ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಸಾ ಮಾಜಿ ವಿಜ್ಞಾನಿ, ವಿದ್ವಾಂಸ ಡಾ. ನವರತ್ನ ಎಸ್ ರಾಜರಾಮ್ ಇನ್ನಿಲ್ಲ

|
Google Oneindia Kannada News

ಬೆಂಗಳೂರು, ಡಿಸೆಂಬರ್ 11: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಮಾಜಿ ವಿಜ್ಞಾನಿ, ಹಿಂದು ಪರ ಪ್ರತಿಪಾದಕ, ವಿದ್ವಾಂಸ, ಇತಿಹಾಸ ತಜ್ಞ ಡಾ. ನವರತ್ನ ಶ್ರೀನಿವಾಸ ರಾಜರಾಮ್(76) ಅವರು ನಿಧನರಾಗಿದ್ದಾರೆ.

ಮೈಸೂರಿನಲ್ಲಿ 1943ರಲ್ಲಿ ಜನಿಸಿದ ರಾಜರಾಮ್ ಅವರು ಸಾಹಿತಿ ನವರತ್ನ ರಾಮರಾಯರ ಮೊಮ್ಮಗ. ಅಮೆರಿಕದ ಇಂಡಿಯಾನಾ ವಿಶ್ವವಿದ್ಯಾಲಯದಲ್ಲಿ ಗಣಿತದಲ್ಲಿ ಪಿಎಚ್ ಡಿ ಪಡೆದು, 20 ವರ್ಷಗಳ ಕಾಲ ಪ್ರಾಧ್ಯಾಪಕರಾಗಿದ್ದರು.

Hindu activist, former NASA scientist Dr Navaratna S Rajaram no more

ಭಾರತದ ಮೂಲ ನಿವಾಸಿಗಳು, ಇತಿಹಾಸದ ಬಗ್ಗೆ ಅನೇಕ ಪುಸ್ತಕಗಳನ್ನು ಹೊರತಂದು ಚರ್ಚೆ ಹುಟ್ಟು ಹಾಕಿದ್ದರು. ಆರ್ಯರು ಭಾರತದ ಮೂಲ ನಿವಾಸಿಗಳೇ ಎಂಬ ಚರ್ಚೆ ಸರಿಯಲ್ಲ ಎಂದು ಪ್ರತಿಪಾದಿಸಿದರು. ವೇದಕಾಲವನ್ನು 7000 ಕಿ.ಪೂ ಕ್ಕೂ ಹಿಂದಿನ ಅವಧಿ ಎಂದು ಹೇಳಿದ್ದರು.

ಉತ್ತರ ಕರ್ನಾಟಕದ ದೇಶಸ್ಥ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರಾದ ಇವರ ಪೂರ್ವಜರು ಒಂದು ತಲೆಮಾರಿನಲ್ಲಿ ಒಂಬತ್ತು ಜನ ವಿದ್ವಾಂಸರನ್ನು ಹೊಂದಿದ್ದರಿಂದ ''ನವರತ್ನ'' ಎಂಬ ಬಿರುದು ಇವರ ವಂಶಕ್ಕೆ ಸೇರಿಕೊಂಡಿದೆ.

English summary
Hindu activist, former NASA scientist Dr Navaratna S Rajaram(76) no more. He was known for his books of voice of India Publications.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X