ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆದ್ದಾರಿಗಳಲ್ಲಿ ಹಾಪ್‌ ಕಾಮ್ಸ್‌ನಿಂದ ಸಸ್ಯಹಾರಿ ಹೋಟೆಲ್ ನಿರ್ಮಾಣ

By Gururaj
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 10 : ನೈಸರ್ಗಿಕವಾಗಿ ಬೆಳೆದ ತರಕಾರಿಗಳನ್ನು ನೇರವಾಗಿ ರೈತರಿಂದ ಖರೀದಿ ಮಾಡಿ ಮಾರಾಟ ಮಾಡುವ ಹಾಪ್ ಕಾಮ್ಸ್ ಹೋಟೆಲ್ ಉದ್ಯಮಕ್ಕೆ ಕಾಲಿಡಲಿದೆ. ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಹೈಟೆಕ್ ಹೋಟೆಲ್ ನಿರ್ಮಾಣವಾಗಲಿದೆ.

ಮನೆ ಬಾಗಿಲಿಗೆ ಹಾಪ್ ಕಾಮ್ಸ್ ಉತ್ಪನ್ನಗಳನ್ನು ತಲುಪಿಸಲು 24 ಮೊಬೈಲ್ ವ್ಯಾನ್ ಮತ್ತು ಜನರಿಗೆ ಗುಣಮಟ್ಟದ ತರಕಾರಿ ಒದಗಿಸಲು 24 ಹೊಸ ಮಳಿಗೆಗಳನ್ನು ಶೀಘ್ರದಲ್ಲಿಯೇ ಹಾಪ್ ಕಾಮ್ಸ್ ಆರಂಭಿಸಲಿದೆ. ರಾಜ್ಯಾದ್ಯಂತ 490 ಮಳಿಗೆಗಳು ಸದ್ಯ ಕಾರ್ಯ ನಿರ್ವಹಿಸುತ್ತಿವೆ.

ಇಂದಿನಿಂದ ಮನೆಬಾಗಿಲಿಗೆ ಹಾಪ್‌ಕಾಮ್ಸ್ ಸೇವೆಇಂದಿನಿಂದ ಮನೆಬಾಗಿಲಿಗೆ ಹಾಪ್‌ಕಾಮ್ಸ್ ಸೇವೆ

ರಾಜ್ಯದ ಪ್ರಮುಖ ಹೆದ್ದಾರಿಗಳಲ್ಲಿ ಹೋಟೆಲ್ ನಿರ್ಮಿಸಲು ಹಾಪ್ ಕಾಮ್ಸ್ ಮುಂದಾಗಿದೆ. ಮೊದಲ ಹಂತದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹಮಾನಿಯಂತ್ರಿತ ಹೋಟೆಲ್ ನಿರ್ಮಾಣವಾಗಲಿದೆ.

HOPCOMS to open Veg Restaurant at Bengaluru-Mysuru highway

ಮಂಡ್ಯ ಸಮೀಪ ಸುಮಾರು 3 ಕೋಟಿ ವೆಚ್ಚದಲ್ಲಿ ಹೈಟೆಕ್ ಹೋಟೆಲ್ ನಿರ್ಮಾಣವಾಗಲಿದೆ. ತೋಟಗಾರಿಕಾ ಇಲಾಖೆಗೆ ಸೇರಿದ ಜಾಗದಲ್ಲಿ ಸಸ್ಯಹಾರಿ ಹೋಟೆಲ್ ಆರಂಭವಾಗಲಿದೆ. ಹೋಟೆಲ್ ಪಕ್ಕದಲ್ಲಿಯೇ ಹಾಪ್ ಕಾಮ್ಸ್ ಮಳಿಗೆ ಸಹ ಇರಲಿದೆ.

ಮುಂಜಾನೆ ತರಕಾರಿಕೊಳ್ಳಲು ಹಾಪ್‌ಕಾಮ್ಸ್‌ಗೆ ಹೋಗಿಮುಂಜಾನೆ ತರಕಾರಿಕೊಳ್ಳಲು ಹಾಪ್‌ಕಾಮ್ಸ್‌ಗೆ ಹೋಗಿ

ಹೆದ್ದಾರಿಯಲ್ಲಿ ಬಸ್ ನಿಲ್ದಾಣ, ಆಸ್ಪತ್ರೆ, ಪ್ರಮುಖ ಜಂಕ್ಷನ್‌ಗಳ ಸಮೀಪ ಹೈಟೆಕ್ ಹೋಟೆಲ್ ನಿರ್ಮಿಸಲು ಹಾಪ್ ಕಾಮ್ಸ್ ಮುಂದಾಗಿದೆ. ಸುಮಾರು 300 ಮೆಟ್ರಿಕ್ ಟನ್ ಹಣ್ಣು ಮತ್ತು ತರಕಾರಿಗಳನ್ನು ಹಾಪ್ ಕಾಮ್ಸ್ ಪ್ರತಿದಿನ ಮಾರಾಟ ಮಾಡುತ್ತಿದೆ.

English summary
Horticultural Producer's Co-operative Marketing and Processing Society Ltd. (HOPCOMS) will establishing a hi-tech restaurant on the Bengaluru-Mysuru highway. Veg Restaurant will be opened at a cost of 3 crore near Mandya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X