• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹನಿಟ್ರ್ಯಾಪ್ ಬಲೆಯಲ್ಲಿ ರಾಜ್ಯದ 12 ಮಾಜಿ, ಹಾಲಿ ಶಾಸಕರು

|

ಬೆಂಗಳೂರು, ಡಿಸೆಂಬರ್ 02: ಶಾಸಕರ ಹನಿಟ್ರ್ಯಾಪ್ ಪ್ರಕರಣದ ತನಿಖೆಯಿಂದ ದಿನೇ-ದಿನೇ ಹೊಸ ಹೊಸ ವಿಷಯಗಳು ಹೊರಬೀಳುತ್ತಿವೆ.

ಒಬ್ಬ ಶಾಸಕರ ವಿಡಿಯೋ ವೈರಲ್ ಆಗಿದ್ದು, ಒಬ್ಬ ಅನರ್ಹ ಶಾಸಕರು ಮಾತನಾಡಿದ್ದಾರೆ ಎನ್ನಲಾಗುತ್ತಿರುವ ಆಡಿಯೋ ವೈರಲ್ ಆಗಿದೆ. ಇದರ ಇನ್ನೂ ಹಲವು ಶಾಸಕರು ಮಾಜಿ ಶಾಸಕರು ಹನಿಟ್ರ್ಯಾಪ್ ಬಲೆಗೆ ಬಿದ್ದಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಬಿಜೆಪಿ ಶಾಸಕನ 'ಆ' ವಿಡಿಯೋಗೆ ಲಕ್ಷಾಂತರ ಹಣ ಕೊಟ್ಟಿದ್ದ ಕಾಂಗ್ರೆಸ್‌ ಶಾಸಕ

ಬರೋಬ್ಬರಿ 12 ಮಂದಿ ಮಾಜಿ ಮತ್ತು ಹಾಲಿ ಶಾಸಕರು ಹನಿಟ್ರ್ಯಾಪ್‌ ಬಲೆಗೆ ಬಿದ್ದು ಬೆತ್ತಲಾಗಿರುವ ಸಂಗತಿ ಹೊರಬಿದ್ದಿದೆ.

ಈ ಹನ್ನೆರಡು ಮಂದಿ ಮಾಜಿ, ಹಾಲಿ ಶಾಸಕರಲ್ಲಿ ಹೆಚ್ಚಿನವರು ಬಿಜೆಪಿಯವರೇ ಎನ್ನಲಾಗುತ್ತಿದೆ. ಕರಾವಳಿ ಭಾಗದ ಒಬ್ಬ ಬಿಜೆಪಿ ಶಾಸಕರು ಈಗಾಗಲೇ ತಮ್ಮ ವಿರುದ್ದ ಸುದ್ದಿಗಳನ್ನು ಪ್ರಕಟಿಸದಂತೆ ನಿರ್ಬಂಧಕಾಜ್ಞೆ ಪಡೆದಿದ್ದು, ಈ ಶಾಸಕರೂ ಸಹ ಹನಿಟ್ರ್ಯಾಪ್‌ ಜಾಲದಲ್ಲಿ ಸಿಲುಕಿದ್ದಾರೆ.

ಪರಿಚಯವಾದ 24 ಗಂಟೆಯೊಳಗೇ ಯುವತಿ ಖೆಡ್ಡಾಗೆ ಬಿದ್ದಿದ್ದ ಶಾಸಕ!

ತನಿಖೆ ಗೌಪ್ಯವಾಗಿಡುವಂತೆ ಪೊಲೀಸರಿಗೆ ಒತ್ತಡ

ತನಿಖೆ ಗೌಪ್ಯವಾಗಿಡುವಂತೆ ಪೊಲೀಸರಿಗೆ ಒತ್ತಡ

ಮತ್ತೊಂದೆಡೆ ಹನಿಟ್ರ್ಯಾಪ್‌ ಪ್ರಕರಣದ ತನಿಖೆಯನ್ನು ಗೌಪ್ಯವಾಗಿಡಲು ಸರ್ಕಾರದ ಮಟ್ಟದಲ್ಲಿ ಪೊಲೀಸರ ಮೇಲೆ ಒತ್ತಡ ಹೆಚ್ಚಿದೆ, ಆದರೂ ಸಹ ಆಡಿಯೋ, ವಿಡಿಯೋ ಗಳು ಸೋರಿಕೆ ಆಗುತ್ತಲೇ ಇವೆ. ಇದು ಸರ್ಕಾರಕ್ಕೆ ಮುಜುಗರ ಉಂಟುಮಾಡುತ್ತಿದೆ.

ಹನಿಟ್ರ್ಯಾಪ್ ಮುಖ್ಯ ಆರೋಪಿ ರಾಘವೇಂದ್ರ

ಹನಿಟ್ರ್ಯಾಪ್ ಮುಖ್ಯ ಆರೋಪಿ ರಾಘವೇಂದ್ರ

ಹನಿಟ್ರ್ಯಾಪ್ ಮುಖ್ಯ ಆರೋಪಿ ರಾಘವೇಂದ್ರ ಗೆ ರಾಜಕಾರಣ ವಲಯದಲ್ಲಿ ದೊಡ್ಡ ಸಂಪರ್ಕವೇ ಇತ್ತು. ಜೊತೆಗೆ ಕಿರುತೆರೆಯ ಹಲವು ನಟಿಯರ ಪರಿಚಯವಿತ್ತು. ಜೊತೆಗೆ ಸೈಬರ್ ಅಪರಾಧಿಯೂ ಆಗಿದ್ದ ರಾಘವೇಂದ್ರ ಈ ಮೂರು 'ಬಲ'ಗಳನ್ನು ಬಳಸಿ ಶಾಸಕರು, ಉದ್ಯಮಿಗಳನ್ನು ಬಲೆಗೆ ಕೆಡವಿ ಕೋಟ್ಯಂತರ ಹಣ ವಸೂಲಿ ಮಾಡಿದ್ದಾನೆ.

ಶಾಸಕರನ್ನು ಬಲೆಗೆ ಬೀಳಿಸುವ ತಂತ್ರ ಏನು?

ಶಾಸಕರನ್ನು ಬಲೆಗೆ ಬೀಳಿಸುವ ತಂತ್ರ ಏನು?

ಶಾಸಕರನ್ನು ಬಲೆಗೆ ಬೀಳಿಸಲು ಸರಳ ತಂತ್ರವನ್ನು ಈ ತಂಡ ಬಳಸುತ್ತಿತ್ತು. ರಾತ್ರಿ 10:30 ರ ನಂತರವೇ ಶಾಸಕರಿಗೆ ಕರೆ ಮಾಡುತ್ತಿದ್ದರು. ರಾತ್ರಿ ಸಮಯ ಕುಡಿದು ಮತ್ತಲ್ಲಿರುವ ಶಾಸಕರು ಸುಲಭವಾಗಿ ಹನಿಟ್ರ್ಯಾಪ್‌ ಬಲೆಗೆ ಬೀಳುತ್ತಿದ್ದರು. ಯುವತಿಯರು ಸಹ ರಾತ್ರಿ ಸಮಯವೇ ಶಾಸಕರುಗಳಿಗೆ ಕರೆ ಮಾಡಿ ಸರಸದ ಮಾತನ್ನಾಡುತ್ತಿದ್ದರು.

ಶಾಸಕರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದುದು ಹೇಗೆ?

ಶಾಸಕರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದುದು ಹೇಗೆ?

ಹನಿಟ್ರ್ಯಾಪ್‌ ಬಲೆಗೆ ಬೀಳಿಸುವ ಮುನ್ನಾ ಶಾಸಕರ ಬಗ್ಗೆ ಚೆನ್ನಾಗಿ 'ಸ್ಟಡಿ' ಮಾಡುತ್ತಿದ್ದ ಮುಖ್ಯ ಆರೋಪಿ ರಾಘವೇಂದ್ರ, ಮೊದಲಿಗೆ ಶಾಸಕರ ಸಮೀಪವರ್ತಿಗಳ ಪರಿಚಯ ಮಾಡಿಕೊಂಡು, ಶಾಸಕರು ಯುವಕರಾಗಿದ್ದ ಹೇಗಿದ್ದರು? ಶಾಸಕರ ವೈಯಕ್ತಿಕ ಮಾಹಿತಿಗಳನ್ನು ತಿಳಿದುಕೊಳ್ಳುತ್ತಿದ್ದ. ಕುಡಿತದ ಅಭ್ಯಾಸವುಳ್ಳ ಶಾಸಕರನ್ನೇ ಹನಿಟ್ರ್ಯಾಪ್‌ ಗೆ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದ ರಾಘವೇಂದ್ರ.

ಕೇವಲ 24 ಗಂಟೆಯಲ್ಲಿ ಬಲೆಗೆ ಬಿದ್ದಿದ್ದ ಬಿಜೆಪಿ ಶಾಸಕ

ಕೇವಲ 24 ಗಂಟೆಯಲ್ಲಿ ಬಲೆಗೆ ಬಿದ್ದಿದ್ದ ಬಿಜೆಪಿ ಶಾಸಕ

ಗದಗ ಜಿಲ್ಲೆ ವ್ಯಾಪ್ತಿಯಲ್ಲಿನ ಬಿಜೆಪಿ ಶಾಸಕರಂತೂ ಯುವತಿ ಪರಿಚಯವಾದ ಕೇವಲ 24 ಗಂಟೆ ಒಳಗೇ ಹಾಸಿಗೆ ಹತ್ತಿ ಬೆತ್ತಲಾಗಿದ್ದರು. ಇದೇ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದೇ ಶಾಸಕರು ಕೊನೆಗೆ ಪೊಲೀಸ್ ದೂರು ನೀಡಿ, ರಾಘವೇಂದ್ರ ಬಂಧನಕ್ಕೂ ಕಾರಣವಾಗಿದ್ದಾರೆ.

English summary
12 present and former MLAs were trapped in honey trap case. Video and Audios leaking everyday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X