಿದರು ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

   ಸಿದ್ದರಾಮಯ್ಯ ವಿರುದ್ಧ ದೇವೇಗೌಡರಿಂದ ಚು.ಆಯೋಗಕ್ಕೆ ದೂರು

   ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಹೊಂದಾಣಿಕೆ ಮಾಡಿಕೊಂಡು, ಎಚ್ಡಿಕೆ ಸಿಎಂ ಆದರು, ಆದರೆ ಬಿಜೆಪಿಗೆ ಕೊಟ್ಟಮಾತನ್ನು ಕುಮಾರಸ್ವಾಮಿ ಉಳಿಸಿಕೊಳ್ಳಲಿಲ್ಲ. ನಾನು ರೈತರಿಗೆ ಆ ಕೆಲಸ ಮಾಡಿದ್ದೇನೆ, ಜನಪರ ಕೆಲಸ ಮಾಡಿದ್ದೇನೆಂದು ಹೇಳುತ್ತಾರೆ. ಆಗ ನಡೆದ ಚುನಾವಣೆಯಲ್ಲಿ ಜೆಡಿಎಸ್ ಕೇವಲ 28ಸ್ಥಾನವನ್ನು ಗೆದ್ದಿತ್ತು. ಕೆಲಸ ಮಾಡಿದ್ದರೆ, ಜನರು ಕೈಬಿಡುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

   'ಕುಮಾರಸ್ವಾಮಿಯನ್ನು ಸಿಎಂ ಮಾಡಲು ನನ್ನನ್ನು ಪಕ್ಷದಿಂದ ಹೊರಹಾಕಿದರು'

   ಮೆಜಾರಿಟಿ ಬರದಿದ್ದರೆ ಕರ್ನಾಟಕದಲ್ಲಿ ಮತ್ತೆ ಚುನಾವಣೆ ನಡೆಯುತ್ತದೆ ಎಂದು ಜೆಡಿಎಸ್ ಮುಖಂಡರ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ, ಅದು ಅವರ ಭ್ರಮೆ. ಅವರಿಗೂ ಅದು ಗೊತ್ತಿದೆ. 2004ರಲ್ಲಿ ನಾನು, ಇಬ್ರಾಹಿಂ, ಮಹಾದೇವಪ್ಪ ಎಲ್ಲಾ ಇದ್ದಾಗ 59ಸ್ಥಾನವನ್ನು ಗೆದ್ದಿದ್ದೆವು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಮುಂದೆ ಓದಿ..

   ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂದು ಅಪ್ಪ ಮತ್ತು ಮಕ್ಕಳಿಗೆ ಗೊತ್ತು

   ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂದು ಅಪ್ಪ ಮತ್ತು ಮಕ್ಕಳಿಗೆ ಗೊತ್ತು

   ಯಡಿಯೂರಪ್ಪನವರು ಮಿಷನ್ 150 ಎಂದು ಹೇಳುತ್ತಿದ್ದರು, ಈಗ ಅದರ ಬಗ್ಗೆ ಮಾತನಾಡುತ್ತಿಲ್ಲ. ಜೆಡಿಎಸ್ ಪಕ್ಷದವರೂ ಹಾಗೇ.. ಅಪ್ಪ ಮತ್ತು ಮಕ್ಕಳಿಗೆ ಗೊತ್ತು.. ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂದು.. ಸುಮ್ಮನೆ ಪ್ರಚಾರ ಮಾಡಿಕೊಂಡು ತಿರುಗಾಡಿಕೊಂಡಿದ್ದಾರೆ. ಚುನಾವಣೆಯ ವೇಳೆ ಇವರಿಗೆ ರೈತರ ನೆನಪು ಬರುತ್ತದೆ. ಅವರು ಅಧಿಕಾರದಲ್ಲಿದ್ದಾಗ ಏನು ಮಾಡಿದ್ರು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

   ಜೆಡಿಎಸ್ ಪಕ್ಷ ಏನೇ ಮಾಡಿದರೂ 25 ಸೀಟ್ ಮೇಲೆ ಗೆಲ್ಲುವುದಿಲ್ಲ

   ಜೆಡಿಎಸ್ ಪಕ್ಷ ಏನೇ ಮಾಡಿದರೂ 25 ಸೀಟ್ ಮೇಲೆ ಗೆಲ್ಲುವುದಿಲ್ಲ

   ಜೆಡಿಎಸ್ ಪಕ್ಷ ಏನೇ ಮಾಡಿದರೂ 25 ಸೀಟ್ ಮೇಲೆ ಗೆಲ್ಲುವುದಿಲ್ಲ ಎನ್ನುವ ಸಿದ್ದರಾಮಯ್ಯನವರ ಉತ್ತರಕ್ಕೆ, ಏನ್ ಸಾರ್ .. 25ರ ಮೇಲೆನೇ ಹೋಗುವುದಿಲ್ಲವಲ್ಲ ನೀವು ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಿಎಂ, ಅವರ ಕ್ಯಾಪಸಿಟಿಯೇ ಅಷ್ಟು. ಅಬ್ಬಬ್ಬಾ ಅಂದರೆ 25 ರಿಂದ 30 ಸೀಟು ಗೆಲ್ಲಬಹುದು. ದಟ್ಸ್ ಆಲ್ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

   ನನ್ನನ್ನು ಪಾರ್ಟಿಯಿಂದ ತೆಗೆದುಹಾಕಿದರು, ಸಿದ್ದರಾಮಯ್ಯ

   ನನ್ನನ್ನು ಪಾರ್ಟಿಯಿಂದ ತೆಗೆದುಹಾಕಿದರು, ಸಿದ್ದರಾಮಯ್ಯ

   ನನ್ನನ್ನು ಪಾರ್ಟಿಯಿಂದ ತೆಗೆದುಹಾಕಿದ ನಂತರ, ಜಾರಕಿಹೊಳೆ, ಇಬ್ರಾಹಿಂ, ಲಕ್ಷ್ಮೀಸಾಗರ್, ಮಹಾದೇವಪ್ಪ, ಕೋದಂಡರಾಮಯ್ಯ ಮುಂತಾದವರೆಲ್ಲಾ ನನ್ನ ಜೊತೆಗೆ ಬಂದರು. ಕುಮಾರಸ್ವಾಮಿ, ಬಿಜೆಪಿ ಜೊತೆ ಒಪ್ಪಂದ ಮಾಡಿಕೊಂಡರು. ಅಲ್ಲೂ ನುಡಿದಂತೆ ನಡೆದುಕೊಳ್ಳಲಿಲ್ಲ, ಚುನಾವಣೆ ಬಂತು, 59 ರಿಂದ 28ಸ್ಥಾನಕ್ಕೆ ಇಳಿದರು ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

   ಹನ್ನೊಂದು ಜನ ಈಗಾಗಲೇ ಪಕ್ಷದಿಂದ ಹೊರಹೋಗಿದ್ದಾರೆ

   ಹನ್ನೊಂದು ಜನ ಈಗಾಗಲೇ ಪಕ್ಷದಿಂದ ಹೊರಹೋಗಿದ್ದಾರೆ

   ಕಳೆದ ಚುನಾವಣೆಯಲ್ಲಿ ನಲವತ್ತು ಸ್ಥಾನ ಗೆದ್ದರು, ಅದರಲ್ಲಿ ಹನ್ನೊಂದು ಜನ ಈಗಾಗಲೇ ಪಕ್ಷದಿಂದ ಹೊರಹೋಗಿದ್ದಾರೆ. ಜೆಡಿಎಸ್ ನಲ್ಲೂ ಆರು ವರ್ಷ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ, ಜೆಡಿಎಸ್ ಎಲ್ಲೆಲ್ಲಿ ಪ್ರಾಭಲ್ಯ ಹೊಂದಿದೆ ಎನ್ನುವುದು ನನಗೂ ಗೊತ್ತಿದೆ. ಆ ಲೆಕ್ಕಾಚಾರದ ಮೇಲೆ ನಾನು ಜೆಡಿಎಸ್ 25 ರಿಂದ 30 ಸೀಟು ಮಾತ್ರ ಗೆಲ್ಲುತ್ತೆ ಎಂದು ಹೇಳುತ್ತಿರುವುದು, ಸಂಖ್ಯಾಶಾಸ್ತ್ರದಿಂದಲ್ಲ - ಸಿದ್ದರಾಮಯ್ಯ.

   ನಾನೂ ಕೆಲಸ ಮಾಡಿದ್ದೇನೆಂದು ಕುಮಾರಸ್ವಾಮಿ ಹೇಳುತ್ತಾರೆ

   ನಾನೂ ಕೆಲಸ ಮಾಡಿದ್ದೇನೆಂದು ಕುಮಾರಸ್ವಾಮಿ ಹೇಳುತ್ತಾರೆ

   ನನ್ನ ಮಗ ಬಹಳ ಕೆಲಸ ಮಾಡಿದ್ದಾನೆಂದು ಗೌಡ್ರು ಹೇಳುತ್ತಾರೆ, ನಾನೂ ಕೆಲಸ ಮಾಡಿದ್ದೇನೆಂದು ತನ್ನ ಬಗ್ಗೆ ತಾನೇ ಕುಮಾರಸ್ವಾಮಿ ಹೇಳಿಕೊಳ್ಳುತ್ತಾರೆ. ಹಾಗಾದಾರೆ, 59 ರಿಂದ 28 ಸ್ಥಾನಕ್ಕೆ ಇಳಿದಿದ್ದು ಯಾಕೆ ಎಂದು ಪ್ರಶ್ನಿಸಿರುವ ಸಿಎಂ, ನಾವೇ ಮುಂದಿನ ಚುನಾವಣೆ ಗೆದ್ದು ಮತ್ತೆ ಸರಕಾರ ರಚಿಸುತ್ತೇವೆಂದು ಭರವಸೆಯ ಮಾತನ್ನಾಡಿದ್ದಾರೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   How many seats JDS will win in the upcoming Karnataka assembly elections 2018, CM Siddaramaiah prediction. CM said, JDS winning capacity is 25 or maximum 30, that's all.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ