ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಚನಬೆಲೆ ಗ್ರಾಮದಲ್ಲಿ ಮನೆಗೆ ಬೆಂಕಿ, ಅಮ್ಮ-ಮಗ ಸಾವು

By Mahesh
|
Google Oneindia Kannada News

ಬೆಂಗಳೂರು, ಫೆ. 21: ರಾಮನಗರ ಜಿಲ್ಲೆ ತಾವರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಮಂಚನಬೆಲೆ ಗ್ರಾಮದ ನಿವಾಸಿ ಭೋಜಣ್ಣ ಅವರ ಮನೆ ಬೆಂಕಿಗೆ ಆಹುತಿಯಾಗಿದೆ. ಶನಿವಾರ ಮಧ್ಯರಾತ್ರಿ ನಂತರ ದುಷ್ಕರ್ಮಿಗಳು ಮನೆಗೆ ಬೆಂಕಿ ಹಾಕಿ ಪರಾರಿಯಾಗಿದ್ದಾರೆ.

ಇತ್ತೀಚಿನ ವರದಿಯಂತೆ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಜಯಲಕ್ಷ್ಮಿಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮನೆಗೆ ಹೊರಗಡೆಯಿಂದ ಚಿಲಕ ಹಾಕಿ, ಬೆಂಕಿ ಹಾಕಲಾಗಿತ್ತು. ಭೋಜಣ್ಣ ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ಭರತ್ ಬೆಂಕಿಗೆ ಸಿಲುಕಿ ತೀವ್ರವಾಗಿ ಗಾಯಗೊಂಡ ಸ್ಥಿತಿಯಲ್ಲಿರುವಾಗ ಗ್ರಾಮಸ್ಥರು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ.

ಆದರೆ, ಮೈಸೂರು ರಸ್ತೆ ರಾಮೋಹಳ್ಳಿ ಬಳಿಯ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದುತ್ತಿದ್ದ 19 ವರ್ಷ ವಯಸ್ಸಿನ ಭರತ್ ಗೌಡ ಬೆಂಗಳೂರಿನ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

House set on Fire when family was asleep in Manchanabele Village

ಭರತ್ ಅವರ ತಂದೆ ಭೋಜಣ್ಣ ಅವರಿಗೆ ಲಕ್ಕಸಂದ್ರದ ಅಭಯ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಭರತ್ ಅವರ ತಾಯಿ ವಿಜಯಲಕ್ಷ್ಮಿ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿದೆ.

ಮೃತ ಭರತ್ ಅವರ ಕಸಿನ್ ಮಮತಾ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ನನಗೆ ವಿಷಯ ಬೆಳಗ್ಗೆ ತಿಳಿಯಿತು. ಶನಿವಾರ ರಾತ್ರಿ 3 ಗಂಟೆಗೆ ಯಾರೋ ಮನೆಗೆ ಬೆಂಕಿ ಬಿದ್ದಿದೆ ಎಂದು ಸಂಬಂಧಿಕರೊಬ್ಬರು ತಿಳಿಸಿದರು. ಭರತ್ ನನಗೆ ತಮ್ಮ ಆಗಬೇಕು. ಭಾನುವಾರ ಬೆಳಗ್ಗೆ ಭರತ್ ಮೃತಪಟ್ಟಿರುವುದು ತಿಳಿಯಿತು. ಅವರ ಅಮ್ಮನಿಗೆ ಕಾಲು ಮುಖ ಎಲ್ಲವೂ ಬೆಂದು ಹೋಗಿದೆ. ಯಾರ ಮೇಲೂ ಅನುಮಾನ ಬರುತ್ತಿಲ್ಲ ಎಂದಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ತಾವರೆಕೆರೆ ಠಾಣೆ ಪೊಲೀಸರು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಮೇಲ್ನೋಟಕ್ಕೆ ಇದು ವೈಯಕ್ತಿಕ ದ್ವೇಷ, ಜಮೀನು ವಿವಾದದಿಂದ ನಡೆಸಲಾದ ಕೃತ್ಯ ಎಂದು ಕಂಡು ಬಂದಿದೆ ಎಂದು ತನಿಖಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

English summary
House set on Fire by unknown miscreants when family of three was asleep in Tavarekere police station limits, Ramanagar. A 19 year old Bharath Gowda succumbs to death. While his parents battling for life in Victoria Hospital, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X