ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣಾ ಸೋಲಿನಿಂದ ಕಂಗಾಲು: ಮತ್ತೆ ಮುಖ್ಯಮಂತ್ರಿ ಭೇಟಿಯಾದ ಎಂಟಿಬಿ ನಾಗರಾಜ್

|
Google Oneindia Kannada News

Recommended Video

ಸೋಲಿನಿಂದ ಕಂಗಾಲಾಗಿ ಮತ್ತೆ ಸಿಎಂ ಭೇಟಿಯಾದ ಎಂಟಿಬಿ | MTB | YEDIYURAPPA | BJP | CONGRESS | JDS

ಬೆಂಗಳೂರು, ಡಿ 14: ಉಪಚುನಾವಣೆಯಲ್ಲಿ ಸೋತ ನಂತರ, ತಮ್ಮ ರಾಜಕೀಯ ನೆಲೆಯನ್ನು ಭದ್ರಗೊಳಿಸಲು ಪ್ರಯತ್ನಿಸುತ್ತಿರುವ ಹೊಸಕೋಟೆಯ ಮಾಜಿ ಶಾಸಕ, ಎಂಟಿಬಿ ನಾಗರಾಜ್, ಮತ್ತೆ ಮುಖ್ಯಮಂತ್ರಿಯವರನ್ನು ಭೇಟಿಯಾಗಿದ್ದಾರೆ.

ಶನಿವಾರ (ಡಿ 14) ಯಡಿಯೂರಪ್ಪನವರನ್ನು ಅವರ ಡಾಲರ್ಸ್ ಕಾಲೋನಿ ಮನೆಯಲ್ಲಿ ಭೇಟಿಯಾದ ಎಂಟಿಬಿ, ಸುಮಾರು 45 ನಿಮಿಷ ಮಾತುಕತೆ ನಡೆಸಿದ್ದಾರೆ. ಸಚಿವ ಸಂಪುಟದಲ್ಲಿ ತಮಗೆ ಸ್ಥಾನದ ವಿಚಾರದಲ್ಲಿ ಮಾತುಕತೆ ನಡೆಸಿದ್ದಾರೆಂದು ವರದಿಯಾಗಿದೆ.

ಕಾಲಚಕ್ರ ತಿರುಗಿದಾಗ: ಅಂದು ವರಿಷ್ಠರಿಂದ ಬಿಎಸ್ವೈ ನಿರ್ಲಕ್ಷ್ಯ: ಇಂದು ಮೋದಿಯಿಂದ standing ovation ಕಾಲಚಕ್ರ ತಿರುಗಿದಾಗ: ಅಂದು ವರಿಷ್ಠರಿಂದ ಬಿಎಸ್ವೈ ನಿರ್ಲಕ್ಷ್ಯ: ಇಂದು ಮೋದಿಯಿಂದ standing ovation

ಬಚ್ಚೇಗೌಡರ ಪುತ್ರ ಶರತ್ ಬಚ್ಚೇಗೌಡರನ್ನು ಬಿಜೆಪಿಗೆ ಮತ್ತೆ ಸೇರಿಸಿಕೊಳ್ಳಬಾರದು ಮತ್ತು ಶರತ್, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿಯಾದ ವಿಚಾರದ ಬಗ್ಗೆಯೂ ಎಂಟಿಬಿ, ಮುಖ್ಯಮಂತ್ರಿಳ ಬಳಿ ಚರ್ಚಿಸಿದ್ದಾರೆ.

Hoskote Ex MLA, MTB Nagaraj Again Met CM Yediyurappa At His Residence

ಸ್ವತಃ ಮುಖ್ಯಮಂತ್ರಿಗಳು, ಎಂಟಿಬಿ ನಾಗರಾಜ್ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದರು. ಈ ಭೇಟಿಯ ನಂತರ, ಎಂಟಿಬಿ ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನವನ್ನು ನೀಡಲಾಗುವುದು ಎಂದು ಯಡಿಯೂರಪ್ಪ ಹೇಳಿದ್ದರು.

ಸದ್ಯಕ್ಕೆ ಯಾಕಿಲ್ಲ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ?ಸದ್ಯಕ್ಕೆ ಯಾಕಿಲ್ಲ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ?

ಉಪಚುನಾವಣೆಯಲ್ಲಿ ಸೋತ, ಎಚ್.ವಿಶ್ವನಾಥ್ ಮತ್ತು ಎಂಟಿಬಿ ನಾಗರಾಜ್ ಅವರಿಗೆ ಸಚಿವ ಸ್ಥಾನ ನೀಡಬೇಕೇ ಎನ್ನುವುದರ ಬಗ್ಗೆ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲಿ, ಎಂಟಿಬಿ ಭೇಟಿ, ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಬಿಜೆಪಿಯ ಚಿಕ್ಕಬಳ್ಳಾಪುರದ ಸಂಸದ ಬಿ.ಎನ್.ಬಚ್ಚೇಗೌಡರ ವಿರುದ್ದ ಯಾಕೆ ಇನ್ನು ಪಕ್ಷ ಶಿಸ್ತುಕ್ರಮ ತೆಗೆದುಕೊಳ್ಳಲಿಲ್ಲ ಎಂದು ಎಂಟಿಬಿ ನಾಗರಾಜ್, ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದ್ದಾರೆಂದು ವರದಿಯಾಗಿದೆ. ನನ್ನ ಸೋಲಿಗೆ ಬಚ್ಚೇಗೌಡರೇ ಕಾರಣ ಎಂದು ಎಂಟಿಬಿ, ಬಹಿರಂಗವಾಗಿಯೇ ಆರೋಪಿಸಿದ್ದರು.

English summary
Hoskote Ex MLA, MTB Nagaraj Again Met Chief Minister Yediyurappa At His Residence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X