ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಯಡಿಯೂರಪ್ಪ ಬದಲಿಗೆ ಪ್ರಾಮಾಣಿಕ, ಹಿಂದೂ ಪರ ಸಿಎಂ ಆಯ್ಕೆಯಾಗ್ತಾರೆ': ಬಿಜೆಪಿ ಮುಖಂಡ

|
Google Oneindia Kannada News

ಬೆಂಗಳೂರು, ಜು.20: ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ರದ್ದು ಎನ್ನಲಾದ ಆಡಿಯೋ ಸಂಭಾಷಣೆ ರಾಜ್ಯದಲ್ಲಿ ಸಂಭವನೀಯ ನಾಯಕತ್ವದ ಬದಲಾವಣೆಯ ಬಗ್ಗೆ ಸುಳಿವು ನೀಡಿದೆ. ನಳಿನ್‌ ಸೇರಿದಂತೆ ಹಲವು ಬಿಜೆಪಿ ನಾಯಕರು ಇದು ನಕಲಿ ಎಂದು ಹೇಳಿಕೊಂಡಿದ್ದಾರೆ. ಸದಾ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ವಿರುದ್ದ ವಾಗ್ದಾಳಿ ನಡೆಸುತ್ತಿದ್ದ, ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಹೇಳಿಕೆ ನೀಡುತ್ತಿದ್ದ ಬಿಜೆಪಿಯ ಹಿರಿಯ ಮುಖಂಡ ಬಸನಗೌಡ ಪಾಟೀಲ್‌ ಯತ್ನಾಳ್‌ ಈಗ, "ಪಕ್ಷದ ಕೇಂದ್ರ ನಾಯಕತ್ವವು ಶೀಘ್ರದಲ್ಲೇ ಪ್ರಾಮಾಣಿಕ, ಹಿಂದೂ ಪರ, ಮತ್ತು ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಸಮರ್ಥರಾದವರನ್ನು ನೂತನ ಸಿಎಂ ಆಗಿ ಆಯ್ಕೆ ಮಾಡಲಿದ್ದಾರೆ," ಎಂದು ಹೇಳಿದ್ದಾರೆ.

ಸೋರಿಕೆಯಾದ ಆಡಿಯೊ, ಕಟೀಲ್ ಧ್ವನಿಯನ್ನು ಹೋಲುತ್ತದೆ. ಆದರೆ ಕಟೀಲ್‌ ಇದು ನಕಲಿ ಆಡಿಯೋ ಎಂದು ಹೇಳಿದ್ದಾರೆ. ಈ ಆಡಿಯೋದಲ್ಲಿ ಪ್ರಸ್ತುತ ದೆಹಲಿಯಲ್ಲಿ ನೆಲೆಸಿರುವ ಮೂವರು ಕರ್ನಾಟಕ ನಾಯಕರಲ್ಲಿ ಒಬ್ಬರನ್ನು 78ರ ಹರೆಯದ ಯಡಿಯೂರಪ್ಪ ಬದಲಿಗೆ ಸಿಎಂ ಆಗಿ ಮಾಡಲಾಗುತ್ತದೆ ಎಂದು ಸುಳಿವು ನೀಡಲಾಗಿದೆ. ಶನಿವಾರ ದೆಹಲಿಯಿಂದ ಮರಳಿದ ಯಡಿಯೂರಪ್ಪ ಸೋಮವಾರ ಯಾವುದೇ ಹೇಳಿಕೆ ನೀಡಿಲ್ಲ.

ಮಾಜಿ ಕೇಂದ್ರ ಸಚಿವ, ವಿಜಯಪುರ(ಬಿಜಾಪುರ)ದ ಶಾಸಕ ಯತ್ನಾಳ್‌ ಸೋಮವಾರ ಮಾತನಾಡಿ, "ನಾನು ಯಾವುದೇ ಜನಾಂಗದಲ್ಲಿಲ್ಲ. ಮುಂದಿನ ಚುನಾವಣೆಯಲ್ಲಿ ಸಿಎಂ ಆಗಿ ಪ್ರಾಮಾಣಿಕ, ಹಿಂದು ಪರ ಮತ್ತು ಪಕ್ಷವನ್ನು ಅಧಿಕಾರಕ್ಕೆ ತರುವ ಸಾಮರ್ಥ್ಯವಿರುವ ನಾಯಕನನ್ನು ಪ್ರಧಾನಿ ಆಯ್ಕೆ ಮಾಡುತ್ತಾರೆ," ಎಂದಿದ್ದಾರೆ.

Honest and pro-Hindu Person to replace CM Yediyurappa says BJP leader Basangouda Patil Yatnal

ಮುಂದಿನ ಸಿಎಂ ಆಗಿ ಯಾರಿಗೆ ಅವಕಾಶ?:
ಈ ನಡುವೆ ಲಿಂಗಾಯಿತರಾಗಿರುವ ಕಾರಣದಿಂದಾಗಿ ಮುಂದಿನ ಸಿಎಂ ಆಗುವ ಅವಕಾಶವನ್ನು ಯತ್ನಾಳ್‌ ಹೊಂದಿದ್ದಾರೆ ಎಂದು ಹೇಳಲಾಗಿದೆ. ಸಿಎಂ ಹುದ್ದೆಗೆ ಮುಂಚೂಣಿಯಲ್ಲಿರುವ ದೆಹಲಿ ಮೂಲದ ನಾಯಕರು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಇಬ್ಬರೂ ಬ್ರಾಹ್ಮಣರು, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಒಕ್ಕಲಿಗ ಸಮುದಾಯದಿಂದ ಬಂದವರು ಆಗಿದ್ದಾರೆ.

ಆದರೆ ಲಿಂಗಾಯತ ಸಮುದಾಯದ ನಾಯಕರನ್ನೇ ಆಯ್ಕೆ ಮಾಡಲು ಬಿಜೆಪಿ ಮುಂದಾದರೆ, ಲಿಂಗಾಯತ ಪ್ರಬಲ ವ್ಯಕ್ತಿ ಯಡಿಯೂರಪ್ಪ ಬದಲಿಯಾಗಿ ಉದ್ಯಮಿ-ರಾಜಕಾರಣಿ ಮತ್ತು ರಾಜ್ಯ ಗಣಿಗಾರಿಕೆ ಸಚಿವ ಮುರುಗೇಶ್ ನಿರಾಣಿ, ಯುವ ಶಾಸಕ ಅರವಿಂದ್‌ ಬೆಲ್ಲದ, (ಹಿರಿಯ ಆರ್‌ಎಸ್‌ಎಸ್ ಮತ್ತು ಬಿಜೆಪಿ ನಾಯಕನ ಮಗ) ಹಾಗೂ ಯತ್ನಾಳ್‌ ಈ ಲೆಕ್ಕಾಚಾರದಲ್ಲಿ ಒಳಗೊಳ್ಳುತ್ತಾರೆ.

ಈ ನಡುವೆ ಸಿಎಂ ಹುದ್ದೆಗೆ ಯತ್ನಾಳ್‌ ಆಕಾಂಕ್ಷಿಯೇ ಎಂಬ ಪ್ರಶ್ನೆಗೆ, ಸೋಮವಾರ ಬಸನಗೌಡ ಪಾಟೀಲ್‌ ನಿರಾಕರಿಸಿದ್ದಾರೆ. "ತನ್ನ ಸ್ಥಾನಕ್ಕೆ ಬದಲಿ ಇರುವವರನ್ನು ಯಡಿಯೂರಪ್ಪ ತನ್ನ ದೆಹಲಿಗೆ ಕರೆದೊಯ್ಯಬೇಕಾಗಿತ್ತು. ಯಡಿಯೂರಪ್ಪ ಆಪ್ತ ಬಸವರಾಜ್‌ ಬೊಮ್ಮಾಯಿ, ಗೋವಿಂದ ಕಾರಜೋಳ ಹಾಗೂ ಪರಿಣಾಮಕಾರಿ ಮಾತುಗಾರ, ರಾಜ್ಯ ಕಂದಾಯ ಸಚಿವರು ಆರ್‌ ಅಶೋಕ್‌ ಅಲ್ಲಿದ್ದರು. ಆದರೆ ಯಾರನ್ನೂ ಕರೆದೊಯ್ಯಲಿಲ್ಲ," ಎಂದು ಅಭಿಪ್ರಾಯಿಸಿದ್ದಾರೆ.

Honest and pro-Hindu Person to replace CM Yediyurappa says BJP leader Basangouda Patil Yatnal

ಬಸವರಾಜ್‌ ಬೊಮ್ಮಾಯಿ ಲಿಂಗಾಯತ ಸಮುದಾಯದಿಂದ ಬಂದವರು ಆಗಿದ್ದಾರೆ. ಹಾಗೆಯೇ ಮಾಜಿ ಮುಖ್ಯಮಂತ್ರಿ ಎಸ್ ಆರ್ ಬೊಮ್ಮಾಯಿಯ ಪುತ್ರ. ಯಡಿಯೂರಪ್ಪನ ಆಪ್ತರು ಕೂಡಾ ಆಗಿದ್ದಾರೆ. ಬೊಮ್ಮಾಯಿ, ಯಡಿಯೂರಪ್ಪ ಸ್ಥಾನಕ್ಕೆ ಬದಲಿದ್ದಾರೆ ಎಂದು ಕೂಡಾ ಹೇಳಲಾಗಿದೆ. ರಾಜ್ಯ ಸಾರಿಗೆ ಸಚಿವ ಮತ್ತು ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಕೂಡ ಲಿಂಗಾಯತ ಸಮುದಾಯದವರಾಗಿದ್ದಾರೆ. ಬಿಜೆಪಿ ಸರ್ಕಾರದ ಆರಂಭಿಕ ದಿನಗಳಲ್ಲಿಯೇ ಯಡಿಯೂರಪ್ಪ ಬದಲಿಗೆ ಲಕ್ಷಣ ಸವದಿ ಮುಖ್ಯಮಂತ್ರಿಯಾಗಬಹುದು ಎನ್ನಲಾಗಿತ್ತು.

ಮುಖ್ಯಮಂತ್ರಿ ಸ್ಥಾನಕ್ಕೆ ಸಹ ಸ್ಪರ್ಧಿಗಳು:
ಇನ್ನು ಒಕ್ಕಲಿಗ ಸಮುದಾಯದಿಂದ ಬಂದಿರುವ ಕಂದಾಯ ಸಚಿವ ಆರ್.ಅಶೋಕ್ ಮತ್ತು ದಲಿತ ಸಮುದಾಯದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳರನ್ನು ಕೂಡಾ ಈ ಕರ್ನಾಟಕ ಮುಖ್ಯಮಂತ್ರಿ ಸ್ಥಾನಕ್ಕೆ ಸಹ ಸ್ಪರ್ಧಿಗಳೆಂದು ಪರಿಗಣಿಸಲಾಗಿದೆ. ಇನ್ನು ಒಕ್ಕಲಿಗ ಮುದಾಯದಿಂದ ಬಂದ ಕರ್ನಾಟಕದ ಮೂರನೇ ಉಪಮುಖ್ಯಮಂತ್ರಿ ಡಾ ಸಿ ಎನ್ ಅಶ್ವತ್‌ನಾರಾಯಣ್, ಮಾಜಿ ಸಿಎಂ ಮತ್ತು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಸಚಿವ ಅರವಿಂದ ಲಿಂಬಾವಳಿ, ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಬಿಜೆಪಿ ಮುಖ್ಯ ವಿಪ್ ಸುನೀಲ್ ಕುಮಾರ್ (ಯಡಿಯೂರಪ್ಪ ವಿರುದ್ಧ ದಂಗೆ ಎದ್ದವರಲ್ಲಿ ಒಬ್ಬರು), ರಾಜ್ಯ ಸಚಿವ ವಿ ಸೋಮಣ್ಣ ಹಾಗೂ ಮಾಜಿ ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ಇದ್ದಾರೆ.

"ಲೋಕಸಭಾ ಸಂಸದ ಅನಂತ್ ಕುಮಾರ್ ಹೆಗ್ಡೆ ಕೇಂದ್ರದ ಅಚ್ಚುಮೆಚ್ಚಿನ ವ್ಯಕ್ತಿಯಾಗಿದ್ದಾರೆ. ಬಿಜೆಪಿಯಲ್ಲಿ ದೊಡ್ಡ ಸ್ಥಾನವನ್ನೂ ಪಡೆದಿದ್ದರು. ಆದರೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಕಾರಣದಿಂದಾಗಿ ಬಿಜೆಪಿಯಲ್ಲಿ ಹೆಚ್ಚಾಗಿ ಗುರುತಿಸುತ್ತಿಲ್ಲ," ಎಂದು ಬಿಜೆಪಿಯ ಮೂಲವೊಂದು ತಿಳಿಸಿದೆ.

ಈ ನಡುವೆ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವುದಕ್ಕೆ ರೋಧ ಪಕ್ಷದ ಕಾಂಗ್ರೆಸ್‌ನ ಲಿಂಗಾಯತ ಸಮುದಾಯದ ಮುಖಂಡರು ಟೀಕಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಮಾಜಿ ರಾಜ್ಯ ಸಚಿವ ಮತ್ತು ಕಾಂಗ್ರೆಸ್‌ನ ಎಂ ಬಿ ಪಾಟೀಲ್, "ಕರ್ನಾಟಕ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಲಿಂಗಾಯತ ಸಮುದಾಯದ ಧೀಮಂತ ನಾಯಕರು. ಅವರನ್ನು ಪದಚ್ಯುತಗೊಳಿಸಿದರೆ, ನಿಶ್ಚಿತವಾಗಿಯೂ ಬಿಜೆಪಿ ವರಿಷ್ಠರು ಲಿಂಗಾಯತರ ಅವಕೃಪೆಗೆ ತುತ್ತಾಗುತ್ತಾರೆ. ಯಡಿಯೂರಪ್ಪನವರ ವಯಸ್ಸು ಮತ್ತು ಕೊಡುಗೆಯನ್ನು ಪರಿಗಣಿಸಿ, ಅವರನ್ನು ಘನತೆ ಮತ್ತು ಮರ್ಯಾದೆಯಿಂದ ನಡೆಸಿಕೊಳ್ಳಬೇಕೆಂಬುದು ನನ್ನ ವೈಯಕ್ತಿಕ ಅನಿಸಿಕೆ," ಎಂದು ಹೇಳಿದ್ದಾರೆ.

ಆದರೆ ಕಾಂಗ್ರೆಸ್‌ ಮುಖಂಡ ಸಿದ್ದರಾಮಯ್ಯ ಮಾತ್ರ, "ಭ್ರಷ್ಟ ಸರ್ಕಾರ ಮತ್ತು ಭ್ರಷ್ಟ ಸಿಎಂ ದೂರ ಹೋಗುತ್ತಿರುವುದು ಒಳ್ಳೆಯದು. ನಾವು ಯಾವುದೇ ಸಮಯದಲ್ಲಿ ಚುನಾವಣೆಗೆ ಸಿದ್ಧರಿದ್ದೇವೆ, ಆದರೆ ಚುನಾವಣೆಗಳು ಹತ್ತಿರದಲ್ಲಿದೆ ಎಂದು ನಮಗೆ ಅನಿಸುವುದಿಲ್ಲ. ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದು ಬೇರೆಯವರನ್ನು ಸಿಎಂ ಮಾಡಿಬಿಡುತ್ತಾರೆ," ಎಂದಿದ್ದಾರೆ.

ಈ ನಡುವೆ ಜುಲೈ 26 ರಂದು ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಗೆ ಮುಂಚಿತವಾಗಿ ಬಿಜೆಪಿ ಶಾಸಕರನ್ನು ಸಮಾಧಾನಪಡಿಸುವ ಪ್ರಯತ್ನವಾಗಿ ಗ್ರಾಮೀಣ ಅಭಿವೃದ್ಧಿ ಇಲಾಖೆಯ ಮೂಲಕ ಶಾಸಕರ ಕ್ಷೇತ್ರಗಳಿಗೆ 1,277 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಲು ಯಡಿಯೂರಪ್ಪ ಸೋಮವಾರ ಆದೇಶಿಸಿದ್ದಾರೆ. ಶಾಸಕರು ಹಣವನ್ನು ಬಿಡುಗಡೆ ಮಾಡುವಂತೆ ಹಲವು ಸಮಯದಿಂದ ಒತ್ತಾಯಿಸುತ್ತಿದ್ದರು.

ಕೆಲವು ಬಿಜೆಪಿ ಶಾಸಕರು, ಯಡಿಯೂರಪ್ಪ ಕಾಂಗ್ರೆಸ್ ಮತ್ತು ಜೆಡಿಯು ಮುಖಂಡರ ಕ್ಷೇತ್ರಗಳಿಗೆ ಮಾತ್ರ ಹಣವನ್ನು ಬಿಡುಗಡೆ ಮಾಡುತ್ತಿದ್ದಾರೆ. ಇದು ಮೂರು ಪಕ್ಷ-ಸರ್ಕಾರವಾಗಿ ಬಿಟ್ಟಿದೆ, ಬಿಜೆಪಿ ಸರ್ಕಾರವಲ್ಲ ಎಮದು ಆರೋಪಿಸಿದ್ದಾರೆ. ಯಡಿಯೂರಪ್ಪ ವಿರುದ್ದ ಸಿಡಿದೆದ್ದ ಬಂಡುಕೋರರಲ್ಲಿ ರಾಜ್ಯ ಪ್ರವಾಸೋದ್ಯಮ ಸಚಿವ ಸಿ ಪಿ ಯೋಗೇಶ್ವರ ಕೂಡಾ ಒಬ್ಬರಾಗಿದ್ದಾರೆ. ಸಿ ಪಿ ಯೋಗೇಶ್ವರ ಸಿಎಂ ಕಾಂಗ್ರೆಸ್ ಮತ್ತು ಜೆಡಿಯು ಶಾಸಕರ ಕ್ಷೇತ್ರಕ್ಕೆ ಮಾತ್ರ ಹಣ ಬಿಡುಗಡೆ ಮಾಡುತ್ತಾರೆ ಎಂದು ಆರೋಪಿಸಿದ್ದಾರೆ.

Recommended Video

Pegasus ಫೋನ್ ನಲ್ಲಿ ಒಮ್ಮೆ ಇನ್ಸ್ಟಾಲ್ ಆದ್ರೆ ಏನೇನ್ ಮಾಡುತ್ತೆ? | How it Hacks into WhatsApp ? | Oneindia Kannada

(ಒನ್‌ಇಂಡಿಯಾ ಸುದ್ದಿ)

English summary
BJP leader Basangouda Patil Yatnal said that the party’s central leadership will soon pick a new CM, someone who is honest, pro Hindu, and capable of bringing the BJP back to power.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X