ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆದ್ದಾರಿ ಟೋಲ್‌ಗಳ ಬೃಹತ್ ಭ್ರಷ್ಟಾಚಾರ ತೆರೆದಿಟ್ಟ ವಕೀಲರು

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 27: ಹೆದ್ದಾರಿ ಟೋಲ್‌ಗಳ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಇಬ್ಬರು ವಕೀಲರು ಬಯಲು ಮಾಡಿದ್ದಾರೆ. ಟೋಲ್‌ಗಳು ಜನ ಸಾಮಾನ್ಯರಿಗೆ ಮಾಡುತ್ತಿರುವ ಸುಲಿಗೆ, ರಾಜಕಾರಣಿಗಳು ಅದರಿಂದ ಪಡೆಯುತ್ತಿರುವ ಲಾಭವನ್ನು ಎಳೆ-ಎಳೆಯಾಗಿ ಬಿಡಿಸಿಟ್ಟಿದ್ದಾರೆ.

ಬೆಂಗಳೂರು ಹೊರವಲಯದಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೆದ್ದಾರಿ ಬಳಿ ನಿರ್ಮಿಸಿರುವ ನವಯುಗ ಟೋಲ್‌ ಬಳಿ ನಿಂತು ವಿಡಿಯೋ ಒಂದನ್ನು ಮಾಡಿರುವ ಜಗದೀಶ್, ಸಿದ್ದರಾಜು ಎಂಬ ಇಬ್ಬರು ವಕೀಲರು ನವಯುಗ ಟೋಲ್‌ ಅನ್ನೇ ಉದಾಹರಣೆಯಾಗಿಟ್ಟುಕೊಂಡು ಟೋಲ್‌ಗಳು ಮಾಡುತ್ತಿರುವ ಹಗಲು ದರೋಡೆಯನ್ನು ಸಾರ್ವಜನಿಕರಿಗೆ ತಿಳಿಸುವ ಪ್ರಯತ್ನ ಮಾಡಿದ್ದಾರೆ. ಹಲವು ಮಹತ್ವದ ಮಾಹಿತಿ ಇವರ ವಿಡಿಯೋದಲ್ಲಿದೆ.

ಸೆ.1 ರಿಂದ ಹೊಸ ತೆರಿಗೆ ನಿಯಮಗಳು ಜಾರಿ: ಹೆಚ್ಚಲಿದೆ ಹೊರೆಸೆ.1 ರಿಂದ ಹೊಸ ತೆರಿಗೆ ನಿಯಮಗಳು ಜಾರಿ: ಹೆಚ್ಚಲಿದೆ ಹೊರೆ

Recommended Video

ಹೈವೆನಲ್ಲಿ ದರೋಡೆ ಮಾಡುತ್ತಿದ್ದ ಖದೀಮರಿಗೆ ಡಿಸಿಪಿ ಅಣ್ಣಾಮಲೈ ಮಾಸ್ಟರ್ ಸ್ಟ್ರೋಕ್..! | Oneindia Kannada

'ಸರ್ಕಾರಗಳು ಸಾಮಾನ್ಯ ಜನರನ್ನು ಎಟಿಎಂ ಗಳನ್ನಾಗಿ ಬಳಸಿಕೊಳ್ಳುತ್ತಿವೆ' ಎಂದಿರುವ ವಕೀಲ ಜಗದೀಶ್, ಪ್ರತಿಯೊಬ್ಬ ವಾಹನ ಮಾಲೀಕ ವಾಹನ ಖರೀದಿಸುವಾಗಲೇ ರಸ್ತೆ ತೆರಿಗೆ ಕಟ್ಟಿರುತ್ತಾನೆ ಆದರೂ ಸಹ ಟೋಲ್‌ಗಳು ನೂರಾರು ರೂಪಾಯಿ ರಸ್ತೆ ತೆರಿಗೆ ವಸೂಲಿ ಮಾಡುತ್ತವೆ ಎಂದು ಹೇಳಿದ್ದಾರೆ. ಒಬ್ಬ ವ್ಯಕ್ತಿ ಇನ್ನೋವಾ ಕಾರು ಕೊಂಡರೆ ಸುಮಾರು 4.5 ಲಕ್ಷ ರೂಪಾಯಿ ರಸ್ತೆ ತೆರಿಗೆ ಪಾವತಿಸುತ್ತಾನೆ ಹಾಗಿದ್ದರೂ ಈ ಟೋಲ್ ಹೆಸರಲ್ಲಿ ನಿತ್ಯ ಹಣ ಏಕೆ ಕಟ್ಟಬೇಕು? ಎಂಬುದು ಅವರ ಪ್ರಶ್ನೆ.

ರಾಜ್ಯದ ದುಬಾರಿ ಟೋಲ್‌ಗಳಲ್ಲಿ ಒಂದಾದ ಏರ್‌ಪೋರ್ಟ್ ರಸ್ತೆಯ ನವಯುಗ ಟೋಲ್‌ ಬಗ್ಗೆ ಆರ್‌ಟಿಐ ಅರ್ಜಿ ಹಾಕಿ ಪಡೆದಿರುವ ಮಾಹಿತಿಯನ್ನು ಬಹಿರಂಗ ಗೊಳಿಸಿರುವ ಈ ವಕೀಲ ದ್ವಯರು. ನವಯುಗ ಟೋಲ್ ರಸ್ತೆ ನಿರ್ಮಣಕ್ಕೆ 680 ಕೋಟಿ ರೂಪಾಯಿ ಖರ್ಚಾಗಿದೆ. ಈ ರಸ್ತೆಯನ್ನು 2011 ರಲ್ಲಿ ಪ್ರಾರಂಭ ಮಾಡಲಾಗಿದೆ. ಟೋಲ್ ವಸೂಲಿಗೆ ನವಯುಗಕ್ಕೆ ಬರೋಬ್ಬರಿ 20 ವರ್ಷದ ಪರವಾನಗಿ ನೀಡಿದೆ.

ದಿನಕ್ಕೆ ಲಕ್ಷಾಂತರ ವಾಹನಗಳು ಏರ್‌ಪೋರ್ಟ್ ರಸ್ತೆಯಲ್ಲಿ ಹೋಗುತ್ತವೆ

ದಿನಕ್ಕೆ ಲಕ್ಷಾಂತರ ವಾಹನಗಳು ಏರ್‌ಪೋರ್ಟ್ ರಸ್ತೆಯಲ್ಲಿ ಹೋಗುತ್ತವೆ

ವಿಮಾನ ನಿಲ್ದಾಣದಲ್ಲಿ ಸೇರಿದಂತೆ ದಿನಕ್ಕೆ ಲಕ್ಷಾಂತರ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ಇವುಗಳಿಂದ ದಿನಕ್ಕೆ ಕೋಟ್ಯಂತರ ಹಣ ವಸೂಲಿ ಆಗುತ್ತದೆ. ಆರ್‌ಟಿಐ ಮಾಹಿತಿಯಲ್ಲಿ ಕೇಳಿದಂತೆ ಟೋಲ್ ನವರೇ ನೀಡಿರುವ ಮಾಹಿತಿಯ ಪ್ರಕಾರ 2018 ರ ಸೆಪ್ಟೆಂಬರ್ ತಿಂಗಳು ಒಂದರಲ್ಲೇ ಬರೋಬ್ಬರಿ 15.51 ಕೋಟಿ ರೂಪಾಯಿ ವಸೂಲಿ ಆಗಿದೆ. ಇದು ಕೇವಲ ಒಂದು ತಿಂಗಳ ಲೆಕ್ಕವಷ್ಟೆ. ಪ್ರತಿದಿನವೂ ಇಲ್ಲಿ ಓಡಾಡುವ ಗಾಡಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇರುತ್ತವೆ.

ಇಪ್ಪತ್ತು ವರ್ಷಕ್ಕೆ 3.77 ಸಾವಿರ ಕೋಟಿ ಕೋಟಿ ಸಂಗ್ರಹವಾಗುತ್ತದೆ

ಇಪ್ಪತ್ತು ವರ್ಷಕ್ಕೆ 3.77 ಸಾವಿರ ಕೋಟಿ ಕೋಟಿ ಸಂಗ್ರಹವಾಗುತ್ತದೆ

ತಿಂಗಳಿಗೆ ಸರಾಸರಿ 15 ಕೋಟಿ ವಸೂಲಿ ಆಗುವುದಾದರೆ ಇಪತ್ತು ವರ್ಷಕ್ಕೆ 3.77 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ವಸೂಲಿ ಆಗುತ್ತದೆ. ಟೋಲ್ ನಿರ್ಮಾಣಕ್ಕೆ ಖರ್ಚಾಗಿರುವ ವೆಚ್ಚಕ್ಕಿಂತಲೂ ಎಷ್ಟೋ ಪಟ್ಟು ಹೆಚ್ಚಳ. ನಿರ್ಮಾಣ ವೆಚ್ಚಕ್ಕಿಂತಲೂ ಇಷ್ಟೋಂದು ಲಾಭವನ್ನು ಟೋಲ್‌ ಮಾಲೀಕರಿಗೆ ಸರ್ಕಾರ ನೀಡುತ್ತಿರುವುದಾದರೂ ಏಕೆ ಎಂಬ ಪ್ರಶ್ನೆಯನ್ನು ವಕೀಲರು ಎತ್ತಿದ್ದಾರೆ.

ಬಿಬಿಎಂಪಿಗೆ ತೆರಿಗೆ ಬಾಕಿ ಉಳಿಸಿಕೊಂಡವರ ಪಟ್ಟಿ ಬಿಡುಗಡೆಬಿಬಿಎಂಪಿಗೆ ತೆರಿಗೆ ಬಾಕಿ ಉಳಿಸಿಕೊಂಡವರ ಪಟ್ಟಿ ಬಿಡುಗಡೆ

ರಾಜ್ಯ ಹೆದ್ದಾರಿಗಳಲ್ಲೂ ಟೋಲ್‌ಗಳಾಗಿಬಿಟ್ಟಿವೆ

ರಾಜ್ಯ ಹೆದ್ದಾರಿಗಳಲ್ಲೂ ಟೋಲ್‌ಗಳಾಗಿಬಿಟ್ಟಿವೆ

ಅಟಲ್ ಬಿಹಾರಿ ವಾಜಪೇಯಿ ಕಾಲದಲ್ಲಿ ಪ್ರಾರಂಭವಾದ ಈ ಟೋಲ್‌ಗಳ ಹಾವಿ ದೇಶದಾದ್ಯಂತ ಹೆಮ್ಮಾರಿಯಾಗಿದೆ. ರಾಷ್ಟ್ರೀಯ ಹೆದ್ದಾರಿಗಳು ಇರಲಿ ಕಳೆದ ಒಂದು ವರ್ಷದಿಂದ ರಾಜ್ಯ ಹೆದ್ದಾರಿಯಲ್ಲೂ ಟೋಲ್ ಸಂಗ್ರಹ ಪ್ರಾರಂಭವಾಗಿದೆ. 17 ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ಈಗಾಗಲೇ ಪ್ರಾರಂಭವಾಗಿದೆ. ಮುಂದಕ್ಕೆ ಮುನಿಸಿಪಾಲಿಟಿ ರಸ್ತೆಗಳಿಗೂ ಟೋಲ್ ಹಾಕುವ ಸಂದರ್ಭ ಬರಬಹುದೆಂದು ವಕೀಲದ್ವಯರು ಆತಂಕ ವ್ಯಕ್ತಪಡಿಸಿದ್ದಾರೆ.

'ಹಲವು ಸೇವೆಗಳನ್ನು ಟೋಲ್‌ಗಳು ನೀಡಬೇಕು'

'ಹಲವು ಸೇವೆಗಳನ್ನು ಟೋಲ್‌ಗಳು ನೀಡಬೇಕು'

ಸುಪ್ರೀಂ ತೀರ್ಪಿನ ಪ್ರಕಾರ, ಟೋಲ್ ರಸ್ತೆಗಳಲ್ಲಿ ಬೀದಿ ದೀಪಗಳನ್ನು ಕಡ್ಡಾಯವಾಗಿ ಅಳವಡಿಸಿರಬೇಕು, ಆಂಬುಲೆನ್ಸ್‌ ವ್ಯವಸ್ಥೆ ಇರಬೇಕು, ಶೌಚಾಲಯ ನಿರ್ಮಿಸಬೇಕು, ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು, ಟೋ ವಾಹನಗಳು ಇರಬೇಕು, ಸರ್ವೀಸ್ ರಸ್ತೆಗಳು ಇರಬೇಕು, ರಿಫ್ಲೆಕ್ಟರ್‌ಗಳು ಇರಬೇಕು, ಆದರೆ ನವಯುಗ ಟೋಲ್ ರಸ್ತೆಯಲ್ಲಿ ಆಂಬುಲೆನ್ಸ್ ಆಗಲಿ ಟೋ ವೆಹಿಕಲ್ ಆಗಲಿ ಇಲ್ಲ, ಟೋಲ್ ಬಳಿ ಸರ್ವಿಸ್ ರಸ್ತೆ ಇಲ್ಲ, ಹಳದಿ ಪಟ್ಟಿ ಇಲ್ಲ ಎಂದು ವಕೀಲರು ಸತ್ಯ ಬಯಲಿಗೆಳೆದರು.

ತೆರಿಗೆ ಕಿರುಕುಳದಿಂದ ಮುಕ್ತಿ: ನಿರ್ಮಲಾ ಸೀತಾರಾಮನ್ ಭರವಸೆತೆರಿಗೆ ಕಿರುಕುಳದಿಂದ ಮುಕ್ತಿ: ನಿರ್ಮಲಾ ಸೀತಾರಾಮನ್ ಭರವಸೆ

'ಎಷ್ಟೋಂದು ರಸ್ತೆ ತೆರಿಗೆ ಕಟ್ಟುತ್ತಿದ್ದೇವೆ ನಾವು'

'ಎಷ್ಟೋಂದು ರಸ್ತೆ ತೆರಿಗೆ ಕಟ್ಟುತ್ತಿದ್ದೇವೆ ನಾವು'

ಇಂಧನದ ಮೇಲೆ ನಾವು ತೆರಿಗೆ ಕಟ್ಟುತ್ತಿದ್ದೇವೆ, ಪ್ರತಿ ಲೀಟರ್ ಪೆಟ್ರೋಲ್ ಮೇಲೆ 8 ರೂಪಾಯಿಗಳು ರಸ್ತೆ ಸೆಸ್‌ ಹಾಕುತ್ತಿದೆ. ದಿನಂಪತ್ರಿ ಸಾಮಾನ್ಯ ಮನುಷ್ಯ ಹಲವು ರೀತಿಯ ತೆರಿಗೆಗಳನ್ನು ಕಟ್ಟುತ್ತಲೇ ಇದ್ದಾನೆ. ಹೊಟೆಲ್‌ಗೆ ಹೋದರೆ ತೆರಿಗೆ, ರಸ್ತೆಗೆ ಬಂದರೆ ತೆರಿಗೆ, ವಸ್ತು ಕೊಂಡರೂ ತೆರಿಗೆ, ಮಾರಿದರೂ ತೆರಿಗೆ ಹೀಗೆ ಹಲವು ತೆರಿಗೆಗಳನ್ನು ಸರ್ಕಾರ ನಮ್ಮ ಮೇಲೆ ಹೇರಿದೆ ಹಾಗಿದ್ದಾಗ್ಯೂ ಹೀಗೆ ಖಾಸಗಿ ವ್ಯಕ್ತಿಗಳು ಸಂಸ್ಥೆಗಳಿಂದ ಟೋಲ್ ಹೆಸರಲ್ಲಿ ಮತ್ತೊಂದು ತೆರಿಗೆ ಏಕೆ ಕಟ್ಟಿಸಿಕೊಳ್ಳುತ್ತಾರೆ ಎಂದು ಅವರು ಪ್ರಶ್ನಿಸಿದ್ದಾರೆ.

ರಸ್ತೆ ನಿರ್ಮಾಣವನ್ನು ಖಾಸಗಿ ವ್ಯಕ್ತಿಗಳಿಗೆ ನೀಡುವುದು ಏತಕ್ಕೆ?

ರಸ್ತೆ ನಿರ್ಮಾಣವನ್ನು ಖಾಸಗಿ ವ್ಯಕ್ತಿಗಳಿಗೆ ನೀಡುವುದು ಏತಕ್ಕೆ?

ಟೋಲ್‌ಗಳನ್ನು ಖಾಸಗಿ ವ್ಯಕ್ತಿಗಳಿಗೆ ನೀಡುವ ಔಚಿತ್ಯವನ್ನೂ ಪ್ರಶ್ನಿಸಿರುವ ಜಗದೀಶ್ ಮತ್ತು ಸಿದ್ಧರಾಜು ವಕೀಲರು, ಲಕ್ಷಾಂತರ ಕೋಟಿ ತೆರಿಗೆ ಸಂಗ್ರಹಿಸುವ ಸರ್ಕಾರಕ್ಕೆ ರಸ್ತೆ ನಿರ್ಮಿಸುವುದು ಹೊರೆ ಏನೂ ಅಲ್ಲ, ಹಾಗಿದ್ದರೂ ಅದನ್ನು ಖಾಸಗಿಯವರಿಗೆ ನೀಡಿ ಟೋಲ್ ಏಕೆ ಸಂಗ್ರಹಿಸುತ್ತಾರೆ, ಸರ್ಕಾರದವರೇ ರಸ್ತೆ ನಿರ್ಮಿಸಿ ಅದನ್ನು ನಿರ್ವಹಣೆ ಮಾಡಿ ಅವರೇ ನಿಯಮಿತವಾಗಿ ಹಣ ಸಂಗ್ರಹಿಸಲಿ ಎಂದು ಅವರು ಸಲಹೆ ನೀಡಿದ್ದಾರೆ.

ಸಿದ್ಧಾರ್ಥ ಸಾವು: 'ತೆರಿಗೆ ಭಯೋತ್ಪಾದನೆ' ಬಗ್ಗೆ ಉದ್ಯಮಿಗಳ ಆತಂಕಸಿದ್ಧಾರ್ಥ ಸಾವು: 'ತೆರಿಗೆ ಭಯೋತ್ಪಾದನೆ' ಬಗ್ಗೆ ಉದ್ಯಮಿಗಳ ಆತಂಕ

ಸಾಮಾನ್ಯ ಮನುಷ್ಯರು ಸರ್ಕಾರದ ಏಟಿಎಂಗಳಾ?

ಸಾಮಾನ್ಯ ಮನುಷ್ಯರು ಸರ್ಕಾರದ ಏಟಿಎಂಗಳಾ?

ಸಾಮಾನ್ಯ ಮನುಷ್ಯರು ಸರ್ಕಾರಕ್ಕೆ ಎಟಿಎಂ ರೀತಿ ಆಗಿಬಿಟ್ಟಿದ್ದಾರೆ. ತೆರಿಗೆಗಳು, ದಂಡಗಳು ಹೀಗೆ ಹಲವು ರೀತಿಯನ್ನು ನಮ್ಮನ್ನು ಹಿಂಡಿ ಹಿಪ್ಪೆ ಮಾಡುತ್ತಿದ್ದಾರೆ. ನಾವೆಲ್ಲಾ ಕುರಿಗಳಾಗಿದ್ದೇವೆ, ಕಡಿಮೆ ಹಣ ಬೇಕಾದಾಗ ನಮ್ಮ ಉಣ್ಣೆ ಕತ್ತರಿಸಿ ಮಾರುತ್ತಾರೆ, ಹೆಚ್ಚು ಹಣ ತಲೆ ಕಡಿದು ಮಾಂಸ ಮಾರುತ್ತಾರೆ ಎಂದು ವಕೀಲರು ಸರ್ಕಾರದ ಮನಸ್ಥಿತಿಯನ್ನು ಬಿಡಿಸಿಟ್ಟಿದ್ದಾರೆ.

English summary
Highway tolls looting common man explained well by two Karnataka lawyers. Video went viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X