ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏ.1ರಿಂದ ಹೋಟೆಲ್‌ನಲ್ಲಿ ಊಟ-ತಿಂಡಿಯೂ ದುಬಾರಿ

|
Google Oneindia Kannada News

ಬೆಂಗಳೂರು ಮಾರ್ಚ್ 31: ಕೊರೊನಾ ಆರ್ಥಿಕ ಸಂಕಷ್ಟದಿಂದ ಜನ ಹೊರ ಬರಲು ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ರಾಜ್ಯ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಲೇ ಇದೆ. ಈ ನಡುವೆ ಗಾಯದ ಮೇಲೆ ಬರೆ ಎಳೆದಂತೆ ನಾಳೆಯಿಂದ ಹೋಟೆಲ್ ಮಾಲೀಕರು ಊಟ, ತಿಂಡಿ ಬೆಲೆಯನ್ನು ಹೆಚ್ಚಳ ಮಾಡಲು ನಿರ್ಧರಿಸಿದ್ದಾರೆ.

ಈಗಾಗಲೇ ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ, ವಿದ್ಯುತ್, ದವಸ ದಾನ್ಯಗಳ ಬೆಲೆ ಗಗನಕ್ಕೇರಿದೆ. ಇನ್ನೂ ತರಕಾರಿ ಬೆಲೆ ಕೇಳೋ ಹಾಗಿಲ್ಲ. ಹೇಳಿ ಕೇಳಿ ಇದು ಬೇಸಿಗೆ ಕಾಲ. ತರಕಾರಿ ಬೇಗ ಹಾಳಾಗುವ ಸಾಧ್ಯತೆ ಇದ್ದು ಅದರ ಬೆಲೆ ಕೂಡ ಆಗಾಗ ಕೈಗೆಟಕಲು ಸಾಧ್ಯವಾಗದಷ್ಟು ಏರಿಕೆಯಾಗುತ್ತಲೇ ಇರುತ್ತದೆ. ಕೊರೊನಾದಿಂದಾಗಿ ಎರಡು ವರ್ಷ ಜನರಿಗೆ ಕೆಲಸ ಮಾಡಲು ಸಾಧ್ಯವಾಗಿಲ್ಲ. ಬಹುತೇಕ ಜನ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಹೀಗಿರುವಾಗ ಬೆಲೆ ಏರಿಕೆಯಿಂದಾಗಿ ಜನ ಹೈರಾಣಾಗಿ ಹೋಗಿದ್ದಾರೆ.

ಉಡುಪಿ: ಮಸೀದಿ ಕಟ್ಟಡದಲ್ಲಿದ್ದ SDPI ಅಧ್ಯಕ್ಷನ ಅಕ್ರಮ ಹೋಟೆಲ್ ತೆರವುಉಡುಪಿ: ಮಸೀದಿ ಕಟ್ಟಡದಲ್ಲಿದ್ದ SDPI ಅಧ್ಯಕ್ಷನ ಅಕ್ರಮ ಹೋಟೆಲ್ ತೆರವು

ಹೀಗಾಗಿ ಹೋಟೆಲ್ ಗಳಲ್ಲಿ ಸಿಗುವ ಆಹಾರಕ್ಕೂ ಕೂಡ ಇನ್ಮುಂದೆ ಜನ ಹೆಚ್ಚಿನ ಬೆಲೆ ನೀಡಬೇಕು. ಅಡುಗೆ ಅನಿಲಾ, ಗ್ಯಾಸ್, ಎಣ್ಣೆ ಬೆಲೆ ಏರಿಕೆಯಾಗಿದ್ದು ಇದರ ಬಿಸಿ ಹೋಟೆಲೆ ಉದ್ಯಮಕ್ಕೂ ತಟ್ಟಿದೆ. ಹೀಗಾಗಿ ಏಪ್ರಿಲ್ 1ರಿಂದ ಊಟ ಮತ್ತು ತಿಂದ ದರ ಹೆಚ್ಚಳ ಮಾಡಲು ಮಾಲೀಕರು ನಿರ್ಧರಿಸಿದ್ದಾರೆ.

Hotel Meals and Snacks Will Be Expensive From April 1st

ಅಡುಗೆ ಎಣ್ಣೆ ದರ ಹೆಚ್ಚಳದಿಂದಾಗಿ (ಸನ್‌ಫ್ಲವರ್ ರಿಫೈನ್ಡ್ ಆಯಿಲ್ ದರ 200 ರೂ.) ಹೋಟೆಲ್‌ಗಳಲ್ಲಿ ಮಾರಾಟ ಮಾಡುವ ಪೂರಿ, ಚಪಾತಿ, ಪಲ್ಯ, ವಡೆ, ಬಜ್ಜಿ, ಕಬಾಬ್, ಚೂನೀಸ್ ಫುಡ್ ಸೇರಿ ಹಲವು ವೆಜ್- ನಾನ್‌ವೆಜ್ ಪದಾರ್ಥಗಳಖನ್ನು ತಯಾರಿಸಲು ಖರ್ಚು ಅಧಿಕವಾಗುತ್ತಿದೆ. ಹೀಗಾಗಿ ಏಪ್ರಿಲ್‌ 1 ರಿಂದ ಊಟ, ತಿಂಡಿಯ ದರ ಏರಿಕೆ ಮಾಡುವ ಸಂಬಂಧ ಹೋಟೆಲ್‌ ಮಾಲೀಕರ ಸಂಘವು ಸಭೆ ನಡೆಸಿ ತೀರ್ಮಾನ ಕೈಗೊಂಡಿದೆ. ಇಂದಿನ ಖಾದ್ಯ ತೈಲ ಬೆಲೆ ಏರಿಕೆಗೆ ಅನುಗುಣವಾಗಿ ಶೇ.10ರಷ್ಟು ಏರಿಕೆ ಮಾಡಲು ನಿರ್ಧರಿಸಲಾಗಿದೆ. ಏಪ್ರಿಲ್‌ 1 ರಿಂದ ಏರಿಕೆಯಾಗಲಿದೆ ಎಂದು ಹೋಟೆಲ್‌ ಮಾಲಿಕರು ತಿಳಿಸಿದ್ದಾರೆ.

Hotel Meals and Snacks Will Be Expensive From April 1st

ಯಾವ ಆಹಾರದ ಬೆಲೆ ಎಷ್ಟಿತ್ತು? ಎಷ್ಟು ಹೆಚ್ಚಾಗಲಿದೆ?

ರವಾ ಇಡ್ಲಿ 45 ರೂ. ಯಿಂದ 50ಕ್ಕೆ ಏರಿಕೆ

ಅಕ್ಕಿ ರೊಟ್ಟಿ 45 ರಿಂದ 50 ರೂ.ಗೆ ಏರಿಕೆ

ಪನ್ನೀರ್ ಮಂಚೂರಿ 110 ರಿಂದ 120 ರೂ.ಗೆ ಹೆಚ್ಚಳ

ಒಂದು ಪ್ಲೇಟ್ ಪೂರಿ 70 ರೂ. ಯಿಂದ 75 ರೂ.ಗೆ ಏರಿಕೆ ಸಾಧ್ಯತೆ

ಚೌಚೌ ಬಾತ್ 70 ರೂ. 75 ರೂ. ಏರಿಕೆ

ಸೌತ್ ಇಂಡಿಯನ್ ಊಟ 95 ರೂ. ಯಿಂದ 100 ರೂ.

ರೈಸ್ ಬಾತ್ 40 ರಿಂದ 50 ರೂ.ಗೆ ಹೆಚ್ಚಳ

ಮಸಾಲೆ ದೋಸೆ 75 ರಿಂದ 80 ರೂ. ಏರಿಕೆ

ಇಡ್ಲಿ, ವಡೆ 40 ರೂ. ರಿಂದ 45 ರೂ.ಗೆ ಏರಿಕೆ

ಕಾಫಿ, ಟೀ ಬೆಲೆ 15 ರಿಂದ 20 ರೂ.ಗೆ ಏರಿಕೆ

ಫ್ರೈಡ್ ರೈಸ್ 100 ರಿಂದ 110 ರೂ.ಗೆ ಏರಿಕೆ

ಗೋಬಿ ಮಂಚೂರಿ 100 ರಿಂದ 110 ರೂ.ಗೆ ಏರಿಕೆ

Recommended Video

IPS ಅಧಿಕಾರಿ ಯಾವ ಪಕ್ಷದ ಜೊತೆ ಇದಾರೆ ಗೊತ್ತಾ? | Oneindia Kannada

English summary
People unable to get out of financial hardship. The state government has continued to raise the prices of essential commodities. In the meantime, the hotel owner has decided to increase the price of meals and snacks tomorrow.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X