ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂರನೇ ಲಾಕ್ ಡೌನ್ ನಂತರ ಏನು? ಸುಳಿವು ಕೊಟ್ಟ ಗೃಹಸಚಿವ ಬೊಮ್ಮಾಯಿ

|
Google Oneindia Kannada News

ಬೆಂಗಳೂರು, ಮೇ 7: ಸ್ವಯಂ ಕ್ವಾರಂಟೈನ್ ನಿಂದ ಹೊರ ಬಂದಿರುವ ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮೂರನೇ ಲಾಕ್ ಡೌನ್ ನಂತರ ಏನು ಎನ್ನುವುದರ ಬಗ್ಗೆ ಸುಳಿವು ನೀಡಿದ್ದಾರೆ.

Recommended Video

ಸರ್ಕಾರ ನಮಗೆ ಏನ್ ಕೊಡೋದು ಬೇಡ ಮದ್ಯ ಮಾರಾಟ ನಿಲ್ಸಿದ್ರೆ ಸಾಕು | Oneindia Kannada

"ಕೃಷಿ ಮತ್ತು ಆರ್ಥಿಕ ಚಟುವಟಿಕೆಗಳು ಆರಂಭವಾಗಲಿ ಎನ್ನುವ ಕಾರಣಕ್ಕಾಗಿ ಲಾಕ್ ಡೌನ್ ಅನ್ನು ಸಡಿಲಿಕೆ ಮಾಡಲಾಗಿದೆ, ಇದರರ್ಥ ಕೊರೊನಾ ಕಮ್ಮಿಯಾಗಿದೆ ಎಂದಲ್ಲ" ಎಂದು ಬೊಮ್ಮಾಯಿ ಹೇಳಿದ್ದಾರೆ.

ಮಹಾರಾಷ್ಟ್ರದಿಂದ ಕದ್ದು ಮುಚ್ಚಿ ಬರುವವರು ಹೆಚ್ಚಾಗಿದ್ದಾರೆ- ಬಸವರಾಜ್ ಬೊಮ್ಮಾಯಿ ಮಹಾರಾಷ್ಟ್ರದಿಂದ ಕದ್ದು ಮುಚ್ಚಿ ಬರುವವರು ಹೆಚ್ಚಾಗಿದ್ದಾರೆ- ಬಸವರಾಜ್ ಬೊಮ್ಮಾಯಿ

"ಸಾರ್ವಜನಿಕರ ಸಹಕಾರವಿದ್ದರೆ ಮಾತ್ರ ಕೊರೊನಾವನ್ನು ಸಂಪೂರ್ಣ ತೊಲಗಿಸಲು ಸಾಧ್ಯ. ಮೂರನೇ ಲಾಕ್ ಡೌನ್ ಅನ್ನು ಯಶಸ್ವಿಗೊಳಿಸುವ ಸಂಪೂರ್ಣ ಜವಾಬ್ದಾರಿ ಜನರದ್ದು"ಎಂದು ಬೊಮ್ಮಾಯಿ ಪುನರುಚ್ಚಿಸಿದ್ದಾರೆ.

What After Third Lockdown? State Home Minister Basavaraj Bommai Reaction

"ಮೇ ಹದಿನೇಳರ ನಂತರ ಕೊರೊನಾ ನಿಯಂತ್ರಣಕ್ಕೆ ಬರದೇ ಇದ್ದಲ್ಲಿ, ಮುಂದೆ ಕಠಿಣ ಕ್ರಮ ತೆಗೆದುಕೊಳ್ಳುವ ಅನಿವಾರ್ಯತೆ ಸರಕಾರಕ್ಕೆ ಬರಲಿದೆ"ಎಂದು ಗೃಹಸಚಿವರು ಎಚ್ಚರಿಕೆಯನ್ನು ನೀಡಿದ್ದಾರೆ.

"ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಕೇಂದ್ರದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು" ಬೊಮ್ಮಾಯಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

2 ಬಿಎಸ್ಎಫ್ ಯೋಧರು ಸಾವು, 193ಕ್ಕೆ ಏರಿದೆ ಸೋಂಕಿನ ಸಂಖ್ಯೆ2 ಬಿಎಸ್ಎಫ್ ಯೋಧರು ಸಾವು, 193ಕ್ಕೆ ಏರಿದೆ ಸೋಂಕಿನ ಸಂಖ್ಯೆ

"ಕಾಂಗ್ರೆಸ್ ನವರು ಮೊಸರಲ್ಲಿ ಕಲ್ಲು ಹುಡುಕುತ್ತಿದ್ದಾರೆ. ವಾಸ್ತವ ಇದ್ದರೆ ಆರೋಪ ಮಾಡಲಿ. ಆರೋಪ ಮಾಡಬೇಕು ಅಂತಾನೆ ಮಾಡೋದು ಸರಿಯಲ್ಲ" ಎಂದು ಬಸವರಾಜ ಬೊಮ್ಮಾಯಿ ಈ ಸಂದರ್ಭದಲ್ಲಿ ಅಸಮಾಧಾನ ಹೊರಹಾಕಿದರು.

English summary
What After Third Lockdown? State Home Minister Basavaraj Bommai Reaction,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X