ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಸಲೀಲೆ ವಿಡಿಯೋ: ಶಾಸಕರನ್ನು ಖೆಡ್ಡಾಕ್ಕೆ ಬೀಳಿಸಿದ್ದು ಹೀಗೆ

|
Google Oneindia Kannada News

ಬೆಂಗಳೂರು, ನವೆಂಬರ್ 28: ಗದಗ ಜಿಲ್ಲೆ ವ್ಯಾಪ್ತಿಯ ಬಿಜೆಪಿ ಶಾಸಕರೊಬ್ಬರ ರಾಸಲೀಲೆ ವಿಡಿಯೋ ನಿನ್ನೆಯಷ್ಟೆ ವೈರಲ್ ಆಗಿದೆ. ಪ್ರಕರಣದ ತನಿಕೆಯನ್ನು ಸಿಸಿಬಿ ಪೊಲೀಸರು ಮಾಡುತ್ತಿದ್ದು, ಆಘಾತಕಾರಿ ಮಾಹಿತಿಗಳು ಹೊರಬೀಳುತ್ತಿವೆ.

ಹಲವು ಮಾಜಿ, ಹಾಲಿ ಶಾಸಕರು, ಕೋಟ್ಯಧಿಪತಿ ಉದ್ಯಮಿಗಳು ಸಹ ಈ ಬಲೆಯಲ್ಲಿ ಬಿದ್ದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿದೆ. ಪ್ರಕರಣದ ಮುಖ್ಯ ಆರೋಪಿ ರಾಘವೇಂದ್ರ ಬಳಿ ವಶಪಡಿಸಿಕೊಂಡಿರುವ ಹಾರ್ಡ್‌ಡಿಸ್ಕ್‌ನಲ್ಲಿ ಹಲವು ಗಣ್ಯಾತಿಗಣ್ಯರ ರಾಸಲೀಲೆಯ ವಿಡಿಯೋಗಳು ಇವೆ.

ಒಬ್ಬಿಬ್ಬರಲ್ಲ ಹಲವು ಶಾಸಕರು ಈ ಹನಿಟ್ರಾಪ್‌ಗೆ ಸಿಲುಕಿದ್ದಾರೆ. ಮತದಾರರ ಕೈಗೆ ಸುಲಭವಾಗಿ ಸಿಗದ ಶಾಸಕರು ಇವರ ಕೈಗೆ ಸಿಕ್ಕಿದ್ದು ಹೇಗೆ? ಎಂಬ ಪ್ರಶ್ನೆ ಉದ್ಭವಿಸಿದೆ. 'ಹಸಿದ ಮೀನೆ ಗಾಳಕ್ಕೆ ಸಿಕ್ಕುವುದು' ಹೀಗಾಗಿ ಹನಿಟ್ರಾಪ್‌ಗೆ ಸಿಕ್ಕ ಶಾಸಕರು, ಗಣ್ಯರು ಅಮಾಯಕರಂತೂ ಖಂಡಿತ ಅಲ್ಲ.

ಹನಿಟ್ರಾಪ್‌ ಹಿಂದಿನ ಮೆದುಳು, ಪ್ರಕರಣದ ಮುಖ್ಯ ಆರೋಪಿ ರಾಘವೇಂದ್ರ. ಈತ ರಾಜಕಾರಣಿಗಳ ಪರಿಚಯ ಮಾಡಿಕೊಂಡು ಅವರ ಮೊಬೈಲ್‌ಗೆ ಆ್ಯಪ್ ಒಂದನ್ನು ಇನ್ಸ್ಟಾಲ್ ಮಾಡಿ ಅವರಿಗೆ ಬರುವ ಸಂದೇಶಗಳನ್ನು ತನಗೆ ಬರುವಂತೆ ಮಾಡಿಕೊಂಡು ಅದರ ದುರುಪಯೋಗ ಮಾಡಿಕೊಳ್ಳುತ್ತಿದ್ದ. ರಾಘವೇಂದ್ರ, ಸೈಬರ್‌ ಕ್ರೈಂ ನಲ್ಲಿ ಚೆನ್ನಾಗಿ ಪಳಗಿದ್ದ, ಈ ಬಗ್ಗೆ ಹಲವು ದೂರುಗಳ ಈತನ ಮೇಲೆ ಇವೆ.

ಕಾಲೇಜು ವಿದ್ಯಾರ್ಥಿನಿಯರೆಂದು ಪರಿಚಯ ಮಾಡಿಸುತ್ತಿದ್ದ

ಕಾಲೇಜು ವಿದ್ಯಾರ್ಥಿನಿಯರೆಂದು ಪರಿಚಯ ಮಾಡಿಸುತ್ತಿದ್ದ

ರಾಘವೇಂದ್ರ ತನ್ನ ಪ್ರೇಯಸಿಯನ್ನು ಹಾಗೂ ಕೆಲವು ಯುವತಿಯರ ತಂಡವನ್ನು ಕಾಲೇಜು ವಿದ್ಯಾರ್ಥಿನಿ ಎಂದು ಶಾಸಕರಿಗೆ ಪರಿಚಯ ಮಾಡಿಸಿ, ರಾಜಕೀಯದ ಬಗ್ಗೆ ಪ್ರಾಜೆಕ್ಟ್ ಮಾಡುತ್ತಿದ್ದಾರೆಂದು ಸುಳ್ಳು ಹೇಳಿ ಯುವತಿಯರು ಶಾಸಕರೊಂದಿಗೆ ಮಾತನಾಡಲು ಬಿಡುತ್ತಿದ್ದ.

ಶಾಸಕರುಗಳೊಂದಿಗೆ ಸಂದರ್ಶನ ಏರ್ಪಡಿಸುತ್ತಿದ್ದ ರಾಘವೇಂದ್ರ

ಶಾಸಕರುಗಳೊಂದಿಗೆ ಸಂದರ್ಶನ ಏರ್ಪಡಿಸುತ್ತಿದ್ದ ರಾಘವೇಂದ್ರ

ಯುವತಿಯರೊಂದಿಗೆ ಶಾಸಕರುಗಳ ಸಂದರ್ಶನಗಳನ್ನು ಆಯೋಜಿಸಲಾಗುತ್ತಿತ್ತು. ಬಹುತೇಕ ಸಂದರ್ಶನಗಳು ರಾತ್ರಿ ಸಮಯವೇ ನಡೆಯುತ್ತಿದ್ದವು. ಶಾಸಕರೊಂದಿಗೆ ಯುವತಿಯರು ಮೊಬೈಲ್ ಸಂಖ್ಯೆ ಬದಲಾಯಿಸಿಕೊಂಡು ಆಗಾಗ್ಗೆ ಕರೆ ಮಾಡಿ ಸಲುಗೆ ಸಂಪಾದಿಸಿಕೊಳ್ಳುತ್ತಿದ್ದರು. ಈ ಸಂಭಾಷಣೆಯ ಆಡಿಯೋ ಸಹ ರಾಘವೇಂದ್ರಗೆ ಸಿಗುತ್ತಿತ್ತು.

ಶಾಸಕರ ಹೆಸರಲ್ಲಿ ಹೊಟೆಲ್ ರೂಂ ಬುಕ್

ಶಾಸಕರ ಹೆಸರಲ್ಲಿ ಹೊಟೆಲ್ ರೂಂ ಬುಕ್

ಆ ನಂತರದ ಕಾರ್ಯವನ್ನು ರಾಘವೇಂದ್ರ ಮಾಡುತ್ತಿದ್ದ. ಆತನೇ ಶಾಸಕರ ಹೆಸರಲ್ಲಿ ಐಶಾರಾಮಿ ಹೊಟೆಲ್‌ನಲ್ಲಿ ರೂಂ ಬುಕ್ ಮಾಡಿ ರೂಂ ನಲ್ಲಿ ಸ್ಪೈ ಕೆಮೆರಾ ಇಟ್ಟು ಶಾಸಕರ ರಾಸಲೀಲೆ ವಿಡಿಯೋ ರೆಕಾರ್ಡ್ ಮಾಡಿಕೊಳ್ಳುತ್ತಿದ್ದ. ನಂತರ ಆತನೇ ಶಾಸಕರನ್ನು ಬ್ಲಾಕ್‌ಮೇಲ್ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದ.

ಶಾಸಕರ ಬಗ್ಗೆ ಪೂರ್ವಾಪರ ತಿಳಿದುಕೊಳ್ಳುತ್ತಿದ್ದ ರಾಘವೇಂದ್ರ

ಶಾಸಕರ ಬಗ್ಗೆ ಪೂರ್ವಾಪರ ತಿಳಿದುಕೊಳ್ಳುತ್ತಿದ್ದ ರಾಘವೇಂದ್ರ

ಶಾಸಕರ ಬಳಿಗೆ ಯುವತಿಯರನ್ನು ಕರೆದುಕೊಂಡು ಹೋಗುವ ಮೊದಲು ರಾಘವೇಂದ್ರ ಚೆನ್ನಾಗಿ ಹೋಂವರ್ಕ್‌ ಮಾಡಿಕೊಳ್ಳುತ್ತಿದ್ದ. ಮಾಜಿ ಶಾಸಕರ ಸೋದರಳಿಯ ಎಂದು ಹೇಳಿಕೊಂಡು ಶಾಸಕರ ಪರಿಚಯ ಮಾಡಿಕೊಳ್ಳುತ್ತಿದ್ದ. ಶಾಸಕರ ವ್ಯಕ್ತಿತ್ವದ ಬಗ್ಗೆ ಮುಂಚೆಯೇ ಮಾಹಿತಿ ಕಲೆಹಾಕಿ ಶಾಸಕರು ತಮ್ಮ ಬಲೆಗೆ ಬೀಳುತ್ತಾರೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳುತ್ತಿದ್ದ. ಆ ನಂತರವೇ ಯುವತಿಯರನ್ನು ಶಾಸಕರ ಬಳಿಗೆ ಕರೆದುಕೊಂಡು ಹೋಗುತ್ತಿದ್ದ.

ಪ್ರೇಯಸಿಯನ್ನೇ ಕೃತ್ಯಕ್ಕೆ ಬಳಸಿಕೊಳ್ಳುತ್ತಿದ್ದ

ಪ್ರೇಯಸಿಯನ್ನೇ ಕೃತ್ಯಕ್ಕೆ ಬಳಸಿಕೊಳ್ಳುತ್ತಿದ್ದ

ರಾಘವೇಂದ್ರ ತನ್ನ ಪ್ರೇಯಸಿಯನ್ನೇ ಈ ಕೃತ್ಯಕ್ಕೆ ಬಳಸಿಕೊಂಡಿದ್ದ. ಆಕೆಯ ಮೂಲಕವೇ ಹಲವು ಶಾಸಕರನ್ನು ಹನಿಟ್ರ್ಯಾಪ್‌ ಬಲೆಗೆ ಬೀಳಿಸಿದ್ದ. ರಾಘವೇಂದ್ರ ಪ್ರೇಯಸಿ ಜೊತೆಗೆ ಇನ್ನೂ ಕೆಲವು ಯುವತಿಯರನ್ನು ರಾಘವೇಂದ್ರ ಬಳಸಿದ್ದ.

ಕೋಟ್ಯಂತರ ಹಣ ಗಳಿಸಿದ್ದ ರಾಘವೇಂದ್ರ

ಕೋಟ್ಯಂತರ ಹಣ ಗಳಿಸಿದ್ದ ರಾಘವೇಂದ್ರ

ಹೀಗೆ ಮಾಡಿ ಕೋಟ್ಯಂತರ ಹಣವನ್ನು ರಾಘವೇಂದ್ರ ಸಂಪಾದನೆ ಮಾಡಿದ್ದ ಎನ್ನಲಾಗುತ್ತಿದೆ. ಹಲವು ಶಾಸಕರು, ಮಾಜಿ ಶಾಸಕರು, ಉದ್ಯಮಪತಿಗಳು ರಾಘವೇಂದ್ರನ ಬಲೆಯಲ್ಲಿ ಬಿದ್ದು ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿದ್ದಾರೆ.

English summary
Karnataka MLAs fell into honey trap. CCB police investigating the case, many interesting information getting out from investigation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X