• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅವಕಾಶವಾದಿ ಬ್ಲ್ಯಾಕ್ ಫಂಗಸ್: ಬೆಂಕಿಯಿಂದ ಬಾಣಲೆಗೆ, ಎಚ್ಚರಾ.. ಇಲ್ಲಾಂದ್ರೆ ಟ್ರೀಟ್ಮೆಂಟ್ ಕಷ್ಟ

|

ಕೊರೊನಾ ಎರಡನೇ ಅಲೆಯ ನಡುವೆ ಬ್ಲ್ಯಾಕ್ ಫಂಗಸ್ ಕಾಟ ಆರಂಭವಾಗಿದೆ. ಫಂಗಸ್ ಎನ್ನುವುದು ಹಿಂದಿನಿಂದಲೂ ಇದೆ, ಆದರೆ ಕಪ್ಪು ಬಣ್ಣದಲ್ಲಿರುವ ಈ ಫಂಗಸ್ ದಾಳಿ ನಡೆಸುತ್ತಿರುವುದು ಕೋವಿಡ್ ನಿಂದ ಗುಣಮುಖರಾದವರಿಗೆ.

ಇದು ಹೇಗೆ ಮನುಷ್ಯನನ್ನು ಅಟ್ಯಾಕ್ ಮಾಡುತ್ತದೆ, ಯಾವ ಕಾರಣಕ್ಕಾಗಿ ಇದು ಕೋವಿಡ್ ಗುಣಮುಖರ ದೇಹದೊಳಗೆ ಸೇರಿಕೊಳ್ಲುತ್ತದೆ, ಈ ಬಗ್ಗೆ ಎಚ್ಚರ ತೆಗೆದುಕೊಳ್ಳಬೇಕಾದದ್ದು ಎಲ್ಲಿ ಎನ್ನುವುದರ ಬಗ್ಗೆ ಖ್ಯಾತ ವೈದ್ಯರೊಬ್ಬರು ವಿವರಣೆಯನ್ನು ನೀಡಿದ್ದಾರೆ.

ಟೆಸ್ಟಿಂಗ್ ಕಮ್ಮಿಯಿಂದ ಹೊಸ ಕೇಸ್ ಇಳಿಕೆ: ಆದರೆ ಡಿಸ್ಚಾರ್ಜ್ ಸಂಖ್ಯೆಟೆಸ್ಟಿಂಗ್ ಕಮ್ಮಿಯಿಂದ ಹೊಸ ಕೇಸ್ ಇಳಿಕೆ: ಆದರೆ ಡಿಸ್ಚಾರ್ಜ್ ಸಂಖ್ಯೆ

ಕಿಮ್ಸ್ ಆಸ್ಪತ್ರೆಯ ಮೆಡಿಕಲ್ ಸೂಪರಿಡೆಂಟ್ ಆಗಿದ್ದ, ಸುಮಾರು ಮೂವತ್ತು ಸಾವಿರಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಯನ್ನು ಮಾಡಿರುವ ನಾಡಿನ ಖ್ಯಾತ ವೈದ್ಯರಾದ ಡಾ.ಆಂಜನಪ್ಪ ಅವರು ಬ್ಲ್ಯಾಕ್ ಫಂಗಸ್ ಬಗ್ಗೆ ವಿವರಣೆಯನ್ನು ನೀಡಿದ್ದಾರೆ.

 ರೆಮ್‌ಡೆಸಿವಿರ್ ಜೀವ ಉಳಿಸುವ ಚುಚ್ಚುಮದ್ದಾ? ಓವರ್ ಟು ಡಾ.ಆಂಜನಪ್ಪ ರೆಮ್‌ಡೆಸಿವಿರ್ ಜೀವ ಉಳಿಸುವ ಚುಚ್ಚುಮದ್ದಾ? ಓವರ್ ಟು ಡಾ.ಆಂಜನಪ್ಪ

ಡಾ.ಆಂಜನಪ್ಪ ಪ್ರಕಾರ ಇದು ಅವಕಾಶವಾದಿ ಫಂಗಸ್ ಆಗಿದ್ದು, ವೈದ್ಯರು ನೀಡಿದ ಸೂಚನೆಯನ್ನು ಪಾಲಿಸಿದರೆ ಇದರಿಂದ ಏನೂ ತೊಂದರೆಯಿಲ್ಲ. ನಿರ್ಲಕ್ಷ್ಯ ಮಾಡಿದರೆ ಇದಕ್ಕೆ ಟ್ರೀಟ್ಮೆಂಟ್ ಕೊಡುವುದು ಕಷ್ಟ.

 ತೆಂಗಿನಕಾಯಿಯನ್ನು ಒಡೆದು ಅದನ್ನು ಮೂರು ದಿನ ಬಳಸದೇ ಇದ್ದರೆ

ತೆಂಗಿನಕಾಯಿಯನ್ನು ಒಡೆದು ಅದನ್ನು ಮೂರು ದಿನ ಬಳಸದೇ ಇದ್ದರೆ

ತೆಂಗಿನಕಾಯಿಯನ್ನು ಒಡೆದು ಅದನ್ನು ಮೂರು ದಿನ ಬಳಸದೇ ಇದ್ದರೆ ಅದರಲ್ಲಿ ಬೂಸ್ಟ್ ಬೆಳೆಯುತ್ತದೆ, ಅದನ್ನೇ ಫಂಗಸ್ ಎಂದು ಕರೆಯಲಾಗುತ್ತದೆ. ಈ ಫಂಗಸ್ ಗಿಡದಲ್ಲಿ, ಮಣ್ಣಿನಲ್ಲಿ, ಧೂಳಿನಲ್ಲಿ ಇರುತ್ತದೆ. ಈಗಿನ ಸಮಯಕ್ಕೆ ಇದು ಯಾಕೆ ಭಯ ಹುಟ್ಟಿಸುವಂತದ್ದು ಅಂದರೆ, ಇದು, ಕೊರೊನಾದಿಂದ ಗುಣಮುಖರಾಗಿ ಬರುತ್ತಿರುವವರ ಮೇಲೆ ದಾಳಿ ಮಾಡುತ್ತಿರುವ ಕಾರಣಕ್ಕಾಗಿ.

 ಸ್ವಲ್ಪದಿನ ಮಾಸ್ಕ್ ಹಾಕಿಕೊಂಡಿರಿ, ಕೈತೊಳೆಯದೇ ಊಟ ಮಾಡಬೇಡಿ

ಸ್ವಲ್ಪದಿನ ಮಾಸ್ಕ್ ಹಾಕಿಕೊಂಡಿರಿ, ಕೈತೊಳೆಯದೇ ಊಟ ಮಾಡಬೇಡಿ

ಇಂತವರಿಗೆ ಬ್ಲ್ಯಾಕ್ ಫಂಗಸ್ ಹುಡುಕಿಕೊಂಡು ಬಂದು ದಾಳಿ ಮಾಡುವುದಿಲ್ಲ. ಇವರ ನಿರ್ಲಕ್ಷ್ಯದಿಂದಾಗಿ ಇದು ದೇಹದೊಳಗೆ ಸೇರಿಕೊಳ್ಳುತ್ತದೆ. ಮಣ್ಣಿನಲ್ಲಿ ಕೈಯಾಡಿಸಬೇಡಿ, ಸ್ವಲ್ಪದಿನ ಮಾಸ್ಕ್ ಹಾಕಿಕೊಂಡಿರಿ, ಕೈತೊಳೆಯದೇ ಊಟ ಮಾಡಬೇಡಿ ಎಂದು ಎಚ್ಚರಿಕೆಯನ್ನು ನೀಡಿರುತ್ತವೆ. ಈ ಫಂಗಸ್, ಮೂಗು, ಕಣ್ಣು ಮತ್ತು ಬಾಯಿಯಿಂದ ದೇಹದೊಳಗೆ ಪ್ರವೇಶ ಮಾಡುತ್ತದೆ.

 ಮಧುಮೇಹದ ತೊಂದರೆಯಿರುವವರು ಬಹಳ ಜಾಗ್ರತೆಯಿಂದ ಇರಬೇಕು

ಮಧುಮೇಹದ ತೊಂದರೆಯಿರುವವರು ಬಹಳ ಜಾಗ್ರತೆಯಿಂದ ಇರಬೇಕು

ಮಧುಮೇಹದ ತೊಂದರೆಯಿರುವವರು ಬಹಳ ಜಾಗ್ರತೆಯಿಂದ ಇರಬೇಕು. ಮೂಗು ಊದಿಕೊಳ್ಳುವುದು, ಕಣ್ಣು ಕೆಂಪಾಗುವುದು, ಸೈನಸ್ ನಲ್ಲಿ ಇನ್ಫೆಕ್ಷನ್ ಆಗುವುದು.. ಇದೆಲ್ಲಾ ಈ ಫಂಗಸಿನ ಗುಣಲಕ್ಷಣವಾಗಿರುತ್ತದೆ. ಹಾಗಾಗಿ, ಮನುಷ್ಯ ಬದುಕಿ ಉಳಿಯಬೇಕಾದರೆ, ಫಂಗಸ್ ದಾಳಿ ಮಾಡುವ ಅಂಗಾಂಗವನ್ನೇ ತೆಗೆಯಬೇಕಾಗುತ್ತದೆ.

 ಕೂರೊನಾ ಐಸಿಯುನಿಂದ ಗುಣಮುಖರಾಗಿ ಬಂದವರು ಬಹಳ ಜಾಗ್ರತೆ

ಕೂರೊನಾ ಐಸಿಯುನಿಂದ ಗುಣಮುಖರಾಗಿ ಬಂದವರು ಬಹಳ ಜಾಗ್ರತೆ

ಇದನ್ನು ಸಣ್ಣಪುಟ್ಟ ಆಸ್ಪತ್ರೆಗಳಿಂದ ಇದನ್ನು ಸರಿಮಾಡಲು ಸಾಧ್ಯವಿಲ್ಲ. ಬಡಬಗ್ಗರಿಗೆ ಮತ್ತೆ ಖರ್ಚಿಗೆ ಬರುವ ಫಂಗಸ್ ಆಗಿದೆ. ಅಂಪಟರೋಯಿಸ್ ಎನ್ನುವ ಲಸಿಕೆ ಇದೆ, ಇದರ ಬೆಲೆ ಸುಮಾರು ಏಳು ಸಾವಿರ ರೂಪಾಯಿ ತನಕ ಇರುತ್ತದೆ. ಒಬ್ಬ ಮನುಷ್ಯ ಗುಣಮುಖರಾಗಿ ಹೊರಬರಲು ನಲವತ್ತರಿಂದ ಅರವತ್ತು ವಯಾಲ್ ಬೇಕಾಗುತ್ತದೆ. ಕೂರೊನಾ ಐಸಿಯುನಿಂದ ಗುಣಮುಖರಾಗಿ ಹೊರಬಂದವರು ಬಹಳ ಜಾಗ್ರತೆಯಿಂದ ಇರಬೇಕಾಗುತ್ತದೆ.

  ಟೀ ಕುಡಿಯೋದ್ರಿಂದ ಕೊರೊನಾ‌ ಸೋಂಕು ತಡೆಗಟ್ಟಬಹುದಾ? | Oneindia Kannada
   ಕಿಮ್ಸ್ ಆಸ್ಪತ್ರೆಯ ಮೆಡಿಕಲ್ ಸೂಪರಿಡೆಂಟ್ ಆಗಿದ್ದ, ಖ್ಯಾತ ವೈದ್ಯ ಡಾ.ಆಂಜನಪ್ಪ

  ಕಿಮ್ಸ್ ಆಸ್ಪತ್ರೆಯ ಮೆಡಿಕಲ್ ಸೂಪರಿಡೆಂಟ್ ಆಗಿದ್ದ, ಖ್ಯಾತ ವೈದ್ಯ ಡಾ.ಆಂಜನಪ್ಪ

  ಕೈಯಿಂದ ಪದೇಪದೇ ಕಣ್ಣು, ಮೂಗು ಮುಟ್ಟುವುದನ್ನು ಜನರು ಮಾಡಬಾರದು. ಜನರು ಇದರ ಬಗ್ಗೆ ಭಯ ಪಡುವ ಅವಶ್ಯಕತೆಯಿಲ್ಲ, ಆದರೆ ಎಚ್ಚರಿಕೆ ಖಂಡಿತ ಬೇಕಾಗುತ್ತದೆ. ಕ್ಯಾನ್ಸರ್, ಥೈರಾಯ್ಡ್ ಸಮಸ್ಯೆ ಇರುವವರು ಎಚ್ಚರಿಕೆಯಿಂದ ಇರುವುದು ಸೂಕ್ತ. ದೇಹಲ್ಲಿ ರೋಗ ನಿರೋಧಕ ಶಕ್ತಿ ಕಮ್ಮಿ ಇರುವವರಿಗೂ ಇದು ಅಟ್ಯಾಕ್ ಮಾಡಬಹುದು.

  English summary
  How Covid 19 Patient Avoid Attacking From Black Fungus, Noted Surgeon Dr. Anjanappa Explained.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X