• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕುತೂಹಲದ ಕೇಂದ್ರಬಿಂದು 'ವರುಣಾ'ದಲ್ಲಿ ಗೆಲ್ಲುವವರ್ಯಾರು..?

By ಯಶಸ್ವಿನಿ ಎಂ.ಕೆ
|

ಮೈಸೂರು, ಏಪ್ರಿಲ್ 7 : ವರುಣಾ ವಿಧಾನಸಭಾ ಕ್ಷೇತ್ರ, ಅತ್ಯಂತ ರೋಚಕ ಕಣವಾಗಿದೆ. ಕಳೆದೆರಡು ಚುನಾವಣೆಗಳಲ್ಲಿ ರಾಜಕೀಯವಾಗಿ ಹಲವಾರು ಬದಲಾವಣೆಗಳನ್ನು ತಂದ 2008ರ ಚುನಾವಣೆಯಲ್ಲಿ, ಕ್ಷೇತ್ರ ಪುನರ್ವಿಂಗಡಣೆ ಯಿಂದ ಅನೇಕರಿಗೆ ಚುನಾವಣೆಗಳಲ್ಲಿ ಸ್ಪರ್ಧಿಸಲು ಅವಕಾಶವೇ ಇಲ್ಲದೆ ಬೇರೆ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾದರೆ, ಮತ್ತೆ ಕೆಲವರಿಗೆ ಅವಕಾಶಗಳು ಹುಡುಕಿಕೊಂಡು ಬಂದವು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ಸುಮಾರು 30 ವರ್ಷಗಳ ನಂತರ ನಡೆದ ಕ್ಷೇತ್ರ ಪುನರ್‍ವಿಂಗಡಣೆಯಿಂದ ಮೈಸೂರು ಜಿಲ್ಲೆಯಲ್ಲಿ ಹಲವಾರು ಬದಲಾವಣೆಗಳಾಗಿ ಬನ್ನೂರು ಕ್ಷೇತ್ರ ಮಾಯವಾಗಿ, ಹೊಸದಾಗಿ ವರುಣ ವಿಧಾನಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದಿತು. ವರುಣ ವಿಧಾನಸಭಾ ಕ್ಷೇತ್ರ ಸಾಮಾನ್ಯ ಕ್ಷೇತ್ರವಾಗಿ ಉದಯವಾಯಿತು.

ಚಾಮುಂಡೇಶ್ವರಿ ಚಕ್ರವ್ಯೂಹ: ಮಹತ್ವದ ಕ್ಷೇತ್ರದ ಹಿನ್ನೋಟ

ಮೈಸೂರು, ನಂಜನಗೂಡು, ತಿ.ನರಸೀಪುರ ಮೂರು ತಾಲ್ಲೂಕುಗಳಲ್ಲಿ ವರುಣ ವಿಧಾನಸಭಾ ಕ್ಷೇತ್ರ ಹಂಚಿಹೋಗಿದೆ. ಹೆಚ್ಚಿನ ಭಾಗ ಮೈಸೂರು ತಾಲ್ಲೂಕನ್ನು ಒಳಗೊಂಡಿದೆ. 2001ರ ಜನಗಣತಿಯ ಆಧಾರದ ಮೇಲೆ ನಡೆದ ಕ್ಷೇತ್ರ ಪುನರ್‍ವಿಂಗಡಣೆ 2008ರ ಚುನಾವಣೆಯಲ್ಲಿ ಜಾರಿಗೆ ಬಂದಿತು. ಹೊಸ ಕ್ಷೇತ್ರದಲ್ಲಿ ಮೊದಲ ಬಾರಿಗೇ ಸಂಚಲನ ಉಂಟಾಯಿತು. 1,08,249 ಪುರುಷರು, 1,05.560 ಮಹಿಳೆಯರು ಸೇರಿದಂತೆ 2,13,809 ಮತದಾರರನ್ನು ಒಳಗೊಂಡಿರುವ ವರುಣ ಕ್ಷೇತದಲ್ಲಿ ನಡೆಯುತ್ತಿರುವ ಮೂರನೇ ಸಾರ್ವತ್ರಿಕ ಚುನಾವಣೆ ಇದು.

ಸಿದ್ದರಾಮಯ್ಯ ಸ್ಪರ್ಧಿಸಿದ್ದ ಕ್ಷೇತ್ರ

ಸಿದ್ದರಾಮಯ್ಯ ಸ್ಪರ್ಧಿಸಿದ್ದ ಕ್ಷೇತ್ರ

ಸಿದ್ದರಾಮಯ್ಯ ಅವರು ತಮಗೆ ರಾಜಕೀಯಜನ್ಮ, ಪುನರ್ಜನ್ಮ ನೀಡಿ, ಬೆಳೆಸಿದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತವನ್ನು ಬಿಟ್ಟು ಮೊದಲ ಬಾರಿಗೆ ವರುಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ತೀರ್ಮಾನಿಸುತ್ತಿದ್ದಂತೆ ಹೊಸ ಕ್ಷೇತ್ರ ಭಾರೀ ಸದ್ದುಮಾಡಿ ಗಮನ ಸೆಳೆಯಿತು. ಚಾಮುಂಡೇಶ್ವರಿಯಲ್ಲಿ ಎಂ.ಸತ್ಯನಾರಾಯಣ ಅವರಿಗೆ ಅವಕಾಶ ಕಲ್ಪಿಸಿ, ಸಿದ್ದರಾಮಯ್ಯ ವರುಣ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಜಾತಿವಾರು ಲೆಕ್ಕಾಚಾರ ಹಾಗೂ ಬಿಜೆಪಿ ಗಾಳಿಯ ನಡುವೆಯೂ ವಿಜಯದ ನಗೆ ಬೀರಿದ ಸಿದ್ದರಾಮಯ್ಯ ಕ್ಷೇತ್ರದ ಮೊದಲ ಶಾಸಕರಾದರು. ಸಿದ್ದರಾಮಯ್ಯ ಅವರು 71,908 ಮತ ಗಳಿಸಿದರೆ, ಇವರ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿದ್ದ ರಾಜ್ಯದ ನಿವೃತ್ತ ಪೊಲೀಸ್ ಮಹಾನಿರ್ದೇ ಶಕ ಎಲ್.ರೇವಣಸಿದ್ದಯ್ಯ ಅವರು 53071 ಮತಗಳನ್ನು ಪಡೆದರು. ಸಿದ್ದರಾಮಯ್ಯ 18848 ಮತಗಳ ಅಂತರದಿಂದ ಜಯಗಳಿಸಿದರು. ನಂತರ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿದ್ದ ಎಂ.ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭೆಗೆ ಆಯ್ಕೆಯಾದ ನಂತರ ತೆರವಾದ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದರು.

ಸಿದ್ದುವನ್ನು ಸೋಲಿಸಲು ಜೆಡಿಎಸ್ ಬಳಿಯಿದೆ ರೇವಣಾಸ್ತ್ರ!

ಲಿಂಗಾಯಿತರ ಪ್ರಾಬಲ್ಯವೇ ಹೆಚ್ಚು

ಲಿಂಗಾಯಿತರ ಪ್ರಾಬಲ್ಯವೇ ಹೆಚ್ಚು

ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 60 ಸಾವಿರ ಲಿಂಗಾಯಿತ ಮತದಾರರದಿದಾರೆ. ಪರೀಶಿಷ್ಟ ಜಾತಿ ಹಾಗೂ ಪಂಗಡದ ಸುಮಾರು 65 ಸಾವಿರ, ಕುರುಬ ಸಮಿದಾದವರು 36, ಒಕ್ಕಲಿಗರು 13 ಸಾವಿರ ಸೇರಿದಂತೆ ಅಲ್ಪಸಂಖ್ಯಾತರು, ಇತರೆ ಸಮುದಾಯದ ಸಾವಿರಾರು ಮತದಾರರಿದ್ದಾರೆ. 36 ಗ್ರಾಮ ಪಂಚಾಯಿತಿ, 26 ತಾ. ಪಂಚಾಯಿತಿ 6 ಜಿಲ್ಲಾ ಪಂಚಾಯಿತಿ ವರುಣಾ ವ್ಯಾಪ್ತಿಗೆ ಬರಲಿದೆ. 2013ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಿದ್ದರಾಮಯ್ಯ 84,385 ಮತಗಳನ್ನು ಗಳಿಸಿ ಸತತ ಎರಡನೇ ಬಾರಿಗೆ ಆಯ್ಕೆಯಾಗಿ ಮುಖ್ಯಮಂತ್ರಿಯೂ ಆದರು. ಸಮೀಪ ಪತಿಸ್ಪರ್ಧಿ ಕಾ.ಪು.ಸಿದ್ದಲಿಂಗಸ್ವಾಮಿ 54,744 ಮತಗಳನ್ನು ಗಳಿಸಿದರು. ಬಿಜೆಪಿ ಅಭ್ಯರ್ಥಿ ಎಸ್.ಡಿ.ಮಹೇಂದ್ರ 1070 ಮತಗಳನ್ನು ಪಡೆದು ಠೇವಣಿ ಕಳೆದುಕೊಂಡರು

ಸ್ಪರ್ಧಿಸಲಿರುವ ಸ್ಪರ್ಧಿಗಳು ಯಾರು ?

ಸ್ಪರ್ಧಿಸಲಿರುವ ಸ್ಪರ್ಧಿಗಳು ಯಾರು ?

ಬಿಜೆಪಿಯಿಂದ ಇಲ್ಲಿ ಇನ್ನೂ ಅಭ್ಯರ್ಥಿಯ ಘೋಷಣೆಯಾಗಿಲ್ಲ. ಕಾ.ಪು.ಸಿದ್ದಲಿಂಗಸ್ವಾಮಿ ಅವರು ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ ದಿಢೀರ್ ಬೆಳವಣಿಗೆಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರ ಹೆಸರು ಕೇಳಿಬರುತ್ತಿದೆ. ಈ ಸಂಬಂಧ ವರುಣ ವಿಧಾನಸಭಾ ಕ್ಷೇತದ ಪದಾಧಿಕಾರಿಗಳು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಮನವಿಪತ್ರವನ್ನು ಸಲ್ಲಿಸಿದ್ದಾರೆ. ಒಂದು ವೇಳೆ ವಿಜಯೇಂದ ಸ್ಪರ್ಧೆಗಿಳಿದರೆ ಕ್ಷೇತ್ರದಲ್ಲಿ ಹಾಲಿ, ಮಾಜಿ ಮುಖ್ಯಮಂತ್ರಿಗಳಿಬ್ಬರ ನಡುವಿನ ಸೆಣಸಾಟವಾಗಲಿದೆ.

ಯತೀಂದ್ರ ಗೆಲ್ಲುತ್ತಾರಾ?

ಯತೀಂದ್ರ ಗೆಲ್ಲುತ್ತಾರಾ?

ಸಿದ್ದರಾಮಯ್ಯ ಅವರು ಚುನಾವಣಾ ಕಣದಿಂದ ನಿವೃತ್ತಿಯಾಗುವುದಾಗಿ ಹಾಗೂ ಇದೇ ಕೊನೇ ಚುನಾವಣೆ ಎಂದು ಹೇಳಿದ್ದರಿಂದ ನಂತರ ಈ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಲು ಪುತ್ರ ರಾಕೇಶ್ ಸಿದ್ದರಾಮಯ್ಯ ಸಿದ್ಧತೆಗಳನ್ನು ನಡೆಸಿದ್ದರು. ಆದರೆ ರಾಜಕೀಯ ಸವಾಲುಗಳಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನಸ್ಸು ಬದಲಿಸಿ ಮತ್ತೊಮ್ಮೆ ಕಣಕ್ಕಿಳಿಯಲು ನಿರ್ಧರಿಸಿ ತಮ್ಮ ಮೂಲ ಕ್ಷೇತ ಚಾಮುಂಡೇಶ್ವರಿಯಿಂದ ಸ್ಪರ್ಧೆಗಿಳಿಯಲು ನಿರ್ಧರಿಸಿದರು. ಈ ಮಧ್ಯೆ ರಾಕೇಶ್ ಸಿದ್ದರಾಮಯ್ಯ ಅವರ ಅಕಾಲಿಕ ನಿಧನದಿಂದ ಅವರ ಸಹೋದರ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ವರುಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ತಂದೆಯವರ ಅಭಿವೃದ್ಧಿ ಕಾರ್ಯಗಳು ಹಾಗೂ ಕ್ಷೇತ್ರದ ಮೇಲಿನ ಹಿಡಿತ ಡಾ.ಯತೀಂದ್ರ ಸಿದ್ದರಾಮಯ್ಯ ಅವರಿಗೆ ಶೀರಕ್ಷೆಯಾಗಲಿದೆ.

ಜಾ.ದಳದಿಂದ ಈಗಾಗಲೇ ಪ್ರೊ.ಸುಬ್ಬಪ್ಪ ಅವರ ಪುತ್ರ ಎಸ್.ಅಭಿಷೇಕ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ್ದು, ಅವರು ಪಚಾರವನ್ನು ಆರಂಭಿಸಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಜಾ.ದಳ ಸಮಾವೇಶವೂ ನಡೆದಿದೆ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka assembly elections 2018: Varuna constituency is of of the major constituency which has a key role in Karnataka elections. Chief minister Siddaramaiah in Karnataka assembly Elections 2013 contested from here. There are rumours that, this year his Son Yathindra from Congress and Former chief minsiter B S Yeddyurappa's son B Y Vijayendra will be contesting from here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more