ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ಬಗ್ಗೆ ಹೇಳಿಕೆ, ಸಿಎಂ ಸೇರಿ ಹಲವರಿಗೆ ಹೈಕೋರ್ಟ್ ನೊಟೀಸ್

By Manjunatha
|
Google Oneindia Kannada News

ಬೆಂಗಳೂರು, ಮಾರ್ಚ್ 15: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ವಿರುದ್ಧ ಸತ್ಯವಲ್ಲದ ಹೇಳಿಕೆಗಳನ್ನು ಸಾರ್ವಜನಿಕವಾಗಿ ನೀಡಿರುವುದಕ್ಕೆ ಸಂಬಂಧಪಟ್ಟಂತೆ ಹೈಕೋರ್ಟ್ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕೆಲವು ಕಾಂಗ್ರೆಸ್ ಮುಖಂಡಿಗೆ ನೊಟೀಸ್ ಜಾರಿ ಮಾಡಿದೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

'ಸಿದ್ದರಾಮಯ್ಯ ಹಾಗೂ ಇನ್ನಿತರ ಕಾಂಗ್ರೆಸ್ ಮುಖಂಡರು ತಮ್ಮ ಸಾರ್ವಜನಿಕವಾಗಿ ನಾನು ಈಗಾಗಲೇ ಖುಲಾಸೆಗೊಂಡಿರುವ ಕೇಸುಗಳೂ ಸೇರಿದಂತೆ ತಮ್ಮನ್ನು ಅಪರಾಧಿ ಎಂಬಂತೆ ಮಾತನಾಡುತ್ತಿದ್ದು ಮಾನಹಾನಿ ಮಾಡುತ್ತಿದ್ದಾರೆ' ಎಂದು ಯಡಿಯೂರಪ್ಪ ಅವರು ಹೈಕೋರ್ಟ್‌ನಲ್ಲಿ ದೂರು ಸಲ್ಲಿಸಿದ್ದರು.

ಶಿವಮೊಗ್ಗ ರಾಜಕೀಯ : ಶಿಕಾರಿಪುರದಿಂದ ಬಂದ ಹೊಸ ಸುದ್ದಿ!ಶಿವಮೊಗ್ಗ ರಾಜಕೀಯ : ಶಿಕಾರಿಪುರದಿಂದ ಬಂದ ಹೊಸ ಸುದ್ದಿ!

ಯಡಿಯೂರಪ್ಪ ಅವರ ದೂರನ್ನು ಮನ್ನಿಸಿರುವ ಹೈಕೋರ್ಟ್‌ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ವಿಎಸ್ ಉಗ್ರಪ್ಪ, ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರಿಗೆ ನೊಟೀಸ್ ಜಾರಿ ಮಾಡಿದೆ.

Highcourt issue notice ti Siddaramaiah and some congress leaders

ತಮ್ಮ ಬಹುತೇಕ ರಾಜಕೀಯ ಭಾಷಣಗಳಲ್ಲಿ ಸಿದ್ದರಾಮಯ್ಯ ಅವರು ಯಡಿಯೂರಪ್ಪ ಅವರನ್ನು 'ಜೈಲಿಗೆ ಹೋಗಿ ಬಂದವರು' ಎಂದು ಹಾಗೂ 'ಚೆಕ್‌ನಲ್ಲಿ ಲಂಚ ಪಡೆದವರು' ಎಂದು ಮೂದಲಿಸುತ್ತಿದ್ದರು, ಈಗ ಇದೇ ವಿಷಯವನ್ನು ಮುಂದೆ ಮಾಡಿ ಯಡಿಯೂರಪ್ಪ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಯಡಿಯೂರಪ್ಪ, ಶಾಮನೂರು ಶಿವಶಂಕರಪ್ಪ ಭೇಟಿ! ಯಡಿಯೂರಪ್ಪ, ಶಾಮನೂರು ಶಿವಶಂಕರಪ್ಪ ಭೇಟಿ!

'ಸಿದ್ದರಾಮಯ್ಯ ಅವರು ನಾನು ಖುಲಾಸೆಯಾಗಿರುವ ಕೇಸುಗಳ ಬಗ್ಗೆಯೂ ಮಾತನಾಡುತ್ತಿದ್ದು, ಇದು ನ್ಯಾಯಾಲಯದ ತೀರ್ಪಿಗೆ ಅಪಮಾನವಾಗಿದೆ' ಎಂದು ಯಡಿಯೂರಪ್ಪ ಅವರು ಹೈಕೋರ್ಟ್‌ಗೆ ಸಲ್ಲಿಸಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಹೈಕೋರ್ಟ್‌ ನೀಡಿರುವ ನೊಟೀಸ್‌ಗೆ ಸಿದ್ದರಾಮಯ್ಯ ಮತ್ತು ಇತರರು ಉತ್ತರಿಸಬೇಕಾಗಿದೆ.

English summary
With regard to BJP president Yeddyurappa's comlpaint, Highcourt issue notice to CM Siddaramaiah, KPCC working president Dinesh Gundurao, minister MB Patil and SV Ugrappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X