ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊನ್ನಾವರ ಶೇಮ್: ಸಚಿವ ಯು ಟಿ ಖಾದರ್ ಸಂದರ್ಶನ

By ಬಾಲರಾಜ್ ತಂತ್ರಿ
|
Google Oneindia Kannada News

Recommended Video

Minister U T Khader speaks about the Honnavar issue exclusively with OneIndia

ಉತ್ತರ ಕನ್ನಡ ಜಿಲ್ಲೆಯಲ್ಲಿನ ಅಶಾಂತಿ, ಕರ್ನಾಟಕದಲ್ಲಿ ಚುನಾವಣಾ ವರ್ಷ, ಗುಜರಾತ್ ಚುನಾವಣಾ ಫಲಿತಾಂಶ ಮುಂತಾದ ವಿಚಾರಗಳನ್ನು ಇಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರಕಾರದ ಪ್ರಭಾವಿ ಸಚಿವ, ಆಹಾರ ಮತ್ತು ನಾಗರೀಕ ಸರಬರಾಜು ಪೂರೈಕೆ ಇಲಾಖೆಯ ಇನ್ಚಾರ್ಜ್ ಯು ಟಿ ಖಾದರ್ ಜೊತೆಗಿನ ಸಂದರ್ಶನದ ಆಯ್ದ ಭಾಗ.

ಸಂದರ್ಶನದ ಉದ್ದಕ್ಕೂ ತಮ್ಮ ಸರಕಾರದ ಸಾಧನೆ, ಬಿಜೆಪಿಯ ಮತಬ್ಯಾಂಕ್ ರಾಜಕಾರಣ, ಆಹಾರ ಇಲಾಖೆಯನ್ನು ನಿಭಾಯಿಸುತ್ತಿರುವ ರೀತಿಯ ಬಗ್ಗೆ ಸಚಿವ ಖಾದರ್ ವಿವರಿಸಿದ್ದಾರೆ.

ಪರೇಶ್ ಮೇಸ್ತ ಸಾವು : 8 ಪ್ರಮಖ ಬೆಳವಣಿಗೆಗಳುಪರೇಶ್ ಮೇಸ್ತ ಸಾವು : 8 ಪ್ರಮಖ ಬೆಳವಣಿಗೆಗಳು

ಪ್ರ: ಸರ್, ಚುನಾವಣಾ ವರ್ಷದಲ್ಲಿ ಹೇಗಿದೆ ರಾಜಕೀಯ ಮತ್ತು ನಿಮ್ಮ ವಿಶ್ವಾಸ?

ಖಾದರ್: ಮತ್ತೆ ನಾವೇ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ನಮ್ಮದು ಜನಪರ ಸರ್ಕಾರ, ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಗಳನ್ನು ಬಹುತೇಕ ಈಡೇರಿಸಿದ್ದೇವೆ. ಇದೇ ಸಾಕು, ನಾವು ಮತ್ತೆ ಅಧಿಕಾರಕ್ಕೆ ಬರಲು. ಅನ್ನ ಭಾಗ್ಯ, ಕ್ಷೀರ ಭಾಗ್ಯ, ಮಕ್ಕಳಿಗೆ ಯೂನಿಫಾರಂ ಮುಂತಾದ ಜನಪ್ರಿಯ ಯೋಜನೆಗಳು ನಮ್ಮ ಬೆನ್ನಿಗಿವೆ.

ಪ್ರ: ಆರೋಗ್ಯ ಇಲಾಖೆ ಮತ್ತು ಈಗಿನ ಖಾತೆ ನಿಭಾಯಿಸುವಲ್ಲಿನ ನಿಮ್ಮ ಅನುಭವ. ಆರೋಗ್ಯ ಸಚಿವರಾಗಿದ್ದಾಗ ಬಹಳ ವೈಬ್ರೆಂಟ್ ಆಗಿದ್ರಿ, ಆಹಾರ ಇಲಾಖೆ ನೋಡಿಕೊಳ್ಳಲು ಏನಾದರೂ ತೊಂದರೆಗಳು ಎದುರಾಗಿದೆಯಾ? ಸಿಎಂ ಸಹಕಾರ ಹೇಗಿದೆ?

ಖಾದರ್: ಸಿಎಂ ಅವರು ಉತ್ತಮ ಸಹಕಾರ ನೀಡುತ್ತಿದ್ದಾರೆ, ಅವರ ರಾಜಕೀಯ ಅನುಭವವನ್ನೂ ನಮ್ಮ ಜೊತೆ ಶೇರ್ ಮಾಡಿಕೊಳ್ಳುತ್ತಾರೆ. ಇದು ಇಲಾಖೆಯನ್ನು ನಿಭಾಯಿಸುವಲ್ಲಿ ನಮಗೆ ಸಹಾಯವಾಗುತ್ತದೆ. ಆರೋಗ್ಯ ಇಲಾಖೆ ದೊಡ್ಡ ಇಲಾಖೆ, ಹಲವು ಯೋಜನೆಗಳನ್ನು ತರಲು ನಮಗೆ ಅವಕಾಶವಿದೆ. ಆಹಾರ ಇಲಾಖೆ ಈ ಹಿಂದೆ ಸಿಸ್ಟಮ್ಯಾಟಿಕ್ ಆಗಿರಲಿಲ್ಲ,

ದೇಶದಲ್ಲಿ ಪ್ರಪ್ರಥಮ ಬಾರಿಗೆ ರೇಷನ್ ಕಾರ್ಡ್ ಅನ್ನು ಆನ್ಲೈನ್ ಸಿಸ್ಟಂ ಮೂಲಕ ಜಾರಿಗೆ ತಂದಿದ್ದೇವೆ. ಹನ್ನೆರಡು ಲಕ್ಷ ಕಾರ್ಡ್ ಅನ್ನು ಅಂಚೆಯ ಮೂಲಕ ಈಗಾಗಲೇ ತಲುಪಿಸಿದ್ದೇವೆ. ಏಳು ಕೆಜಿ ಅಕ್ಕಿ, ಒಂದು ಕೆಜಿ ತೊಗರಿಬೇಳೆ ನಾವು ಕೊಡುತ್ತಿದ್ದೇವೆ. ಇಂದಿರಾ ಗಾಂಧಿ ಅವರ ಕನಸನ್ನು ನಾವು ನನಸು ಮಾಡುತ್ತಿದ್ದೇವೆ. ಬಹಳ ಕಡೆ ಬಯೋಮೆಟ್ರಿಕ್ ಸಿಸ್ಟಂ ಅಳವಡಿಸಲಾಗಿದೆ.

ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಇಲಾಖೆಯನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದೇವೆ. "ಅನ್ನಭಾಗ್ಯವನ್ನು ಕನ್ನಭಾಗ್ಯ ಅನ್ನುತ್ತಿದ್ದರು, ಈಗ ನಮ್ಮಭಾಗ್ಯ" ಆನ್ನುವಂತೆ ಮಾಡಿದ್ದೇವೆ. 10.5 ಲಕ್ಷ ಬೋಗಸ್ ಕಾರ್ಡ್ ಪತ್ತೆಹಚ್ಚಿ ಅದನ್ನು ರದ್ದು ಪಡಿಸಿದ್ದೇವೆ. ಹೊನ್ನಾವರ ಗಲಭೆಗೆ ಬಿಜೆಪಿಯನ್ನು ದೂರುತ್ತಾ, ಸಚಿವ ಖಾದರ್ ನೀಡಿದ ಪ್ರತಿಕ್ರಿಯೆ, ಮುಂದೆ ಓದಿ..

ರೇಷನ್ ಕಾರ್ಡ್ ಪಡೆಯಲು ಆಧಾರ್ ಬೇಡ, ಅಪ್ಲೈ ಮಾಡಲು ಬೇಕು

ರೇಷನ್ ಕಾರ್ಡ್ ಪಡೆಯಲು ಆಧಾರ್ ಬೇಡ, ಅಪ್ಲೈ ಮಾಡಲು ಬೇಕು

ಪ್ರ: ರೇಷನ್ ಕಾರ್ಡ್ ಪಡೆಯಲು ಆಧಾರ್ ಬೇಡ, ಅಪ್ಲೈ ಮಾಡಲು ಬೇಕು, ಬಾರ್ ಕೋಡ್ ಸಿಸ್ಟಂ ಅಳವಡಿಸುವ ಕೆಲಸ ಫೈನಲ್ ಸ್ಟೇಜ್ ನಲ್ಲಿದೆ ಎನ್ನುವ ಹೇಳಿಕೆಯನ್ನು ನೀವು ನೀಡಿದ್ರಿ, ಇದು ಯಾವರೀತಿ ಭ್ರಷ್ಟಾಚಾರ ತಡೆಯಲು ಸಹಾಯವಾಗುತ್ತದೆ?


ಖಾದರ್: ಹಿಂದೆ ಒಂದೊಂದು ರೇಷನ್ ಅಂಗಡಿಯಲ್ಲೂ ಯಾರ್ಯಾರೋ ಹೆಸರಿನಲ್ಲಿ ಬೋಗಸ್ ಕಾರ್ಡ್ ಇತ್ತು, ನ್ಯಾಯಬೆಲೆ ಅಂಗಡಿಯವರೇ ಇದನ್ನು ಮಾಡುತ್ತಿದ್ದರು. ಈಗ ಆಧಾರ್ ಕಾರ್ಡ್ ಜೋಡಣೆ ಮಾಡಿದ ಮೇಲೆ ಎಲ್ಲಾ ರದ್ದಾಗಿದೆ. ಹಾಗಾಗಿ, ನಕಲಿ ಮಾಡೋಕೆ ಯಾರಿಗೂ ಸಾಧ್ಯವಿಲ್ಲ. ನಮ್ಮ ಈ ಯೋಜನೆ ಯಶಸ್ವಿಯಾಗಿದೆ.

ಕರಾವಳಿ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ವೈಮನಸ್ಸು

ಕರಾವಳಿ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ವೈಮನಸ್ಸು

ಪ್ರ: ಕರಾವಳಿ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ವೈಮನಸ್ಸು ಹೆಚ್ಚುತ್ತಿದೆ. ಬಿಜೆಪಿಯವರು ಕಾಂಗ್ರೆಸ್ ನವರನ್ನು, ಕಾಂಗ್ರೆಸ್ಸಿನವರು ಬಿಜೆಪಿಯನ್ನು ದೂರುವ ಕೆಲಸವನ್ನು ಮಾಡುತ್ತಿದ್ದಾರೆ. ಹೊನ್ನಾವರದಲ್ಲಿ ನಡೆದ ಘಟನೆಯನ್ನು ಅವಲೋಕಿಸುವುದಾದರೆ, ತರಾತುರಿಯಲ್ಲಿ ಪರೇಶ್ ಮೇಸ್ತನ ಮರಣೋತ್ತರ ಪರೀಕ್ಷೆಯ ವರದಿಯನ್ನು ಸರಕಾರ ತರಿಸಿಕೊಂಡಿತಾ?

ಖಾದರ್: ಸರಕಾರ ಯಾಕೆ ತರಾತುರಿಯಲ್ಲಿ ವರದಿಯನ್ನು ತರಿಸಿಕೊಳ್ಳುತ್ತೆ ಹೇಳಿ.. ಹುಡುಗರ ತಂದೆತಾಯಿ ನಮಗೆ ಬಹಳ ಆತ್ಮೀಯರು. ಅವರು ಈ ವಿಚಾರದಲ್ಲಿ ರಾಜಕೀಯ ಮಾಡೋಕೆ ಹೋಗುವುದಿಲ್ಲ. ಯಾರೇ ಸತ್ತರೆ ಸಾಕು, ಪೊಲೀಸ್ ಇಲಾಖೆಗೆ ತನಿಖೆ ಮಾಡಲು ಅವಕಾಶ ಇವರು (ಬಿಜೆಪಿ) ನೀಡುವುದಿಲ್ಲ. ವೈದ್ಯರಿಗೆ ವರದಿ ನೀಡಲು ಬಿಡುವುದಿಲ್ಲ. ಏನೇ ಸಾವಾಗಲಿ, ಪ್ರತಿಭಟನೆ ಮಾಡುವುದು, ಗಲಾಟೆ ಮಾಡುವುದು, ಪ್ರಚೋದಿಸುವುದು, ಗಲಭೆ ಎಬ್ಬಿಸಿ ಅದಕ್ಕೆ ಸರಕಾರ ಕಾರಣ ಎಂದು ಆರೋಪಿಸುವುದು ಅವರ ಕೆಲಸ.

ಹೊನ್ನಾವರ ಘಟನೆ ಪೂರ್ವನಿಯೋಜಿತ ಕೃತ್ಯ

ಹೊನ್ನಾವರ ಘಟನೆ ಪೂರ್ವನಿಯೋಜಿತ ಕೃತ್ಯ

ಹೊನ್ನಾವರ ಘಟನೆ, ಅವರ ಪೂರ್ವನಿಯೋಜಿತ ಕೃತ್ಯ. ಕಳೆದ ಎಂಟು ತಿಂಗಳಿನಿಂದ ಬಿಜೆಪಿಯವರು ಈ ರೀತಿಯ ಕೆಲಸಕ್ಕೆ ಮುಂದಾಗಿದ್ದಾರೆ. ಯಾಕೆಂದರೆ ಅವರಿಗೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎನ್ನುವುದು ಗೊತ್ತಾಗಿದೆ. ರಾಷ್ಟಾಧ್ಯಕ್ಷರಾದ ಅಮಿತ್ ಶಾ ಬಂದು ಗಲಾಟೆ ಮಾಡಿ, ಸಮಸ್ಯೆ ಹುಟ್ಟುಹಾಕಿ ಎಂದು ಹೇಳಿದ್ದಾರೆ. ಅದನ್ನು ಇವರು ಮಾಡುತ್ತಿದ್ದಾರೆ. ಆ ಪಕ್ಷದ ಮುಖಂಡರು ಶಿವಮೊಗ್ಗ, ಮೈಸೂರು, ಉತ್ತರಕನ್ನಡ, ದಕ್ಷಿಣಕನ್ನಡಕ್ಕೆ ಬೆಂಕಿ ಇಡುತ್ತೇವೆ ಎನ್ನುತ್ತಾರೆ. ಒಳ್ಳೆ ಕೆಲಸ ಮಾಡಿದರೆ, ಅವರಿಗೆ ಪಕ್ಷದಲ್ಲಿ ಬೆಲೆಯಿಲ್ಲ, ಹಾಗಾಗಿ ಇಂತಹ ಕೆಲಸಕ್ಕೆ ಮುಂದಾಗಿದ್ದಾರೆ. ಮುಂಬರುವ ಚುನಾವಣೆಯ ವರೆಗೂ ಈ ಪರಿಸ್ಥಿತಿ ಮುಂದುವರಿಯಲಿದೆ. ಜನ ಅವರಿಗೆ ಸರಿಯಾದ ಪಾಠ ಕಲಿಸುತ್ತಾರೆ.

ಮೋದಿ ಹೆಸರು ಹಾಕಿದರೆ ತಪ್ಪೇನು?

ಮೋದಿ ಹೆಸರು ಹಾಕಿದರೆ ತಪ್ಪೇನು?

ಪ್ರ: ಅನಿಲ ಭಾಗ್ಯ ಯೋಜನೆಗೆ ಕೆಲವು ಪ್ರಭಾವಿಗಳು ತಡೆಯೊಡ್ದಬಹುದು ಎನ್ನುವ ಶಂಕೆಯನ್ನು ನೀವು ವ್ಯಕ್ತಪಡಿಸಿದ್ದೀರಿ, ಕೇಂದ್ರ ಸರಕಾರದ ಸಹಯೋಗದೊಂದಿಗೆ ನಡೆಯುವ ಯೋಜನೆಯಿದು, ಮೋದಿ ಹೆಸರೂ ಹಾಕಬೇಕೂಂತಾ ಕೇಂದ್ರ ಷರತ್ತು ವಿಧಿಸಿದರೆ ಅದರಲ್ಲಿ ತಪ್ಪೇನು?

ಖಾದರ್: ಕೇಂದ್ರದ ಉಜ್ವಲಭಾಗ್ಯ ಯೋಜನೆಯಡಿಯಲಿ ನೂರರಲ್ಲಿ ಹತ್ತು ಜನರಿಗೆ ಮಾತ್ರ ಇದರ ಸೌಲಭ್ಯವನ್ನು ಕೊಡುತ್ತಿದ್ದಾರೆ, ಮಿಕ್ಕವರಿಗಿಲ್ಲ. ಇದರಲ್ಲಿ ಕೇಂದ್ರದ ಯಾವ ಪಾಲೂ ಇಲ್ಲ, ದುಡ್ಡು ಕೂಡಾ ಇಲ್ಲ. ನಾವು ದುಡ್ಡು ಕೊಟ್ಟು ಖರೀದಿಸುವುದು. ಸಬ್ಸಿಡಿ ನೇರವಾಗಿ ಜನರಿಗೆ ಹೋಗುತ್ತದೆ. ಕೆಲಸ ಮಾಡಿ ಕೇಂದ್ರದವರು ಪ್ರಚಾರ ತೆಗೆದುಕೊಳ್ಳಲಿ. ಸುಮ್ಮನೆ ಪ್ರಧಾನಿಗಳ ಭಾವಚಿತ್ರ ಹಾಕಲಾಗುವುದಿಲ್ಲ.

ಆಹಾರ ಮತ್ತು ನಾಗರೀಕ ಪೂರೈಕೆ ಖಾತೆಯ ಬಗ್ಗೆ ಜನರಿಗೆ ನಿಮ್ಮ ಸಂದೇಶ

ಆಹಾರ ಮತ್ತು ನಾಗರೀಕ ಪೂರೈಕೆ ಖಾತೆಯ ಬಗ್ಗೆ ಜನರಿಗೆ ನಿಮ್ಮ ಸಂದೇಶ

ಪ್ರ: ಮೆಡಿಕಲ್ ಬಿಲ್ ಅನ್ನು ರಮೇಶ್ ಕುಮಾರ್ ಹಠಕ್ಕೆ ಬಿದ್ದು ಸದನದಲ್ಲಿ ಮಂಡಿಸಿದರು, ನೀವು ಆರೋಗ್ಯ ಇಲಾಖೆಯನ್ನು ನೋಡಿಕೊಳ್ಳುತ್ತಿದ್ದಾಗ ಈ ಬಿಲ್ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ರಾ? ಖಾತೆಯ ಬಗ್ಗೆ ಜನರಿಗೆ ನಿಮ್ಮ ಸಂದೇಶ.

ಖಾದರ್: ಕೆಪಿಎಂ ಆಕ್ಟ್ ಬಗ್ಗೆ ಚರ್ಚೆಯಾಗಿತ್ತು. ನಾನು ಆರೋಗ್ಯ ಇಲಾಖೆಯ ಜವಾಬ್ದಾರಿ ತೆಗೆದುಕೊಂಡಾಗ ವೈದ್ಯರ, ನರ್ಸ್, ಅಂಬುಲೆನ್ಸ್ ಮುಷ್ಕರ ನಡೆಯುತ್ತಲೇ ಇದ್ದವು. ಇದನ್ನು ಸರಿಪಡಿಸೋಕೆ ನನಗೆ ಸಮಯ ಹಿಡಿಯಿತು. ಆರೋಗ್ಯ ಕ್ಷೇತ್ರದಲ್ಲೂ ಎಪಿಎಲ್, ಬಿಪಿಎಲ್, ದಂತಭಾಗ್ಯ ಮುಂತಾದ ಯೋಜನೆಗಳನ್ನು ಜಾರಿಗೆ ತಂದೆವು. ಆರೋಗ್ಯ ಇಲಾಖೆ ದೊಡ್ಡ ಇಲಾಖೆ, ಎಲ್ಲಾ ಜನಪ್ರತಿನಿಧಿಗಳು ಸಹಕಾರ ಕೊಟ್ಟರೆ ಮಾತ್ರ ಇಲಾಖೆಯನ್ನು ಚೆನ್ನಾಗಿ ನಡೆಸಿಕೊಂಡು ಹೋಗಲು ಸಾಧ್ಯ. ರೇಷನ್ ಅಂಗಡಿ ಓಪನ್ ಮಾಡಿಲ್ಲಾಂದ್ರೆ ನನಗೆ ಫೋನ್ ಮಾಡಿದರೆ ಆಗುವುದಿಲ್ಲ. 24ಸಾವಿರ ನ್ಯಾಯಬೆಲೆ ಅಂಗಡಿಗಳಿವೆ. ಎಲ್ಲಾ ಅಂಗಡಿಗಳ ಮುಂದೆ ಹೋಗಲು ನನಗೆ ಸಾಧ್ಯವಿಲ್ಲ.

English summary
Recent Honnavara incident, situation in Coastal Karnataka, Medical bill, an exclusive interview with Karnataka Food and Civil Supply Minister U T Khader.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X