ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧಿಕಾರ ಅತೃಪ್ತಿ ಹೊರಹಾಕಿದ ಹಂಗಾಮಿ ಸಭಾಪತಿ ಹೊರಟ್ಟಿ

By Nayana
|
Google Oneindia Kannada News

ಬೆಂಗಳೂರು, ಜು.6: ಸಭಾಪತಿ ಆಯ್ಕೆ ಚರ್ಚೆಗೆ ಖುದ್ದು ಹಂಗಾಮಿ ಸಭಾಪತಿಯೇ ನಾಂದಿ ಹಾಡಿದ್ದಾರೆ. ನಾನು ಏನೂ ಕೇಳುವುದಿಲ್ಲ, ಹೈಕಮಾಂಡ್‌ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆಯೋ ಅದಕ್ಕೆ ನಾನು ಬದ್ಧ ಎಂದಿದ್ದಾರೆ.

ಸಭಾಪತಿಯಾಗಿ ಬಸವರಾಜ ಹೊರಟ್ಟಿಯನ್ನು ನೇಮಿಸುವುದಾಗಿ ಜೆಡಿಎಸ್‌ ಆಶ್ವಾಸನೆ ನೀಡಿತ್ತು. ಆದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭಾಪತಿ ಸ್ಥಾನವನ್ನು ಕಾಂಗ್ರೆಸ್‌ ಪಕ್ಷದವರಿಗೇ ನೀಡಬೇಕೆಂದು ಪಟ್ಟು ಹಿಡಿದಿದ್ದರು. ಮಾಜಿ ಸಚಿವ ಎಸ್‌ ಆರ್‌ ಪಾಟೀಲ್‌ಗೆ ಸಭಾಪತಿ ಸ್ಥಾನವನ್ನು ನೀಡಲು ಸಿದ್ದರಾಮಯ್ಯ ಲಾಬಿ ಮಾಡುತ್ತಿದ್ದಾರೆ.

ಸಚಿವ ಸ್ಥಾನ ತಪ್ಪಿದ್ದಕ್ಕೆ ಬೇಸರವಿದೆ, ಸ್ಪೀಕರ್ ಆಗಲಾರೆ : ಹೊರಟ್ಟಿಸಚಿವ ಸ್ಥಾನ ತಪ್ಪಿದ್ದಕ್ಕೆ ಬೇಸರವಿದೆ, ಸ್ಪೀಕರ್ ಆಗಲಾರೆ : ಹೊರಟ್ಟಿ

ಬಸವರಾಜ ಹೊರಟ್ಟಿಗೆ ಸಚಿವ ಸ್ಥಾನ ನೀಡುವುದಿಲ್ಲ ಬದಲಾಗಿ ಸಭಾಪತಿ ಸ್ಥಾನವನ್ನು ನೀಡುವುದಾಗಿ ಜೆಡಿಎಸ್‌ ಸಂಧಾನ ಮಾಡಿತ್ತು. ಈಗ ಜೆಡಿಎಸ್‌ನ ಹಿರಿಯ ನಾಯಕನಿಗೆ ಸಭಾಪತಿ ಹುದ್ದೆಯೂ ಇಲ್ಲ ಇತ್ತ ಸಚಿವ ಸ್ಥಾನವೂ ಕೂಡ ಇಲ್ಲದಂತಾಗಿದೆ. ಈ ಕುರಿತು ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಬಸವರಾಜ ಹೊರಟ್ಟಿ ಸಭಾಪತಿ ಹುದ್ದೆಯ ಕುರಿತು ಅವರಿಗಿರುವ ಅಸಮಾಧಾನವನ್ನು ಹೊರಹಾಕಿದ್ದಾರೆ.

Horatti shows indirect displeasure over upper house chairman selection

ನಾನು ಏನೂ ಕೇಳುವುದಿಲ್ಲಹೈಕಮಾಂಡ್‌ ಯಾವ ನಿರ್ಧಾರವನ್ನು ತೆಗೆದುಕೊಳ್ಳುತ್ತದೆಯೋ ಅದಕ್ಕೆ ನಾನು ಬದ್ಧವಾಗಿದ್ದೇನೆ, ಅಧಿವೇಶನದೊಳಗೆ ಸಭಾಪತಿ ಚುನಾವಣೆ ನಡೆಯಬೇಕು. ರಾಜ್ಯಪಾಲರು ದಿನಾಂಕ ನಿಗದಿ ಮಾಡಬೇಕು. ಸಭಾಪತಿಯಾಗಿ ಮುಂದುವರೆಯಲು ಆಸಕ್ತಿ ಇದೆ. ಎಸ್‌ ಆರ್‌ ಪಾಟೀಲರನ್ನು ಬೇಕಾದರೂ ಮಾಡಬಹುದು, ರಾಜಕಾರಣದಲ್ಲಿ ಏನನ್ನೂ ಹೇಳಲು ಸಾಧ್ಯವಿಲ್ಲ, ನನಗೂ ರಾಜಕೀಯದಲ್ಲಿ ಬೇರೆ ಬೇರೆ ಆಸೆಯಿತ್ತು ಎಂದು ಹೇಳಿದರು.

English summary
In charge chairman of upper house Basavaraj horatti shows his indirect displeasure over chairmanship selection. He was main contender for that post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X