ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದೂ-ಮುಸ್ಲಿಂ ಬಾಂಧವ್ಯ: ಬೇಲೂರು ಚನ್ನಕೇಶವನೆದುರು ಕುರಾನ್ ಪಠಣ

|
Google Oneindia Kannada News

ಹಾಸನ, ಏಪ್ರಿಲ್ 14: ರಾಜ್ಯದಲ್ಲಿ ಹಿಜಾಬ್, ದೇವಸ್ಥಾನದಲ್ಲಿ ವ್ಯಾಪಾರ ನಿಷೇಧ ಹಾಗೂ ಇತರೆ ಹಲವು ವಿಷಯಗಳಲ್ಲಿ ಹಿಂದೂ- ಮುಸ್ಲಿಂ ನಡುವೆ ಧಾರ್ಮಿಕ ವೈಮನಸ್ಯದ ಸ್ಥಿತಿ ನಿರ್ಮಾಣವಾಗಿದೆ.

ಹಿಂದೂ- ಮುಸ್ಲಿಂ ನಡುವೆ ಹಲವು ವಿವಾದಗಳ ನಡುವೆಯೂ ರಾಜ್ಯದ ಹಲವೆಡೆ ಎರಡೂ ಧರ್ಮಗಳ ಸಾಮರಸ್ಯ ಮತ್ತು ಸಹೋದರತ್ವ ಬಾಂಧವ್ಯ ಮೇಳೈಸಿದೆ. ಅದರಲ್ಲಿ ಹಾಸನ ಜಿಲ್ಲೆಯ ಬೇಲೂರಿನ ಶ್ರೀ ಚನ್ನಕೇಶವಸ್ವಾಮಿ ರಥೋತ್ಸವದಲ್ಲಿ ನಡೆಯುವ ಕುರಾನ್ ಪಠಣವೂ ಒಂದಾಗಿದೆ.

ಕೊಡಗು: ಬಸವೇಶ್ವರ ದೇವರಿಗೆ ಪೂಜೆ ಸಲ್ಲಿಸಿ ಭಾವೈಕ್ಯತೆ ಮೆರೆದ ಮುಸ್ಲಿಮರುಕೊಡಗು: ಬಸವೇಶ್ವರ ದೇವರಿಗೆ ಪೂಜೆ ಸಲ್ಲಿಸಿ ಭಾವೈಕ್ಯತೆ ಮೆರೆದ ಮುಸ್ಲಿಮರು

ಶಿಲ್ಪಕಲೆಗಳ ತವರೂರು ವಿಶ್ವವಿಖ್ಯಾತ ಬೇಲೂರು ಶ್ರೀ ಚನ್ನಕೇಶವಸ್ವಾಮಿ ಬ್ರಹ್ಮ ರಥೋತ್ಸವವು ನೆರೆದಿದ್ದ ಸಹಸ್ರಾರು ಭಕ್ತರ ವೇದಘೋಷ ಜೈಕಾರದ ನಡುವೆ ಬುಧವಾರ ವಿಜೃಂಭಣೆಯಿಂದ ಜರುಗಿತು.

Hindu-Muslim Harmony: Quran Chanting In Belur Channakeshava Rathotsava

ಬುಧವಾರ ಬೆಳಿಗ್ಗೆ ಚನ್ನಕೇಶವಸ್ವಾಮಿ ದೇಗುಲದಲ್ಲಿ ಪೂಜಾ ವಿಧಿವಿಧಾನಗಳನ್ನು ಪೂರೈಸಿ ಯಾತ್ರಾದಾನ ಸೇವೆಯ ನಂತರ ಶ್ರೀಯವರ ಉತ್ಸವ ಮೂರ್ತಿಯನ್ನು ಅಲಂಕಾರಗೊಂಡ ದಿವ್ಯರಥದಲ್ಲಿ ಕೂರಿಸಲಾಯಿತು.

ಉತ್ಸವ ಮೂರ್ತಿಯನ್ನು ರಾಜಗೌರವದೊಂದಿಗೆ ರಥಕ್ಕೆ ಮೂರು ಸುತ್ತು ಪ್ರದಕ್ಷಿಣೆ ಹಾಕಿದ ನಂತರ ರಥದ ಮೇಲೆ ಕರೆತಂದು ಉತ್ಸವ ಮೂರ್ತಿಯನ್ನು ಉಯ್ಯಾಲೆಯಲ್ಲಿ ಕೂರಿಸಲಾಯಿತು.

ಚನ್ನಕೇಶವವನ ರಥಾರೋಹಣಕ್ಕೂ ಮೊದಲು ಕೇಸರಿ ಮಂಟಪಕ್ಕೆ ರಥಪ್ರೋಕ್ಷಣೆಯನ್ನು ಮಾಡಲಾಯಿತು. ರಥಕ್ಕೆ ಪೂಜೆಯನ್ನು ಸಲ್ಲಿಸಿದ ನಂತರ ಬಾಳೆಕಂದನ್ನು ಕತ್ತರಿಸಿ ಬಲಿಯನ್ನು ಕೊಡಲಾಯಿತು.

ಕುರಾನ್‌ ಪಠಣ
ಹಿಂದಿನ ಸಂಪ್ರದಾಯದಂತೆ ದೊಡ್ಡಮೇದೂರಿನ ಮೌಲ್ವಿ ಖಾಜಿ ಸೈಯ್ಯದ್ ಸಜ್ಜಾದ್‌ಬಾಷ ಖಾದ್ರಿ ರಥದ ಮುಂದೆ ಕುರಾನ್‌ ಗ್ರಂಥದ ಕೆಲವು ಸಾಲುಗಳನ್ನು ಪಠಣ ಮಾಡಿದ ನಂತರ ಭಕ್ತರ ಘೋಷದ ನಡುವೆ 11 ಗಂಟೆ 20 ನಿಮಿಷಕ್ಕೆ ರಥವನ್ನು ಮೂಲಸ್ಥಾನದಿಂದ ಎಳೆಯಲಾಯಿತು.

Hindu-Muslim Harmony: Quran Chanting In Belur Channakeshava Rathotsava

ಐದಾರು ತಲೆಮಾರುಗಳಿಂದ ರಥೋತ್ಸವಕ್ಕೂ ಮುನ್ನ ಕುರಾನ್ ಪಠಣ ಮಾಡಲಾಗುತ್ತಿದ್ದು, ಅದರಂತೆ ದೇವರಲ್ಲಿ ಪ್ರಾರ್ಥಿಸಿದ ಖಾದ್ರಿ, ಇಡೀ ಜಗತ್ತು ಶಾಂತಿ, ಪ್ರೀತಿ ಮತ್ತು ನೆಮ್ಮದಿಯಿಂದ ಇರಬೇಕು.

ಸರ್ವಜನಾಂಗದವರು ಸಹೋದರತ್ವದಿಂದ ಬಾಳಬೇಕು. ಎಲ್ಲರಿಗೂ ಒಳಿತನ್ನು ಮಾಡಬೇಕುಎಂದು ಕೋರಿದರು. ನಂತರ ಖಾದ್ರಿಯವರಿಗೆ ಸಂಪ್ರದಾಯದಂತೆ ದೇಗುಲದ ವತಿಯಿಂದ 25 ಕೆಜಿ ಅಕ್ಕಿ ಮತ್ತು ಗೌರವ ಸಂಭಾವನೆ ನೀಡಲಾಯಿತು.

ಹಿಂದಿನ ವಾಡಿಕೆಯಂತೆ ಗರುಡ ಪಕ್ಷಿಯು ರಥ ಎಳೆಯುವ ಸಂದರ್ಭದಲ್ಲಿ ದೇಗುಲದ ಸುತ್ತ ಪ್ರದಕ್ಷಿಣೆ ಮಾಡಿದ್ದನ್ನು ಕಂಡು ಭಕ್ತರು ಭಕ್ತಿಯಿಂದ ಕೈ ಮುಗಿದರು. ರಥವನ್ನು ಎಳೆಯುವ ಸಂದರ್ಭದಲ್ಲಿ ಭಕ್ತರು ದೇವರಿಗೆ ಬಾಳೆಹಣ್ಣು, ಧವನವನ್ನು ಎಸೆದು ಭಕ್ತಿಭಾವದಿಂದ ಕೇಶವನ ನಾಮಸ್ಮರಣೆ ಮಾಡಿದರು.

8 ಬೀದಿಯಲ್ಲಿ ಬ್ರಹ್ಮರಥೋತ್ಸವ ಮೆರವಣಿಗೆ
ಬೇಲೂರು ಚನ್ನಕೇಶವನ ಬ್ರಹ್ಮರಥೋತ್ಸವದ ಪ್ರಯುಕ್ತ ಬೆಳಿಗ್ಗೆ ಸುಪ್ರಭಾತ ಪೂಜೆಯೊಂದಿಗೆ ವಿಜೃಂಭಣೆಯಿಂದ ಯಾಗಶಾಲೆಯಲ್ಲಿನ ಹೋಮಕಾರ್ಯಗಳನ್ನು ಕೈಗೊಳ್ಳಲಾಯಿತು. ನಂತರ ದಿವ್ಯರಥಕ್ಕೆ ಪೂಜೆಯಲ್ಲೂ ಸಲ್ಲಿಸಿ ಬಲಿ ಅನ್ನವನ್ನು ನಾಲ್ಕು ಚಕ್ರಗಳಿಗೂ ಸಮರ್ಪಿಸಲಾಯಿತು. ಬಲಿಪ್ರಧಾನವನ್ನು ನೆರವೇರಿಸಿದ ನಂತರ ಯಾತ್ರಾದಾನದ ನಂತರ ಶ್ರೀಯವರ ಉತ್ಸವ ಮೂರ್ತಿಯನ್ನು ಕೃಷ್ಣಾಗಂಧೋತ್ಸವದೊಂದಿಗೆ 8 ಬೀದಿಯಲ್ಲಿ ಮೆರವಣಿಗೆ ನಡೆಸಿ ಕೇಸರಿ ಮಂಟಪ ಪೂಜೆಯೊಂದಿಗೆ 11 ಗಂಟೆಗೆ ದಿವ್ಯರಥದಲ್ಲಿ ಕುಳ್ಳಿರಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಹನುಮ ಭಕ್ತರಿಗೆ ಮುಸ್ಲಿಮರಿಂದ ಅಡುಗೆ
ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ಹನುಮ ಮಾಲಾಧಾರಿಗಳಿಗೆ ಮುಸ್ಲಿಂ ಬಾಂಧವರು ಸ್ವಯಂ ಪ್ರೇರಿತರಾಗಿ ಹಣ್ಣು, ಹಂಪಲು ವಿತರಿಸಿದರು. ಜೊತೆಗೆ ಅಡುಗೆ ಬಡಿಸುವ ಮೂಲಕ ಎಲ್ಲ ದೇವರೂ ಒಂದೇ ಎನ್ನುವ ಭಾವೈಕ್ಯತೆ ಮೆರೆದರು.

ಕಾರಟಗಿ ಪಟ್ಟಣದ ಶ್ರೀದೇವಿ ಬೀರೇಶ್ವರಿ ಸಮುದಾಯ ಭವನದಲ್ಲಿ ಹನುಮ ಮಾಲೆ ಧರಿಸಿದ ಮಾಜಿ ಶಿವರಾಜ್ ತಂಗಡಗಿ ಸೇರಿದಂತೆ 45ಕ್ಕೂ ಹೆಚ್ಚು ಮಾಲಾಧಾರಿಗಳು ಪೂಜಾ ಕಾರ್ಯಗಳಿಗಾಗಿ ದೇವಿಗುಡ್ಡದಲ್ಲಿ ತಾತ್ಕಾಲಿಕವಾಗಿ ಪೂಜಾ ಪೀಠ ಸ್ಥಾಪಿಸಿಕೊಂಡಿದ್ದಾರೆ. ಇವರೆಲ್ಲರಿಗೂ ಮಂಗಳವಾರ ರಾತ್ರಿ ಮುಸ್ಲಿಂ ಬಾಂಧವರು ಊಟ ಬಡಿಸುವ ಮೂಲಕ ಹಿಂದೂ- ಮುಸ್ಲಿಂ ಒಂದೇ ಎಂದ ಸಾಮರಸ್ಯ ಸಾರಿದರು.

ಶಿಕಾರಿಪುರದಲ್ಲಿ ಆಂಜನೇಯ ರಥ ನಿರ್ಮಾಣ ಸಾರಥ್ಯ ವಹಿಸಿದ ಮುಸ್ಲಿಮರು
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಆಂಜನೇಯ ಸ್ವಾಮಿ ರಥೋತ್ಸವದ ತೇರನ್ನು ಮುಸ್ಲಿಮರು ಸಿದ್ಧಪಡಿಸಲಿದ್ದಾರೆ. ಏಪ್ರಿಲ್ 16 ಮತ್ತು 17ರಂದು ಆಂಜನೇಯ ಸ್ವಾಮಿ ರಥೋತ್ಸವ ನಡೆಯಲಿದೆ.

ಆಂಜನೇಯ ಸ್ವಾಮಿಯ ಬೃಹತ್ ರಥದ ಗಾಲಿಗೆ ಕಬ್ಬಿಣ ಪಟ್ಟಿ ವೆಲ್ಡಿಂಗ್ ಮಾಡುವ ಕೆಲಸ ಕಳೆದ ಮೂರು ದಿನಗಳಿಂದ ನಡೆಯುತ್ತಿದೆ. ಮುಜರಾಯಿ ಇಲಾಖೆ ಈ ಕೆಲಸ ಕೈಗೊಂಡಿದೆ. ನಗರದ ಜಾಫರ್ ಮತ್ತು ಅವರ ತಂಡ ಈ ಕೆಲಸದಲ್ಲಿ ತೊಡಗಿದ್ದಾರೆ. ಇದು ಕೂಡಾ ಹಿಂದೂ- ಮುಸ್ಲಿಂ ದೇವರೆನ್ನದೆ ಧಾರ್ಮಿಕ ಸಾಮರಸ್ಯ ಮೆರೆಯುವ ವಿಚಾರವಾಗಿದೆ.

English summary
Muslims chanting of the Quran was held at Sri Channakesavaswamy Rathotsava in Belur in the Hassan district, thus highlighting Hindu-Muslim harmony.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X