ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದ 5 ಕಡೆ ನಿರ್ಮಾಣವಾಗಲಿದೆ ಮಿನಿ ಲಾಲ್ ಬಾಗ್

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 18 : ಸಸ್ಯಕಾಶಿ ಲಾಲ್ ಬಾಗ್ ಬೆಂಗಳೂರು ನಗರದ ಹೆಮ್ಮೆ. ತೋಟಗಾರಿಕಾ ಇಲಾಖೆ ದೇಶ-ವಿದೇಶದ ವಿವಿಧ ಸಸ್ಯ ಪ್ರಭೇಧಗಳನ್ನು ಇಲ್ಲಿ ಸಂರಕ್ಷಿಸುವ ಕಾರ್ಯ ಮಾಡುತ್ತಿದೆ. ಸದ್ಯ, ರಾಜ್ಯದ ಐದು ಜಿಲ್ಲೆಗಳಲ್ಲಿ ಮಿನಿ ಲಾಲ್ ಬಾಗ್ ನಿರ್ಮಾಣ ಮಾಡಲು ಇಲಾಖೆ ಸಿದ್ಧತೆ ನಡೆಸಿದೆ.

ರಾಜ್ಯದ ಐದು ಜಿಲ್ಲೆಗಳಲ್ಲಿ ಮಿನಿ ಲಾಲ್ ಬಾಗ್ ನಿರ್ಮಾಣವಾಗಲಿದ್ದು, ಇದಕ್ಕಾಗಿ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ಯೋಜನೆಗೆ ಸರ್ಕಾರ ಸಹ ಒಪ್ಪಿಗೆ ನೀಡಿದ್ದು, ಅನುದಾನ ಬಿಡುಗಡೆಗೊಂಡರೆ ಮುಂದಿನ ಕಾರ್ಯಗಳು ಆರಂಭವಾಗಲಿವೆ.

ಬೆಂಗಳೂರಿನ ಲಾಲ್ ಬಾಗಿನಲ್ಲಿ ಕುವೆಂಪು 'ಕವಿಶೈಲ'!ಬೆಂಗಳೂರಿನ ಲಾಲ್ ಬಾಗಿನಲ್ಲಿ ಕುವೆಂಪು 'ಕವಿಶೈಲ'!

Horticulture department to set up 5 mini Lalbagh

ಎಲ್ಲೆಲ್ಲಿ ನಿರ್ಮಾಣ? : ತುರುವೇಕೆರೆ ಬಳಿಯ ದೊಡ್ಡಸಾಗರೆ, ಕನ್ನಮಂಗಲ ಮತ್ತು ಚಿಕ್ಕಬಳ್ಳಾಪುರ ಬೈಪಾಪ್ ಬಳಿಯ ಅಣಕನೂರು, ಶಿರಸಿ ತಾಲೂಕಿನ ತಾರಕನಹಳ್ಳಿ, ಮೈಸೂರಿನ ದಟ್ಟಗಳ್ಳಿಯಲ್ಲಿ ಮಿನಿ ಲಾಲ್ ಬಾಗ್ ನಿರ್ಮಾಣ ವಾಗಲಿವೆ.

ಲಾಲ್ ಬಗ್ ನಲ್ಲಿ ಚಾಮರಾಜ ನಗರ ಈ ಪ್ರಕೃತಿ ಮಕ್ಕಳಿಗೇನು ಕೆಲಸ?ಲಾಲ್ ಬಗ್ ನಲ್ಲಿ ಚಾಮರಾಜ ನಗರ ಈ ಪ್ರಕೃತಿ ಮಕ್ಕಳಿಗೇನು ಕೆಲಸ?

ಲಾಲ್ ಬಾಗ್ ಮಾದರಿಯಲ್ಲಿಯೇ ಮಿನಿ ಲಾಲ್ ಬಾಗ್ ಅನ್ನು ಅಭಿವೃದ್ಧಿ ಮಾಡಲಾಗುತ್ತದೆ. ಅಪರೂಪದ ಸದಸ್ಯ ಪ್ರಭೇದಗಳನ್ನು ಇಲ್ಲಿ ಬೆಳೆಸಲು ಯೋಜನೆ ರೂಪಿಸಲಾಗಿದೆ. ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ನೀರಿನ ಪೂರೈಕೆ ಮತ್ತು ಇತರ ವ್ಯವಸ್ಥೆಗಳ ಬಗ್ಗೆ ತೋಟಗಾರಿಕಾ ಇಲಾಖೆ ಗಮನ ಹರಿಸಿದೆ.

'ರಾಜ್ಯದ ಐದು ಕಡೆ ಮಿನಿ ಸಸ್ಯತೋಟ ನಿರ್ಮಾಣಕ್ಕೆ ಕ್ರಮ ಕೈಗೊಂಡಿದ್ದೇವೆ. ಸರ್ಕಾರ ಅನುದಾನ ಬಿಡುಗಡೆ ಮಾಡಿದರೆ ಮುಂದಿನ ಕೆಲಸಗಳನ್ನು ಕೈಗೊಳ್ಳುತ್ತೇವೆ' ಎಂದು ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಜಗದೀಶ್ ಹೇಳಿದ್ದಾರೆ.

English summary
Karnataka Horticulture department will set up mini Lalbagh in 5 districts. Mini Lalbagh will come up in Bengaluru Rural, Uttara Kannada, Tumakuru, Mysuru districts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X