ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್ ವೈ ಸರ್ಕಾರದಿಂದ ಬೋಗಸ್ ಬಜೆಟ್: ಕಾಂಗ್ರೆಸ್ ಟೀಕೆ

|
Google Oneindia Kannada News

ಬೆಂಗಳೂರು, ಮಾರ್ಚ್.08: "ಕರ್ನಾಟಕದ ಬಿಜೆಪಿ ಸರ್ಕಾರದ್ದು ಹೆಡ್ ಲೈನ್ ಮ್ಯಾನೇಜ್ಮೆಂಟ್ ಬಜೆಟ್ ಅಷ್ಟೇ ಎನ್ನುವುದಕ್ಕೆ ಇದೊಂದು ಸಣ್ಣ ಉದಾಹರಣೆ ಅಷ್ಟೇ" ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಟೀಕಿಸಿದೆ.

Karnataka Budget 2021 Live Updates; ಕರ್ನಾಟಕ ಬಜೆಟ್ 2021 ಕ್ಷಣ-ಕ್ಷಣದ ಮಾಹಿತಿKarnataka Budget 2021 Live Updates; ಕರ್ನಾಟಕ ಬಜೆಟ್ 2021 ಕ್ಷಣ-ಕ್ಷಣದ ಮಾಹಿತಿ

"ಸಂಸ್ಕೃತಿ, ಪರಂಪರೆಗೂ ನೈಸರ್ಗಿಕ ಸಂಪನ್ಮೂಲ ರಕ್ಷಣೆಗೂ ಏನು ಸಂಬಂಧ!?. ಇವೆರೆಡಕ್ಕೂ ಇಲಾಖಾವಾರು ವಿವರಣೆ ನೀಡದೆ ಒಂದೇ ವಾಕ್ಯದಲ್ಲಿ ವಿವರಣೆ ನೀಡಿದ್ದರಲ್ಲಿಯೇ ಇದು ಬೋಗಸ್ ಬಜೆಟ್ ಎನ್ನುವುದು ಅರಿವಾಗುತ್ತದೆ!" ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಮಾರ್ಚ್.08ರಂದು ಎಂಟನೇ ಬಾರಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಬಜೆಟ್ ಮಂಡಿಸಿದರು. 2021-22ನೇ ಸಾಲಿನ ಕರ್ನಾಟಕ ಬಜೆಟ್ ಒಟ್ಟು ಗಾತ್ರ 2,46,207 ಕೋಟಿ ರೂಪಾಯಿ ಆಗಿದ್ದು, ಒಟ್ಟು ವೆಚ್ಚ 2.46 ಲಕ್ಷ ರೂಪಾಯಿ ತಗಲುತ್ತದೆ. ಬಜೆಟ್ ನ ಒಟ್ಟು ಕೊರತೆ 15,134 ಕೋಟಿ ರೂಪಾಯಿ ಆಗಿದೆ.

How Congress Tweet Criticise The Karnataka Budget 2021


ಬೆಲೆ ಇಳಿಕೆ ಬಗ್ಗೆ ಕ್ರಮ ತೆಗೆದುಕೊಂಡಿಲ್ಲ ಎಂದು ಟೀಕೆ:

ಕರ್ನಾಟಕದಲ್ಲಿ "ಪ್ರಸ್ತುತ ಜನಸಾಮಾನ್ಯರನ್ನ ಹೈರಾಣಾಗಿಸಿದ್ದು ಬೆಲೆ ಏರಿಕೆ ಎನ್ನುವ ಭೂತ. ಬಜೆಟ್‌ನಲ್ಲಿ ಬೆಲೆ ಇಳಿಕೆಗೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಳ್ಳದಿರುವುದು ಹಾಗೂ ಇಂಧನ ತೈಲಗಳ ಮೇಲಿನ ತೆರಿಗೆ ಕಡಿತಗೊಳಿಸದಿರುವುದು ಕರ್ನಾಟಕ ಬಿಜೆಪಿ ಸರ್ಕಾರದ ಜನವಿರೋಧಿ ಧೋರಣೆಯನ್ನು ಅನಾವರಣಗೊಳಿಸಿದೆ" ಎಂದು ಕಾಂಗ್ರೆಸ್ ಟೀಕಿಸಿದೆ.

ಬಿಜೆಪಿ ಸರ್ಕಾರವು ಕೋಟಿ ಕೋಟಿ ರೂಪಾಯಿ ಸಾಲ ಮಾಡಿರುವ ಬಗ್ಗೆ ಬಜೆಟ್ ನಲ್ಲಿ ಘೋಷಿಸಲಾಗಿದೆ. ಹೀಗಿದ್ದರೂ ಸರ್ಕಾರ "ಸಾಲ ಮಾಡಿದರೂ ತುಪ್ಪ ತಿನ್ನಿಸಲಾಗದ ಬಜೆಟ್" ಮಂಡಿಸಿದೆ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

English summary
How Congress Tweet Criticise The Karnataka Budget 2021. Read Here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X