ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರೀಯ ಹೆದ್ದಾರಿಗಳು ಸಾವಿನ ರಹದಾರಿ, ವರ್ಷಕ್ಕೆ 3800 ಬಲಿ

By Nayana
|
Google Oneindia Kannada News

ಬೆಂಗಳೂರು, ಜು.4: ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ಸಂಚಾರ ಸುಗಮವಾಗಿದೆ ಆದರೆ ಸಾವು ಮಾತ್ರ ಭಯಂಕರವಾಗಿಯೇ ಬರುತ್ತದೆ. ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣದ ಸಾಧನೆಗೆ ಸರ್ಕಾರ ಹೆಮ್ಮೆ ಪಡುತ್ತಿದೆ ಆದರೆ ಅಪಘಾತಗಳನ್ನು ತಪ್ಪಿಸಲು ಏನು ಮಾಡಬೇಕು ಎಂಬುದರ ಬಗ್ಗೆ ತಲೆಕಡೆಸಿಕೊಂಡಂತೆ ಕಾಣುತ್ತಿಲ್ಲ.

ಪೊಲೀಸರ ಮಾಹಿತಿ ಪ್ರಕಾರ ಕಳೆದ ಮೂರು ವರ್ಷಗಳಲ್ಲಿ 3,800 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯದ 14 ಎನ್‌ಎಚ್‌ಗಳಲ್ಲಿ ಈ ವರ್ಷ ಮೇ 2ನೇ ವಾರದ ಅಂತ್ಯದವರೆಗೆ 4696 ಅಪಘಾತಗಳಾಗಿವೆ. 1204ಸಾವು ಸಂಭವಿಸಿದೆ. ಅಂದರೆ ದಿನಕ್ಕೆ 36 ಅಪಘಾತಗಳ ಸಂಭವಿಸುತ್ತಿದೆ.

ಆಗುಂಬೆ ಘಾಟಿಯಲ್ಲಿ ರಸ್ತೆ ಕುಸಿತ: ಆತಂಕಗೊಂಡ ಪ್ರಯಾಣಿಕರು ಆಗುಂಬೆ ಘಾಟಿಯಲ್ಲಿ ರಸ್ತೆ ಕುಸಿತ: ಆತಂಕಗೊಂಡ ಪ್ರಯಾಣಿಕರು

ಹೆದ್ದಾರಿಯ ವಿಸ್ತರಣೆ ಹಾಗೂ ಅಭಿವೃದ್ಧಿಗೆ ತೋರುವ ಉತ್ಸಾಹವನ್ನು ಅದರ ನಿರ್ವಹಣೆಗೆ ತೋರಿಸದೇ ನಿರ್ಲಕ್ಷ್ಯ ತೋರುತ್ತಿದ್ದಾರೆ. ಅತಿವೇಗದ ಚಾಲನೆ , ಚಾಲಕರ ನಿರ್ಲಕ್ಷ್ಯ, ಮಂಪರು, ವಿಶ್ರಾಂತಿ ರಹಿತ ಚಾಲನೆ, ಕುಡಿದ ಮತ್ತಿನಲ್ಲಿ ಡ್ರೈವಿಂಗ್‌, ವಾಹನ ದೋಷ, ರಸ್ತೆಗಳ ಸಮಸ್ಯೆ, ಮಳೆ, ಧೂಳು ಕಿರಿಕಿರಿಯಿಂದಾಗಿ ಅಪಘಾತ ಸಂಭವಿಸುತ್ತಿದೆ. ದುರಂತಕ್ಕೆ ಚಾಲಕರ ನಿರ್ಲಕ್ಷ್ಯವೇ ಕಾರಣ ಎಂದು ಪೊಲೀಸರು ಹೇಳುತ್ತಿದ್ದಾರೆ.

Highway accidents: 3.8k deaths in state

2015ರಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ 12,678 ಅಪಘಾತ ಸಂಭವಿಸಿ 3,654 ಮಂದಿ ಮೃತಪಟ್ಟಿದ್ದಾರೆ, 2016ರಲ್ಲಿ 14,933 ಅಪಘಾತ ಸಂಭವಿಸಿದ್ದು 4116 ಮಂದಿ ಮೃತಪಟ್ಟಿದ್ದಾರೆ, 2017ರಲ್ಲಿ 14,217 ಅಪಘಾತಗಳು ಸಂಭವಿಸಿದ್ದು ಅದರಲ್ಲಿ 3792 ಮಂದಿ ಮೃತಪಟ್ಟಿದ್ದಾರೆ. 2018ರ ಮೇ 11ರಿಂದ ಇಲ್ಲಯವರೆಗೆ 4696 ಅಪಘಾತಗಳು ಸಂಭವಿಸಿದ್ದು, 1,204ಮಂದಿ ಮೃತಪಟ್ಟಿರುವ ಅಂಕಿ ಅಂಶಗಳು ಲಭ್ಯವಾಗಿದೆ.

English summary
A detailed police report on accidents has revealed that there were average 3,800 deaths have recorded in a year in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X