ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರಿನ ಕೃಷ್ಣರಾಜ ಕ್ಷೇತ್ರದ ಚುಕ್ಕಾಣಿ ಯಾರ ಕೈಗೆ..?

By ಯಶಸ್ವಿನಿ ಎಂ.ಕೆ
|
Google Oneindia Kannada News

Recommended Video

Karnataka Elections 2018 : ಮೈಸೂರಿನ ಕೃಷ್ಣರಾಜ ಕ್ಷೇತ್ರದ ಹಿನ್ನೆಲೆ ಹಾಗು ಅದರ ಮಹತ್ವ | Oneindia Kannada

ಮೈಸೂರು, ಏಪ್ರಿಲ್ 3 : ಮೈಸೂರಿನಲ್ಲಿ ಚುನಾವಣಾ ಕಾವು ರಂಗೇರುತ್ತಿದೆ. ತನ್ನ 11 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಘಟನಾಘಟಿ ನಾಯಕರೇ ಇರುವ ಇಲ್ಲಿ ಎಲ್ಲಾ ಕ್ಷೇತ್ರಕ್ಕೂ ತನ್ನದೇ ಆದ ವಿಶೇಷ ಹಿನ್ನೆಲೆ ಇದೆ. ಈ ಸಾಲಿಗೆ ಕೃಷ್ಣರಾಜ ವಿಧಾನಸಭಾ ಕ್ಷೇತ್ರವೂ ಸೇರ್ಪಡೆಗೊಳ್ಳುತ್ತದೆ. ಕೃಷ್ಣರಾಜ ವಿಧಾನಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದಾಗಿನಿಂದ 8 ಮಂದಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದು, ಇದರಲ್ಲಿ ಇಬ್ಬರು ತಲಾ 2 ಬಾರಿ ಹಾಗೂ ಒಬ್ಬರು 3 ಬಾರಿ ಶಾಸಕರಾಗಿ ಆಯ್ಕೆಯಾಗಿರುವುದು ದಾಖಲಾಗಿದೆ. ಅಲ್ಲದೆ ಸಚಿವರನ್ನು ನೀಡಿದ ಕ್ಷೇತ್ರವೂ ಇದಾಗಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

ಕ್ಷೇತದಲ್ಲಿ ಒಟ್ಟು 2,39,192 ಮತದಾರರಿದ್ದು, ಮಹಿಳಾ ಮತದಾರರೇ ಹೆಚ್ಚಾಗಿದ್ದಾರೆ. ಮಹಿಳೆಯರು: 1,20,618 ಮಂದಿ ಹಾಗೂ ಪುರುಷರು: 1,18,574 ಮಂದಿ ಇದ್ದಾರೆ. ಕ್ಷೇತ್ರದಲ್ಲಿ ಜಾತೀವಾರು ಲೆಕ್ಕದಲ್ಲಿ ಬ್ರಾಹ್ಮಣರು ಮೊದಲ ಸ್ಥಾನದಲ್ಲಿದ್ದಾರೆ. ಸುಮಾರು 55-58 ಸಾವಿರ ಮಂದಿ ಬ್ರಾಹ್ಮಣ ಸಮುದಾಯದವರಿದ್ದಾರೆ. ನಂತರ ಪರಿಶಿಷ್ಟ ಜಾತಿ ಸಮುದಾಯ ಬರಲಿದ್ದು 40 ಸಾವಿರ ಮಂದಿ ಇದ್ದಾರೆ.

ನರಸಿಂಹರಾಜ ಕ್ಷೇತ್ರ : ಕಾಂಗ್ರೆಸ್ಸಿಗೆ ಮತ್ತೆ ಗೆಲುವಿನ ನಿರೀಕ್ಷೆನರಸಿಂಹರಾಜ ಕ್ಷೇತ್ರ : ಕಾಂಗ್ರೆಸ್ಸಿಗೆ ಮತ್ತೆ ಗೆಲುವಿನ ನಿರೀಕ್ಷೆ

ಉಳಿದಂತೆ ವೀರಶೈವರು 32 ಸಾವಿರ, ಕುರುಬರು 25-28 ಸಾವಿರ, ನಾಯಕರು 10 ಸಾವಿರ, ಒಕ್ಕಲಿಗರು 15 ಸಾವಿರ, ಅಲ್ಪಸಂಖ್ಯಾತರು 8 ಸಾವಿರ, ಮರಾಠರು 5 ಸಾವಿರ, ಜೈನರು 6 ಸಾವಿರ, ತಮಿಳರು 3 ಸಾವಿರ, ಇತರ ಸಮುದಾಯಗಳು 35 ಸಾವಿರ ಇದ್ದಾರೆ.

ಮೂರು ಬಾರಿ ಆಯ್ಕೆಯಾಗಿದ್ದ ರಾಮದಾಸ್

ಮೂರು ಬಾರಿ ಆಯ್ಕೆಯಾಗಿದ್ದ ರಾಮದಾಸ್

ಕೃಷ್ಣರಾಜ ಕ್ಷೇತ್ರ ಹೊಸದಾಗಿ ಉದಯವಾದ ನಂತರ ಈವರಗೆ ಎಸ್.ಎ.ರಾಮದಾಸ್ ಒಬ್ಬರೇ ಮೂರು ಬಾರಿ ಆಯ್ಕೆಯಾಗಿರುವ ಅಭ್ಯರ್ಥಿಯಾಗಿದ್ದಾರೆ. ಉಳಿದಂತೆ ಎಚ್.ಗಂಗಾಧರನ್ ಹಾಗೂ ಎಂ.ಕೆ.ಸೋಮಶೇಖರ್ ಅವರು ತಲಾ 2 ಬಾರಿ ಚುನಾಯಿತರಾಗಿದ್ದಾರೆ. ಡಿ.ಸೂರ್ಯನಾರಾಯಣ (ಕಾಂಗ್ರೆಸ್), ವೇದಾಂತ ಹೆಮ್ಮಿಗೆ (ಜನತಾ ಪಕ್ಷ), ಕೆ.ಎನ್.ಸೋಮಸುಂದರಂ (ಕಾಂಗ್ರೆಸ್) ತಲಾ ಒಂದು ಬಾರಿ ಆಯ್ಕೆಯಾಗಿದ್ದಾರೆ. ರಾಜ್ಯ ಸಚಿವ ಸಂಪುಟದಲ್ಲಿ ಸ್ವಾತಂತ್ರ್ಯಾನಂತರ ಕ್ಷೇತ್ರ ಶಾಸಕರಾಗಿ ಮೊದಲ ಬಾರಿಗೆ ಸಚಿವ ಸ್ಥಾನ ಅಲಂಕರಿಸಿದ ಕೀರ್ತಿ ರಾಮದಾಸ್ ಅವರದ್ದಾಯಿತು. ಇದಕ್ಕೂ ಮೊದಲು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಯಾಗಿ ಸಂಪುಟ ದರ್ಜೆ ಸ್ಥಾನಮಾನದ ಅಧಿಕಾರವನ್ನು ಪಡೆದಿದ್ದರು. ಇದು ಕ್ಷೇತ್ರದ ವಿಶೇಷ.

ಘಟಾನುಘಟಿಗಳಿಗೆ ಮಣ್ಣು ಮುಕ್ಕಿಸಿದ ಕ್ಷೇತ್ರ

ಘಟಾನುಘಟಿಗಳಿಗೆ ಮಣ್ಣು ಮುಕ್ಕಿಸಿದ ಕ್ಷೇತ್ರ

ಶಾಸಕರಾಗಿದ್ದ ಎಚ್.ಗಂಗಾಧರನ್, ಕೆ.ಎನ್.ಸೋಮಸುಂದರಂ, ಮಾಜಿ ಸಚಿವ ಎಸ್.ರಮೇಶ್, ಬಿಜೆಪಿ ಅಭ್ಯರ್ಥಿಯಾಗಿದ್ದ ನಿವೃತ್ತ ಪೊಲೀಸ್ ಅಧಿಕಾರಿ ವೀರಭದ್ರಯ್ಯ, ಜಾ.ಜನತಾದಳ ಅಭ್ಯರ್ಥಿ ಶಿವಬಸಪ್ಪ ಮುಂತಾದವರ ಠೇವಣಿ ಜಪ್ತಿ ಆಗಿರುವುದು ಈ ಕ್ಷೇತದ ವೈಶಿಷ್ಟ್ಯವಾಗಿದೆ. ಹಾಲಿ ಶಾಸಕರಾಗಿರುವ ಕೆಎಸ್ ಐಸಿ ಅಧ್ಯಕ್ಷರೂ ಆದ ಎಂ.ಕೆ.ಸೋಮಶೇಖರ್ ಅವರು ತಮ್ಮ ಅವಧಿಯಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಅವರಿಗೇ ಈ ಬಾರಿಯೂ ಟಿಕೆಟ್ ಸಿಗಲಿದೆ ಎನ್ನಲಾಗಿದೆ. ಬಿಜೆಪಿಯಲ್ಲಿ ಟಿಕೆಟ್ ಗಾಗಿ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಯಾರಿಗೆ ಟಿಕೆಟ್ ಎಂಬ ಗೊಂದಲದಲ್ಲಿ ಕಾರ್ಯಕರ್ತರು ಇದ್ದಾರೆ. ಮಾಜಿ ಸಚಿವ ಹಾಗೂ ಮೂರು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿರುವ ಎಸ್.ಎ.ರಾಮದಾಸ್ ಹಾಗೂ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ವಿ.ರಾಜೀವ್ ಅವರ ನಡುವೆ ತೀವ್ರ ಪೈಪೋಟಿ ಇದೆ. ಇನ್ನು ಚಿತ್ರ ನಟಿಯಾಗಿ ಹೆಸರುಗಳಿಸಿರುವ ಮಾಳವಿಕ, ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಆಪ್ತ ಕೆ.ಆರ್ ಮೋಹನ್ ಕುಮಾರ್ , ಪಾಲಿಕೆ ಮಾಜಿ ಸದಸ್ಯ ಪಾರ್ಥಸಾರಥಿ, ಶ್ರೀ ವತ್ಸ, ರಾಮ್ ಪ್ರಸಾದ್ ಹೆಸರುಗಳು ಕೇಳಿಬರುತ್ತಿವೆ. ಯಾರಿಗೇ ಟಿಕೆಟ್ ನೀಡಿದರೂ ಮತ್ತೊಂದು ಬಣದಲ್ಲಿನ ಅಸಮಾಧಾನ ಪಕ್ಷದ ಅಭ್ಯರ್ಥಿಗೆ ಪ್ರತಿಕೂಲವಾಗುವ ಸಾಧ್ಯತೆ ಇದೆ.

ರಾಮದಾಸ್ ವಿರುದ್ಧ ಪ್ರೇಮ ಕುಮಾರಿ?!

ರಾಮದಾಸ್ ವಿರುದ್ಧ ಪ್ರೇಮ ಕುಮಾರಿ?!

ಇತ್ತ ರಾಮ್ ದಾಸ್ ಪ್ರೇಮ ಪ್ರಕರಣದ ಪ್ರೇಮ ಕುಮಾರಿ ಕೂಡ ಇದೀಗ ರಾಜಕೀಯ ಜೀವನದಲ್ಲಿ ಎಸ್.ಎ.ರಾಮದಾಸ್ ಸ್ಪರ್ಧಿಸಲು ಇಚ್ಛಿಸಿರುವ ಕ್ಷೇತ್ರದಿಂದಲೇ ಅದೃಷ್ಟ ಪರೀಕ್ಷೆಗೆ ಮುಂದಾಗಿರುವುದು ತೀವ್ರ ಕುತೂಹಲ ಕೆರಳಿಸಿದೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಫರ್ಧಿಸಲಿರುವ ಪ್ರೇಮಕುಮಾರಿ ಈಗಾಗಲೇ ಪಕ್ಷದಲ್ಲಿ ಪ್ರಚಾರಕ್ಕೆ ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಮ್ ದಾಸ್ ಗೆ ಟಿಕೇಟ್ ಕೈ ತಪ್ಪುವ ಸಾಧ್ಯತೆಯೇ ಹೆಚ್ಚು. ಈ ಹಿಂದೆ ಇದೇ ಕಾರಣಕ್ಕೆ ರಾಮ್ ದಾಸ್ ಕೂಡ ಸೋಲನ್ನುಂಡಿದ್ದರು ಎಂಬುದನ್ನು ಮರೆಯುವಂತಿಲ್ಲ. ವರ್ಚಸ್ಸು ಕುಂದಬಹುದೆಂಬ ಕಾರಣಕ್ಕೆ ಕಮಲ ಪಾಳಯ ನಿರ್ಧಾರಕ್ಕೆ ಹಿಂದೇಟು ಹಾಕಿದರೂ ಆಶ್ಚರ್ಯಪಡುವಂತಿಲ್ಲ. ಜಾತ್ಯತೀತ ಜನತಾದಳದಿಂದ ಮಹಾನಗರ ಪಾಲಿಕೆ ಸದಸ್ಯ ಕೆ.ವಿ.ಮಲ್ಲೇಶ್ ಅವರಿಗೆ ಟಿಕೆಟ್ ನೀಡಿದ್ದು, ಪಕ್ಷದಲ್ಲಿ ಇವರಿಗೆ ಯಾವುದೇ ಪೈಪೋಟಿ ಇಲ್ಲವಾಗಿದೆ. ಕೆ.ವಿ.ಮಲ್ಲೇಶ್ ಅವರು ಚುನಾವಣಾ ಪ್ರಚಾರವನ್ನು ಬಿರುಸಿನಿಂದ ಆರಂಭಿಸಿದ್ದಾರೆ. ಈ ಮಧ್ಯೆ ಚಿತ್ರ ನಟಿ ಹಾಗೂ ನಿರ್ದೇಶಕಿ ರೂಪಾ ಅಯ್ಯರ್ ಸಹ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ.

ಹಿಂದಿನ ಶಾಸಕರು

ಹಿಂದಿನ ಶಾಸಕರು

1967 - ಎಸ್. ಚೆನ್ನಯ್ಯ - ಪಕ್ಷೇತರ -9,041 ಮತಗಳು
1972 - ಡಿ.ಸೂರ್ಯನಾರಯಣ - ಕಾಂಗ್ರೆಸ್ - 14150 ಮತಗಳು
1978 - ಹೆಚ್. ಗಂಗಾಧರನ್ - ಜನತಾಪಕ್ಷ - -25091 ಮತಗಳು
1983 -ಎನ್. ಹೆಚ್. ಗಂಗಾಧರ - ಬಿಜೆಪಿ - 21163 ಮತಗಳು
1985 -ವೇದಾಂತ ಹೆಮ್ಮಿಗೆ - ಜನತಾ ಪಕ್ಷ- 20657 ಮತಗಳು
1989 - ಕೆ.ಎನ್ ಸೋಮಸುಂದರಂ - ಕಾಂಗ್ರೆಸ್ - 28722 ಮತಗಳು
1994 - ಎ. ರಾಮದಾಸ್ - ಬಿಜೆಪಿ - 29817 ಮತಗಳು
2004 - ಎಂ.ಕೆ ಸೋಮಶೇಖರ್ - ಜೆಡಿಎಸ್ - 25439 ಮತಗಳು
2008 - ಎಸ್. ಎ. ರಾಮ್ ದಾಸ್ - ಬಿಜೆಪಿ - 63314 ಮತಗಳು
2013 - ಎಂ.ಕೆ ಸೋಮಶೇಖರ್ - ಕಾಂಗ್ರೆಸ್ - 52611 (ಎಸ್. ಎ ರಾಮ್ ದಾಸ್ ಬಿಜಪಿ 46546 ಮತಗಳು, ಹೆಚ್. ವಿ ರಾಜೀವ್ - ಕೆಜೆಪಿ- 15575 ಮತಗಳು, ಹೆಚ್. ವಾಸು - ಜೆಡಿಎಸ್ - 7486 ಮತಗಳು)

English summary
Karnataka Assembly elections 2018: Krishnaraja of Mysuru is one of the important assembly constituencies of Karnataka. Here is the list of history and importance of this constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X