ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೊರವಯ್ಯ ನುಡಿದ ಐತಿಹಾಸಿಕ ಮೈಲಾರ ಕಾರ್ಣಿಕದ ಮತ್ತೊಂದು ಅರ್ಥ!

|
Google Oneindia Kannada News

ಮಾಘ ಮಾಸದಲ್ಲಿ ಅಂದರೆ ರಥಸಪ್ತಮಿಯ ದಿನದಿಂದ ಮಾಘ ಮಾಸ ಕೃಷ್ಣಪಕ್ಷದ ಚತುರ್ಥಿಯವರೆಗೆ ಪ್ರತೀ ವರ್ಷ ಐತಿಹಾಸಿಕ ಹೂವಿನ ಹಡಗಲಿಯಲ್ಲಿರುವ ಮೈಲಾರಲಿಂಗೇಶ್ವರನ ಜಾತ್ರೆ ಮತ್ತು ಕಾರ್ಣಿಕೋತ್ಸವ ನಡೆಯುತ್ತದೆ.

Recommended Video

Mylara Lingeshwara Karnika Astrology is out | ಲಕ್ಷ ಲಕ್ಷ ಜನ ಸೇರಬೇಕಿತ್ತು! ಆದರೆ? ಮೈಲಾರಲಿಂಗೇಶ್ವರ ಜಾತ್ರೆ | Oneindia Kannada

ಕೋವಿಡ್ ಮಾರ್ಗಸೂಚಿಯನ್ವಯ ಜಿಲ್ಲಾಡಳಿತ ಭಕ್ತರ ಪ್ರವೇಶಕ್ಕೆ ಈ ಸಲ ನಿರ್ಬಂಧವನ್ನು ಹೇರಿದ್ದರಿಂದ, ಸರಳವಾಗಿ ಕಾರ್ಣಿಕೋತ್ಸವವನ್ನು ಆಚರಿಸಲಾಯಿತು. ಸಾಮಾನ್ಯವಾಗಿ, ಈ ಉತ್ಸವಕ್ಕೆ ಲಕ್ಷಲಕ್ಷ ಭಕ್ತರು ಹರಿದು ಬರುತ್ತಿದ್ದರು.

 'ಮುತ್ತಿನ ರಾಶಿ ಮೂರು ಭಾಗ ಆದಿತಲೇ ಪರಾಕ್': ಏನಿದು ಮೈಲಾರಲಿಂಗನ ಭವಿಷ್ಯ? 'ಮುತ್ತಿನ ರಾಶಿ ಮೂರು ಭಾಗ ಆದಿತಲೇ ಪರಾಕ್': ಏನಿದು ಮೈಲಾರಲಿಂಗನ ಭವಿಷ್ಯ?

ಈ ಜಾತ್ರೆಯಲ್ಲಿ ನುಡಿಯಲಾಗುವ ಕಾರ್ಣಿಕ ಒಟ್ಟಾರೆಯಾಗಿ ದೇಶದ ಮುಂದಿನ ಭವಿಷ್ಯ ಎನ್ನುವ ಅವಿರತ ನಂಬಿಕೆಯನ್ನು ಭಕ್ತರು ಹೊಂದಿದ್ದಾರೆ. ಹಾಗಾಗಿ, ಮೈಲಾರ ಉತ್ಸವದಲ್ಲಿ ನುಡಿಯಲಾಗುವ ಭವಿಷ್ಯದ ಬಗ್ಗೆ ಜನರಿಗೆ ಎಲ್ಲಿಲ್ಲದ ಕುತೂಹಲ.

ಈ ಬಾರಿಯೂ ದೇವಾಯಲದ ಸಂಪ್ರದಾಯದಂತೆ, ಕ್ಷೇತ್ರದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಕಾರಣಿಕ ನುಡಿಯುವ ಸ್ಥಳಕ್ಕೆ ಪ್ರದಕ್ಷಿಣೆ ಹಾಕಿದ ನಂತರ ಈ ಪ್ರಕ್ರಿಯೆಗೆ ಚಾಲನೆ ಸಿಕ್ಕಿತು. ಈ ಬಾರಿ 'ಮುತ್ತಿನ ರಾಶಿ ಮೂರು ಪಾಲು ಆತಲೇ'ಎನ್ನುವ ಕಾರಣಿಕ ಹೊರಬಿದ್ದಿದೆ.

 ಕಾರಣಿಕಕ್ಕೂ ಮುನ್ನ ಅಪಶಕುನ: ಮುನಿಸಿಕೊಂಡ ಮೈಲಾರಲಿಂಗೇಶ್ವರ? ಭಕ್ತರಲ್ಲಿ ಶುರುವಾಯ್ತು ಆತಂಕ! ಕಾರಣಿಕಕ್ಕೂ ಮುನ್ನ ಅಪಶಕುನ: ಮುನಿಸಿಕೊಂಡ ಮೈಲಾರಲಿಂಗೇಶ್ವರ? ಭಕ್ತರಲ್ಲಿ ಶುರುವಾಯ್ತು ಆತಂಕ!

ಕಾರಣಿಕ ನುಡಿಯುವ ಗೊರವಯ್ಯ ರಾಮಣ್ಣ

ಕಾರಣಿಕ ನುಡಿಯುವ ಗೊರವಯ್ಯ ರಾಮಣ್ಣ

ಕಾರಣಿಕ ನುಡಿಯುವ ಗೊರವಯ್ಯ ರಾಮಣ್ಣ, ವಿಜಯನಗರದ ಸಾಮ್ರಾಟರು ನೀಡಿದ್ದ ವಿಗ್ರಹಗಳೊಂದಿಗೆ ಹನ್ನೊಂದು ದಿನ ಉಪವಾಸವನ್ನು ಮಾಡುತ್ತಾರೆ. ದೇವಾಲಯದ ಸಿಂಹಾಸನ ಕಟ್ಟೆಯಿಂದ ಕಾರಣಿಕ ನುಡಿಯಲಾಗುವ ಸ್ಥಳಕ್ಕೆ ಸ್ವಾಮಿಯ ಜಯಘೋಷದೊಂದಿಗೆ ಕರೆತರಲಾಗುತ್ತದೆ. ಬಿಲ್ಲನ್ನು ಏರುವ ಗೊರವಯ್ಯ 'ಸದ್ದಲೇ'ಎಂದು ಕಾರಣಿಕ ನುಡಿದು ಹಿಮ್ಮುಖವಾಗಿ ಬೀಳುತ್ತಾರೆ.

ಮುತ್ತಿನ ರಾಶಿ ಮೂರು ಪಾಲು ಆತಲೇ

ಮುತ್ತಿನ ರಾಶಿ ಮೂರು ಪಾಲು ಆತಲೇ

ಈ ಬಾರಿ, 'ಮುತ್ತಿನ ರಾಶಿ ಮೂರು ಪಾಲು ಆತಲೇ' ಎನ್ನುವ ಕಾರಣಿಕವನ್ನು ಗೊರವಯ್ಯ ನುಡಿದಿದ್ದಾರೆ. ಎಂದಿನಂತೆ, ಭಕ್ತರು ಇದನ್ನು ವಿವಿಧ ರೀತಿಯಲ್ಲಿ ಅರ್ಥೈಸಿಕೊಂಡಿದ್ದಾರೆ. ನಾಡಿನ ಮೂರು ಭಾಗದಲ್ಲಿ ಸಮೃದ್ಧ ಮಳೆ-ಬೆಳೆ ಆಗಲಿದ್ದು, ಉಳಿದ ಒಂದು ಭಾಗದಲ್ಲಿ ಮಳೆ-ಬೆಳೆಯ ಸಮಸ್ಯೆ ಆಗಲಿದೆ ಎಂದು ಭಕ್ತರು ಭವಿಷ್ಯವನ್ನು ಅರ್ಥೈಸಿಕೊಂಡಿದ್ದಾರೆ. ಆದರೆ, ಈ ಕಾರಣಿಕ ಶುಭ ಫಲದ ಮುನ್ಸೂಚನೆಯಲ್ಲ ಎಂದೂ ಅರ್ಥೈಸಿಕೊಂಡವರು ಸಾಕಷ್ಟು ಜನರಿದ್ದಾರೆ.

ಕಾರಣಿಕದಲ್ಲಿ ಶುಭ ಫಲ ಕಾಣಿಸುತ್ತಿಲ್ಲ

ಕಾರಣಿಕದಲ್ಲಿ ಶುಭ ಫಲ ಕಾಣಿಸುತ್ತಿಲ್ಲ

ಈ ಬಾರಿಯ ಕಾರಣಿಕದಲ್ಲಿ ಶುಭ ಫಲ ಕಾಣಿಸುತ್ತಿಲ್ಲ. ರಾಜಕೀಯ, ಕೃಷಿ ಮತ್ತು ವ್ಯಾವಹಾರಿಕ ಕ್ಷೇತ್ರದಲ್ಲಿ ಏಳಿಗೆಯಾಗುವುದಿಲ್ಲ. ಎಲ್ಲಾ ರಂಗದಲ್ಲೂ ಏರುಪೇರಾಗುವ ಸಾಧ್ಯತೆಯಿದ್ದು, ಚೇತರಿಕೆ ಕಾಣುವುದು ಕಷ್ಟ ಎಂದೂ ಅರ್ಥೈಸಿಕೊಳ್ಳಲಾಗುತ್ತಿದೆ.

ಸಂಪಾಯಿತಲೇ ಪರಾಕ್

ಸಂಪಾಯಿತಲೇ ಪರಾಕ್

ಕಳೆದ ವರ್ಷ 'ಸಂಪಾಯಿತಲೇ ಪರಾಕ್' ಎನ್ನುವ ಭವಿಷ್ಯವನ್ನು ನುಡಿಯಲಾಗಿತ್ತು. ಈಶ್ವರನೇ ಗೊರವಪ್ಪನ ರೂಪದಲ್ಲಿ ದೈವವಾಣಿ ನುಡಿಯುತ್ತಾನೆಂದೇ ನಂಬಲಾಗುವ ಕಾರಣಿಕವನ್ನು 'ರಾಜ್ಯದಲ್ಲಿ ಸಮೃದ್ಧವಾದ ಮಳೆ, ಬೆಳೆಯಾಗಲಿದ್ದು, ಜನ ನೆಮ್ಮದಿ, ಸಹಬಾಳ್ವೆಯಿಂದ ಬದುಕುತ್ತಾರೆ' ಎಂದು ಅರ್ಥೈಸಿಕೊಳ್ಳಲಾಗಿತ್ತು.

English summary
How Devotees Are Understanding Yearly Prediction Of Mylara Lingeshwara Temple,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X