ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲೆನಾಡಲ್ಲಿ ಅಲ್ಲಲ್ಲಿ ಮಳೆ, ಅಪಾಯದ ಮಟ್ಟ ಮೀರಿದ ಹೊನ್ನಮ್ಮನಹಳ್ಳ ಫಾಲ್ಸ್

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಆಗಸ್ಟ್ 19: ಮಲೆನಾಡು ಭಾಗದಲ್ಲಿ ಬಿಟ್ಟು ಬಿಟ್ಟು ಸುರಿಯುತ್ತಿರುವ ಧಾರಾಕಾರ ಮಳೆ ಶನಿವಾರ ಮಧ್ಯಾಹ್ನದಿಂದ ಸ್ವಲ್ಪ ಬಿಡುವು ನೀಡಿದೆ.

ಆದರೆ ರಾತ್ರಿ ಕಳಸ, ಕುದುರೆಮುಖ, ಶೃಂಗೇರಿಯ ಕೆರೆಕಟ್ಟೆ, ಕಿಗ್ಗಾ ಭಾಗದಲ್ಲಿ ಮಳೆಯಾಗಿದ್ದು, ಚಿಕ್ಕಮಗಳೂರು, ಕೊಪ್ಪ, ಮೂಡಿಗೆರೆ ಹಾಗೂ ಎನ್.ಆರ್.ಪುರದಲ್ಲಿ ಸಾಧಾರಣ ಮಳೆ ಬಿಟ್ಟು ಬಿಟ್ಟು ಸುರಿಯುತ್ತಿದೆ.

ಉಕ್ಕುತ್ತಿರುವ ಕಪಿಲ, ಕಾವೇರಿ: ಪ್ರವಾಹ ಭೀತಿಯಲ್ಲಿ ನದಿಪಾತ್ರದ ಜನಉಕ್ಕುತ್ತಿರುವ ಕಪಿಲ, ಕಾವೇರಿ: ಪ್ರವಾಹ ಭೀತಿಯಲ್ಲಿ ನದಿಪಾತ್ರದ ಜನ

ಇನ್ನು ತುಂಗಾ, ಭದ್ರಾ ಹಾಗೂ ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿವೆ. ಕಳಸ ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಮತ್ತೆ ಮುಳುಗುವ ಹಂತ ತಲುಪಿದೆ.

Honnamana halla falls is flowing in danger level

ಧುಮ್ಮಿಕ್ಕಿ ಹರಿದ ಹೊನ್ನಮ್ಮನಹಳ್ಳ ಫಾಲ್ಸ್

ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣ ಬಾಬಾ ಬುಡನ್ ಗಿರಿ ಮಾರ್ಗದಲ್ಲಿರುವ ಹೊನ್ನಮ್ಮನಹಳ್ಳ ಫಾಲ್ಸ್ ಉಕ್ಕಿ ಹರಿಯುತ್ತಿದೆ. ‌ಗಿರಿಶ್ರೇಣಿಯಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ದಶಕಗಳ ನಂತರ ಹೊನ್ನಮ್ಮನಹಳ್ಳ ಫಾಲ್ಸ್ ಅಪಾಯ ಮಟ್ಟ ಮೀರಿ ಧುಮ್ಮಿಕ್ಕುತ್ತಿದೆ.

English summary
Rainfall is pouring over the Malnad region. But Saturday afternoon gave a little break. Due to the good rainfall, decades later, Honnamana halla falls is flowing in danger level.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X